ಶ್ರುತಿಗೆ ಅರ್ಜುನ್ ಕೊಟ್ಟ ಕಿರುಕುಳಗಳೇನು? ಶ್ರುತಿ ಕೊಟ್ಟ ದೂರಿನಲ್ಲೇನಿದೆ? ಇಲ್ಲಿವೆ 13 ಪಾಯಿಂಟ್ಸ್

ವಿಸ್ಮಯ ಚಿತ್ರೀಕರಣದ ವೇಳೆ ಹಾಗೂ ನಂತರದಲ್ಲಿ ಅರ್ಜುನ್ ಸರ್ಜಾ ಅವರು ನನ್ನ ಅಂಗಾಂಗಗಳನ್ನ ಅಸಭ್ಯವಾಗಿ, ಅನಗತ್ಯವಾಗಿ ಮುಟ್ಟುತ್ತಿದ್ದರು ಎಂದು ಶ್ರುತಿ ಹರಿಹರನ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

Vijayasarthy SN
Updated:October 27, 2018, 4:56 PM IST
ಶ್ರುತಿಗೆ ಅರ್ಜುನ್ ಕೊಟ್ಟ ಕಿರುಕುಳಗಳೇನು? ಶ್ರುತಿ ಕೊಟ್ಟ ದೂರಿನಲ್ಲೇನಿದೆ? ಇಲ್ಲಿವೆ 13 ಪಾಯಿಂಟ್ಸ್
ವಿಸ್ಮಯ ಚಿತ್ರದ ದೃಶ್ಯದಲ್ಲಿ ಶೃತಿ ಹರಿಹರನ್ ಮತ್ತು ಅರ್ಜುನ್ ಸರ್ಜಾ
  • Share this:
- ನ್ಯೂಸ್18 ಕನ್ನಡ

ಬೆಂಗಳೂರು(ಅ. 27): ಅರ್ಜುನ್ ಸರ್ಜಾ ವಿರುದ್ಧ ಸಮರ ಸಾರುತ್ತಿರುವ ನಟಿ ಶ್ರುತಿ ಹರಿಹರನ್ ಕಬ್ಬನ್ ​ಪಾರ್ಕ್​ ಪೊಲೀಸ್​ ಠಾಣೆಗೆ 5 ಐದು ಪುಟಗಳ ದೂರು ಕೊಟ್ಟಿದ್ದಾರೆ. ಶೂಟಿಂಗ್ ವೇಳೆ ನನ್ನ ದೇಹವನ್ನು ಮುಟ್ಟಿ ಅರ್ಜುನ್ ಸರ್ಜಾ ಅಸಭ್ಯವಾಗಿ ವರ್ತಿಸಿದ್ದಾರೆ.  ಲೈಂಗಿಕವಾಗಿ ನನ್ನ ಮೇಲೆ ದೌರ್ಜನ್ಯ ಎಸಗಿದ್ರು ಅಂತ ಶ್ರುತಿ ಹರಿಹರನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಐಪಿಸಿ ಸೆಕ್ಷನ್​ 354, 354ಎ, 509ರಡಿ ಎಫ್​ಐಆರ್​ ದಾಖಲಾಗಿದೆ. ಐಪಿಸಿ 354, 354 ಎ- ಜಾಮೀನು ರಹಿತ ಸೆಕ್ಷನ್​ಗಳಾಗಿದ್ದು, ಅರ್ಜುನ್ ಸರ್ಜಾಗೆ ಬಂಧನ ಭೀತಿ ಎದುರಾಗಿದೆ. ದೂರಿನ ಹಿನ್ನೆಲೆ ಅರ್ಜುನ್ ಸರ್ಜಾರನ್ನ ವಿಚಾರಣೆ ನಡೆಸಲಿರುವ ಪೊಲೀಸರು ಇಂದು ಅಥವಾ ನಾಳೆ ಸರ್ಜಾರನ್ನ ಬಂಧಿಸುವ ಸಾಧ್ಯತೆ ಸಹ ಇದೆ.

ಶ್ರುತಿ ಹರಿಹರನ್ ದೂರಿನಲ್ಲಿ ಏನಿದೆ?

1) 2015ರಲ್ಲಿ ದೇವನಹಳ್ಳಿ ಬಳಿಯ ಆಸ್ಪತ್ರೆಯೊಂದರಲ್ಲಿ ವಿಸ್ಮಯ ಚಿತ್ರೀಕರಣ ವೇಳೆ ಅಸಭ್ಯ ವರ್ತನೆ

2) ಶೂಟಿಂಗ್ ನಂತ್ರ ಖಾಸಗಿ ಸ್ಥಳದಲ್ಲಿ ಸಿಗಲು ಪೀಡಿಸಿದ್ರು. ಈ ಮೂಲಕ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನ

3) ದೇವನಹಳ್ಳಿ ಸಿಗ್ನಲ್ ಬಳಿ ಕಾರ್ ತಡೆದು ರೆಸಾರ್ಟ್‌ಗೆ ಕರೆದ್ರು. ಒಟ್ಟಿಗೆ ಕಾಲ ಕಳೆಯೋಣ ಎಂದು ಕರೆದಿದ್ದರು. ನನ್ನ ರೆಸಾರ್ಟ್‌ನಲ್ಲಿ ಯಾರೂ ಇಲ್ಲ ಬಾ ಎಂದು ಪೀಡಿಸಿದ್ರು. ಸರ್ಜಾ ಮಾತು ಕೇಳಿ ಕಣ್ಣೀರಿಟ್ಟೆ. ಅವರು ಹೊರಟು ಹೋದರು.

4) ಜುಲೈ 2016ರಲ್ಲಿ ಚಿತ್ರದ ಚಿತ್ರೀಕರಣಕ್ಕೆ ಯುಬಿ ಸಿಟಿಗೆ ಹೋಗಿದ್ದೆ. ಈ ವೇಳೆ ಅರ್ಜುನ್ ಸರ್ಜಾ ನನ್ನ ಹಿಪ್ ಟಚ್ ಮಾಡಿ ಅಸಭ್ಯವಾಗಿ ವರ್ತಿಸಿದ್ರು. ಯಾಕೆ ಒಬ್ಬಳೇ ಕಾಯುತ್ತಿದ್ದೀಯಾ ಎಂದು ಪ್ರಶ್ನಿಸಿದ್ರು. ನಾನು ಒಬ್ಬನೇ ಇದ್ದೇನೆ. ಒಂದಷ್ಟು ಕಾಲ ಸಂತೋಷವಾಗಿ ಕಳೆಯೋಣ ಎಂದ ಅರ್ಜುನ್ ಮಾತು ಕೇಳಿ ನಾನು ಗಾಬರಿ ಬಿದ್ದೆ, ಭಯಗೊಂಡೆ. ಇದರಿಂದ ತಿಳಿಯಿತು ಅವರ ಲೈಂಗಿಕ ಉದ್ದೇಶ. ನಾನು ರೂಮ್‌ಗೆ ತೆರಳಲು ನಿರಾಕರಿಸಿದೆ.5) ಒಂದು ದಿನ ನೀನು ನನ್ನ ಕೋಣೆಗೆ ಬರುವಂತೆ ಮಾಡುವೆ ಎಂದು ಚಾಲೆಂಜ್ ಹಾಕಿದ್ರು. ಎಚ್ಚರದಿಂದ ಇರು. ಯಾರಲ್ಲಾದ್ರೂ ಮಾತನಾಡಿದ್ರೆ ಕೆರಿಯರ್ ಹಾಳು ಮಾಡುವೆ ಎಂದು ಬೆದರಿಕೆ ಹಾಕಿದ್ರು.

6) ಬೇರೆ ಬೇರೆ ಜಾಗಗಳಿಗೆ ಕರೆದೊಯ್ದು, ನಿನ್ನ ಬದುಕನ್ನ ದುಸ್ತರ ಮಾಡುವ ಬೆದರಿಕೆ ಹಾಕಿದ್ರು.

7) ಹೆಬ್ಬಾಳದ ಬಂಗಲೆಯಲ್ಲಿ ಚಿತ್ರೀಕರಣ ಇತ್ತು.. ಕಥೆ ಪ್ರಕಾರ ತಬ್ಬಿಕೊಂಡು ಡೈಲಾಗ್ ಹೇಳುವ ಸೀನ್ ಇತ್ತು. ಈ ಸೀನ್‌ಗಾಗಿ ನಿರ್ದೇಶಕರು ರಿಹರ್ಸಲ್ ಮಾಡಲು ಸೂಚಿಸಿದ್ರು. ಈ ವೇಳೆ ಅವ್ರು ನನ್ನ ಹಿಪ್ ಹಿಡಿದ್ರು, ದೇಹದ ಅಂಗಾಂಗ ಮುಟ್ಟಿದ್ರು. ನನ್ನ ಹಿಪ್ ಹಾಗೂ ತೊಡೆ ಭಾಗದಲ್ಲಿ ಕೈಯಾಡಿಸಿದ್ರು. ಕಥೆಯಲ್ಲಿ ಇರುವುದಕ್ಕಿಂತ ಬೇರೆಯಾಗಿ ಅರ್ಜುನ್ ಸರ್ಜಾ ವರ್ತಿಸಿದ್ರು.

8) ನಾನು ಕನ್ನಡ ಇಂಡಸ್ಟ್ರಿಗೆ ಹೊಸಬಳಾಗಿದ್ದೆ..ಅದನ್ನು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ಅವ್ರು ಕನ್ನಡ ಇಂಡಸ್ಟ್ರಿಯಲ್ಲಿ ಬಹಳ ದೊಡ್ಡ ಹಾಗೂ ಹಿರಿಯ ನಟ. ಹಾಗಾಗಿ, ಆ ವೇಳೆ ನನಗೆ ಪ್ರತಿಕ್ರಿಯಿಸಲು ಸಾಧ್ಯವಾಗಲಿಲ್ಲ. ನಾನು ಪ್ರತಿಕ್ರಿಯೆ ನೀಡುವ ವೇಳೆಗೆ ಮತ್ತೊಮ್ಮೆ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ರು. ಅಸಭ್ಯವಾಗಿ ವರ್ತಿಸಿ, ಈ ಸೀನ್‌ ಅನ್ನ ಇನ್ನೂ ಉತ್ತಮಗೊಳಿಸಬಹುದೇ ಎಂದು ಕೇಳಿದ್ರು. ತಕ್ಷಣ ನಾನು ನಿರ್ದೇಶಕರ ಬಳಿ ತೆರಳಿ ಈ ರೀತಿಯ ಸೀನ್ ಮಾಡಲು ಇಷ್ಟವಿಲ್ಲ ಎಂದಿದ್ದೆ

9) ಈ ದೃಶ್ಯಾವಳಿಗಳು ನನ್ನನ್ನು ಕೆಟ್ಟದಾಗಿ ತೋರಿಸುವಂತಿದೆ. ಅರ್ಜುನ್ ಸರ್ಜಾ ವರ್ತನೆ ಲೈಂಗಿಕವಾಗಿ ಬಳಸಿಕೊಳ್ಳುವ ರೀತಿಯಲ್ಲಿದೆ. ಈ ಬೆಳವಣಿಗಗಳನ್ನು ಸಹಿಸಿಕೊಳ್ಳಲಾಗದೆ ನಾನು ಕಣ್ಣೀರಿಟ್ಟೆ. ಈ ವೇಳೆ ನನ್ನ ಸಿಬ್ಬಂದಿ ಬೋರೇಗೌಡ ಮತ್ತು ಕಿರಣ್ ನನ್ನನ್ನು ಸಮಾಧಾನಪಡಿಸಿದ್ರು

10) ಚಿತ್ರದಲ್ಲಿ ಹಾಸಿಗೆ ಮೇಲೆ ಒಟ್ಟಿಗೆ ಮಲಗುವ ದೃಶ್ಯ ಇತ್ತು. ಇದನ್ನು ದುರುಪಯೋಗಪಡಿಸಿಕೊಂಡು ನನ್ನ ಕೈ ಹಿಡಿದು ಎಳೆದು, ಹತ್ತಿರ ಬರುವಂತೆ, ತಬ್ಬಿಕೊಳ್ಳುವಂತೆ ಒತ್ತಾಯಿಸಿದ್ರು. ನಾನು ಈ ಸೀನ್ ಮುಗಿಸಿ ಸೆಟ್‌ನಿಂದ ಹಿಂದಿರುಗಿದೆ

11) ಅರ್ಜುನ್ ಸರ್ಜಾ ಒತ್ತಾಯಪೂರ್ವಕವಾಗಿ ನನ್ನ ತೇಜೋವಧೆಗೆ ಯತ್ನಿಸಿದ್ರು. ನನಗಾಗುತ್ತಿರುವ ಹಿಂಸೆ ಬಗ್ಗೆ ಸಹ ನಿರ್ದೇಶಕ ಭರತ್ ನೀಲಕಂಠ ಹಾಗೂ ಮೋನಿಕಾ ಬಳಿ ತೋಡಿಕೊಂಡೆ. ನಂತ್ರ ಅವರು ರಿಹರ್ಸಲ್ ಬೇಡ. ಡೈರೆಕ್ಟ್ ಟೇಕ್ಸ್ ತೆಗೆದುಕೊಳ್ಳುವ ಭರವಸೆ ನೀಡಿದ್ರು.

12) 2 ವರ್ಷಗಳ ಕಾಲ ಬಹಳ ಚಿಂತಿಸಿ, ಈಗ ಕಾನೂನು ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ಸಾರ್ವಜನಿಕರ ಅಭಿಪ್ರಾಯ ಪಡೆಯಲು ಸಾಮಾಜಿಕ ಜಾಲತಾಣ ಬಳಸಿಕೊಂಡೆ

13) ನಾನು ಐಪಿಸಿ ಸೆಕ್ಷನ್‌ಗಳ ಬಗ್ಗೆ ಅಧ್ಯಯನ ಮಾಡಿದೆ. ಅರ್ಜುನ್ ಸರ್ಜಾ ಸೆಕ್ಷನ್ 354, 354ಎ, 509 ರಅಡಿಯಲ್ಲಿ ತಪ್ಪು ಎಸಗಿದ್ದಾರೆ ಎಂದು ನಿರ್ಧಾರಕ್ಕೆ ಬಂದೆ. ಹಾಗಾಗಿ, ಅರ್ಜುನ್ ಸರ್ಜಾ ವಿರುದ್ಧ ಮೇಲ್ಕಂಡ ಸೆಕ್ಷನ್‌ಗಳ ಅಡಿ ದೂರು ದಾಖಲಿಸಲು ಕೋರುತ್ತೇನೆ
First published:October 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading