Salman Khan: ಸಲ್ಮಾನ್ ಖಾನ್ ಯಾಕಿನ್ನೂ ಮದುವೆ ಆಗಿಲ್ಲ..?: ಭಾಮೈದ ಆಯುಷ್ ಉತ್ತರ ಕೊಟ್ಟಿದ್ದಾರೆ ನೋಡಿ

ಎಲ್ಲರಿಗೂ ಕಾಮನ್ ಎನಿಸುವ ಮದುವೆಯ ವಯಸ್ಸು ಮೀರಿದರೂ ಸಲ್ಮಾನ್ ಖಾನ್ ಮಾತ್ರ ಭಾರತದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವುದರಲ್ಲಿ ಖುಷಿ ಕಾಣುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಲ್ಮಾನ್ ಭಾಮೈದ ಆಯುಶ್ ಶರ್ಮಾ ನಟನ ಮದುವೆಯ ಬಗ್ಗೆ ಮಾತಾಡಿದ್ದಾರೆ.

ಸಲ್ಮಾನ್​ ಖಾನ್

ಸಲ್ಮಾನ್​ ಖಾನ್

  • Share this:
50 ವರ್ಷ ಮೀರಿದ್ದರೂ ತಮ್ಮ ಸಂಬಂಧಿ ಸಲ್ಮಾನ್ ಖಾನ್(Salman Khan) ಇನ್ನೂ ಮದುವೆ ಆಗದೆ ಏಕಾಂಗಿಯಾಗಿರುವುದಕ್ಕೆ ಕಾರಣವನ್ನು ನಟ ಆಯುಷ್ ಶರ್ಮಾ(Actor Ayush Sharma) ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಬಾಲಿವುಡ್‌(Bollywood)ನಲ್ಲಿ ಸಿನಿಮಾ ಸಂಬಂಧಿತ ವಿಷಯಗಳಿಗಿಂತಲೂ ಕೆಲವು ವಿಷಯಗಳು ಯಾವಾಗಲೂ ಸುದ್ದಿ ಮತ್ತು ಚರ್ಚೆಯಲ್ಲಿರುತ್ತವೆ. ನಟ ಸಲ್ಮಾನ್ ಖಾನ್(Salman Khan) ಮದುವೆ ವಿಷಯ ಇವುಗಳಲ್ಲಿ ಪ್ರಮುಖವಾದುದು. ನಟಿ ಐಶ್ವರ್ಯಾ(Actress Aishwarya) ಅವರೊಂದಿಗಿನ ಬ್ರೇಕಪ್ ನಂತರ ಸಲ್ಮಾನ್ ಖಾನ್ ಅವರ ಮದುವೆ(Marriage) ವಿಷಯಕ್ಕೆ ಹೆಚ್ಚಿನ ಜನಪ್ರಿಯತೆ ಸಿಕ್ಕಿತ್ತು. ಅಂದಿನಿಂದಲೂ ಅಲ್ಲಲ್ಲಿ ಸಲ್ಮಾನ್ ಯಾರನ್ನೋ ಡೇಟ್ ಮಾಡುತ್ತಿದ್ದಾರೆ ಅನ್ನೋ ಗಾಳಿಸುದ್ದಿಗಳನ್ನು ಕೇಳಿದ್ದೇವೆಯೇ ಹೊರತು ಅವರ ಮದುವೆ ಬಗ್ಗೆ ಯಾರೂ ತುಟಿ ಬಿಚ್ಚುತ್ತಿಲ್ಲ. ಸ್ವತಃ ಸಲ್ಮಾನ್ ಖಾನ್ ಕೂಡಾ ಇದರ ಬಗ್ಗೆ ಮಾತನಾಡುವುದಿಲ್ಲ. ಹಾಗಾಗಿ, ಸಲ್ಮಾನ್ ಖಾನ್ ಮದುವೆ ಬಾಲಿವುಡ್ (Bollywood)ನಲ್ಲಿ ಯಾವಾಗಲೂ ಬಿಸಿಬಿಸಿ ಚರ್ಚೆಯ ವಿಷಯವೇ.

ಸಲ್ಮಾನ್​ ಖಾನ್ ಯಾಕೆ ಇನ್ನೂ ಮದುವೆ ಆಗಿಲ್ಲ

ಎಲ್ಲರಿಗೂ ಕಾಮನ್ ಎನಿಸುವ ಮದುವೆಯ ವಯಸ್ಸು ಮೀರಿದರೂ ಸಲ್ಮಾನ್ ಖಾನ್ ಮಾತ್ರ ಭಾರತದ ಅತ್ಯಂತ ಅರ್ಹ ಬ್ಯಾಚುಲರ್‌ಗಳಲ್ಲಿ ಒಬ್ಬರು ಎನಿಸಿಕೊಂಡಿರುವುದರಲ್ಲಿ ಖುಷಿ ಕಾಣುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸಲ್ಮಾನ್ ಭಾಮೈದ ಆಯುಶ್ ಶರ್ಮಾ ನಟನ ಮದುವೆಯ ಬಗ್ಗೆ ಮಾತಾಡಿದ್ದಾರೆ. ಅದರ ಜೊತೆಗೆ ಸಲ್ಮಾನ್‌ಗೆ ಮದುವೆ ಆಗಲು ಸಮಯವಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.

Hamsalekha: ಸರಿಗಮಪ’ ಶೋಗೆ ಹಂಸಲೇಖ ಗೈರು, ವಾಹಿನಿ ಹೇಳಿದ್ದು ಹೀಗೆ..!

ಆಯುಶ್ ಶರ್ಮಾ ಹೇಳಿದ್ದೇನು?

ಆರ್‌ಜೆ ನಿರೂಪಕ ಸಿದ್ಧಾರ್ಥ್ ಕಾನನ್‌ರೊಂದಿಗೆ ಮಾತನಾಡಿದ ಆಯುಷ್, ನಾನು ಅವರೊಂದಿಗೆ ಮಾತನಾಡುವಾಗ ಅವರ ಮದುವೆಯ ವಿಷಯವನ್ನು ಎತ್ತುವುದಿಲ್ಲ. ಅವರ ಬದುಕನ್ನು ನಾನು ನೋಡಿದ ರೀತಿ, ಅವರು ಕೆಲಸ ಮಾಡುವ ರೀತಿ ನೋಡಿದರೆ, ನನಗೆ ಸಲ್ಮಾನ್ ಅವರಿಗೆ ಮದುವೆಯಾಗಲು ಸಮಯವಿಲ್ಲ ಅಂತ ಅನ್ನಿಸುತ್ತೆ. ಅವರು ಹೇಗಿದ್ದಾರೋ ಅದೇ ರೀತಿ ಸಂತೋಷವಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವನು ತಮ್ಮ ಜೀವನದ ಸ್ವಂತ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಸಲ್ಮಾನ್​ ಖಾನ್​ ಡೌನ್​ ಡು ಅರ್ಥ್

ಸಲ್ಮಾನ್ ತುಂಬಾ ಡೌನ್ ಟು ಅರ್ಥ್ ಜೀವನ ನಡೆಸುತ್ತಾರೆ ಎಂಬುದು ಆಯುಷ್ ಅನಿಸಿಕೆಯಾಗಿದೆ. “ನಾನು ಅವನಷ್ಟು ಸರಳನಲ್ಲ. ಸಲ್ಮಾನ್ ಅವರ ಮೂಲಭೂತ ಅವಶ್ಯಕತೆಗಳು, ಅವರ ಮನೆ, ಅವರ ಜೀವನಶೈಲಿ, ಅವರ ಜೀವನ ವಿಧಾನ, ಎಲ್ಲವೂ ತುಂಬಾ ಸರಳವಾಗಿದೆ. ನೀವು ಅವರ ಫೋನ್ ಬಗ್ಗೆ ಕೇಳಿದರೆ, ಅವರು ಎರಡು-ಮೂರು ವರ್ಷ ಹಳೆಯ ಮಾಡೆಲ್ ಫೋನ್ ಬಳಸುತ್ತಾರೆ. ಅವರಿಗೆ ಹೊಸ ಫೋನ್ ಗಳ ಕ್ರೇಜ್ ಕೂಡಾ ಇಲ್ಲ. ಅವರಿಗೆ ಕಾರುಗಳಲ್ಲಿ ಆಸಕ್ತಿಯಿಲ್ಲ, ಬಟ್ಟೆಯಲ್ಲಿ ಆಸಕ್ತಿಯಿಲ್ಲ, ಮನೆಯಲ್ಲಿ ಲೇಟೆಸ್ಟ್ ಗ್ಯಾಜೆಟ್‌ಗಳನ್ನು ಇಟ್ಟುಕೊಳ್ಳಲೂ ಅಂತಹ ಆಸೆಗಳಿಲ್ಲ. ಅವರಿಗೆ ಚಲನಚಿತ್ರಗಳಲ್ಲಿ ಅಭಿನಯಿಸೋದು ಮಾತ್ರ ಎಲ್ಲಕ್ಕಿಂತ ಆಸಕ್ತಿಯ ವಿಷಯ ಎಂದು ನಾನು ಭಾವಿಸುತ್ತೇನೆ. ಅವರನ್ನು ಎರಡು-ಮೂರು ಗಂಟೆ ಒಬ್ಬಂಟಿಯಾಗಿ ಬಿಟ್ಟರೆ ಅವರು ಸಿನಿಮಾ ನೋಡುತ್ತಾ ಕಾಲ ಕಳೆಯುತ್ತಾರೆ’ ಎಂದು ಆಯುಶ್ಮಾನ್ ಶರ್ಮಾ ವಿವರಿಸುತ್ತಾರೆ.

ಇದನ್ನೂ ಓದಿ: Happy Birthday Ramya: ಸ್ಯಾಂಡಲ್​ವುಡ್ ಪದ್ಮಾವತಿಗೆ ವಯಸ್ಸಿನ ಹಂಗಿಲ್ಲ, ಎವರ್​ಗ್ರೀನ್ ಬ್ಯೂಟಿ ರಮ್ಯಾ ಹುಟ್ಟುಹಬ್ಬ ಸಂಭ್ರಮ

ಯುಲಿಯಾ ವಂತೂರ್ ಜೊತೆ ಸಲ್ಮಾನ್​ ಡೇಟಿಂಗ್?

ಪ್ರಸ್ತುತ, ಸಲ್ಮಾನ್ ಯುಲಿಯಾ ವಂತೂರ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ. ಕೆಲಸದ ವಿಷಯದಲ್ಲಿ, ಸಲ್ಮಾನ್ ಖಾನ್ 'ಅಂತಿಮ್: ದಿ ಫೈನಲ್ ಟ್ರುತ್' ಸುದೀರ್ಘ ಅವಧಿಯ ನಂತರ ನವೆಂಬರ್ 25 ರಂದು ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ಆಯುಷ್ ಶರ್ಮಾ ಜೊತೆ ಸಲ್ಮಾನ್ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ.
Published by:Latha CG
First published: