ಕಾಂತಾರ ಸಿನಿಮಾದ ಹಾಡು ಮಾಡಿದ ಮೂಡಿ ಅಷ್ಟಿಷ್ಟಲ್ಲ. ಕಾಂತಾರ ಸಿನಿಮಾದ ಎಲ್ಲ ಹಾಡುಗಳೂ (Songs) ಸೂಪರ್ ಹಿಟ್ ಆಗಿವೆ. ಸಿನಿಮಾ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಕನ್ನಡ ಸಿನಿಮಾ (Cinema) ಹಿಂದಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ (Records) ಬರೆದಿದೆ. ಸೆಲೆಬ್ರಿಟಿಗಳೆಲ್ಲ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಹಿಂದಿ ಕಿರುತೆರೆಯ ಖ್ಯಾತ ನಟಿ, ಹಿಂದಿ ಬಿಗ್ಬಾಸ್ ಸೀಸನ್ 15ರ ವಿನ್ನರ್ ತೇಜಸ್ವಿ ಪ್ರಕಾಶ್ (Tejasswi Prakash) ಅವರು ಕಾಂತಾರ (Kantara) ಸಿನಿಮಾದ ಹಾಡನ್ನು ಕನ್ನಡದಲ್ಲಿಯೇ ಹಾಡುವ ಮೂಲಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಅವರ ವಿಡಿಯೋ (Video) ಎಲ್ಲೆಡೆ ವೈರಲ್ ಆಗಿದೆ.
ನಟಿ ತೇಜಸ್ವಿ ಪ್ರಕಾಶ್ ಅವರು ಹಿಂದಿ ಬಿಗ್ ಬಾಸ್ ಸೀಸನ್ 15ರ ವಿಜೇತೆಯಾಗಿ ಫೇಮಸ್ ಆಗಿದ್ದಾರೆ. ಅವರು ಟ್ರೋಪಿ ಗೆದ್ದಿದ್ದೇ ತಡ ಏಕ್ತಾ ಕಪೂರ್ ತಮ್ಮ ನಾಗಿನ್ ಸೀರಿಯಲ್ ಸಿರೀಸ್ಗೆ ತೇಜಸ್ವಿಯನ್ನು ಫಿಕ್ಸ್ ಮಾಡಿದ್ದರು. ಅಲ್ಲಿ ತನಕ ಸಣ್ಣ ಧಾರವಾಹಿಯಲ್ಲಿ ನಟಿಸುತ್ತಿದ್ದ ತೇಜಸ್ವಿಗೆ ಹಿಟ್ ಸೀರಿಯಲ್ ಅವಕಾಶ ಸಿಕ್ಕಿತು.
ನಾಗಿನ 6 ಮೂಲಕ ಬಿಗ್ ಬ್ರೇಕ್
ಮನೆ ಒಳಗೆ ಇದ್ದಾಗಲೇ ಅವರಿಗೆ ‘ನಾಗಿನ್ 6’ ಧಾರಾವಾಹಿಯ ಆಫರ್ ಸಿಕ್ಕಿತು. ಸದ್ಯ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಒಳ್ಳೆಯ ಟಿಆರ್ಪಿ ಪಡೆದುಕೊಳ್ಳುತ್ತಿದೆ. ಇದಲ್ಲದೆ, ಮರಾಠಿ ಚಿತ್ರದಲ್ಲೂ ಅವರು ನಟಿಸಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರೋ ಈ ನಟಿ ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುತ್ತಾರೆ.
View this post on Instagram
ತೇಜಸ್ವಿ ಕನ್ನಡಿಗರ ಮನ ಗೆದ್ದಿದ್ದಾರೆ. ಕಾಂತಾರ ಸಿನಿಮಾದ ಕರ್ಮದ ಕಲ್ಲನು’ ಹಾಡನ್ನು ಕನ್ನಡದಲ್ಲಿ ಹಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ತೇಜಸ್ವಿ ಪ್ರಕಾಶ್ ಬಣ್ಣದ ಲೋಕಕ್ಕೆ ಕಾಲಿಟ್ಟು 11 ವರ್ಷ ಆಯಿತು. ಕರಣ್ ಜೊತೆ ಡೇಟಿಂಗ್ ಮಾಡುತ್ತಿರುವ ನಟಿ ಇತ್ತೀಚೆಗೆ ಕನ್ನಡ ಹಾಡು ಹಾಡಿದರು.
‘ಕರ್ಮದ ಕಲ್ಲನು ಎಡವಿದ ಮನುಜನ, ಬೆರಳಿನ ಗಾಯವು ಮಾಯದು
ಹಗೆಯಲಿ ಕೋವಿಗೆ ತಲೆ ಕೊಡೊ ಮರುಳರ ಗುಡಿಯಲಿ ದೈವವು ಕಾಯದು
ಕತ್ತಲನು ಮಣಿಸೋಕೆ ಹಚ್ಚಿ ಇಟ್ಟ ದೀಪ, ಊರನ್ನೇ ಸುಡುವಂತ ಜ್ವಾಲೆ ಆಯಿತೇನೋ..’ ಎಂಬ ಕಾಂತಾರ ಸಿನಿಮಾ ಹಾಡಿನ ಅರ್ಥವನ್ನು ಇಂಗ್ಲಿಷ್ನಲ್ಲಿ ಬರೆದುಕೊಂಡಿದ್ದಾರೆ.
ಈ ವಿಡಿಯೋಗೆ ಈಗಾಗಲೇ 3 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 31 ಸಾವಿರಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.
ಕಾಂತಾರ ಸಿನಿಮಾದ ಹಾಡು ವೈರಲ್
ಕಾಂತಾರ ಸಿನಿಮಾದಲ್ಲಿ ಶಿವ ಅರೆಸ್ಟ್ ಆಗುವಾಗ ಬರುವಂತಹ ಕರ್ಮದ ಕಲ್ಲನು ಹಾಡು ಬಹಳ ಅರ್ಥಪೂರ್ಣವಾಗಿದೆ. ಸುಂದರವಾಗಿ ಸಂಗೀತದಲ್ಲಿ ಈ ಹಾಡು ಆ ಸಂದರ್ಭಕ್ಕೆ ಚೆನ್ನಾಗಿ ಹೊಂದಿಕೊಂಡು ಪ್ರೇಕ್ಷಕನನ್ನು ಆಳವಾಗಿ ಕಾಡುವಂತಿದೆ. ಇದೀಗ ಈ ಹಾಡನ್ನು ಹಿಂದಿ ನಟಿ ಕೂಡಾ ಹಾಡುವ ಪ್ರಯತ್ನ ಮಾಡಿದ್ದು ನೆಟ್ಟಿಗರು ಅವರಿಗೆ ಕ್ಲಾಪ್ ಮಾಡಿದ್ದಾರೆ.
ತೇಜಸ್ವಿ ವಿವಾಹ
ತೇಜಸ್ವಿ ಅವರು ಬಿಗ್ಬಾಸ್ ಸಹ ಸ್ಪರ್ಧಿ ಕರಣ್ ಕುಂದ್ರಾ ಅವರನ್ನು ಪ್ರೀತಿಸುತ್ತಿದ್ದು ಈ ಜೋಡಿ ಹಿಂದಿ ಕಿರುತೆರೆಯಲ್ಲಿ ಫೇಮಸ್ ಆಗಿದೆ. ಈ ಜೋಡಿ ಶೀಘ್ರ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ಆದರೆ ನಟಿ ಸದ್ಯ ಸೀರಿಯಲ್ನಲ್ಲಿಯೇ ಬ್ಯುಸಿಯಾಗಿದ್ದು ಕಿರುತೆರೆ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ