Kiara-Sidharth: ಪಾಪರಾಜಿಗಳಿಗೆ ಸಿದ್ಧಾರ್ಥ್ ಮತ್ತು ಕಿಯಾರಾ ಕೊಟ್ರು ಸ್ವೀಟ್ ಬಾಕ್ಸ್

ಸಿದ್ಧಾರ್ಥ್ ಮತ್ತು ಕಿಯಾರಾ ಕೊಟ್ರು ಸ್ವೀಟ್ ಬಾಕ್ಸ್

ಸಿದ್ಧಾರ್ಥ್ ಮತ್ತು ಕಿಯಾರಾ ಕೊಟ್ರು ಸ್ವೀಟ್ ಬಾಕ್ಸ್

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪಾಪರಾಜಿಗಳಿಗೆ ಸ್ವೀಟ್ ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

  • Trending Desk
  • 3-MIN READ
  • Last Updated :
  • Karnataka, India
  • Share this:

    ಕಳೆದ ವಾರವಷ್ಟೆ ಬಾಲಿವುಡ್​ನಲ್ಲಿರುವ (Bollywood) ಇಬ್ಬರು ಕ್ಯೂಟ್ ನಟ ಮತ್ತು ನಟಿ ಹಸೆಮಣೆ ಏರಿದ್ದು ನಮಗೆಲ್ಲಾ ಗೊತ್ತೇ ಇದೆ. ನಟ ಸಿದ್ದಾರ್ಥ ಮಲ್ಹೋತ್ರಾ (Siddharth Malhotra) ಮತ್ತು ನಟಿ ಕಿಯಾರಾ ಅಡ್ವಾಣಿ (Kiara Advani) ಇಬ್ಬರು ಫೆಬ್ರುವರಿ 7ನೇ ತಾರೀಖಿನಂದು ರಾಜಸ್ಥಾನದ ಜೈಸಲ್ಮೇರ್ ನ ಸೂರ್ಯಗಢ ಅರಮನೆಯಲ್ಲಿ ವಿವಾಹವಾದರು. ಈ ಜಸ್ಟ್ ಮ್ಯಾರಿಡ್ ಜೋಡಿ ಶನಿವಾರ ಮುಂಬೈ ನಗರಕ್ಕೆ ಮರಳಿದ್ದು, ಸಿದ್ಧಾರ್ಥ್ ಮತ್ತು ಕಿಯಾರಾ ಅವರು ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಪಾಪರಾಜಿಗಳಿಗೆ ಸ್ವೀಟ್ ಬಾಕ್ಸ್ ಗಳನ್ನು ಉಡುಗೊರೆಯಾಗಿ ನೀಡಿದರು.


    ಅವರು ಅವರಿಗೆ ಶುದ್ಧ ಪದಾರ್ಥಗಳಿಂದ ತಯಾರಿಸಿದ ಮಿಠಾಯಿ (ಸಿಹಿ ತಿಂಡಿಗಳು) ಕಸ್ಟಮೈಸ್ ಮಾಡಿದ ಸ್ವೀಟ್ ಬಾಕ್ಸ್ ಅನ್ನು ನೀಡಿದರು. ಈ ಬಾಲಿವುಡ್ ಜೋಡಿ ಫೆಬ್ರುವರಿ 9 ರಂದು ಕುಟುಂಬ ಮತ್ತು ಆಪ್ತ ಸ್ನೇಹಿತರಿಗಾಗಿ ದೆಹಲಿಯ ‘ದಿ ಲೀಲಾ’ ಹೊಟೇಲ್ ನಲ್ಲಿ ಆರತಕ್ಷತೆಯನ್ನು ಸಹ ಆಯೋಜಿಸಿದ್ದರು.


    Heres an inside look at the sweet boxes gifted to the paparazzi by Sidharth Malhotra and Kiara Advani
    ಸಿದ್ಧಾರ್ಥ್ ಮತ್ತು ಕಿಯಾರಾ ಕೊಟ್ರು ಸ್ವೀಟ್ ಬಾಕ್ಸ್


    ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಸಿಹಿ ಹಂಚಿದ ದಂಪತಿಗಳು


    ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದಂತೆ ಸ್ಟಾರ್ ದಂಪತಿಗಳು ಸ್ವೀಟ್ ಬಾಕ್ಸ್ ಗಳನ್ನು ಹಸ್ತಾಂತರಿಸುವ ಮೊದಲು ಕೆಲವು ಫೋಟೋಗಳಿಗೆ ಪೋಸ್ ನೀಡಿದರು.


    ‘ಶಾದಿ ಕಾ ಲಡ್ಡು’ ಎಂಬ ಕಂಪನಿಯು ಒಟ್ಟುಗೂಡಿಸಿದ ಗುಲಾಬಿ ಪೆಟ್ಟಿಗೆಗಳಲ್ಲಿ ದಂಪತಿಗಳ ಸಣ್ಣ ಟಿಪ್ಪಣಿ ಇತ್ತು, ಅದರಲ್ಲಿ ಅವರ ಮೊದಲಕ್ಷರಗಳು ಇದ್ದವು.


    ಪೆಟ್ಟಿಗೆಯಲ್ಲಿ 16 ವಿವಿಧ ಸಿಹಿತಿಂಡಿಗಳು ಸಹ ಇದ್ದವು, ಶುದ್ಧ ಪದಾರ್ಥಗಳಿಂದ ಕೈಯಿಂದ ತಯಾರಿಸಲಾಗಿದೆ. ಗುಲಾಬಿ ಪೆಟ್ಟಿಗೆಗಳನ್ನು ಚಿನ್ನದ ಬಣ್ಣದ ರಿಬ್ಬನ್ ನಿಂದ ಕಟ್ಟಲಾಗಿತ್ತು.


    ಮುಂಬೈಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಿಯಾರಾ ಅವರು ಬಿಳಿ ಲೇಸ್ ದುಪಟ್ಟಾದೊಂದಿಗೆ ಹಳದಿ ಸೂಟ್ ಧರಿಸಿದ್ದರು. ಇದರ ಜೊತೆಗೆ ಅವರು ಸರಳ ಮಂಗಳಸೂತ್ರ ಮತ್ತು ದೊಡ್ಡ ವಜ್ರದ ವಿವಾಹದ ಉಂಗುರವನ್ನು ಸಹ ಧರಿಸಿದ್ದರು.


    ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ಬಿಳಿ ಕುರ್ತಾವನ್ನು ಧರಿಸಿದ್ದರು. ಫೋಟೋ ತೆಗೆಸಿಕೊಳ್ಳುವ ಮುಂಚೆ ಅವರಿಬ್ಬರು ಸನ್ ಗ್ಲಾಸಸ್ ಗಳನ್ನು ಸಹ ಧರಿಸಿದರು.


    ಮದುವೆಯಾದ ದಿನ ದಂಪತಿಗಳು ಇನ್‌ಸ್ಟಾ ದಲ್ಲಿ ಏನಂತ ಮೆಸೇಜ್ ಹಾಕಿದ್ರು?


    ಫೆಬ್ರುವರಿ 7 ರಂದು, ಕಿಯಾರಾ ಮತ್ತು ಸಿದ್ಧಾರ್ಥ್ ಇಬ್ಬರು ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಜಂಟಿಯಾಗಿ ಪೋಸ್ಟ್ ವೊಂದನ್ನು ಹಾಕಿದರು. ಅದರಲ್ಲಿ "ಈಗ ನಮ್ಮಿಬ್ಬರ ಬುಕಿಂಗ್ ಶಾಶ್ವತವಾಗಿ ಆಗಿದೆ. ನಮ್ಮ ಮುಂದಿನ ಪ್ರಯಾಣದಲ್ಲಿ ನಾವು ನಿಮ್ಮ ಆಶೀರ್ವಾದ ಮತ್ತು ಪ್ರೀತಿಯನ್ನು ಕೋರುತ್ತೇವೆ” ಎಂದು ಬರೆದುಕೊಂಡಿದ್ದರು.


    ಹಿಂದಿ ಸಿನೆಮಾ ಜಗತ್ತಿನ ಸೆಲೆಬ್ರಿಟಿಗಳಾದ ಕರಣ್ ಜೋಹರ್, ನಟ ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್, ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ನಟಿ ಜೂಹಿ ಚಾವ್ಲಾ ಅವರು ಇವರ ಮದುವೆಯಲ್ಲಿ ಭಾಗವಹಿಸಿದ್ದರು.


    ಈ ದಂಪತಿಗಳು ಹಿಂದಿ ಚಲನಚಿತ್ರೋದ್ಯಮಕ್ಕಾಗಿ ಭಾನುವಾರ ಮುಂಬೈನಲ್ಲಿ ಆರತಕ್ಷತೆಯನ್ನು ಆಯೋಜಿಸಿದ್ದರು. ಅಲ್ಲಿ ನಟರಾದ ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ವರುಣ್ ಧವನ್, ಮೀರಾ ರಜಪೂತ್, ಶಾಹಿದ್ ಕಪೂರ್, ಕರಣ್ ಜೋಹರ್ ಬಂದಿದ್ದರು ಎಂದು ಹೇಳಲಾಗುತ್ತಿದೆ.




    ಈ ಜೋಡಿ ಶೇರ್ ಷಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು..


    ಸಿದ್ಧಾರ್ಥ್ ಮತ್ತು ಕಿಯಾರಾ ಇಬ್ಬರು 2021 ರಲ್ಲಿ ಬಿಡುಗಡೆಯಾದ ಶೇರ್ ಷಾ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ನಟ ಸಿದ್ದಾರ್ಥ್ ಅವರು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದ ನಟಿ ರಶ್ಮಿಕಾ ಮಂದಣ್ಣ ಅವರೊಂದಿಗೆ ನಟಿಸಿದ ‘ಮಿಷನ್ ಮಜ್ನು’ ಚಿತ್ರದಲ್ಲಿ ನಟಿಸಿದ್ದು ಈ ನಟನ ಈ ಹಿಂದೆ ಕೊನೆಯ ಚಿತ್ರವಾಗಿತ್ತು.


    ಇದನ್ನೂ ಓದಿ: Shraddha Kapoor: ಫುಡ್​ ವಿಚಾರದಲ್ಲಿ ನೋ ಡಯೆಟ್​, ಇದು ಶ್ರದ್ಧಾ ಕಪೂರ್‌ ಬ್ಯೂಟಿ ಸೀಕ್ರೆಟ್!


    ರೋಹಿತ್ ಶೆಟ್ಟಿ ನಿರ್ದೇಶನದ ಚೊಚ್ಚಲ ವೆಬ್ ಸೀರಿಸ್ ‘ಇಂಡಿಯನ್ ಪೊಲೀಸ್ ಫೋರ್ಸ್’ ನಲ್ಲಿ ವಿವೇಕ್ ಒಬೆರಾಯ್ ಮತ್ತು ಶಿಲ್ಪಾ ಶೆಟ್ಟಿ ಅವರೊಂದಿಗೆ ಸಿದ್ಧಾರ್ಥ್ ಕೆಲಸ ಮಾಡುತ್ತಿದ್ದಾರೆ. ಅವರು ದಿಶಾ ಪಟಾನಿ ಮತ್ತು ರಾಶಿ ಖನ್ನಾ ಅವರೊಂದಿಗೆ ಆಕ್ಷನ್ ಚಿತ್ರ ಯೋಧಾದಲ್ಲಿಯೂ ಸಹ ನಟಿಸುತ್ತಿದ್ದಾರೆ. ಇನ್ನೂ ಕಿಯಾರಾ, ಈ ವರ್ಷದ ಕೊನೆಯಲ್ಲಿ ಕಾರ್ತಿಕ್ ಆರ್ಯನ್ ಅವರೊಂದಿಗೆ ‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲಿ ನಟಿಸಲಿದ್ದಾರೆ.

    Published by:ಪಾವನ ಎಚ್ ಎಸ್
    First published: