ಬಾಲಿವುಡ್ಗೂ (Bollywood) ವಿವಾದಕ್ಕೂ ಬಿಡಿಸಲಾಗದ ನಂಟಿದೆ ಎಂದರೆ ತಪ್ಪಾಗದು. ಇಲ್ಲಿ ಸಿನಿಮಾಗಳಲ್ಲಿ ನಾಯಕ ನಟರಾಗಿ ಮಿಂಚಿದ ಕೆಲವರು ದೊಡ್ಡ ದೊಡ್ಡ ವಿವಾದಗಳಲ್ಲಿ (Controversial Cases)ಸಿಲುಕಿಕೊಂಡು ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನೂ ಸ್ಟಾರ್ ನಟರ ಪ್ರಕರಣಗಳು ನ್ಯಾಯಾಲದಲ್ಲಿವೆ. ಇಂತಹ ಪ್ರಕರಣದಲ್ಲಿ ಸಿಲುಕಿದ ಸ್ಟಾರ್ಗಳು ಹೈ-ಪ್ರೊಫೈಲ್ ವಕೀಲರನ್ನು (High Profile Lawyers ) ತಮ್ಮ ಪರ ವಾದ ಮಾಡಲು ನಿಯೋಜಿಸಿಕೊಂಡಿದ್ದಾರೆ. ಇಂತಹ ಐದು ಮಂದಿ ಹೈ ಪ್ರೊಫೈಲ್ ವಕೀಲರು ಹಾಗೂ ಅವರು ತೆಗೆದುಕೊಂಡ ವಿವಾದಿತ ಪ್ರಕರಣಗಳ ಕುರಿತಾದ ಮಾಹಿತಿ ಇಲ್ಲಿದೆ.
ಸದ್ಯ ಬಾಲಿವುಡ್ನಲ್ಲಿ ಮತ್ತೆ
ಮಾದಕ ವಸ್ತು ಪ್ರಕರಣದ ಸುದ್ದಿ ಸದ್ದು ಮಾಡುತ್ತಿದೆ. ಸ್ಟಾರ್ ನಟರ ಮಕ್ಕಳ ವಿಚಾರಣೆ ಸಹ ನಡೆಸಲಾಗುತ್ತಿದೆ. ಅಲ್ಲದೆ ಸ್ಟಾರ್ ಕಿಡ್ ಮಾದಕ ವಸ್ತು ಪ್ರಕರಣದಿಂದಾಗಿ ಜೈಲು ಸೇರಿದ್ದಾರೆ. ಈ ಪ್ರಕರಣದಲ್ಲೂ ಸಹ ಖ್ಯಾತ ವಕೀಲರು ವಾದ ಮಾಡುತ್ತಿದ್ದಾರೆ.
![sanjay dutt shares throwback photos, nargis dutt birthday, ನರ್ಗೀಸ್ ದತ್, ಸಂಜಯ್ ದತ್, ನರ್ಗೀಸ್ ದತ್ ಹುಟ್ಟುಹಬ್ಬ, ಸಂಜಯ್ ದತ್ ಅಮ್ಮ ನರ್ಗೀಸ್ ದತ್, Sanjay Dutt shares throwback photos On Nargis Dutt birthday says nobody else like you ae]()
ಅಪಪ್-ಅಮ್ಮನ ಜತೆ ಸಂಜಯ್ ದತ್ (ಸಂಗ್ರಹ ಚಿತ್ರ)
ಹಿರಿಯ ವಕೀಲ ಸತೀಶ್ ಮಾನೆಶಿಂಧೆ: ಹಿರಿಯ ವಕೀಲ ಸತೀಶ್ ಮಾನೆಶಿಂಧೆ ಅವರಿಗೆ ಸೆಲೆಬ್ರಿಟಿಗಳ ಕೇಸ್ ಹೊಸದೇನಲ್ಲ. ಸದ್ಯ ಸ್ಟಾರ್ ಕಿಡ್ ಪರವಾಗಿ ನ್ಯಾಯಾಲಯದಲ್ಲಿ ಅವರು ವಾದ ಮಂಡಿಸುತ್ತಿದ್ದಾರೆ. ಈ ಹಿಂದೆ ಇವರು 1993ರ ಮುಂಬೈ ಬಾಂಬ್ ಬ್ಲಾಸ್ ಪ್ರಕರಣದಲ್ಲಿ ಸಂಜಯ್ ದತ್ ಸಿಲುಕಿಕೊಂಡಿದ್ದಾಗ, ಇವೇ ನಟನ ಪರವಾಗಿ ವಾದ ಮಾಡಿದ್ದರು. ಸಂಜಯ್ ವಿರುದ್ಧ ಗಂಭೀರವಾದ ಆರೋಪ ಇದ್ದರೂ ಅವರಿಗೆ ಜಾಮೀನು ಸಿಗುವಂತೆ ಮಾಡಿದ್ದರು. ಇನ್ನು ಸಲ್ಮಾನ್ ಖಾನ್, ರಿಯಾ ಚಕ್ರವರ್ತಿ ಪರ ಸಹ ಇವರೇ ವಾದಿಸಿದ್ದರು. ವರದಿಗಳ ಪ್ರಕಾರ ಇವರು ಪ್ರತಿ ವಿಚಾರಣೆಗೆ 10 ಲಕ್ಷ ಪಡೆಯುತ್ತಾರಂತೆ.
![High Profile Lawyers has taken Bollywood Actors Controversial Cases]()
ಹಿರಿಯ ವಕೀಲ ಸತೀಶ್ ಮಾನೆಶಿಂಧೆ
ದಿಪೇಶ್ ಮೆಹ್ತಾ-ಹೃತಿಕ್ ರೋಷನ್: ವಕೀಲರಾದ ದಿಪೇಶ್ ಮೆಹ್ತಾ ಅವರು ರೋಷನ್ ಕುಟುಂಬದ ಸದಸ್ಯರಿದ್ದಂತೆ. ಈ ಕಾರಣದಿಂದಲೇ ಇವರು ಕಂಗನಾ ವಿರುದ್ಧದ ಪ್ರಕರಣದಲ್ಲಿ ಹೃತಿಕ್ ರೋಷನ್ ಪರ ವಾದಿಸಿದ್ದರು. ಸದ್ಯಕ್ಕೆ ಇವರ ಫೀ ಕುರಿತಾದ ಮಾಹಿತಿ ಲಭ್ಯವಾಗಿಲ್ಲ. ಆದರೆ, ಇವರು ಸಲ್ಮಾನ್ ಖಾನ್ ಅವರ ಪರವಾಗಿ ಒಂದು ಪ್ರಕರಣದಲ್ಲಿ ಕೆಲಸ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ, ಇವರ ಸಂಭಾವನೆ ಸಹ ಕಡಿಮೆ ಇಲ್ಲ ಅಂದು ಅಂದಾಜಿಸಬಹುದಾಗಿದೆ.
ಇದನ್ನೂ ಓದಿ: Bollywood Drugs: ಅನನ್ಯಾ ಪಾಂಡೆಗೆ ಮಾರಕವಾಗುತ್ತಾ ಮಾದಕ ಲಿಂಕ್?: ನಟಿಯ ಲ್ಯಾಪ್ಟಾಪ್, ಮೊಬೈಲ್ NCB ವಶಕ್ಕೆ
ಶ್ರೀಕಾಂತ್ ಶಿವಾಡೆ-ಶೈನಿ ಅಹುಜಾ: ಬಾಲಿವುಡ್ ನಟ ಶೈನಿ ಅಹುಜಾ ಅವರು ಅತ್ಯಾಚಾರದ ಆರೋಪ ಎದುರಿಸಿದ್ದು ಗೊತ್ತೇ ಇದೆ. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ್ದರು ಎಂದು 2019ರಲ್ಲಿ ಪ್ರಕರಣ ದಾಖಲಾಗಿತ್ತು. ಆಗ ಶ್ರೀಕಾಂತ್ ಶಿವಾಡೆ ಅವರೇ ಈ ನಟನ ಪರವಾಗಿ ವಾದಿಸಿದ್ದರು. ಶಿವಾಡೆ ಅವರು ಸೆಲೆಬ್ರಿಟಿ ವಕೀಲ ಎಂದು ಕರೆಸಿಕೊಳ್ಳಲು ಬಯಸುವುದಿಲ್ಲ. ಆದರೆ, ಇವರೂ ಸಹ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.
![High Profile Lawyers has taken Bollywood Actors Controversial Cases]()
ಸಲ್ಮಾನ್ ಖಾನ್ ಹಾಗೂ ವಕೀಲ ಶ್ರೀಕಾಂತ್ ಶಿವಾಡೆ
ಪ್ರಶಾಂತ್ ಪಾಟೀಲ್-ಸೂರಜ್ ಪಂಚೋಲಿ: ಬಾಲಿವುಡ್ ನಟಿ ಜಿಯಾ ಖಾನ್ ಅವರ ಸಾವಿನ ಪ್ರಕರಣದಲ್ಲಿ ಸೂರಜ್ ಪಂಚೋಲಿ ಆರೋಪಿಯಾಗಿದ್ದರು. ನಟಿಯ ದೇಹ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು. ನಟಿಯ ಬಾಯ್ಫ್ರೆಂಡ್ ಸೂರಜ್ ಅವರೇ ಜಿಯಾ ಅವರ ಕೊಲೆ ಮಾಡಿದ್ದಾರೆ ಎಂದು ಜಿಯಾ ಅವರ ತಾಯಿ ಆರೋಪಿಸಿದ್ದರು. ಈ ಪ್ರಕರಣದಲ್ಲಿ ಸೂರಜ್ ಅವರನ್ನು ಬಂಧಿಸಿಲಾಗಿತ್ತು. ಕಾರಣ ಆತ್ಮಹತ್ಯೆಗೆ ಪ್ರಚೋದನೆ ಎಂಬ ಕಾರಣಕ್ಕೆ ನಟನ ಬಂಧನವಾಗಿತ್ತು. ಬಾಲಿವುಡ್ ನಟ ಆದಿತ್ಯ ಪಂಚೋಲಿ ಅವರ ಮಗ ಸೂರಜ್ ಪಂಚೋಲಿ ಪರ ವಕೀಲ ಪ್ರಶಾಂತ್ ಪಾಟೀಲ್ ಅವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ಸೂರಜ್ ಈ ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ನಂಬಿದ ಕಾರಣಕ್ಕೆ ಪ್ರಕರಣವನ್ನು ಕೈಗೆತ್ತಿಕೊಂಢಿದ್ದರಂತೆ.
![High Profile Lawyers has taken Bollywood Actors Controversial Cases]()
ವಕೀಲ ಪ್ರಶಾಂತ್ ಪಾಟೀಲ್
![High Profile Lawyers has taken Bollywood Actors Controversial Cases]()
ವಕೀಲ ಹಿತೇಶ್ ಜೈನ್
ಹಿತೇಶ್ ಜೈನ್-ಪ್ರೀತಿ ಜಿಂಟಾ: ಬಾಲಿವುಡ್ನ ಡಿಂಪಲ್ ಕ್ವೀನ್ ಪ್ರೀತಿ ಜಿಂಟಾ ತಮ್ಮ ಎಕ್ಸ್ ಬಾಯ್ಫ್ರೆಂಡ್ ಹಾಗೂ ಉದ್ಯಮಿ ನೆಸ್ ವಾಡಿಯಾ ವಿರುದ್ಧ ಕಿರುಕುಳ ಹಾಗೂ ಬೆದರಿಕೆ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪ್ರೀತಿ ಪರ ವಾದಿಸಿದ್ದು ಹಿತೇಶ್ ಜೈನ್ ಅವರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ