• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • 800 first look: ಮುರಳೀಧರನ್​ ಆಗಿ ಮೋಡಿ ಮಾಡುತ್ತಿರುವ ಸೇತುಪತಿ ​; ವಿಜಯ್​ ಲುಕ್​ಗೆ ಫ್ಯಾನ್ಸ್​ ಫಿದಾ

800 first look: ಮುರಳೀಧರನ್​ ಆಗಿ ಮೋಡಿ ಮಾಡುತ್ತಿರುವ ಸೇತುಪತಿ ​; ವಿಜಯ್​ ಲುಕ್​ಗೆ ಫ್ಯಾನ್ಸ್​ ಫಿದಾ

ವಿಜಯ್​ ಸೇತುಪತಿ

ವಿಜಯ್​ ಸೇತುಪತಿ

800 first look: ಯುದ್ಧದಿಂದ ಹಾನಿಗೊಳಗಾದ  ದೇಶದಲ್ಲಿ ಕ್ರಿಕೆಟಿಗನೊಬ್ಬ ಹುಟ್ಟಿದ ಕಥೆಯನ್ನು ಒಂದು ನಿಮಿಷದ ಮೋಷನ್​ ಪೋಸ್ಟರ್​ನಲ್ಲಿ ತೋರಿಸಲಾಗಿದೆ.

 • Share this:

  ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್​ ಜೀವನಾಧಾರಿತ ಚಿತ್ರದಲ್ಲಿ ನಟ ವಿಜಯ್​ ಸೇತುಪತಿ ನಟಿಸುತ್ತಿರುವುದು ಹಳೆ ವಿಚಾರ. ಈ ಚಿತ್ರದ ಮೊದಲ ಪೋಸ್ಟರ್​ ಇಂದು ಬಿಡುಗಡೆಯಾಗಿದೆ. ಈ ಮೋಷನ್​ ಪೋಸ್ಟರ್ ನಲ್ಲಿ ವಿಜಯ್​​ ಸೇತುಪತಿ​ ಲುಕ್​ ನೋಡಿದಾಕ್ಷಣ ಒಂದು ಕ್ಷಣ ಬೆರಗಾಗುವುದು ಖಚಿತ. ಥೇಟ್ ಮುತ್ತಯ್ಯ​ ಮುರಳೀಧರನ್​ ರಂತೆ ಕಾಣುತ್ತಿರುವ ಅವರ ಈ ಲುಕ್​ ಬೆರಗು ಮೂಡಿಸಿದೆ. ಅವರ ಈ ಫೋಟೊಗೆ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಇನ್ನು ಈ ಮೋಷನ್​ ಪೋಸ್ಟರ್​ನಲ್ಲಿರುವುದು ವಿಜಯ್​ ಸೇತುಪತಿ ಕ್ಯಾರಿಕ್ಯಚರ್​ ಆಗಿದೆ. ಮುರಳೀಧರನ್​ ಅವರ ಚಿತ್ರವನ್ನು ಮಾರ್ಫ್​ ಮಾಡಿ ನಟನನ್ನು ಹೋಲುವಂತೆ ಮಾಡಲಾಗಿದೆ.  ವಿಶ್ವದ ಶ್ರೇಷ್ಠ ಬೌಲರ್​ ಆದ ಮುತ್ತಯ್ಯ ಮುರಳೀಧರನ್​ ಚಿತ್ರಕ್ಕೆ '800' ಎಂಬ ಶೀರ್ಷಿಕೆ ಇಡಲಾಗಿದೆ. ಸಂಪೂರ್ಣ ಅನಿಮೇಟೆಡ್​ ಗ್ರಾಫಿಕ್ಸ್​ ಬಳಸಿ ಒಂದು ನಿಮಿಷದ ಮೋಷನ್​ ಪೋಸ್ಟರ್​ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಯುದ್ಧದಿಂದ ಹಾನಿಗೊಳಗಾದ  ದೇಶದಲ್ಲಿ ಕ್ರಿಕೆಟಿಗನೊಬ್ಬ ಹುಟ್ಟಿದ ಕಥೆಯನ್ನು ಇದರಲ್ಲಿ ತೋರಿಸಲಾಗಿದೆ.


  ಎಂಎಸ್​ ಶ್ರೀಪತಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗುತ್ತಿದೆ. ಇದರ ಜೊತೆಗೆ ಚಿತ್ರವನ್ನು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಡಬ್​ ಮಾಡಲು ಚಿತ್ರತಂಡ ಯೋಜನೆ ರೂಪಿಸಿದೆ. ಅಲ್ಲದೇ ಹಿಂದಿ, ಬೆಂಗಾಲಿ, ಸಿಂಹಳ ಭಾಷೆಯಲ್ಲಿಯೂ ಈ ಚಿತ್ರ ಡಬ್​ ಆಗಲಿದೆ. ಅಂತರಾಷ್ಟ್ರೀಯ ವೀಕ್ಷಕರಿಗೆ ಅರ್ಥವಾಗುವ ಉದ್ದೇಶದಿಂದ ಇಂಗ್ಲಿಷ್​ ಸಬ್​ಟೈಟಲ್​ ಕೂಡ ಹೊಂದಿರಲಿದೆ.  ಈ ಚಿತ್ರಕಥೆ ಸಿದ್ದವಾದ ಬಳಿಕ ಇದಕ್ಕೆ ವಿಜಯ್​ ಸೇತುಪತಿಯೇ ಸೂಕ್ತ ನಾಯಕ ಎಂದು ನಮಗೆ ಅನಿಸಿತು' ಎಂದು ಮುರಳೀಧರನ್​ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ವಿಜಯ್​ ಸೇತುಪತಿ ಪ್ರತಿಭಾನ್ವಿತ ನಟನಾಗಿದ್ದು, ಮುಖಾಭಿನಯ ಪ್ರದರ್ಶಿಸುವಲ್ಲಿ ಅವರು ಅದ್ಬುತ ಪ್ರತಿಭೆ. ಅವರ ಮೇಲೆ ನನಗೆ ನಂಬಿಕೆ ಇದೆ. ಈ ಪಾತ್ರಕ್ಕೆ ಅವರು ನ್ಯಾಯ ಒದಗಿಸುವವರು ಎಂದು ಎಂದಿದ್ದಾರೆ.


  ಮುರಳೀಧರನ್​ ಪಾತ್ರ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಸೇತುಪತಿ,' ಅವರ ನಿಜ ಜೀವನ ನನಗೆ ಬಹಳ ಇಷ್ಟ. ಪಂದ್ಯವಾಡುವ ವೇಳೆ ಅವರನ್ನು ನೋಡಿದ್ದೇನೆ. ಪಂದ್ಯದ ಆಚೆಗೂ ಅವರು ನಿಜಕ್ಕೂ ಒಳ್ಳೆಯ ವ್ಯಕ್ತಿ' ಎಂದಿದ್ದಾರೆ.


  ಇದನ್ನು ಓದಿ: 23ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾರಾ; ತೆಂಡೂಲ್ಕರ್ ಮಗಳ ಹೆಸರಿನ ಹಿಂದಿದೆ ರೋಚಕ ಕಥೆ


  ವಿಜಯ್​ ಸೇತುಪತಿಗೆ ಮುತ್ತಯ್ಯ ಮುರಳೀಧರನ್​ ಪಾತ್ರ ಮಾಡದಂತೆ ದ್ರಾವಿಡ ಸಂಘ ಒತ್ತಾಯಿಸಿದ್ದಾರೆ. ಭಾರತೀಯ ಮೂಲದ ಶ್ರೀಲಂಕಾ ದೇಶದ ಪ್ರಜೆಯಾಗಿರುವ ಮುತ್ತಯ್ಯ ಅವರು ಸಿಂಹಳವನ್ನು ಬೆಂಬಲಿಸಿದವರು. ವಿಶ್ವಾದಾದ್ಯಂತ ತಮಿಳು ಅಭಿಮಾನಿಯನ್ನು ಹೊಂದಿರುವ ವಿಜಯ್​ ಸೇತುಪತಿ ಈ ಚಿತ್ರ ಮಾಡಿದರೆ ತಮಿಳರ ಭಾವನೆಗೆ ವಿರುದ್ಧವಾಗುತ್ತದೆ ಈ ಹಿನ್ನಲೆಯಲ್ಲಿ ಮಾಡಬಾರದು ಎಂದಿದ್ದಾರೆ.


  ಟೆಸ್ಟ್​ ಕ್ರಿಕೆಟ್​ನಲ್ಲಿ 800 ವಿಕೆಟ್​ ಪಡೆದಿರುವ ದಾಖಲೆಯನ್ನು ಮುತ್ತಯ್ಯ ಮುರಳೀಧರನ್​ ಹೊಂದಿರವ ಹಿನ್ನಲೆ ಚಿತ್ರದ ಹೆಸರನ್ನು '800' ಎಂದು ಇಡಲಾಗಿದೆ.


  ಪಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವ ವಿಜಯ್​ ಸೇತುಪತಿ ಇದಕ್ಕಾಗಿ ಸಮರ್ಪಣೆಯಿಂದ ಕೆಲಸ ಮಾಡುವವರು. ಈ ಹಿಂದೆ 'ಸೂಪರ್​ ಡಿಲಕ್ಸ್'​ ಚಿತ್ರದಲ್ಲಿ ಸಂಪೂರ್ಣವಾಗಿ ತಮ್ಮ ಲುಕ್​ ಬದಲಾಯಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದರು. ಈಗ '800' ಚಿತ್ರದಲ್ಲಿ ಮುತ್ತಯ್ಯ ಮುರಳೀಧರನ್​ ಆಗಿ ಹೇಗೆ ಮಿಂಚಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ.

  Published by:Seema R
  First published: