ಸುದ್ದಿಗೋಷ್ಠಿಯಲ್ಲಿ ರಾನು ಹೇಳಿದ ಒಂದೇ ಒಂದು ಮಾತಿಗೆ ಕಣ್ಣೀರಿಟ್ಟ ಹಿಮೇಶ್​..!

ಬಾಲಿವುಡ್​ನ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಹಿಮೇಶ್​ ರೇಶಮಿಯಾ ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ. ಅದು ತಮ್ಮ ಸಿನಿಮಾದ ಹಾಡಿನ ಬಿಡುಗಡೆಗಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ರಾನು ಹೇಳಿದ ಒಂದೇ ಒಂದು ಮಾತಿಗೆ ಭಾವುಕರಾಗಿ, ಅಳುತ್ತಲೇ ಮಾತನಾಡಿದ್ದಾರೆ.

Anitha E | news18-kannada
Updated:September 13, 2019, 3:51 PM IST
ಸುದ್ದಿಗೋಷ್ಠಿಯಲ್ಲಿ ರಾನು ಹೇಳಿದ ಒಂದೇ ಒಂದು ಮಾತಿಗೆ ಕಣ್ಣೀರಿಟ್ಟ ಹಿಮೇಶ್​..!
ಸಂಗೀತ ನಿರ್ದೇಶಕ ಹಿಮೇಶ್​ ಹಾಗೂ ರಾನು ಮಂಡಲ್​
  • Share this:
ಹಿಮೇಶ್​ ಹಾಗೂ ರಾನು ಮಂಡಲ್​ ಅವರ ಕಾಂಬಿನೇಶನ್​ನಲ್ಲಿ 'ಹ್ಯಾಪಿ ಹಾರ್ಡಿ ಆ್ಯಂಡ್​ ಹೀರ್' ಸಿನಿಮಾದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ನಿನ್ನೆ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದರಲ್ಲಿ ಹಿಮೇಶ್​ ಕಣ್ಣೀರಿಟ್ಟಿದ್ದಾರೆ.

'ತೇರಿ ಮೇರಿ ಕಹಾನಿ' ಹಾಡಿನ ಬಿಡುಗಡೆಗಾಗಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ  ರಾನು ಮಾತನಾಡುತ್ತಾ, ಈ ಕಾರ್ಯಕ್ರಮಕ್ಕೆ ಬಂದು ತುಂಬಾ ಖುಷಿಯಾಗಿದೆ. ಇದಕ್ಕೆ ಕಾರಣ ಹಿಮೇಶ್ ಎಂದಿದ್ದಾರೆ. ಈ ಮಾತು ಕೇಳಿದ ಕೂಡಲೇ ಹಿಮೇಶ್​ ಅವರ ಕಣ್ಣುಗಳು ಬಂದಿತ್ತು.

 
 View this post on Instagram
 

rewind back the journey of #ranumandal today at the song launch @tips @viralbhayani


A post shared by Viral Bhayani (@viralbhayani) on

ಇದನ್ನೂ ಓದಿ: Pailwaan: ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​ರ ಜಾಲಿ ಜಾಲಿ ಟಿಕ್​ಟಾಕ್​ ವಿಡಿಯೋ..! ​

'ಹ್ಯಾಪಿ ಹಾರ್ಡಿ ಆ್ಯಂಡ್ ಹೀರ್​' ಸಿನಿಮಾಗಾಗಿ ಹಿಮೇಶ್ ರಾನು ಅವರಿಂದ ಮೂರು ಹಾಡುಗಳನ್ನು ಹಾಡಿಸಿದ್ದಾರೆ. ಅದರಲ್ಲಿ ಅವರು ಹಾಡಿದ ಮೊದಲ ಹಾಡು 'ತೇರಿ ಮೇರಿ ಕಹಾನಿ'ಯನ್ನು ನಿನ್ನೆ ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಯಿತು.

'ಆದತ್​' ಹಾಗೂ 'ಆಶಿಕಿ' ಹಾಡುಗಳನ್ನು ರಾನು ಹಾಡಿದ್ದು, ಅವುಗಳ ಬಿಡುಗಡೆ ದಿನಾಂಕ ನಿಗದಿಯಾಗಿಲ್ಲ. ಈ ಸಿನಿಮಾದಲ್ಲಿ ಹಿಮೇಶ್​ ನಾಯಕನಾಗಿ ನಟಿಸುವುದರೊಂದಿಗೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಈ ಸಿನಿಮಾದ ಆಡಿಯೋ ಹಕ್ಕನ್ನು ಟಿಪ್ಸ್​ ಸಂಸ್ಥೆ ಪಡೆದುಕೊಂಡಿದೆ.

ಇದನ್ನೂ ಓದಿ: ವಿವಾಹದ ನಂತರ ನಾಯಕಿಯಾಗಿ ಮಿಂಚಿದ 'ಪೈಲ್ವಾನ್'​​ ನಟಿ: ಆಕಾಂಕ್ಷಾಗೆ ಸಿಕ್ತು ಕನ್ನಡಿಗರ ಪ್ರೀತಿ​..!

Akanksha Singh: 'ಪೈಲ್ವಾನ್'​ ಬ್ಯೂಟಿ ಆಕಾಂಕ್ಷಾರ ಆಫ್​ಸ್ಕ್ರೀನ್​ ರೊಮ್ಯಾನ್ಸ್​..! ​


First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading