• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Bigg Boss: ಈತನ ಮೇಲೆ ಚಿಕ್ಕಪ್ಪನೇ ನಡೆಸಿದ್ದನಂತೆ ಅತ್ಯಾಚಾರ! ಸ್ಫೋಟಕ ವಿಚಾರ ಬಾಯ್ಬಿಟ್ಟ ಬಿಗ್ ಬಾಸ್ ಸ್ಪರ್ಧಿ

Bigg Boss: ಈತನ ಮೇಲೆ ಚಿಕ್ಕಪ್ಪನೇ ನಡೆಸಿದ್ದನಂತೆ ಅತ್ಯಾಚಾರ! ಸ್ಫೋಟಕ ವಿಚಾರ ಬಾಯ್ಬಿಟ್ಟ ಬಿಗ್ ಬಾಸ್ ಸ್ಪರ್ಧಿ

ರೋಹಿತ್ ವರ್ಮಾ

ರೋಹಿತ್ ವರ್ಮಾ

ಆತ ಬಿಗ್ ಬಾಸ್ ಹಿಂದಿ ಶೋನ ಸ್ಪರ್ಧಿ, ಖ್ಯಾತ ಫ್ಯಾಶನ್ ಡಿಸೈನರ್ ಹಾಗೂ ಉದ್ಯಮಿ. ಅವರ ಮೇಲೆ ಬಾಲ್ಯದಲ್ಲಿ ಚಿಕ್ಕಪ್ಪನೇ ಅತ್ಯಾಚಾರ ನಡೆಸಿದ್ದನಂತೆ. ಆತ ಯುವಕನಾಗಿದ್ದಾಗ ಮುಂಬೈನಲ್ಲಿ ವೇಶ್ಯಾವಾಟಿಕೆ ಮಾಡಿದ್ರಂತೆ! ಈ ಘೋರ ಸತ್ಯಗಳನ್ನು ಖುದ್ದು ಅವರೇ ಹೇಳಿದ್ದಾರೆ!

 • Share this:

ಆತ ಖ್ಯಾತ ಉದ್ಯಮಿ (Industrialist), ಖ್ಯಾತ ಫ್ಯಾಶನ್ ಡಿಸೈನರ್ (Fashion Designer).. ಅವುಗಳಿಗಿಂತ ಹೆಚ್ಚಾಗಿ ಬಿಗ್ ಬಾಸ್ ಶೋನಿಂದಲೇ (Bigg Boss Show) ಜನಪ್ರಿಯನಾಗಿದ್ದವರು. ಅವರೀಗ ತಮ್ಮ ಬಾಲ್ಯದ ದಿನಗಳನ್ನು (Childhood Days) ನೆನೆದಿದ್ದಾರೆ. ಬಾಲ್ಯದಲ್ಲಿ ಆದ ಕಹಿ ಘಟನೆಯನ್ನು ಮೆಲುಕು ಹಾಕಿದ್ದಾರೆ. ಆಘಾತಕಾರಿ ವಿಚಾರವನ್ನು ಹೊರಹಾಕಿದ್ದಾರೆ. ಅಂದಹಾಗೆ ಬಾಲ್ಯದಲ್ಲಿ ಅವರ ಮೇಲೆ ಅತ್ಯಾಚಾರ ನಡೆದಿತ್ತಂತೆ. ಅದೂ ಸ್ವಂತ ಚಿಕ್ಕಪ್ಪನಿಂದಲೇ (Uncle) ಆ ಬಾಲಕ (Boy) ಅತ್ಯಾಚಾರಕ್ಕೆ ಒಳಗಾಗಿದ್ದನಂತೆ. ಇಂಥದ್ದೊಂದು ಸ್ಫೋಟಕ ವಿಚಾರ ಹೊರಹಾಕಿದ್ದು ಬಿಗ್ ಬಾಸ್ ಹಿಂದಿ (Hindi) ಶೋನ ಸ್ಪರ್ಧಿ, ಬಾಲಿವುಡ್‌ನ ಖ್ಯಾತ ಫ್ಯಾಶನ್ ಡಿಸೈನರ್, ಉದ್ಯಮಿ ರೋಹಿತ್ ವರ್ಮಾ (Rohit Verma). ಡಿಸೈನರ್ ಆರ್‌ಜೆ ಸಿದ್ಧಾರ್ಥ್ ಕಾನನ್ ಅವರ ಚಾಟ್ ಶೋ (Chat Show) ಒಂದರಲ್ಲಿ ಭಾಗಿಯಾಗಿದ್ದ ರೋಹಿತ್ ವರ್ಮಾ, ಈ ಕಹಿ ಘಟನೆ ಬಗ್ಗೆ ಹೇಳಿ ಕೊಂಡಿದ್ದಾರೆ.


 ಸ್ವಂತ ಚಿಕ್ಕಪ್ಪನಿಂದಲೇ ಅತ್ಯಾಚಾರ


 “ನಾನು ಅತ್ಯುತ್ತಮ ಮನೆತನದಿಂದ ಬಂದವನು. ಆದಾಗ್ಯೂ ನನ್ನ ಸಂಬಂಧಗಳು ಬಹಳ ಹಳೆಯ ಪರಿಕಲ್ಪನೆಗಳನ್ನು ಹೊಂದಿವೆ. ನಾನು ಮನೆಯಲ್ಲಿ ಹುಟ್ಟಿದ್ದರೂ, ನನ್ನ ಬಾಲ್ಯದಲ್ಲಿ ನನ್ನ ನಿಜವಾದ ಚಿಕ್ಕಪ್ಪನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದೆ ಅಂತ ರೋಹಿತ್ ವರ್ಮಾ ಹೇಳಿದ್ದಾರೆ. ನನ್ನ ಎಂಟನೇ ವಯಸ್ಸಿನಲ್ಲಿ ನನ್ನ ಸ್ವಂತ ಚಿಕ್ಕಪ್ಪನಿಂದ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ. ನನಗೆ ಸೀರೆ ಉಡುವಂತೆ ಮಾಡುತ್ತಿದ್ದರು, ಮೈಮೇಲೆ ಸುಡುವ ಮೇಣವನ್ನು ಹಚ್ಚಿ ಘೋರ ದೌರ್ಜನ್ಯ ಎಸಗುತ್ತಿದ್ದರು ಅಂತ ಅವರು ಹೇಳಿದ್ದಾರೆ.


 3-4 ವರ್ಷಗಳು ಚಿಕ್ಕಪ್ಪನಿಂದ ಕಿರುಕುಳ


ಚಿಕ್ಕಪ್ಪ ನನಗೆ ಬೆದರಿಕೆ ಹಾಕಿದ್ದರು. ಹೀಗಾಗಿ ನಾನು ಇದನ್ನು ನನ್ನ ತಾಯಿಗೆ ತಿಳಿಸಲು ನಾನು ಗಾಬರಿಯಾಗಿದ್ದೆ ಮತ್ತು ಇದು 3-4 ವರ್ಷಗಳ ಕಾಲ ನಡೆಯಿತು. ನಾನು ಅದನ್ನು ನನ್ನ ಮನೆಯಲ್ಲಿ ಅನುಭವಿಸಿದೆ. ಆದರೆ ಭಯದಿಂದ ನಾನು ಯಾರಿಗೂ ತಿಳಿಸಲಿಲ್ಲ ”ಎಂದು ರೋಹಿತ್ ಆರ್‌ಜೆ ಸಿದ್ಧಾರ್ಥ್ ಕಾನನ್‌ ಶೋನಲ್ಲಿ ಹೇಳಿದ್ದಾರೆ.


ಇದನ್ನೂ ಓದಿ: Chhichhore Movie: ಮೂರು ವರ್ಷ ಪೂರೈಸಿದ ಸುಶಾಂತ್ ಸಿಂಗ್ ನಟನೆಯ ಚಿತ್ರ, ಅವನಿರಬೇಕಿತ್ತು ಅನ್ಸೋಕೆ ಮತ್ತಷ್ಟು ಕಾರಣಗಳು


 ಮುಂಬೈನಲ್ಲಿ ವೇಶ್ಯೆಯಾಗಿಯೂ ಜೀವನ ನಿರ್ವಹಣೆ!


ಮುಂಬೈನಲ್ಲಿ ತನ್ನ ಆರಂಭಿಕ ದಿನಗಳ ಬಗ್ಗೆ ಮಾತನಾಡಿದ ರೋಹಿತ್ ವರ್ಮಾ, ನಾನು ವೇಶ್ಯೆಯಾಗಿ ಕೆಲಸ ಮಾಡಿದ್ದೇನೆ ಅಂತ ಮತ್ತೊಂದು ಸ್ಫೋಟಕ ವಿಚಾರ ತಿಳಿಸಿದ್ದಾರೆ. ನನಗೆ ಮುಂಬೈನಲ್ಲಿ ಹಣ ಬೇಕಿತ್ತು. ಆ ಸಮಯದಲ್ಲಿ ನನ್ನ ಅಗತ್ಯಗಳನ್ನು ಪೂರೈಸಲು ನಾನು ಹುಡುಗಿಯರ ಬಟ್ಟೆಗಳನ್ನು ಧರಿಸಿ ತಾಜ್‌ನಲ್ಲಿ ತಿರುಗುತ್ತಿದ್ದೆ. ಜನರು ನನ್ನನ್ನು ಒಂದು ಅಥವಾ ಎರಡು ಬಾರಿ ಕರೆದೊಯ್ದರು ಮತ್ತು ನಾನು ಇಲ್ಲಿಂದ ಬಂದ ಹಣದಿಂದ ನಾನು ಡಿಸೈನಿಂಗ್ ವಸ್ತುಗಳನ್ನು ಖರೀದಿಸಿದೆ ಅಂತ ಹೇಳಿದ್ದಾರೆ.


ಬಾಲಿವುಡ್‌ನಲ್ಲಿ ಎಲ್ಲರೂ ಸಲಿಂಗ ಅಥವಾ ದ್ವಿಲಿಂಗ ಕಾಮಿಗಳು


ಇನ್ನು ಬಾಲಿವುಡ್‌ನಲ್ಲಿ ಎಲ್ಲರೂ ಸಲಿಂಗಕಾಮಿಗಳು ಅಥವಾ ದ್ವಿಲಿಂಗಿಗಳು ಅಂತ ರೋಹಿತ್ ವರ್ಮಾ ಹೇಳಿದ್ದಾರೆ. ಇದರ ಬಗ್ಗೆ ಕೆಲವರು ಬಹಿರಂಗವಾಗಿ ಮಾತನಾಡುತ್ತಾರೆ, ಕೆಲವರು ಮಾತನಾಡಲು ಸಾಧ್ಯವಿಲ್ಲ. ನಾನು ನಟನೊಂದಿಗೆ ಸಂಬಂಧ ಹೊಂದಿದ್ದೇನೆ, ನಾನು ಅದನ್ನು ನಿರಾಕರಿಸುವುದಿಲ್ಲ. ಕೆಲವರು ಅದನ್ನು ರಹಸ್ಯವಾಗಿಮಾಡುತ್ತಾರೆ. ಆದರೆ, ನಾನು ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ನನಗೆ ತೊಂದರೆಯಾಗುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ: Alia Bhatt-Ranbir Kapoor: ಆಲಿಯಾ ಭಟ್ ಮುಖದಲ್ಲಿ ಗರ್ಭಿಣಿ ಕಳೆ! ಬ್ಲೇಜರ್ ಧರಿಸಿ ಪೋಸ್ ಕೊಟ್ಟ ನಟಿ

top videos


  ಇನ್ನು ಇತ್ತೀಚೆಗಷ್ಟೇ, ಕರಣ್-ನಿಶಾ ರಾವಲ್ ವೈಷಮ್ಯದಲ್ಲಿ ರೋಹಿತ್ ವರ್ಮಾ ಅವರ ಚಿತ್ರಣಕ್ಕೆ ಕಳಂಕ ತಂದ ಆರೋಪದ ಮೇಲೆ ಕರಣ್ ಮೆಹ್ರಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೋಹಿತ್, ಕರಣ್ ಮತ್ತು ನಿಶಾಗೆ ಒಂದೇ ರೀತಿಯ ಪ್ರೀತಿ ಇದೆ ಎಂದು ಹೇಳಿದರು.

  First published: