ಪಾಪ ರಮ್ಯಾ ಈ ರೀತಿ ಟ್ರೋಲ್​ ಆಗೋದಾ?; ಪರಭಾಷೆ ಚಿತ್ರ ಬೆಂಬಲಿಸಿದ್ದಕ್ಕೆ ಮಾಜಿ ಸಂಸದೆಗೆ ಫುಲ್​ ಕ್ಲಾಸ್​

ಮೇಡಮ್​ ‘ಕೆಜಿಎಫ್​’ ಚಿತ್ರ ನಿಮ್ಮ ಪಾಕಿಸ್ತಾನದಲ್ಲಿ ತೆರೆಕಂಡಿದೆ. ದಯವಿಟ್ಟು ಹೋಗಿ ನೋಡಿ ಎಂದು ಕೆಲವರು ಟೀಕಿಸಿದರೆ, ಇನ್ನೂ ಕೆಲವರು, ನೀವು ಕನ್ನಡ ಚಿತ್ರರಂಗ ಬಿಟ್ಟು ಹೋದಮೇಲೆ ನಮ್ಮ ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ ಎಂದಿದ್ದಾರೆ.

ರಮ್ಯಾ

ರಮ್ಯಾ

  • News18
  • Last Updated :
  • Share this:
‘ರೆಬೆಲ್​​ ಸ್ಟಾರ್​’ ಅಂಬರೀಶ್​ ಅವರ ಅಂತಿಮ ದರ್ಶನ ಪಡೆಯಲು ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಗಮಿಸಲೇ ಇಲ್ಲ. ಇದಕ್ಕೆ ಎಲ್ಲ ಕಡೆಗಳಿಂದ ವಿರೋಧ ವ್ಯಕ್ತವಾಗಿತ್ತು. ಇದೇ ಸಂದರ್ಭದಲ್ಲಿ ಮಂಡ್ಯದಲ್ಲಿರುವ ಬಾಡಿಗೆ ಮನೆಯನ್ನು ಅವರು ಮನೆ ಖಾಲಿ ಮಾಡಿದ್ದು ಹಲವು ಅನುಮಾನ ಹುಟ್ಟುಹಾಕಿತ್ತು. ಈ ವಿಚಾರದಲ್ಲಿ ಅವರು ಟ್ರೋಲ್​ ಆಗಿದ್ದರು. ಈಗ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಮಾಡಿದ ಟ್ವೀಟ್​ಗೆ ಅನೇಕರು ಕ್ಲಾಸ್​​ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ರಮ್ಯಾ ಮಾಡಿದ ತಪ್ಪಾದರೂ ಏನು? ಧನುಷ್​ ನಟನೆಯ ‘ಮಾರಿ 2’ ಇತ್ತೀಚೆಗೆ ತೆರಕಂಡಿತ್ತು. ಈ ಸಿನಿಮಾದ ‘ರೌಡಿ ಬೇಬಿ’ ಹಾಡು ಬರೋಬ್ಬರಿ 10 ಕೋಟಿ ಬಾರಿ ವೀಕ್ಷಣೆ ಕಂಡಿತ್ತು. ಈ ಖುಷಿಯನ್ನು ಧನುಷ್​ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದರು. “ರೌಡಿ ಬೇಬಿ…” ಹಾಡು ಕೇವಲ ಎರಡೇ ವಾರಗಳಲ್ಲಿ 100 ಮಿಲಿಯನ್​ ವೀಕ್ಷಣೆ ಕಂಡಿದೆ. ಎಲ್ಲರಿಗೂ ಧನ್ಯವಾದ” ಎಂದಿದ್ದರು ಅವರು​.

ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ ಕನ್ನಡ ಚಿತ್ರರಂಗ; ನಾಳೆ ಸಿನಿಮಾ ಪ್ರದರ್ಶನ ರದ್ದು

ಇದನ್ನು ರಿಟ್ವೀಟ್​ ಮಾಡಿಕೊಂಡಿದ್ದರು ರಮ್ಯಾ. ಅಷ್ಟೇ ಆಗಿದ್ದರೆ, ಎಲ್ಲರೂ ಸುಮ್ಮನಿರುತ್ತಿದ್ದರೇನೋ. ರಿಟ್ವೀಟ್​ ಮಾಡುವುದರ ಜೊತೆಗೆ “10 ಕೋಟಿ ವೀಕ್ಷಣೆಯಲ್ಲಿ ನನ್ನದೂ ಕೊಡುಗೆ ಇದೆ” ಎನ್ನುವ ಅರ್ಥ ಬರುವ ರೀತಿ ಬರೆದುಕೊಂಡಿದ್ದರು. ಹಾಡಿನ ಸಂಗೀತ ನಿರ್ದೇಶಕನ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದರು ರಮ್ಯಾ.ಇದು ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. ಸದ್ಯ, ದರ್ಶನ್​ ನಟನೆಯ ‘ಯಜಮಾನ’ ಚಿತ್ರದ ಹಾಡುಗಳು ತೆರೆಕಾಣುತ್ತಿವೆ. ‘ಪೈಲ್ವಾನ್​’ ಚಿತ್ರದ ಟೀಸರ್​ ವೈರಲ್​ ಆಗಿದೆ. ಅಷ್ಟೇ ಏಕೆ, ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಐದು ಭಾಷೆಗಳಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಕಂಡಿದೆ. ಕನ್ನಡ ಚಿತ್ರರಂಗದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದ್ದರೂ, ಒಂದೇ ಒಂದು ಟ್ವೀಟ್​ ಮಾಡದ ರಮ್ಯಾ ಪರಭಾಷೆಯ ಸಿನಿಮಾದ ಹಾಡು 10 ಕೋಟಿ ಬಾರಿ ವೀಕ್ಷಣೆ ಕಂಡಿದ್ದಕ್ಕೆ ಭೇಷ್​ ಎಂದಿರುವುದು ಟ್ರೋಲ್​ ಆಗಲು ಮುಖ್ಯ ಕಾರಣ.

“ಮೇಡಮ್​ ‘ಕೆಜಿಎಫ್​’ ಚಿತ್ರ ನಿಮ್ಮ ಪಾಕಿಸ್ತಾನದಲ್ಲಿ ತೆರೆಕಂಡಿದೆ. ದಯವಿಟ್ಟು ಹೋಗಿ ನೋಡಿ” ಎಂದು ಟೀಕಿಸಿದರೆ, ಇನ್ನೂ ಕೆಲವರು, ‘ನೀವು ಕನ್ನಡ ಚಿತ್ರರಂಗ ಬಿಟ್ಟು ಹೋದಮೇಲೆ ನಮ್ಮ ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೆ ಬೆಳೆಯುತ್ತಿದೆ’ ಎಂದಿದ್ದಾರೆ. ಟ್ವೀಟ್​ಗೆ ಬಂದಿರುವ ಕಮೆಂಟ್​ಗಳು ಇಲ್ಲಿವೆ.First published: