ಸ್ಯಾಂಡಲ್ವುಡ್ ನಟ ರಿಷಿ (Actor Rishi) ಅಭಿನಯದ ರಾಮನ ಅವತಾರ ಟೀಸರ್ (Teaser) ಇತ್ತೀಚೆಗಷ್ಟೆ ರಿಲೀಸ್ ಆಗಿದೆ. ಟೀಸರ್, ಪೋಸ್ಟರ್ ನೋಡಿದ ಹಿಂದೂಪರ ಸಂಘಟನೆಗಳು ಸಿನಿಮಾ ವಿರುದ್ಧ ಕಿಡಿಕಾರಿದ್ದಾರೆ. ರಾಮನ ಅವತಾರ (Ramana Avatara) ಸಿನಿಮಾ ವಿವಾದದಲ್ಲಿ ಸಿಲುಕಿದೆ. ವಿಕಾಸ್ ಪಂಪಾಪತಿ ಸಾರಥ್ಯದಲ್ಲಿ ಬಂದ ಈ ಸಿನಿಮಾದ ಟೀಸರ್‌ನಲ್ಲಿ ರಾಮನಿಗೆ ಅವಮಾನ ಮಾಡಲಾಗಿದೆ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂಪರ ಸಂಘಟನೆಗಳ ಆಕ್ರೋಶ ಹೊರಹಾಕುತ್ತಿದ್ದಾರೆ.
ಶ್ರೀರಾಮನ ಬಗ್ಗೆ ಅಪಹಾಸ್ಯ ಆರೋಪ
ರಾಮನ ಅವತಾರ ಸಿನಿಮಾ ಟೀಸರ್‌ನಲ್ಲಿ ಶ್ರೀರಾಮನನ್ನ ಕೆಟ್ಟದಾಗಿ ಅಪಹಾಸ್ಯ ಮಾಡಿದ್ದಾರೆ ಎಂದು ಹಿಂದೂಪರ ಸಂಘಟನೆ ಅಸಮಾಧಾನ ಹೊರಹಾಕಿದೆ. ರಾಮ ಅವತಾರ ಸಿನಿಮಾ ಟೀಸರ್‌ನಿಂದ ಸಾಕಷ್ಟು ಹಿಂದೂಗಳಿಗೆ ನೋವುಂಟಾಗಿದೆ. ಈ ಕೂಡಲೇ ಸಿನಿಮಾದಿಂದ ಆಕ್ಷೇಪಾರ್ಹ ದೃಶ್ಯಗಳನ್ನ ತೆಗೆಯುವಂತೆ ಹಿಂದೂಪರ ಸಂಘಟನೆಗಳು ಆಗ್ರಹಿಸಿದೆ.
ದೃಶ್ಯ ತೆಗೆಯದಿದ್ರೆ ಹೋರಾಟದ ಎಚ್ಚರಿಕೆ
ಶ್ರೀರಾಮನನ್ನ ಕೆಟ್ಟದಾಗಿ ತೋರಿಸಿರುವ ದೃಶ್ಯ ತೆಗೆಯದಿದ್ರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. ಕೋರಮಂಗಲದ ಫಿಲ್ಮ್ ಸೆನ್ಸಾರ್ ಬೋರ್ಡ್ಗೆ ಮನವಿ ಸಲ್ಲಿಸುವುದಾಗಿ ಹೇಳಿದ್ದಾರೆ.
ಟೀಸರ್‌ನಲ್ಲಿ ಏನಿದೆ?
ರಾಮಕೃಷ್ಣ ಅಲಿಯಾಸ್ ರಾಮನಾಗಿ ಚಿತ್ರದಲ್ಲಿ ರಿಷಿ ಕಾಣಿಸಿಕೊಂಡಿದ್ದಾರೆ. ಯುವಕರೆಲ್ಲಾ ಕೆಲಸ ಹುಡುಕಿಕೊಂಡು ಬೇರೆ ಊರಿಗೆ ಹೋದರೆ ನಮ್ಮ ಊರು ಹೆಂಗೆ ಉದ್ಧಾರ ಆಗುತ್ತೆ, ನಮ್ಮೂರಲ್ಲೇ ನಮ್ಮವರಿಗೆ ಕೆಲಸ ಸಿಗುವಂತೆ ಮಾಡಬೇಕು ಎನ್ನೋದು ರಾಮನ ಉದ್ದೇಶ. ಇದರ ಜೊತೆಗೆ ರಾಮ ಇಲ್ಲಿ ಇಬ್ಬರೂ ನಾಯಕಿಯರ ಜೊತೆ ಮೀಟಿಂಗ್, ಡುಯೆಟ್ಟು ಅಂತ ಎಲ್ಲಾ ಮಾಡಿದ್ದಾನೆ.
ಶ್ರೀರಾಮನ ಹೆಸರಿಗೆ ಅಪಮಾನ
ಚಿತ್ರದಲ್ಲಿ ನಟಿ ಪ್ರಣಿತಾ ಸುಭಾಶ್ ಮತ್ತು ಶುಭ್ರ ಅಯ್ಯಪ್ಪ ಕಾಣಿಸಿಕೊಂಡಿದ್ದಾರೆ. ನಾಟಕದ ದೃಶ್ಯವೊಂದರಲ್ಲಿ ಶ್ರೀರಾಮನ ವೇಷ ಹಾಕಿಕೊಂಡು ವೇದಿಕೆ ಬರದೆ ನಾಯಕ ಪೊಲೀಸರಿಂದ ತಪ್ಪಿಸಿಕೊಂಡು ಓಡುತ್ತಾನೆ. ಫೈಟ್ ಮಾಡುತ್ತಾನೆ, ರಾಮನ ಹೆಸರು ಇಟ್ಟುಕೊಂಡು ಸಿನಿಮಾದಲ್ಲಿ ಕುಡಿಯುತ್ತಾನೆ ಇದು ರಾಮನಿಗೆ ಮಾಡುವ ಅವಮಾನ ಎಂದು ಹಿಂದೂ ಪರ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಮನ ಅವತಾರ ಚಿತ್ರದಲ್ಲಿ ಸಖತ್ ಡೈಲಾಗ್
ರಾಮನ ಅವತಾರ ಚಿತ್ರದಲ್ಲಿ ಒಂದು ಡೈಲಾಗ್ ಕೂಡ ಇದೆ. ಅದನ್ನ ರಾಮನ ಗೆಳೆಯನೇ ಹೇಳುತ್ತಾನೆ. ರಾಮ ಕೇವಲ ಹೆಸರಿಗೆ ಮಾತ್ರ ರಾಮ, ಇವನ ಕೃಷ್ಣ ಲೀಲೆಗಳೇ ಬೇರೆ ಇವೆ ಅಂತಲೂ ಹೇಳ್ತಾನೆ.
ಬಿಗ್ ಬಾಸ್ ಅರುಣ್ ಸಾಗರ್ ಪಾತ್ರ ಭಯಂಕರ
ರಾಮನ ಅವತಾರ ಸಿನಿಮಾದಲ್ಲಿ ಅರುಣ್ ಸಾಗರ್ ಸ್ಪೆಷಲ್ ಆಗಿಯೇ ಕಾಣಿಸಿಕೊಂಡಿದ್ದಾರೆ. ತುಂಬಾ ದಿನಗಳ ಬಳಿಕ ಅರುಣ್ ಸಾಗರ್ ಇಲ್ಲಿ ಅದ್ಭುತ ಪಾತ್ರವನ್ನ ನಿರ್ಹಿಸಿದ್ದಾರೆ. ಈಗ ರಿಲೀಸ್ ಆದ ಟೀಸರ್‌ನಲ್ಲಿ ಅರುಣ್ ಸಾಗರ್ ಪಾತ್ರದ ಝಲಕ್ ರಿವೀಲ್ ಆಗಿದೆ.
ರಾಮನ ಅವತಾರ ಸಿನಿಮಾದ ಹಿಂದೆ ಅದ್ಭುತ ಟೀಮ್ ಇದೆ. ಈ ಟೀಮ್ ಲೀಡ್ ಮಾಡಿರೋ ಡೈರೆಕ್ಟರ್ ಹೊಸಬರು ಅನ್ನೋದು ಕೂಡ ವಿಶೇಷವೇ ಆಗಿದೆ. ನವ ನಿರ್ದೇಶಕ ವಿಕಾಸ್ ಪಂಪಾಪತಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.
ರಾಮನ ಅವತಾರ ಚಿತ್ರಕ್ಕೆ ಜುಡಾ ಸ್ಯಾಂಡಿ ಸಂಗೀತ
ಜುಡಾ ಸ್ಯಾಂಡಿ ಸಂಗೀತದಲ್ಲಿ ರಾಮನ ಅವತಾರ ಸಿನಿಮಾ ಮೂಡಿ ಬಂದಿದೆ. ವಿಷ್ಣು ಪ್ರಸಾದ್ ಮತ್ತು ಸಮೀರ್ ದೇಶಪಾಂಡೆ ಈ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿದ್ದಾರೆ. ಡೈರೆಕ್ಟರ್ ಪಂಪಾಪತಿ ಈ ಚಿತ್ರದಲ್ಲಿ ಕವಲುದಾರಿಯ ರಿಷಿಯನ್ನ ವಿಭಿನ್ನವಾಗಿಯೇ ತೋರಿಸಿದ್ದಾರೆ ಅಂತಲೇ ಹೇಳಬಹದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ