• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Prashant Sambargi-Sruthi Hariharan: ಸಂಬರ್ಗಿ ವಿರುದ್ಧ ನಟಿ ಶ್ರುತಿ ಹರಿಹರನ್ ಕೇಸ್, ಪ್ರಕರಣಕ್ಕೆ ಹೈಕೋರ್ಟ್ ತಡೆ

Prashant Sambargi-Sruthi Hariharan: ಸಂಬರ್ಗಿ ವಿರುದ್ಧ ನಟಿ ಶ್ರುತಿ ಹರಿಹರನ್ ಕೇಸ್, ಪ್ರಕರಣಕ್ಕೆ ಹೈಕೋರ್ಟ್ ತಡೆ

ಪ್ರಶಾಂತ್ ಸಂಬರ್ಗಿ-ಶ್ರುತಿ ಹರಿಹರನ್

ಪ್ರಶಾಂತ್ ಸಂಬರ್ಗಿ-ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ದಾಖಲಿಸಿದ ಕೇಸ್​ಗೆ ಈಗ ಹೊಸ ಅಪ್ಡೇಟ್ ಸಿಕ್ಕಿದೆ. ನ್ಯಾಯಾಲಯ ಹೇಳಿದ್ದೇನು?

  • News18 Kannada
  • 4-MIN READ
  • Last Updated :
  • Bangalore, India
  • Share this:

ಬಿಗ್​ಬಾಸ್ (Bigg Boss) ಖ್ಯಾತಿಯ ಪ್ರಶಾಂತ್ ಸಂಬರ್ಗಿ (Prashant Sambargi) ವಿರುದ್ಧ ಬಹುಭಾಷಾ ನಟಿ ಶೃತಿ ಹರಿಹರನ್ (Shruti Hariharan) ಅವರು ದಾಖಲಿಸಿದ್ದ ಕೇಸ್ ಸಂಬಂಧ ಹೊಸ ಅಪ್ಡೇಟ್ (Updates) ಬಂದಿದೆ. ನಟಿ ಶ್ರುತಿ ಹರಿಹರನ್ ದಾಖಲಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ (High court) ತಡೆ  (Stay) ನೀಡಿದೆ. ಪ್ರಶಾಂತ್ ಸಂಬರ್ಗಿ ವಿರುದ್ಧ  ಆರೋಪ ಮಾಡಿದ್ದ ನಟಿ (Actress) ಸಂಬರ್ಗಿ ಚಾರಿತ್ರ್ಯ ಧಕ್ಕೆ ತರುತ್ತಿದ್ದಾರೆ ಎಂದು ಕೇಸ್ ದಾಖಲಿಸಿದ್ದರು. ಈ ಶ್ರುತಿ ಹರಿಹರನ್ ದಾಖಲಿಸಿದ ಕೇಸ್​ನ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. 8ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದು ಕೋರಿ ಪ್ರಶಾಂತ್ ಸಂಬರಗಿ ಅರ್ಜಿ ಸಲ್ಲಿಸಿದ್ದರು.


ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಪ್ರಶಾಂತ್ ಸಂಬರ್ಗಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ  ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ಪೀಠ ಮುಂದಿನ ವಿಚಾರಣೆವರೆಗೂ ತಡೆ ನೀಡಿ ಆದೇಶ ನೀಡಿದೆ.




ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು 2023ರ ಫೆಬ್ರವರಿ 1ಕ್ಕೆ ಮುಂದೂಡಿದೆ. ವಿಸ್ಮಯ ಚಿತ್ರದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು ನಟಿ ಶ್ರುತಿ ಹರಿಹರನ್. ಈ ಪ್ರಕರಣ ದೊಡ್ಡಪಟ್ಟದಲ್ಲಿ ಹೈಲೈಟ್ ಆಗಿತ್ತು. ಇದರ ಸಂಬಂಧ ನಟಿಯ ಹಾಗೂ ನಟನ ವಿರುದ್ಧ ಪರ ವಿರೋಧ ಮಾತುಗಳು ಕೇಳಿ ಬಂದಿದ್ದವು.




ಇದೇ ವಿಚಾರವಾಗಿ 2018ರ ಅಕ್ಟೋಬರ್ 25ರಂದು ವಾಣಿಜ್ಯ ಮಂಡಳಿಯಲ್ಲಿ ಸಂಧಾನ ಸಭೆಯೂ ನಡೆದಿತ್ತು. ರೆಬೆಲ್​ಸ್ಟಾರ್ ಅಂಬರೀಶ್ ಅವರ ನೇತೃತ್ವದಲ್ಲಿ ನಡೆದಿದ್ದ ಸಂಧಾನ ಸಭೆಯಲ್ಲಿ ಅರ್ಜುನ್ ಸರ್ಜಾ ಅವರ ಆಪ್ತರಾಗಿದ್ದ ಸಂಬರ್ಗಿ ಭಾಗಿಯಾಗಿದ್ದರು.


ಇದನ್ನೂ ಓದಿ: Bigg Boss Kannada: ಸಂಬರ್ಗಿ-ಗುರೂಜಿ ಮಾತಿಗೆ ಸುದೀಪ್ ಗರಂ! ರಾಕಿ ಬಗ್ಗೆ ಹೇಳಿದ್ದೇನು?


ಈ ನಡುವೆ ನಟಿ ಶ್ರುತಿ ಹರಿಹರನ್ ಅವರು ಸಂಬರ್ಗಿ ವಿರುದ್ಧ ದೂರು ದಾಖಲಿಸಿದ್ದರು. ತನ್ನ ವಿರುದ್ಧ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಚಾರಿತ್ರ್ಯಕ್ಕೆ ಧಕ್ಕೆ ತರುತ್ತಿದ್ದಾರೆಂದು ನಟಿ ಆರೋಪ ಮಾಡಿದ್ದರು. ಸಂಬರ್ಗಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದರು. ಈ ಸಂಬಂಧ 8ನೇ ಎಸಿಎಂಎಂ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿತ್ತು. ಈ ಸಂಬಂಧ ಪ್ರಶಾಂತ್ ಸಂಬರ್ಗಿ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Published by:Divya D
First published: