ಸೆಪ್ಟೆಂಬರ್ 14 ರಂದು ದೇಶಾದ್ಯಂತ ಹಿಂದಿ ದಿವಸ ಆಚರಿಸುತ್ತಿರುವವರ ವಿರುದ್ಧ ಕನ್ನಡಿಗರು ದನಿ ಎತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೋ ಒಂದು ಭಾಷೆಯನ್ನ ವಿಶೇಷವಾಗಿ ಎತ್ತಿ ಆಡಿಸುವುದು, ಮುದ್ದು ಮಾಡುವುದು ತಪ್ಪು. ಭಾರತದ 22 ಭಾಷೆಗಳಿಗೂ ಸಮಾನ ಅವಕಾಶ ಸಿಗಬೇಕು ಎಂಬ ಕೂಗು ದಕ್ಷಿಣ ಭಾರತದಾದ್ಯಂತ ಜೋರಾಗಿದೆ. ಕನ್ನಡ ನೆಲದಲ್ಲೂ ಈ ಹೋರಾಟ ಕಾವು ಪಡೆದುಕೊಂಡಿದೆ.
ಇನ್ನು ನಾಡು ನುಡಿಯ ವಿಚಾರ ಅಂತ ಬಂದಾಗ, ಕರ್ನಾಟಕದ ಸಾಕ್ಷಿ ಪ್ರಜ್ಞೆ ಡಾ. ರಾಜ್ ಕುಮಾರ್ ಯಾವಾಗಲೂ ಮುಂದೆ ನಿಲ್ಲುತ್ತಿದ್ದರು. ಎಲ್ಲರನ್ನೂ ಒಟ್ಟುಗೂಡಿಸಿ ಹೋರಾಟಕ್ಕೆ ಧುಮುಕುತ್ತಿದ್ದರು. ಈಗಿನ ನಟರು ನಾಡು ನುಡಿಯ ಕಾಳಜಿಯ ಬಗ್ಗೆ ಅಷ್ಟೇನು ಕಾಳಜಿ ತೋರಿಸೋದಿಲ್ಲ ಎಂಬ ಅಪವಾದದ ನಡುವೆ ಯುವ ನಟರು ಹಿಂದಿ ದಿವಸದ ವಿರುದ್ಧ ದನಿ ಎತ್ತಿದ್ದಾರೆ.
Hindi Imposition: ಹಿಂದಿ ಹೇರಿಕೆ ಕುರಿತಾಗಿ ಟ್ವೀಟ್ ಮಾಡಿ ಟ್ರೋಲ್ ಆದ ನಟ ಪ್ರಕಾಶ್ ರೈ..!
ಡಾಲಿ ಧನಂಜಯ್ ಸಾಮಾಜಿಕ ಜಾಲತಾಣದ ಮೂಲಕ ದನಿಯಾಗಿದ್ದು, ನನ್ನ ದೇಶ ಭಾರತ, ನನ್ನ ಬೇರು ಕನ್ನಡ ಅಂತ ಪೋಸ್ಟ್ ಮಾಡಿದ್ದಾರೆ.. ಎಲ್ಲಾ ಭಾಷೆಯನ್ನೂ ಗೌರವಿಸುತ್ತೇನೆ. ನನ್ನ ಭಾಷೆಯನ್ನು ಹೆಚ್ಚು ಪ್ರೀತಿಸುತ್ತೇನೆ. ಯಾವುದೇ ಹೇರಿಕೆ ಸಲ್ಲದು ಅಂತ ಬರೆದುಕೊಂಡಿದ್ದಾರೆ. ಧನಂಜಯ್ ಅವರ ಈ ಪೋಸ್ಟ್ ಸಾಕಷ್ಟು ವೈರಲ್ ಆಗುತ್ತಿದೆ.
ಹಾಗೆ ನಟ ನಿಖಿಲ್ ಕುಮಾರ್ ಸಹ ಹಿಂದಿ ಹೇರಿಕೆ ವಿರುದ್ಧ ದನಿಯಾಗಿದ್ದಾರೆ. ಅನೇಕತೆಯಲ್ಲಿ ಏಕತೆ ಇರುವ ನಮ್ಮ ದೇಶದಲ್ಲಿ ಒಂದು ಭಾಷೆಯ ಮೆರವಣಿಗೆ ಮಾತ್ರ ಮಾಡೋದು ಸರಿಯಲ್ಲ ಅಂತ ಬರೆದುಕೊಂಡಿದ್ದಾರೆ. ಇಷ್ಟೇ ಅಲ್ಲದೆ ಪ್ರಕಾಶ್ ರೈ, ಆ ದಿನಗಳು ಚೇತನ್ ಸೇರಿದಂತೆ ಸಾಕಷ್ಟು ಕನ್ನಡದ ನಟರು ಕನ್ನಡಕ್ಕಾಗಿ ದನಿಯಾಗಿದ್ದಾರೆ.
Sandalwood Drug Case: ಸ್ಯಾಂಡಲ್ವುಡ್ ಡ್ರಗ್ ಕೇಸ್; ನಟಿ ರಾಗಿಣಿ ಸೇರಿ ಎಲ್ಲ ಆರೋಪಿಗಳ ಜಾಮೀನು ಅರ್ಜಿ ಮುಂದೂಡಿಕೆ
ಇನ್ನೂ ಬಹುಭಾಷಾ ನಟ ಪ್ರಕಾಶ್ ರಾಜ್ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ ವಿರುದ್ಧ ಧ್ವನಿ ಎತ್ತಿದ್ದಾರೆ. ಕರ್ನಾಟಕದ ಭೂಪಟದೊಳಗೆ ‘ನಂಗೆ ಹಿಂದಿ ಬರಲ್ಲ ಹೋಗ್ರಪ್ಪ’ ಎಂಬ ಸಂದೇಶ ಮುದ್ರಿಸಿರುವ ಟೀ ಶರ್ಟ್ ಧರಿಸಿರುವ ಅವರು, ನಮಗೆ ಹಿಂದಿ ಹೇರಿಕೆ ಬೇಡ ಎಂದು ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.
"ಹಲವು ಭಾಷೆ ಬಲ್ಲೆ. ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ. ಆದರೆ ನನ್ನ ಕಲಿಕೆ. ನನ್ನ ಗ್ರಹಿಕೆ. ನನ್ನ ಬೇರು. ನನ್ನ ಶಕ್ತಿ. ನನ್ನ ಹೆಮ್ಮೆ. ನನ್ನ ಮಾತೃಭಾಷೆ ಕನ್ನಡ ಹಿಂದಿ ಹೇರಿಕೆ ಬೇಡ" ಎಂದು ಟ್ವೀಟ್ ಮಾಡಿದ್ದಾರೆ. ಪ್ರಕಾಶ್ ರೈ ಮಾತಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಪ್ರಕಾಶ್ ರೈ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ