• Home
  • »
  • News
  • »
  • entertainment
  • »
  • Kantara: ನನ್ನ ಲವರ್​ಗಿಂತ ನಿಮ್ಮನ್ನ ಜಾಸ್ತಿ ಪ್ರೀತಿಸ್ತೀನಿ, ರಿಷಬ್​ ಕಾಲಿಗೆ ಬಿದ್ದು ಹಿಂದಿ ಆ್ಯಂಕರ್​ ಭಾವುಕ!

Kantara: ನನ್ನ ಲವರ್​ಗಿಂತ ನಿಮ್ಮನ್ನ ಜಾಸ್ತಿ ಪ್ರೀತಿಸ್ತೀನಿ, ರಿಷಬ್​ ಕಾಲಿಗೆ ಬಿದ್ದು ಹಿಂದಿ ಆ್ಯಂಕರ್​ ಭಾವುಕ!

ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ

ಅನೇಕ ಹಿಂದಿ ಯೂಟ್ಯೂಬರ್ ಗಳು ಕಾಂತಾರಾ ಚಿತ್ರದ ಬಗ್ಗೆ ಮೆಚ್ಚುಗೆಯ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಹಿಂದಿ ಯೂಟ್ಯೂಬರ್ ರಿಷಬ್ ಶೆಟ್ಟಿ ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಇಡೀ ದೇಶದಲ್ಲಿ ಕೇಳಿ ಬರುತ್ತಿರುವ ಒಂದು ಪದ ಅಂದರೆ ಕಾಂತಾರ (Kantara) . ಎಲ್ಲಿ ನೋಡಿದರೂ ನಮ್ಮ ಕನ್ನಡ (Kannada) ಸಿನಿಮಾದ ಬಗ್ಗೆಯೆ ಮಾತನಾಡುತ್ತಿದ್ದಾರೆ. ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸೃಷ್ಟಿಸಿರುವ ಕ್ರೇಜ್ (Craze)​ ಇದೆಯಲ್ಲಾ ಅದು ನಾಳೆಗೆ ಮುಗಿಯುವಂತದಲ್ಲ. ಇತ್ತೀಚೆಗೆ ಕನ್ನಡ ಸಿನಿಮಾಗಳು ಯಾವ ಮಟ್ಟಕ್ಕೆ ಹೆಸರು ಮಾಡುತ್ತಿದೆ ಅಂದರೆ, ಎಲ್ಲ ರಾಜ್ಯದವರು ಸ್ಯಾಂಡಲ್​ವುಡ್​ (Sandalwood) ನತ್ತ ಒಮ್ಮೆ ತಿರುಗಿ ನೋಡುತ್ತಿದ್ದಾರೆ.  ಕೆಜಿಎಫ್ (KGF) ನಂತರ ಕನ್ನಡ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್ (Bollywood) , ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ. ಈಗಾಗಲೇ ಕೆಜಿಎಫ್ ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲ್ಮಸ್(Hombale Films) , ಕಾಂತಾರದ ಮೂಲಕ ಮತ್ತೊಂದು ಗೆಲುವು ಕಂಡಿದೆ.


ರಿಷಬ್ ಶೆಟ್ಟಿ ಕಾಲಿಗೆ ಬಿದ್ದ ಯುವಕ!


ಹಿಂದಿಯಲ್ಲಿ 14ರಿಂದ ಕಾಂತಾರ ಅಬ್ಬರ ಶುರುವಾಗಿದೆ. ಹಲವಾರು ಹಿಂದಿ ಸಂದರ್ಶನಗಳಲ್ಲಿ ರಿಷಬ್​ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ. ಅನೇಕ ಹಿಂದಿ ಯೂಟ್ಯೂಬರ್ ಗಳು ಕಾಂತಾರಾ ಚಿತ್ರದ ಬಗ್ಗೆ ಮೆಚ್ಚುಗೆಯ ವಿಮರ್ಶೆಗಳನ್ನು ನೀಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಹಿಂದಿ ಯೂಟ್ಯೂಬರ್ ರಿಷಬ್ ಶೆಟ್ಟಿ ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.




"ನನ್ನ ಲವರ್​ಗಿಂತ ನಿಮ್ಮನ್ನು ಇಷ್ಟಪಡುತ್ತೇನೆ"


ಹಿಂದಿ ಯೂಟ್ಯುಬರ್ ಒಬ್ಬರು ರಿಷಬ್ ಶೆಟ್ಟಿ ಸಂದರ್ಶನ ಮಾಡುವಾಗ ಅವರ ಕಾಲಿಗೆ ಬಿದ್ದು‌ ನಮಸ್ಕರಿಸಿದ್ದಾರೆ. ಹೌದು ಹಿಂದಿಯ ಖ್ಯಾತ ‌ಯೂಟ್ಯೂಬರ್ ಸೂರಜ್ ಕುಮಾರ್ ಎನ್ನುವವರು ರಿಷಬ್ ಕಾಲಿಗೆ ನಮಸ್ಕರಿಸಿದ್ದಾರೆ. ಇದಕ್ಕೆ ರಿಷಬ್‌ ಸಹ‌ ಸೌಜನ್ಯದಿಂದ ಅವರಿಗೆ‌ ಅಪ್ಪುಗೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಅಗಿದೆ. ಜೊತೆಗೆ ನನ್ನ ಲವರ್​ಗಿಂತ ನಿಮ್ಮನ್ನು ಹೆಚ್ಚು ಪ್ರೀತಿಸುತ್ತೇನೆ. ನಿಮ್ಮ ನಟನೆ ನೋಡಿ ನನಗೆ ಮಾತೇ ಬರುತ್ತಿಲ್ಲ. ನಿಜವಾಗಲೂ ನೀವು ನನಗೆ ದೇವರ ರೀತಿ ಕಾಣುತ್ತಿರಾ. ನಾನು ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಆದರೆ ಕಾಂತಾರ ಮಾಡಿರುವ ಕಮಾಲ್​ ಹೇಳತೀರದು ಎಂದು ಭಾವುಕರಾಗಿದ್ದಾರೆ.



ಇದನ್ನೂ ಓದಿ: ಕಾಂತಾರ ಹೀರೋ ರಿಷಬ್ ಶೆಟ್ಟಿ ನಿಜವಾದ ಹೆಸರು ಬೇರೆಯೇ ಇದೆ


ಹಿಂದಿಯ ಯೂಟ್ಯುಬರ್ ಅದ ಸುರಜ್ ಕುಮಾರ್ ಈ ಹಿಂದೆ ಯಶ್ ಅಬಿನಯದ ಕೆಜಿಎಫ್ 2 ಸಿನಿಮಾ ಕುರಿತು ರ್ಯಾಪ್ ಸಾಂಗ್ ಸಹ ಮಾಡಿದ್ದರು. ಅಲ್ಲದೇ ಅವರು ಕನ್ನಡದ ಯಶ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ವೇಳೆ ನಟ ಸುದೀಪ್ ಅವರನ್ನು ಸಂದರ್ಶನ ಮಾಡಿದ್ದರು.


ಕಾಂತಾರ ಅಬ್ಬರಕ್ಕೆ ಬಾಕ್ಸಾಫೀಸ್​ ಉಡೀಸ್​!


ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ಈ ಹೊತ್ತಿನಲ್ಲಿ ಅಕ್ಟೋಬರ್ 14 ರಂದು ಹಿಂದಿಯಲ್ಲಿ, 15 ರಂದು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ (Release) ಆಗುತ್ತಿದೆ. ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.



ಇದನ್ನೂ ಓದಿ: RRR, KGF2ಗಿಂತ ಹೆಚ್ಚು ರೇಟಿಂಗ್ ಪಡೆದ ಕಾಂತಾರ! ಹಿಂದಿಯಲ್ಲೂ ಸೂಪರ್ ಹಿಟ್


ಗಳಿಕೆಯಲ್ಲೂ ದಾಖಲೆ ಮಾಡಿದ ಕಾಂತಾರ!


ಈಗಾಗಲೇ ಎರಡನೇ ಸೋಮವಾರದ ಗಳಿಕೆಯಲ್ಲಿ ಕೆಜಿಎಫ್2 ಸಿನಿಮಾವನ್ನು ಮೀರಿಸಿದ ಕಾಂತಾರ ಮತ್ತೊಂದು ಹೊಸ ದಾಖಲೆ ಬರೆದಿದೆ. ಈಗ ಸಿನಿಮಾ 12 ದಿನದ ಗಳಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ರಿಷಬ್ ಶೆಟ್ಟಿ ನಿರ್ದೇಶನದ ಕನ್ನಡ ಆಕ್ಷನ್ ಡ್ರಾಮಾ ಕಾಂತಾರ ಬಾಕ್ಸ್ ಆಫೀಸ್​​ನಲ್ಲಿ ಅದ್ಭುತ ಪ್ರದರ್ಶನವನ್ನು ಕಾಣುತ್ತಿದೆ. ರಾಜ್ಯದಲ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ₹ 58 ಕೋಟಿ ಗಳಿಸಿದೆ.

Published by:ವಾಸುದೇವ್ ಎಂ
First published: