Banaras Movie: ಸ್ಯಾಂಡಲ್​ವುಡ್​​ನಲ್ಲಿ ಬಾಯ್ಕಾಟ್​ ಟ್ರೆಂಡ್​; ಜಮೀರ್​ ಪುತ್ರನ ಬನಾರಸ್​ ಚಿತ್ರಕ್ಕೆ ಹಿಂದೂ ಕಾರ್ಯಕರ್ತರ ವಿರೋಧ

ಹಿಂದೂ ಕಾರ್ಯಕರ್ತರು #BoycottBanaras ಎಂದು ಟ್ರೆಂಡ್​ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರುವುದು ಜೈದ್​ ಖಾನ್​ ಅವರ ತಂದೆ ಜಮೀರ್​ ಅಹ್ಮದ್​ (Zameer Ahmed) ಅವರ ರಾಜಕೀಯದ ನಿಲುವುಗಳು ಎಂದು ಹೇಳಲಾಗ್ತಿದೆ. 

ಜಮೀರ್ ಮಗನ ಚಿತ್ರಕ್ಕೆ ಬಾಯ್ಕಾಟ್​ ಬಿಸಿ

ಜಮೀರ್ ಮಗನ ಚಿತ್ರಕ್ಕೆ ಬಾಯ್ಕಾಟ್​ ಬಿಸಿ

  • Share this:
ಶಾಸಕ ಜಮೀರ್​ ಅಹ್ಮದ್​ ಇತ್ತೀಚಿಗೆ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ  ವಿಚಾರಕ್ಕೆ ಭಾರೀ ಸುದ್ದಿಯಾಗಿದ್ರು.  ಈ ಎಫೆಕ್ಟ್​ ಈಗ ಮಗನ ಚಿತ್ರದ ಮೇಲೆ ಆಗ್ತಿದೆ. ಜಮೀರ್​ ಮಗನ ಚೊಚ್ಚಲ ಚಿತ್ರಕ್ಕೆ ಕಂಟಕ ಎದುರಾಗಿದೆ. ನಟ ಜೈದ್​ ಖಾನ್​ (Zaid Khan) ಅವರು ಚಿತ್ರರಂಗ ಪ್ರವೇಶಿಸಿದ್ದಾರೆ.  ಜೈದ್​ ಖಾನ್​ ಅಭಿನಯದ ಬನಾರಸ್​ (Banaras Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾಗೆ ಖ್ಯಾತ ನಿರ್ದೇಶಕ ಜಯತೀರ್ಥ ಅವರು ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಆದ್ರೆ ಇದೀಗ ಚಿತ್ರಕ್ಕೆ ಬಾಯ್ಕಾಟ್​ ಬಿಸಿ ತಟ್ಟಿದೆ. 

ನವೆಂಬರ್​ 4ರಂದು ಬನಾರಸ್​ ಚಿತ್ರ ರಿಲೀಸ್​

ಬನಾರಸ್​ ಚಿತ್ರದಲ್ಲಿ ಜೈದ್​ ಖಾನ್​ಗೆ ಜೋಡಿಯಾಗಿ ಸೋನಲ್​ ಮಾಂಥೆರೋ ನಟಿಸಿದ್ದಾರೆ. ನ.​ 4ರಂದು ‘ಬನಾರಸ್​’ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ಇತ್ತೀಚೆಗಷ್ಟೇ ಘೋಷಣೆ ಮಾಡಲಾಗಿದೆ. ಅದರ ಬೆನ್ನಲ್ಲೇ ಈ ಚಿತ್ರವನ್ನು ಬಹಿಷ್ಕರಿಸುವಂತೆ ಸೋಶಿಯಲ್​ ಮೀಡಿಯಾದಲ್ಲಿ ಅಭಿಯಾನ ಶುರುಮಾಡಲಾಗಿದೆ.

ಹಿಂದೂ ಕಾರ್ಯಕರ್ತರಿಂದ ವಿರೋಧ

ಹಿಂದೂ ಕಾರ್ಯಕರ್ತರು #BoycottBanaras ಎಂದು ಟ್ರೆಂಡ್​ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರುವುದು ಜೈದ್​ ಖಾನ್​ ಅವರ ತಂದೆ ಜಮೀರ್​ ಅಹ್ಮದ್​ (Zameer Ahmed) ಅವರ ರಾಜಕೀಯದ ನಿಲುವುಗಳು ಎಂದು ಹೇಳಲಾಗ್ತಿದೆ.  ಜಮೀರ್​ ಅವರ ರಾಜಕೀಯದಿಂದಾಗಿ ಅವರ ಮಗನ ಸಿನಿಮಾಗೆ ಬಹಿಷ್ಕಾರದ ಬಿಸಿ ತಟ್ಟುತ್ತಿದೆ.

ಇದನ್ನೂ ಓದಿ: Vijay Deverakonda - Samantha: ಸಮಂತಾ - ವಿಜಯ್ ದೇವರಕೊಂಡ ಸಿನಿಮಾ ಶೂಟಿಂಗ್ ರೀಸ್ಟಾರ್ಟ್

ಗಣೇಶ ಪ್ರತಿಷ್ಠಾಪನೆಗೆ ಬಿಡದ ಕೋಪ

ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದ್ದಕ್ಕಾಗಿ ಹಿಂದೂ ಕಾರ್ತಕರ್ತರು ಜಮೀರ್​ ಅಹ್ಮದ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಡಿಕೆ ಹಳ್ಳಿ, ಕೆಜಿ ಹಳ್ಳಿ ಗಲಭೆಗಳನ್ನು ಕೂಡ ನೆನಪಿಸಿಕೊಳ್ಳಲಾಗುತ್ತಿದೆ. ಗಲಭೆ ನಡೆಸಿದ ಆರೋಪಿಗಳಿಗೆ ಜಾಮೀನು ಒದಗಿಸಲು ಬೆಂಬಲ ನೀಡಿದ್ದರು ಎಂದು ಕೂಡ ಜಮೀರ್​ ವಿರುದ್ಧ ಹಿಂದೂ ಕಾರ್ಯಕರ್ತರು ಕಿಡಿಕಾರುತ್ತಿದ್ದಾರೆ. ಹಾಗಾಗಿ ಅವರ ಪುತ್ರನ ಸಿನಿಮಾವನ್ನು ಬಹಿಷ್ಕರಿಸಲು ಕರೆ ನೀಡಲಾಗುತ್ತಿದೆ.

ಸ್ಯಾಂಡಲ್​ವುಡ್​ಗೆ ಬಾಯ್ಕಾಟ್ ಟ್ರೆಂಡ್​

ಬಾಲಿವುಡ್ ನಲ್ಲಿ ಈ ರೀತಿ ಬಾಯ್ಕಾಟ್​ಗೆ ಒಳಗಾಗದ ಅನೇಕ ಚಿತ್ರಗಳು ಸೋಲು ಕಂಡಿವೆ. ನಟ-ನಟಿಯರು ಈ ಹಿಂದೆ ನೀಡಿದ ಹೇಳಿಕೆಗಳು ಕೂಡ ನೆನಪಿನಲ್ಲಿ ಇಟ್ಟುಕೊಂಡು ಜನರು ಅವರ ಸಿನಿಮಾಗಳನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಹಿಂದಿ ಚಿತ್ರರಂಗದಲ್ಲಿ ಸದ್ದು ಮಾಡುತ್ತಿರುವ ಬಹಿಷ್ಕಾರದ ಟ್ರೆಂಡ್​ ಈಗ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದೆ.  ಚಿತ್ರರಂಗದ ಪಾಲಿಗೆ ಬಹಿಷ್ಕಾರ ಎಂಬುದು ದೊಡ್ಡ ಸಮಸ್ಯೆಯಾಗಿದೆ. ಜನರಿಂದ ಬಹಿಷ್ಕಾರಕ್ಕೆ ಒಳಗಾದರೆ ಈ ಚಿತ್ರಕ್ಕೆ ಹೀನಾಯ ಸೋಲು ಉಂಟಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿ: Brahmastra Movie: ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಟೀಮ್; ಆಲಿಯಾ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ!

ಜಮೀರ್​ ಅಹ್ಮದ್​ ಪುತ್ರ ಜೈದ್​ ಖಾನ್​ ಅವರು ರಾಜಕೀಯದ ಕಡೆ ಹೋಗದೇ ಸಿನಿಮಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಮೊದಲ ಚಿತ್ರಕ್ಕಾಗಿ ಬಹಳ ಶ್ರಮಿಸಿದ್ದಾರೆ. ಈ ಸಿನಿಮಾದ ‘ಮಾಯಗಂಗೆ..’ ಹಾಡು ಈಗಾಗಲೇ ಸೂಪರ್ ಹಿಟ್​ ಆಗಿದೆ. ಆದರೆ ಪೋಸ್ಟರ್​ಗಳನ್ನು ನೋಡಿ ಕೆಲವರು ಕಿರಿಕ್​ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಬಿಡುಗಡೆಗೂ ಮುನ್ನವೇ ಈ ಚಿತ್ರಕ್ಕೆ ವಿರೋಧ ಎದುರಾಗಿದ್ದು,  ಜಮೀರ್ ಹಾಗೂ ಪುತ್ರ ಜೈದ್​ ಖಾನ್​ ಇಬ್ಬರು ಹಿಂದೂ ಸಂಘಟನೆಗಳ ವಿರೋಧವನ್ನು ಹೇಗೆ ಎದುರಿಸ್ತಾರೆ ಅನ್ನೋದನ್ನು ಕಾದು ನೋಡ್ಬೇಕಿದೆ.
Published by:Pavana HS
First published: