ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್ ತಾರಾ ಜೋಡಿ

news18-kannada
Updated:December 2, 2019, 2:23 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್​ವುಡ್ ತಾರಾ ಜೋಡಿ
Hita-Kiran
  • Share this:
ಸ್ಯಾಂಡಲ್​ವುಡ್ ನಟ ಕಿರಣ್ ಶ್ರೀನಿವಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಬಹುಕಾಲದ ಗೆಳೆತಿ ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಅವರೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ.

ಕಿರಣ್-ಹಿತಾ


ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಕಿರಣ್-ಹಿತಾ ಪ್ರಣಯ ಜೋಡಿ ಭಾನುವಾರ ಗುರು ಹಿರಿಯರು ನಿಶ್ಚಯಿಸಿದ್ದ ಶುಭ ಮುಹೂರ್ತದಲ್ಲಿ ವಿವಾಹವಾದರು. ಈ ಶುಭ ಘಳಿಗೆಗೆ ಸ್ಯಾಂಡಲ್​ವುಡ್ ನಟಿಯರಾದ ಅನುಪಮಾ ಗೌಡ, ಕೃಷಿ ತಾಪಂಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಸಾಕ್ಷಿಯಾದರು.

ಕಿರಣ್-ಹಿತಾ
ಕಿರಣ್-ಹಿತಾ


ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿಯ ಪ್ರೇಮ್ ಕಹಾನಿಯನ್ನು ನಟಿ ಸೋನು ಗೌಡ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕಿರಣ್-ಹಿತಾ ಮೇ ತಿಂಗಳಲ್ಲಿ ಕುಟುಂಬದವರ ಸಮ್ಮುಖದಲ್ಲಿ ಪರಸ್ಪರ ರಿಂಗ್ ಬದಲಾಯಿಸಿಕೊಂಡಿದ್ದರು.

ಕಿರಣ್-ಹಿತಾ
ಕಿರಣ್-ಹಿತಾ


'ಹಾಗೆ ಸುಮ್ಮನೆ', 'ನಿರುತ್ತರ', ಕಾಂಚಾಣ ಸೇರಿದಂತೆ ಒಂದಷ್ಟು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಕಿರಣ್, ಬಾಲಿವುಡ್ ಅಂಗಳದಲ್ಲೂ ಕೆಲಸ ಮಾಡಿದ್ದಾರೆ. ಹಾಗೆಯೇ  '1/4 ಕೆ.ಜಿ ಪ್ರೀತಿ', 'ದುನಿಯಾ-2', 'ಒಂಥರಾ ಬಣ್ಣಗಳು', 'ತುರ್ತು ನಿರ್ಗಮನ' ಸೇರಿದಂತೆ ಕೆಲ ಸಿನಿಮಾಗಳಲ್ಲು ಹಿತಾ ಚಂದ್ರಶೇಖರ್ ಅಭಿನಯಿಸಿದ್ದಾರೆ. ಸದ್ಯ ಮಾಡೆಲಿಂಗ್ ಹಾಗೂ ವೆಬ್​ ಸಿರೀಸ್​ಗಳಲ್ಲಿ ನಟ ಕಿರಣ್ ತೊಡಗಿಸಿಕೊಂಡಿದ್ದಾರೆ.
First published: December 2, 2019, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading