• Home
  • »
  • News
  • »
  • entertainment
  • »
  • ಪ್ಲೀಸ್ ನನಗೆ ಹೋಗಲು ಬಿಡಿ.. ತಂದೆಯ ಅಂತ್ಯಕ್ರಿಯೆಗೆ ಹೋಗುವಾಗಲೂ ಮುತ್ತಿಕೊಂಡ ಕ್ಯಾಮರಾಗಳು!

ಪ್ಲೀಸ್ ನನಗೆ ಹೋಗಲು ಬಿಡಿ.. ತಂದೆಯ ಅಂತ್ಯಕ್ರಿಯೆಗೆ ಹೋಗುವಾಗಲೂ ಮುತ್ತಿಕೊಂಡ ಕ್ಯಾಮರಾಗಳು!

ಹಿನಾಖಾನ್​

ಹಿನಾಖಾನ್​

ತಂದೆ ಸಾವಿನ ನೋವಿನಲ್ಲಿದ್ದ ನಟಿಗೆ ಹೋಗಲು ದಾರಿಯನ್ನೂ ಕೊಡದೆ ಅಡ್ಡಗಟ್ಟಿ ಫೋಟೋ ತೆಗೆದಿರೋದು ತೀವ್ರ ಟೀಕೆಗೆ ಗುರಿಯಾಗಿದೆ.

  • Share this:

ಮುಂಬೈ: ಸಿನಿಮಾ ತಾರೆಯರು, ಕ್ರಿಕೆಟಿಗರು, ಸೆಲೆಬ್ರೆಟಿಗಳು ಹೊರ ಬಂದರೆ ಸಾಕು ಅವರನ್ನು ನೂರಾರು ಕ್ಯಾಮರಾಗಳು ಮುತ್ತಿಕೊಳ್ಳುತ್ತವೆ. ಪ್ಯಾಪರಾಜಿ (ಫೋಟೋಗ್ರಾಫರ್ಸ್​) ಸಂಸ್ಕೃತಿ ನಮ್ಮ ದೇಶದಲ್ಲಿ ಇತ್ತೀಚಿಗಿನ ವರ್ಷದಲ್ಲಿ ಹೆಚ್ಚಾಗಿದೆ. ಸೆಲೆಬ್ರೆಟಿಗಳು ಎಲ್ಲೇ ಇದ್ದರೂ ಅವರನ್ನು ಕ್ಯಾಮರಾ ಕಣ್ಣುಗಳು ಸೆರೆ ಹಿಡಿಯುತ್ತಲೇ ಇರುತ್ತವೆ. ಮುಂಬೈನ ಏರ್​ಪೋರ್ಟ್​ ಅಂತೂ ಪ್ಯಾಪರಾಜಿಗಳ ಹಾಟ್​ಸ್ಪಾಟ್​. ಯಾವುದೇ ಸೆಲೆಬ್ರೆಟಿಗಳು ವಿಮಾನ ನಿಲ್ದಾಣಕ್ಕೆ ಬಂದರೆ ಸಾಕು ನೂರಾರು ಕ್ಯಾಮರಾಗಳು ಅವರನ್ನು ಸೆರೆ ಹಿಡಿಯುತ್ತವೆ. ಅತಿಯಾದರೆ ಅಮೃತವೂ ವಿಷವೆಂಬಂತೆ ಸಮಯ-ಸಂದರ್ಭ ನೋಡದೇ ಫೋಟೋ ತೆಗೆದಿರೋದು ಸದ್ಯ ಟೀಕೆಗೆ ಗುರಿಯಾಗಿದೆ.  


ಹಿಂದಿಯ ಕಿರುತೆರೆ ನಟಿ ಹಿನಾಖಾನ್​​​ ಇಂದು ಬೆಳಗ್ಗೆ ಮುಂಬೈ ಏರ್​ಪೋರ್ಟ್​​ಗೆ ಬಂದಿಳಿದೊಡನೆ ಎಂದಿನಂತೆ ಪ್ಯಾಪರಾಜಿಗಳು ಆಕೆಯನ್ನು ಮುತ್ತಿಕೊಂಡಿವೆ. ಶ್ರೀನಗರದಲ್ಲಿ ಶೂಟಿಂಗ್​ನಲ್ಲಿದ್ದ ನಟಿ ಹಿನಾ ತಮ್ಮ ತಂದೆಯ ಸಾವಿನ ಸುದ್ದಿ ತಿಳಿಯುತ್ತಿದಂತೆ ಮುಂಬೈಗೆ ದೌಡಾಯಿಸಿದ್ದರು. ಆದರೆ ಪ್ಯಾಪರಾಜಿಗಳು ಅದನ್ನು ಲೆಕ್ಕಿಸದೇ ನೋವಿನಲ್ಲಿದ್ದ ನಟಿಯ ಮುಖಕ್ಕೆ ಕ್ಯಾಮರಾ ಹಿಡಿದಿದ್ದಾರೆ. ಪ್ಲೀಸ್​ ನನಗೆ ಹೋಗಲು ಬಿಡಿ ಎಂದು ಹಿನಾ ಕೇಳಿಕೊಂಡರೂ ಎದುರು ನಿಂತ ಫೋಟೋ ಕ್ಲಿಕಿಸೋದರಲ್ಲೇ ಸಮಯ ಕಳೆದಿದ್ದಾರೆ.


ತಂದೆ ಸಾವಿನ ನೋವಿನಲ್ಲಿದ್ದ ನಟಿಗೆ ಹೋಗಲು ದಾರಿಯನ್ನೂ ಕೊಡದೆ ಅಡ್ಡಗಟ್ಟಿ ಫೋಟೋ ತೆಗೆದಿರೋದು ತೀವ್ರ ಟೀಕೆಗೆ ಗುರಿಯಾಗಿದೆ. ನಟಿ ಹಿನಾರನ್ನು ಅಡ್ಡಗಟ್ಟಿ ಫೋಟೋ ತೆಗೆದಿರೋ ಘಟನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯ ಅಂತಿಮದರ್ಶನಕ್ಕೆ ಹೊರಟ ನಟಿಯನ್ನು ಈ ಪರಿ ಸತಾಯಿಸೋದು ಬೇಕಿತ್ತಾ? ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಫೋಟೋಗ್ರಾಫರ್​ ಒಬ್ಬರು ನಟಿಯ ಮುಖಕ್ಕೆ ಲೈಟ್​ ಹಾಕು ಎಂದಿರೋದು ನೆಟ್ಟಿಗರನ್ನು ಕೆರಳಿಸಿದೆ.
ಹಿನಾ ಜೊತೆ ಬಿಗ್​ಬಾಸ್​ ಶೋನಲ್ಲಿ ಸಹ ಸ್ಪರ್ಧಿಯಾಗಿದ್ದ ವಿಕಾಸ್​ ಗುಪ್ತಾ ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಸೆಲೆಬ್ರೆಟಿಗಳು ಮನುಷ್ಯರೇ. ಸಾವು-ನೋವಿನ ಸಂದರ್ಭದಲ್ಲಿ ಪ್ಯಾಪರಾಜಿಗಳು ಕೊಂಚ ಅನುಕಂಪ ತೋರಬೇಕು. ಆಕೆ ತನಗೆ ಹೋಗಲು ಜಾಗ ಬಿಡಿ ಎಂದಾಗಲಾದ್ರೂ ಛಾಯಾಗ್ರಾಹಕರು ಫೋಟೋ ತೆಗೆಯೋದನ್ನ ನಿಲ್ಲಿಸಬೇಕಿತ್ತು. ಸೂಕ್ಷ್ಮತೆ ಇಲ್ಲದೇ ನಡೆದುಕೊಂಡಿರುವುದಕ್ಕೆ ತುಂಬಾ ಬೇಸರವಾಗಿದೆ ಎಂದು ವಿಕಾಸ್​ ಗುಪ್ತಾ ಹರಿಹಾಯ್ದಿದ್ದಾರೆ.


ನಟಿ ಹಿನಾಖಾನ್​ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಿನಾ ಹಿಂದಿಯ ಹಲವು ಧಾರವಾಹಿಗಳಲ್ಲಿ ನಟಿಸಿದ್ದು, ಬಿಗ್​ಬಾಸ್​-8, ಕತ್ರೋಂಕಿ ಕಿಲಾಡಿ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಪ್ಯಾಪರಾಜಿಗಳು ತೆಗೆಯೋ ಫೋಟೋಗಳನ್ನು ಏಜೆನ್ಸಿಗಳು ಹಣ ಕೊಟ್ಟು ಖರೀದಿಸುತ್ತವೆ. ದೊಡ್ಡ ಸೆಲೆಬ್ರೆಟಿಗಳ ಫೋಟೋ ತೆಗೆದು ಕೊಟ್ಟವರಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗುತ್ತದೆ. ನಟಿ ಕರೀನಾ ಕಪೂರ್​​ ಪುತ್ರ ತೈಮೂರ್​ ಫೋಟೋಗೆ ಅತಿ ಹೆಚ್ಚು ಹಣ ಸಿಗುತ್ತೆ ಎಂಬುವುದು ಈ ಹಿಂದೆ ಸುದ್ದಿಯಾಗಿತ್ತು. ಹೀಗಾಗಿಯೇ ಪುಟ್ಟ ಬಾಲಕ ತೈಮೂರ್​ ಎಲ್ಲೇ ಹೋದರು ನೂರಾರು ಕ್ಯಾಮರಾಗಳು ಅವನನ್ನು ಹಿಂಬಾಲಿಸುತ್ತಿದ್ದವು. ಸೆಲೆಬ್ರೆಟಿಗಳ ಏರ್​ಪೋರ್ಟ್​ ಲುಕ್​ನ ಫೋಟೋ ಕ್ಲಿಕಿಸಲು ಏರ್​ಪೋರ್ಟ್​ಗಳಲ್ಲಿ ಪ್ಯಾಪರಾಜಿಗಳ ದಂಡೇ ಠಿಕಾಣಿ ಹೂಡಿರುತ್ತೆ.

Published by:Kavya V
First published: