ಶಾರೂಖ್​​ ಖಾನ್​ ಕುರಿತ ಗುಟ್ಟನ್ನು ಬಾಯ್ಬಿಟ್ಟ ಚಕ್‌ ದೇ ಇಂಡಿಯಾ ಸಿನಿಮಾದ ನಟಿ..!

ಶಾರುಖ್ ಒಳ್ಳೆಯ ಆಟಗಾರ , ಅವರ ಮೇಲೆ ಸೆಟ್‍ನಲ್ಲಿ ಇದ್ದವರೆಲ್ಲರಿಗೂ ಕ್ರಶ್ ಇತ್ತು. ಆದರೆ ಇಡೀ ತಂಡವನ್ನು ಒಂದುಗೂಡಿಸಿ ಇಡುತ್ತಿದ್ದ ಅವರ ಸಾಮರ್ಥ್ಯ ಮೆಚ್ಚಲೇಬೇಕು ಎನ್ನುತ್ತಾರೆ ವಿದ್ಯಾ.

ಸಿನಿಮಾದ ಪೋಸ್ಟರ್​

ಸಿನಿಮಾದ ಪೋಸ್ಟರ್​

 • Share this:

  ಶಿಮಿತ್ ಅಮೀನ್ ಅವರ ಸಿಮಾ ಚಕ್ ದೇ, ಬಾಲಿವುಡ್ ಜನ ಮೆಚ್ಚುಗೆ ಪಡೆದ ಖ್ಯಾತ ಸಿನಿಮಾಗಳಲ್ಲಿ ಒಂದು ಎಂಬುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ಸಿನಿಮಾ ಬಿಡುಗಡೆಯಾಗಿ 14 ವರ್ಷ ಸಂದಿರುವ ಈ ಸಂದರ್ಭದಲ್ಲಿ, ಆ ಸಿನಿಮಾದಲ್ಲಿ ಹಾಕಿ ತಂಡದ ನಾಯಕಿಯ ಪಾತ್ರ ವಹಿಸಿದ್ದ ವಿದ್ಯಾ ಮಾಲವಡೇ, ಚಿತ್ರತಂಡ ಹಾಗೂ ಶಾರುಖ್ ಖಾನ್ ಜೊತೆಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ. ತಾನು ಅಂತಹ ಅದ್ಭುತ ಸಿನಿಮಾದ ಭಾಗವಾಗಿದ್ದೆ ಎಂಬುದನ್ನು ನಂಬಲಾಗುತ್ತಿಲ್ಲ ಎಂದು ವಿದ್ಯಾ ಹೇಳಿದ್ದಾರೆ. ಅದಕ್ಕೆ ತನ್ನ ಹಿಂದಿನ ಜನ್ಮದ ಪುಣ್ಯದ ಫಲ ಅಥವಾ ಹೆತ್ತವರ ಆಶೀರ್ವಾದವೇ ಅದಕ್ಕೆ ಕಾರಣ ಎಂಬುವುದು ವಿದ್ಯಾ ನಂಬಿಕೆ. ಶಾರುಖ್ ಖಾನ್ ಜೊತೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಳುತ್ತಾ, ಆತ ಒಬ್ಬ ವಿನಯವಂತ ನಟ ಮತ್ತು “ಅತ್ಯಧಿಕ ತಾಳ್ಮೆ” ಉಳ್ಳ ವ್ಯಕ್ತಿ ಎನ್ನುತ್ತಾರೆ ವಿದ್ಯಾ.


  ಸಿನಿಮಾದ ಪಾತ್ರವರ್ಗದಲ್ಲಿ ಕೆಲವರು ನಟರು ಮತ್ತು ಕೆಲವರು ಆಟಗಾರರು, ಆದರೆ ಶಾರುಖ್ ಎರಡೂ ಆಗಿದ್ದರು ಎನ್ನುವ ವಿದ್ಯಾ, ತಾವುಗಳು ಸೆಟ್‍ನಲ್ಲಿ ಶಾರುಖ್‌ರನ್ನು ‘ಪಾಪಾ ಬೇರ್’ ಎಂದು ಕರೆಯುತಿದ್ದುದ್ದನ್ನು ನೆನಪಿಸಿಕೊಂಡಿದ್ದಾರೆ. ಶಾರುಖ್ ಒಳ್ಳೆಯ ಆಟಗಾರ , ಅವರ ಮೇಲೆ ಸೆಟ್‍ನಲ್ಲಿ ಇದ್ದವರೆಲ್ಲರಿಗೂ ಕ್ರಶ್ ಇತ್ತು. ಆದರೆ ಇಡೀ ತಂಡವನ್ನು ಒಂದುಗೂಡಿಸಿ ಇಡುತ್ತಿದ್ದ ಅವರ ಸಾಮರ್ಥ್ಯ ಮೆಚ್ಚಲೇಬೇಕು ಎನ್ನುತ್ತಾರೆ ವಿದ್ಯಾ.


  ಅವರು ಹೇಳುವ ಪ್ರಕಾರ, ಶಾರುಖ್ ತಂಡದಲ್ಲಿ ನಡೆಯುವ ಸರಿ, ತಪ್ಪುಗಳ ಮೇಲೆ ಸದಾ ಗಮನ ಇಡುತ್ತಿದ್ದರು. “ನಮ್ಮ ನಟನೆ ಇನ್ನಷ್ಟು ಉತ್ತಮಗೊಳಿಸಲು ಸಹಾಯ ಮಾಡುವ ಸಲಹೆಗಳನ್ನು ನೀಡುತ್ತಿದ್ದರು. ಸೆಟ್‍ನಲ್ಲಿ ನಮಗೆ ಕೋಚ್‍ನಂತೆಯೇ ಇದ್ದರು” ಎಂದು ಹೇಳಿದ್ದಾರೆ ವಿದ್ಯಾ.


  ಇದನ್ನೂ ಓದಿ: Kareena Kapoor: ಕರೀನಾ ಕಪೂರ್ ಗರ್ಭಿಣಿಯಾಗಿದ್ದಾಗ ಹೇಗಿತ್ತು ಲೈಂಗಿಕ ಜೀವನ? ಗುಟ್ಟು ರಟ್ಟು ಮಾಡಿದ ನಟಿ

  ಸಿನಿಮಾ ಇಂದಿಗೂ ಪ್ರಸ್ತುತವಾಗಿರಲು ಕಾರಣವೇನೆಂದು ವಿದ್ಯಾ ಅವರಲ್ಲಿ ಕೇಳಿದಾಗ, ಈ ಸಿನಿಮಾ ಎಂದೆಂದಿಗೂ ಪ್ರಸ್ತುತವಾಗಿರುತ್ತದೆ ಎಂದವರು ಹೇಳಿದ್ದಾರೆ. “ಜೀವನದ ಯಾವುದಾದರೂ ಹಂತದಲ್ಲಿ ಪ್ರತಿಯೊಬ್ಬರೂ ದುರ್ಬಲರಾಗಿರುತ್ತಾರೆ, ಜನ ಈ ಸಿನಿಮಾದಲ್ಲಿ ವಾಸ್ತವವನ್ನು ಕಾಣುತ್ತಾರೆ” ಎಂದು ಹೇಳುತ್ತಾರೆ ವಿದ್ಯಾ.


  ತಾನು ನೃತ್ಯದ ಹಿನ್ನೆಲೆಯಿಂದ ಬಂದವಳು ಮತ್ತು ಕ್ರೀಡೆಯ ಬಗ್ಗೆ ಯಾವುದೇ ಜ್ಞಾನ ಇರಲಿಲ್ಲ, ಕ್ರೀಡೆಯ ತಂತ್ರಗಳನ್ನು ಕಲಿಯಲು ತನಗೆ ತುಂಬಾ ಕಷ್ಟವಾಗಿತ್ತು ಎಂದು ಹೇಳಿಕೊಂಡಿದ್ದಾರೆ ವಿದ್ಯಾ.
  “ನನ್ನ ದೇಹದ ಎಲ್ಲೆಡೆ ನೇರಳೆ ಕಲೆಗಳಿದ್ದವು” ಎನ್ನುವ ವಿದ್ಯಾ ಪಾಲಿಗೆ, ಕ್ರೀಡೆಯೊಂದನ್ನು ಕಲಿತು, ವರ್ಷದ ಪ್ರತೀ ದಿನವೂ ಆಡುವುದು ಅವಾಸ್ತವಿಕ ಸಂಗತಿಯಂತೆ. “ಸಿನಿಮಾವನ್ನು ಜಯ್‍ದೀಪ್ ಸಹಾನಿ ಬರೆದಿರುವ ರೀತಿ ಮತ್ತು ಶಿಮಿತ್ ಅಮೀನ್ ನಿರ್ದೇಶಿಸಿರುವ ರೀತಿ ಹಾಗೂ ಮತ್ತೆಲ್ಲವೂ ಅದ್ಭುತವಾಗಿದೆ” ಎನ್ನುವ ವಿದ್ಯಾ ಪ್ರಕಾರ, ಈ ಸಿನಿಮಾದ ಯಶಸ್ಸಿಗೆ ಕೇವಲ ಪಾತ್ರವರ್ಗ ಮಾತ್ರವಲ್ಲ. ಎಲ್ಲಾ ಹಂತದವರ ಪ್ರಯತ್ನಗಳು ಕೂಡ ಕಾರಣ. ಸಿನಿಮಾದ ಒಟ್ಟಾರೆ ಅನುಭವ ‘ಅದ್ಭುತ’ವಾಗಿತ್ತು ಎನ್ನುತ್ತಾರೆ ಅವರು.

  First published: