Vikram Vedha Teaser: ಹೃತಿಕ್-ಸೈಫ್ ಕಾಂಬಿನೇಷನ್​ನ ವಿಕ್ರಮ್ ವೇದಾ! ಹೇಗಿದೆ ಟೀಸರ್?

 ವಿಕ್ರಂ-ವೇದಾ ಸಿನೆಮಾ

ವಿಕ್ರಂ-ವೇದಾ ಸಿನೆಮಾ

ಈ ಹಿಂದೆ ಹೊಂದಿದ್ದಂತಹ ವರ್ಚಸ್ಸನ್ನು ಸದ್ಯ ಬಾಲಿವುಡ್ ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಹಿಂದೊಮ್ಮೆ ಅದ್ಭುತವಾದ ವಿಷಯಗಳನ್ನು ಹೊತ್ತು ಸಿನಿರಸಿಕರ ಮನ ತಣಿಸುತ್ತಿದ್ದ ಹಿಂದಿ ಚಿತ್ರಗಳು ಕಾಲ ಕಳೆದಂತೆ ತನ್ನಷ್ಟಕ್ಕೆ ತಾನೇ ಕೆಲವು ನಿಯಮಾವಳಿಗಳನ್ನು ಹಾಕಿಕೊಂಡಂತೆ ಒಂದೇ ರೀತಿಯ ಅನಗತ್ಯವಾಗಿರುವಂತಹ ವಿಷಯಗಳನ್ನಾಧರಿಸಿ ಚಿತ್ರಗಳನ್ನು ಮಾಡಲು ಪ್ರಾರಂಭಿಸಿತು. ಆದರೆ, ಈ ರೀತಿ ಚಿತ್ರ ಮಾಡಿದರೆ ಎಲ್ಲಿಯವರೆಗೆ ತಾನೇ ನಡೆದಿತು? ಜನರು ಇದರಿಂದ ಬೇಸತ್ತು ಹೋದರೆಂದು ಹೇಳಬಹುದು.

ಮುಂದೆ ಓದಿ ...
  • Share this:

ಈ ಹಿಂದೆ ಹೊಂದಿದ್ದಂತಹ ವರ್ಚಸ್ಸನ್ನು ಸದ್ಯ ಬಾಲಿವುಡ್ (Bollywood) ಕಳೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಹಿಂದೊಮ್ಮೆ ಅದ್ಭುತವಾದ ವಿಷಯಗಳನ್ನು ಹೊತ್ತು ಸಿನಿರಸಿಕರ ಮನ ತಣಿಸುತ್ತಿದ್ದ ಹಿಂದಿ ಚಿತ್ರಗಳು (Hindi Movies) ಕಾಲ ಕಳೆದಂತೆ ತನ್ನಷ್ಟಕ್ಕೆ ತಾನೇ ಕೆಲವು ನಿಯಮಾವಳಿಗಳನ್ನು ಹಾಕಿಕೊಂಡಂತೆ ಒಂದೇ ರೀತಿಯ ಅನಗತ್ಯವಾಗಿರುವಂತಹ ವಿಷಯಗಳನ್ನಾಧರಿಸಿ ಚಿತ್ರಗಳನ್ನು ಮಾಡಲು ಪ್ರಾರಂಭಿಸಿತು. ಆದರೆ, ಈ ರೀತಿ ಚಿತ್ರ ಮಾಡಿದರೆ ಎಲ್ಲಿಯವರೆಗೆ ತಾನೇ ನಡೆದಿತು? ಜನರು ಇದರಿಂದ ಬೇಸತ್ತು ಹೋದರೆಂದು ಹೇಳಬಹುದು. ಹಾಗಾಗಿ ಬಾಲಿವುಡ್ ಕಂಟೆಂಟ್ (Content) ಇಲ್ಲದೆಯೇ ಚಡಪಡಿಸತೊಡಗಿತು. ಈಗ ಸದ್ಯ ಬಾಲಿವುಡ್ಡಿನಲ್ಲಿ ನಾಲ್ಕು ಸ್ಥಂಬಗಳಿವೆ. ಅವುಗಳೆಂದರೆ ಬಯೋಪಿಕ್ ಗಳು, ದೇಶಭಕ್ತಿ ಪ್ರಧಾನ ಚಿತ್ರಗಳು, ಐತಿಹಾಸಿಕ ಪಿರಿಯಡ್ ಚಿತ್ರಗಳು ಹಾಗೂ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ (Remake).


ಈ ನಾಲ್ಕು ಪಿಲ್ಲರ್ ಗಳನ್ನು ಆಧಾರವಾಗಿಟ್ಟುಕೊಂಡೇ ಬಾಲಿವುಡ್ ಚಿತ್ರ ನಿರ್ಮಿಸುವತ್ತ ಗಮನಹರಿಸಿದೆ ಎಂದರೆ ತಪ್ಪಾಗಲಾರದು. ಕಳೆದ ಬಾರಿ ತೆಲುಗು ಚಿತ್ರರಂಗದ ಅರ್ಜುನ್ ರೆಡ್ಡಿ ಚಿತ್ರವನ್ನು ಬಾಲಿವುಡ್ ನಲ್ಲಿ ಕಬೀರ್ ಸಿಂಗ್ ಎಂಬ ಹೆಸರಿನಲ್ಲಿ ರಿಮೇಕ್ ಮಾಡಲಾಗಿತ್ತು. ಅದರಲ್ಲಿ ಶಾಹಿದ್ ಕಪೂರ್ ಪ್ರಮುಖ ನಾಯಕ ನಟನಾಗಿ ಅಭಿನಯಿಸಿದ್ದರು. ಹಿಂದಿಯಲ್ಲೂ ಸಹ ಇದೊಂದು ಸೂಪರ್ ಹಿಟ್ ಚಿತ್ರವಾಗಿ ಯಶಸ್ಸುಗಳಿಸಿತ್ತು.


ಬಾಲಿವುಡ್ ಸಿನೆಮಾಗಳಿಗೆ ಪೆಟ್ಟು ನೀಡಿದ ಚಿತ್ರಗಳು


ಇಲ್ಲಿಂದಲೇ ಬಾಲಿವುಡ್ಡಿಗೆ ದಕ್ಷಿಣ ಚಿತ್ರಗಳ ಮೇಲೆ ವಿಶೇಷ ಪ್ರೀತಿ ಹುಟ್ಟಿಕೊಂಡಿತೆನ್ನಬಹುದು. ಆದರೂ ಹಿಂದಿ ಚಿತ್ರರಂಗಕ್ಕೆ ದಕ್ಷಿಣದ ಚಿತ್ರಗಳಾದ ಆರ್.ಆರ್.ಆರ್., ಕೆಜಿಎಫ್, ಪುಷ್ಪಾ, ವಿಕ್ರಂ ಗಳಂತಹ ಚಿತ್ರಗಳು ಪೆಟ್ಟು ನೀಡಿರುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ ದೇಶಾದ್ಯಂತ ಜನರು ಈ ಚಿತ್ರಗಳನ್ನು ಬಿಗಿದಪ್ಪಿಕೊಂಡು ಸ್ವಾಗತಿಸಿದ್ದಾರೆ. ಈಗ ಹಿಂದಿಯಲ್ಲಿ ಮತ್ತೊಂದು ರಿಮೇಕ್ ಮೂಡಿಬರುತ್ತಿದೆ. ಆ ಚಿತ್ರದ ಹೆಸರು ವಿಕ್ರಂ-ವೇದಾ. ಮೂಲ ತಮಿಳಿನಲ್ಲಿ ನಿರ್ಮಿತವಾಗಿರುವ ವಿಕ್ರಂ ವೇದಾ ಚಿತ್ರದಲ್ಲಿ ಆರ್.ಮಾಧವನ್ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಧನಾತ್ಮಕ ಪ್ರತಿಕ್ರಿಯೆ ಪಡೆದಿದ್ದಲ್ಲದೆ ಇಬ್ಬರು ನಟರ ಅದ್ಭುತ ನಟನೆಯಿಂದಾಗಿ ಯಶಸ್ಸು ಕಂಡಿದೆ.


ತಮಿಳು ಹಿಟ್ ಚಿತ್ರಗಳಲ್ಲಿ  ಒಂದಾದ ವಿಕ್ರಂ-ವೇದಾ ಸಿನೆಮಾ


2017 ರಲ್ಲಿ ಬಿಡುಗಡೆಯಾಗಿರುವ ತಮಿಳು ಹಿಟ್ ಚಿತ್ರಗಳಲ್ಲಿ ವಿಕ್ರಂ-ವೇದಾ ಒಂದಾಗಿದೆ. ಮಾಧವನ್ ಹಾಗೂ ಸೇತುಪತಿ ತಮ್ಮದೆ ಅದ್ಭುತ ನಟನಾ ಶೈಲಿಯಿಂದ ಜನರ ಮನಸ್ಸನ್ನು ಗೆಲ್ಲುತ್ತಾರೆ. ಮಾಧವನ್ ಸ್ಟೈಲಿಶ್ ಹಾಗೂ ಗಂಭೀರ ಸ್ವಭಾವದ ನಾಯಕನಾಗಿ ಮಿಂಚಿದರೆ ಸೇತುಪಟಿ ತಮ್ಮ ವಿಶೇಷ ಮ್ಯಾನರಿಸಮ್ ಹಾಗೂ ಭಿನ್ನತೆಯಿರುವ ನಟನೆಯಿಂದಾಗಿ ತಮ್ಮದೆ ಆದ ಛಾಪನ್ನು ಈ ಚಿತ್ರದಲ್ಲಿ ಮೂಡಿಸಿದ್ದಾರೆ. ದೊಡ್ಡ ಪರದೆಯ ಮೇಲೆ ಈ ಇಬ್ಬರು ಮಹಾರಥಿಗಳ ನಟನೆ ಕಣ್ತುಂಬ ತುಂಬಿಕೊಳ್ಳುವುದೇ ದೊಡ್ಡ ಹಬ್ಬ ಎಂದೆನಿಸುತ್ತದೆ.


ಇದನ್ನೂ ಓದಿ: Vikrant Rona OTT Release: ಝೀ5ನಲ್ಲಿ ವಿಕ್ರಾಂತ್ ರೋಣ! ಡೇಟ್, ಟೈಂ ಸೇರಿ ಎಲ್ಲಾ ಡೀಟೆಲ್ಸ್ ಇಲ್ಲಿದೆ 


ಈ ಚಿತ್ರದ ಕಥೆ ಹೇಗಿದೆ
ಇನ್ನೊಂದು ವಿಶೇಷವೆಂದರೆ ಈ ಚಿತ್ರದ ಕಥೆಯೇ ಬಲು ವಿಶಿಷ್ಟವಾಗಿದೆ. ನಮ್ಮ ಪುರಾಣ-ಗ್ರಂಥಗಳಲ್ಲಿ ಬರುವ ವಿಕ್ರಂ ಮತ್ತು ಬೇತಾಳ ಕಥೆಯ ಮುಖ್ಯ ತಿರುಳು ಎನ್ನಬಹುದಾದ ಬೇತಾಳ ವಿಕ್ರಮನಿಗೆ ಕಥೆ ಹೇಳಿ ನಂತರ ಅದರಲ್ಲಿರುವ ಕಷ್ಟಕರ ಪ್ರಸಂಗಗಳ ಬಗ್ಗೆ ವಿಕ್ರಂನಿಗೆ ಪ್ರಶ್ನೆ ಕೇಳಿ ನ್ಯಾಯಯುತವಾದ ಉತ್ತರ ಕೇಳುವ ಪರಿಕಲ್ಪನೆಯಿತ್ತೋ ಅದೇ ರೀತಿಯ ವಿಶಿಷ್ಟ ಪರಿಕಲ್ಪನೆಯ ಸಿದ್ಧಾಂತದೊಂದಿಗೆ ಆಧುನಿಕ ಜೀವನದಲ್ಲಿ ನಡೆಯುವ ಹಲವು ಪ್ರಸಂಗಗಳನ್ನು ವಿಕ್ರಂ ಹೇಗೆ ಎದುರಿಸುತ್ತಾನೆ, ನಿಜವಾಗಿಯೂ ನ್ಯಾಯಪರವಾಗಿ ಅವನು ಏನು ಮಾಡಬೇಕು ಎಂಬೆಲ್ಲ ಸ್ಥಿತಿಗಳನ್ನು ಹೆಣೆಯುವ ಕಥಾ ಹಂದರವುಳ್ಳ ಕಥೆ ಇದಾಗಿದೆ.


ಹಿಂದಿಯಲ್ಲೂ ರಿಮೇಕ್ ಆಗ್ತಿದೆ ವಿಕ್ರಂ-ವೇದಾ ಸಿನೆಮಾ
ಇದೀಗ ಇದೇ ಚಿತ್ರವು ಹಿಂದಿಯಲ್ಲಿ ರಿಮೇಕ್ ಆಗುತ್ತಿದ್ದು ಮೂಲ ತಮಿಳು ಚಿತ್ರ ನಿರ್ಮಿಸಿದ್ದ ಪುಷ್ಕರ್-ಗಾಯತ್ರಿ ಅವರ ಕೊಂಬೋ ಸ್ವತಃ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ವಿಕ್ರಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ ವೇದಾ ಪಾತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸಿದ್ದಾರೆ. ಮೂಲ ತಮಿಳಿನಲ್ಲಿ ಮಾಧವನ್ ವಿಕ್ರಂ ಆಗಿ ಹಾಗೂ ವಿಜಯ್ ಸೇತುಪತಿ, ವೇದಾ ಆಗಿ ಅಭಿನಯಿಸಿದ್ದರು.ಚಿತ್ರದ ಟೀಸರ್ ಹೇಗಿದೆ?
ಸದ್ಯ ಈ ಚಿತ್ರದ ಟೀಸರ್ ಈಗ ಬಿಡುಗಡೆಯಾಗಿದ್ದು ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಈ ನಡುವೆ ಬಹುತೇಕರಿಂದ ಕೇಳಿ ಬರುತ್ತಿರುವ ಮಾತೆಂದರೆ ಇದರ ಸಿನೆಮ್ಯಾಟಿಕ್ ಫ್ರೇಮುಗಳು. ಅನವಶ್ಯಕವಾಗಿ ಈ ಚಿತ್ರದಲ್ಲಿ ಪ್ರತಿ ದೃಶ್ಯಗಳನ್ನು ಅವುಗಳ ಸಾಮರ್ಥ್ಯಕ್ಕಿಂತ ಹೆಚ್ಚಿನ ದರದಲ್ಲಿ ತೋರಿಸಲು ಪ್ರಯತ್ನಿಸಲಾಗಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಮೂಲ ಚಿತ್ರದಲ್ಲಿ ಕೆಲ ಪ್ರಮಾಣದಷ್ಟು ರಫ್ ಹಾಗೂ ಕೆಲವೆಡೆ ಥಳುಕು ಬಳುಕಿನ ದೃಶ್ಯಾವಳಿಗಳು ಚಿತ್ರದ ಇಬ್ಬರೂ ಪ್ರಮುಖ ಪಾತ್ರಧಾರಿಗಳು ಸ್ಪಷ್ಟವಾಗಿ ಅರಳುವಂತೆ ಮೂಡಿಬಂದಿತ್ತು. ಆದರೆ, ಹಿಂದಿ ಅವತರಿಣಿಕೆಯಲ್ಲಿ ಅದು ಮಿಸ್ ಆಗಿದೆ ಎಂಬುದು ಹಲವರ ಅನಿಸಿಕೆಯಾಗಿದೆ.


ಇದನ್ನೂ ಓದಿ:  Bollywood Actors: ಬಾಲಿವುಡ್​ನಲ್ಲಿ ಯಶಸ್ಸು ಕಾಣಲು ಹೆಸರನ್ನೇ ಬದಲಾಯಿಸಿಕೊಂಡ ನಟರಿವರು, ನಂತರ ಕುದುರಿದ್ದು ಅದೃಷ್ಟ!


ಆದರೆ, ಹಿಂದಿ ರಿಮೇಕಿನಲ್ಲಿ ಪ್ರತಿಯೊಂದು ದೃಶ್ಯಗಳನ್ನು ಕೇವಲ ಹೃತಿಕ್ ಹಾಗೂ ಸೈಫ್ ಅವರನ್ನೇ ಗಮನದಲ್ಲಿಟ್ಟುಕೊಂಡು ಅವರನ್ನೇ ವೈಭವೀಕರಿಸುವಂತೆ ಚಿತ್ರೀಸಲಾಗಿರುವುದರಿಂದ ಮಿಕ್ಕ ಆಯಾಮಗಳು ಸಪ್ಪೆಯಾಗಿ ಕಾಣುತ್ತಿವೆ ಎನ್ನಲಾಗಿದ್ದು ಅಷ್ಟೊಂದು ಪ್ರಶಂಸಾತ್ಮಕ ಪ್ರತಿಕ್ರಿಯೆ ಈ ಟೀಸರ್ ಗಳಿಸುತ್ತಿಲ್ಲ ಎನ್ನಬಹುದಾಗಿದೆ. ಆದಾಗ್ಯೂ, ಇದು ಕೇವಲ್ ಟೀಸರ್ ಆಗಿದ್ದು ಸಂಪೂರ್ಣ ಚಿತ್ರದ ಬಗ್ಗೆ ಈ ರೀತಿ ಎನ್ನಲಾಗದು. ಅಷ್ಟಕ್ಕೂ ಸೆಪ್ಟೆಂಬರ್ 30 ರಂದು ಬಿಡುಗಡೆಯಾಗುತ್ತಿರುವ ಈ ಚಿತ್ರವನ್ನು ನೋಡಿಯೇ ಈ ಬಗ್ಗೆ ಒಂದು ಸ್ಪಷ್ಟವಾದ ಅಭಿಪ್ರಾಯವನ್ನು ವ್ಯಕ್ತಪಡಿಸಬಹುದು.

top videos
    First published: