Farhan Akhtar ಲವ್​ ಸ್ಟೋರಿ ಸಖತ್​ ಇಂಟ್ರೆಸ್ಟಿಂಗ್​, ರಿಯಾಲಿಟಿ ಶೋನಲ್ಲೇ ಎಕ್ಸ್​ಚೇಂಜ್​ ಆಗಿತ್ತು ಹಾರ್ಟ್!

2015 ರಲ್ಲಿ ಪ್ರದರ್ಶನಗೊಂಡಿದ್ದ, ‘ಐ ಕ್ಯಾನ್ ಡು ಇಟ್’ ಎಂಬ ರಿಯಾಲಿಟಿ ಶೋನ ಸೆಟ್‍ನಲ್ಲಿ ಫರ್ಹಾನ್ ಮತ್ತು ಶಿಬಾನಿ ದಾಂಡೇಕರ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಫರ್ಹಾನ್ ಆ ಕಾರ್ಯಕ್ರಮದ ನಿರೂಪಕರಾಗಿದ್ದರೆ, ಶಿಬಾನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಶಿಬಾನಿ ದಾಂಡೇಕರ್,  ಫರ್ಹಾನ್ ಅಖ್ತರ್

ಶಿಬಾನಿ ದಾಂಡೇಕರ್, ಫರ್ಹಾನ್ ಅಖ್ತರ್

  • Share this:
ಬಾಲಿವುಡ್ ನಟ(Bollywood), ನಿರ್ದೇಶಕ(Director) ಫರ್ಹಾನ್ ಅಖ್ತರ್ (Farhan Akhtar)ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ(Mumbai)ನಲ್ಲಿ ಫೆಬ್ರವರಿ 19 ರಂದು ಬಹುಕಾಲದ ಗೆಳತಿ ಶಿಬಾನಿ ದಾಂಡೇಕರ್(Shibani Dandekar) ಅವರೊಂದಿಗೆ ಫರ್ಹಾನ್ ಮದುವೆ(Wedding) ನಡೆದಿದೆ. ಶನಿವಾರ ಸಂಪ್ರದಾಯಬದ್ಧವಾಗಿ ಸತಿಪತಿಗಳಾದ ನಂತರ, ಸೋಮವಾರ ಈ ಜೋಡಿ ರಿಜಿಸ್ಟರ್ ಮದುವೆ(Register Marriage)ಯಾಗಲು ನಿರ್ಧರಿಸಿದೆ. ಬಾಲಿವುಡ್(Bollywood) ಮದುವೆ ಎಂದ ಮೇಲೆ ಕೇಳಬೇಕೆ, ಮದುವೆ ಮಾತ್ರವಲ್ಲ ಮದುವೆಗೂ ಮುಂಚಿನ ಆಚರಣೆಗಳು ಎಲ್ಲರಿಗೂ ಸಖತ್ ಖುಷಿ ನೀಡುವಷ್ಟು ಭರ್ಜರಿಯಾಗಿರುತ್ತು. ಇತ್ತೀಚೆಗಷ್ಟೆ ತಮ್ಮ ತಮ್ಮ ಬ್ಯಾಚುಲರ್ ಪಾರ್ಟಿಗಳನ್ನು ಕೂಡ ಫರ್ಹಾನ್​ ಆಚರಿಸಿಕೊಂಡಿದ್ದರು. ಅವರ ಮದುವೆಯ ಸಮಾರಂಭ ಕೂಡ ಖಾಸಗಿಯಾಗಿಯೇ ನಡೆದಿದೆ. ಹಾಗಿದ್ರೆ ಈ ಜೋಡಿಗಳ ಮಧ್ಯೆ ಪ್ರೀತಿ(Love) ಹುಟ್ಟಿದ್ದು ಹೇಗೆ? ಈ ಜೋಡಿಯ ಸಂಕ್ಷಿಪ್ತ ಪ್ರೇಮ ಕಥೆ ಇಲ್ಲಿದೆ.

ರಿಯಾಲಿಟಿ ಶೋನಲ್ಲಿ ಜೊತೆಯಾದ ಜೋಡಿ

2015 ರಲ್ಲಿ ಪ್ರದರ್ಶನಗೊಂಡಿದ್ದ, ‘ಐ ಕ್ಯಾನ್ ಡು ಇಟ್’ ಎಂಬ ರಿಯಾಲಿಟಿ ಶೋನ ಸೆಟ್‍ನಲ್ಲಿ ಫರ್ಹಾನ್ ಮತ್ತು ಶಿಬಾನಿ ದಾಂಡೇಕರ್ ಮೊದಲ ಬಾರಿಗೆ ಭೇಟಿಯಾಗಿದ್ದರು. ಫರ್ಹಾನ್ ಆ ಕಾರ್ಯಕ್ರಮದ ನಿರೂಪಕರಾಗಿದ್ದರೆ, ಶಿಬಾನಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಈ ರಿಯಾಲಿಟಿ ಶೋನ ಸಂದರ್ಭದಲ್ಲೇ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ವದಂತಿಗಳು ಹರಡಲು ಆರಂಭವಾಗಿತ್ತು. ಶಿಬಾನಿ ದಾಂಡೇಕರ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ, ತಮ್ಮಿಬ್ಬರ ಪ್ರೇಮ ಸಂಬಂಧದ ಕುರಿತ ಸುಳಿವುಗಳನ್ನು ನೀಡಿದ್ದರು.

ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದ ಫರ್ಹಾನ್​ ಅಖ್ತರ್​!

ತಮ್ಮಿಬ್ಬರ ಪ್ರೇಮ ಸಂಬಂಧದ ಬಗೆಗಿನ ವದಂತಿಗಳು ಎಲ್ಲರ ಬಾಯಿಗೆ ಆಹಾರವಾಗುತ್ತಿರುವುದನ್ನು ಗಮನಿಸಿದ ಫರ್ಹಾನ್ , ತಮ್ಮ ಸಂಬಂಧವನ್ನು ಅಧಿಕೃತಗೊಳಿಸಲು ನಿರ್ಧರಿಸಿದರು. ಅವರು ಇನ್‍ಸ್ಟಾಗ್ರಾಂನಲ್ಲಿ ಶಿಬಾನಿಯ ಜೊತೆಗಿನ ಎರಡು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ತಮ್ಮ ಶಿಬಾನಿ ಮುಖವನ್ನು ಮರೆಮಾಚಿದ್ದರೆ, ಇನ್ನೊಂದರಲ್ಲಿ ಕ್ಯಾಮರಾ ಕಡೆ ನೋಡಿ ನಗುತ್ತಿದ್ದಾರೆ. ”ಈಗ ನೀವು ಆಕೆಯನ್ನು ನೋಡಬಹುದು. ಒಂದು ಸುಂದರ ಸಂಜೆಗಾಗಿ ಧನ್ಯವಾದಗಳು” ಅವರು ಪೋಸ್ಟ್ ಜೊತೆ ಬರೆದುಕೊಂಡಿದ್ದರು.

ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್​ನ ಮತ್ತೊಂದು ಸ್ಟಾರ್​ ಜೋಡಿ!

ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು?

ಅವರಿಬ್ಬರೂ , ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆಯ ಮದುವೆಯ ರಿಸೆಪ್ಶನ್‍ನಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲಿ , ಪರಸ್ಪರ ಪ್ರೀತಿಯಿಂದ ಕೈ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್ ನೀಡಿ, ಎಲ್ಲರ ಗಮನ ಸೆಳೆದಿದ್ದರು.

ಫರ್ಹಾನ್​ ಹೆಸರಿನ ಟ್ಯಾಟು ಹಾಕಿಸಿಕೊಂಡಿದ್ದ ಶಿಬಾನಿ!

ಕಳೆದ ವರ್ಷ, ಫರ್ಹಾನ್ ಅಖ್ತರ್ ಹೆಸರಿನ ಟ್ಯಾಟೂವನ್ನು ತನ್ನ ಕತ್ತಿನ ಮೇಲೆ ಹಾಕಿಸಿಕೊಳ್ಳುವ ಮೂಲಕ ಶಿಬಾನಿ ಸುದ್ದಿಯಾಗಿದ್ದರು. ತಾನು ಟ್ಯಾಟೂವನ್ನು ತೋರಿಸುತ್ತಿರುವ ಪೋಟೋವನ್ನು ಹಾಕಿಕೊಂಡಿದ್ದ ಟ್ಯಾಟೂ ಕಲಾವಿದನ ಪೋಸ್ಟ್ ಅನ್ನು ಆಕೆ ಮರು ಶೇರ್ ಮಾಡಿದ್ದರಿಂದ ಈ ಸಂಗತಿ ಬೆಳಕಿಗೆ ಬಂದಿತ್ತು.ಕುಟುಂಬದ ಆಶೀರ್ವಾದ ಪಡೆದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಶಿಬಾನಿಗೆ ಫರ್ಹಾನ್ ಕುಟುಂಬದ ಜೊತೆ ಉತ್ತಮ ಸಂಬಂಧವಿದೆ. ಅದರಲ್ಲೂ ಮುಖ್ಯವಾಗಿ, ಫರ್ಹಾನ್ ಅವರ ತಾಯಿಯ ಜೊತೆ ಶಿಬಾನಿ ಒಳ್ಳೆಯ ಭಾಂದವ್ಯ ಹೊಂದಿದ್ದಾರೆ.

ಇದನ್ನೂ ಓದಿ: ಪ್ರಾಣಿಪ್ರಿಯನಿಗೆ ಪಾಗಲ್​ ಅಂದವನಿಗೆ ನಟಿ ಕ್ಲಾಸ್​​.. `ಹುಚ್ಚ’ ಅವರಲ್ಲ ನೀನು ಅಂದಿದ್ಯಾಕೆ ಅನುಷ್ಕಾ?

“ ಅವರ ಜೀವನ ಚೆನ್ನಾಗಿರಲಿ ಎಂದು ನಾನು ಆಶಿಸುತ್ತೇನೆ; ಅವರೀಗ ಮದುವೆಯಾಗಿದ್ದಾರೆ ನೋಡಲು ಖುಷಿ ಆಗುತ್ತಿದೆ. ಅವರಿಬ್ಬರು ಪರಸ್ಪರ ಸಂಬಂಧದ ಕುರಿತು ತುಂಬಾ ಗಂಭೀರವಾಗಿದ್ದಾರೆ. ಆದರೆ, ನೇರವಾಗಿ ಹೇಳುವುದಾದರೆ, ಈಗಿನ ಪೀಳಿಗೆಯವರು ಮದುವೆಯ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ. ನಾವು ಅದನ್ನು ಗೌರವಿಸುತ್ತೇವೆ” ಎಂದು ಫರ್ಹಾನ್ ಅಖ್ತರ್ ಅವರ ತಾಯಿ ಹನಿ ಇರಾನಿ ತಿಳಿಸಿದ್ದಾರೆ.
Published by:Vasudeva M
First published: