ವಿಮರ್ಶೆ: 'ಹಿಚ್ಕಿ' ಸಿನಿಮಾ ಮೂಲಕ ಕಮ್​​ಬ್ಯಾಕ್ ಮಾಡಿದ ರಾಣಿ ಮುಖರ್ಜಿ

'ಹಿಚ್ಕಿ' ಸಿನಿಮಾದಲ್ಲಿ ರಾನಿ ಮುಖರ್ಜಿ

'ಹಿಚ್ಕಿ' ಸಿನಿಮಾದಲ್ಲಿ ರಾನಿ ಮುಖರ್ಜಿ

 • News18
 • Last Updated :
 • Share this:
  ರಾಜೀವ್ ಮಸಂದ್, ನ್ಯೂಸ್ 18 ಕನ್ನಡ

  ನಿನ್ನೆಯಷ್ಟೆ ಬಾಲಿವುಡ್​ನಲ್ಲಿ ರಾಣಿ ಮುಖರ್ಜಿ ಅಭಿನಯದ 'ಹಿಚ್ಕಿ' ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರಶಂಸೆ ಕೇಳಿ ಬರುತ್ತಿವೆ. ಈ ಸಿನಿಮಾದಲ್ಲಿ ನರ ಮಂಡಲದ ನ್ಯೂನ್ಯತೆ ಸಮಸ್ಯೆಯಿಂದ ಬಳಲುತ್ತಿರುವ ರಾಣಿ ಅವರದ್ದು, ಶಿಕ್ಷಕಿ ಆಗಬೇಕೆಂಬ ಕನಸು ಹೊತ್ತ ಸಾಮಾನ್ಯ ಮಹಿಳೆಯ ಪಾತ್ರ. ರಾಣಿ ತನ್ನ ಕನಸನ್ನು ಹೇಗೆ ನನಸು ಮಾಡುತ್ತಾಳೆ?, ಹೇಗೆ ಮಾದರಿ ಶಿಕ್ಷಕಿಯಾಗುತ್ತಾಳೆ ಎಂಬುದನ್ನು ಚಿತ್ರದ ನಿರ್ದೇಶಕ ಸಿದ್ಧಾರ್ಥ್ ಪಿ ಮಲ್ಹೋತ್ರ ಅಚ್ಚುಕಟ್ಟಾಗಿ ತೆರೆಮೇಲೆ ತಂದಿದ್ದಾರೆ.

  ನಾಲ್ಕು ವರ್ಷಗಳ ಬಳಿಕ 'ಹಿಚ್ಕಿ' ಸಿನಿಮಾ ಮೂಲಕ ಕಮ್​ಬ್ಯಾಕ್​ ಮಾಡಿರುವ ರಾಣಿ, ಈ ಚಿತ್ರದಲ್ಲಿ ಸೈನಾ ಮಾಥುರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿಕ್ಷಕಿ ಆಗಬೇಕೆಂದು ಸಂದರ್ಶನಕ್ಕೆ ಬರುವ ಸೈನಾ, ನರ ಮಂಡಲದ ಸಮಸ್ಯೆ ತಿಳಿದ ಸಂದರ್ಶಕರು ಆಯ್ಕೆ ಮಾಡುವುದಿಲ್ಲ. ಅಂತೂ ಇಂತೂ ಕೊನೆಗೆ ವಿದ್ಯಾಭ್ಯಾಸವಿಲ್ಲದ ಹಿಂದುಳಿದ ಶಾಲೆಗೆ ಶಿಕ್ಷಕಿಯಾಗಿ ಆಯ್ಕೆಯಾಗುತ್ತಾಳೆ.

  ಇಲ್ಲಿ ಸೈನಾಗೆ ಯಾರೊಬ್ಬರು ಸ್ವಾಗತ ಕೋರುವುದಿಲ್ಲ. ಇಲ್ಲಿನ ಶಾಲೆ ಸಿಗರೇಟ್ ಸೇವನೆಗೆ, ಮದ್ಯಪಾನಿಯರಿಗೆ, ಜೂಜಾಟದ ವಾಸ ಸ್ಥಳವಾಗಿರುತ್ತದೆ. ಇಂತಹ ಶಾಲೆಯಲ್ಲಿ ಸೈನಾ ಏನೆಲ್ಲಾ ಕಷ್ಟ ಅನುಭವಿಸುತ್ತಾಳೆ? ಮಕ್ಕಳನ್ನು ಓದಲು ಯಾವ ರೀತಿ ಪ್ರೇರೆಪಿಸುತ್ತಾಳೆ? ಪರೀಕ್ಷೆಗಳಿಗೆ ಹೇಗೆ ತಯಾರು ಮಾಡುತ್ತಾಳೆ? ಎಂಬುದೆ ಚಿತ್ರದಲ್ಲಿನ ಪ್ರಮುಖ ಹೈಲೈಟ್​. ಕೆಲ ದೃಶ್ಯಗಳು ನೋಡುಗರನ್ನು ಭಾವುಕರನ್ನಾಗಿ ಮಾಡುತ್ತದೆ. ಇನ್ನುಳಿದಂತೆ ಕಾಮಿಡಿ ಜತೆಗೆ ಒಂದೊಳ್ಳೆ ಸಂದೇಶ 'ಹಿಚ್ಕಿ' ಚಿತ್ರದಲ್ಲಿದೆ.

  ಇನ್ನು ಈ ಚಿತ್ರದಲ್ಲಿ ರಾಣಿ ಮುಖರ್ಜಿ ನಟನೆಗಂತು ಫುಲ್​ ಮಾರ್ಕ್ಸ್​​. ನಿರ್ದೇಶಕರು ಚಿತ್ರದ ಕಥೆಯನ್ನು ಸಾಗಿಸಿದ ರೀತಿ, ಅವಿನಾಶ್ ಅರುಣ್ ಅವರ ಛಾಯಾಗ್ರಹಣ, ಹಿನ್ನಲೆ ಸಂಗೀತ ಎಲ್ಲವೂ ಅದ್ಭುತವಾಗಿದೆ. ಯಶ್​​ರಾಜ್ ಬ್ಯಾನರ್​ ಅಡಿಯಲ್ಲಿ ಈ ಚಿತ್ರ ತಯಾರಾಗಿದ್ದು, ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದಾರೆ.

  ಒಟ್ಟಾರೆಯಾಗಿ ವೀಕೆಂಡ್​ನಲ್ಲಿ ಒಂದೊಳ್ಳೆ ಸಿನಿಮಾ ನೋಡಬೇಕೆಂದು ಬಯಸುವವರಿಗೆ 'ಹಿಚ್ಕಿ' ಚಿತ್ರ ಖಂಡಿತವಾಗಿಯು ನಿರಾಸೆ ಮಾಡುವುದಿಲ್ಲ.
  First published: