ವರ್ಷಕ್ಕೆ ಲೆಕ್ಕವಿಲ್ಲದಷ್ಟು ಸಿನಿಮಾ(Movie)ಗಳು ಬಿಡುಗಡೆಯಾಗುತ್ತವೆ. ಆದರೆ, ಬೆರಳಣಿಕೆಯಷ್ಟು ಸಿನಿಮಾಗಳು ಮಾತ್ರ ಬಾಕ್ಸ್ ಆಫೀಸ್(Box Office) ಗಲ್ಲಾಪೆಟ್ಟಗೆಯಲ್ಲಿ ಸದ್ದು ಮಾಡುತ್ತವೆ. ಕೆಲವೊಂದು ಚಿತ್ರಗಳು ಬಿಡುಗಡೆಯಾಗಿರೋದೇ ತಿಳಿಯುವುದಿಲ್ಲ. ಈ ವರ್ಷವೂ ಕೂಡ ಕೊರೋನಾ(Corona) ನಮ್ಮ ನೆಮ್ಮದಿಯನ್ನು ಹಾಳು ಮಾಡಿತ್ತು. ಆದಾಗ್ಯೂ ವರ್ಷದ ಆರಂಭದಲ್ಲಿ ಹಾಗೂ ಕೊನೆಯಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್(Release) ಆಗಿವೆ. ಒಟಿಟಿ(OTT) ವ್ಯಾಪ್ತಿ ಹೆಚ್ಚುತ್ತಿರುವುದರಿಂದ ಹಲವರು ವೆಬ್ ಸೀರಿಸ್ನತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡುತ್ತಿದ್ದ ಮಂದಿ, ಕೊರೊನಾಗೆ ಹೆದರಿ ಒಟಿಟಿ ಮೊರೆ ಹೋಗಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವಂತೆ ಒಟಿಟಿಯಲ್ಲೂ ಹೊಸ ಹೊಸ ಸಿನಿಮಾಗಳು ಎಕ್ಸ್ಕ್ಲೂಸಿವ್(Exclusive) ಆಗಿ ರಿಲೀಸ್ ಆಗುತ್ತೆ. ಒಟಿಟಿಯಲ್ಲಿ ಬಿಡುಗಡೆ ಮಾಡಲೆಂದೆ ನಿರ್ಮಾಪಕರು(Producers) ದುಡ್ಡು ಹಾಕಿ ಸಿನಿಮಾ ಮಾಡುತ್ತಿದ್ದಾರೆ. ಈ ವರ್ಷ ತೆರೆಕಂಡ ಹಲವು ಸಿನಿಮಾಗಳು ಜನರ ಮೆಚ್ಚುಗೆ ಗಳಿಸಿತ್ತು.ಅದಾಗ್ಯೂ ಭಾರೀ ನಿರೀಕ್ಷೆ ಹುಟ್ಟಸಿದ್ದ ಕೆಲ ಸಿನಿಮಾಗಳು ನೆಲಕಚ್ಚಿತ್ತು. ಹಾಗಿದ್ರೆ ಐಎಂಡಿಬಿಯಲ್ಲಿ ಈ ವರ್ಷ ಟಾಪ್ 10 ಬೆಸ್ಟ್ ಸಿನಿಮಾಗಳು(Top 10 Best Movies) ಯಾವುವು ಗೊತ್ತಾ? ಟಾಪ್ 10 ಬೆಸ್ಟ್ ವೆಬ್ ಸೀರೀಸ್ಗಳು(Top 10 Best Series) ಯಾವುವು ಗೊತ್ತಾ? ಇಲ್ಲಿದೆ ನೊಡಿ..
ಮೊದಲನೇ ಸ್ಥಾನದಲ್ಲಿ ‘ಜೈ ಭೀಮ್’
ಜನವರಿ 1ರಿಂದ ನವೆಂಬರ್ 29ರವರೆಗೆ ರಿಲೀಸ್ ಆದ ಸಿನಿಮಾಗಳನ್ನು ಇಟ್ಟುಕೊಂಡು ರೇಟಿಂಗ್ ನೀಡಲಾಗಿದೆ. ಈ ಪಟ್ಟಿಯಲ್ಲಿ ತಮಿಳಿನ ‘ಜೈ ಭೀಮ್’ ಸಿನಿಮಾ ಟಾಪ್ನಲ್ಲಿದೆ. ಸೂರ್ಯ ನಟನೆಯ ಈ ಸಿನಿಮಾ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ಗಳಿಸಿಕೊಂಡಿತ್ತು. ಹೀಗಾಗಿ, ಐಎಂಡಿಬಿಯಲ್ಲಿ ಪ್ರಥಮ ಸ್ಥಾನ ಇದಕ್ಕೆ ದೊರೆತಿದೆ. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ಶೇರ್ಷಾ ಎರಡನೇ ಸ್ಥಾನದಲ್ಲಿದೆ. ವೆಬ್ ಸೀರಿಸ್ಗಳ ಪೈಕಿ ‘ಆಸ್ಪಿರಂಟ್ಸ್’ ಮೊದಲ ಸ್ಥಾನ ಕಾಯ್ದುಕೊಂಡಿದೆ. ‘ದಿ ಫ್ಯಾಮಿಲಿ ಮ್ಯಾನ್’ ಮೊದಲಾದ ಸೀರಿಸ್ಗಳು ಕೂಡ ಈ ಪಟ್ಟಿಯಲ್ಲಿವೆ.
ಟಾಪ್ 10 ಬೆಸ್ಟ್ ಸಿನಿಮಾ
1. ಜೈ ಭೀಮ್
2. ಶೇರ್ಷಾ
3. ಸೂರ್ಯವಂಶಿ
4. ಮಾಸ್ಟರ್
5. ಸರ್ದಾರ್ ಉಧಮ್
6. ಮಿಮಿ
7. ಕರ್ಣನ್
8. ಶಿದ್ದತ್
9. ದೃಶ್ಯಂ 2
10. ಹಸೀನ್ ದಿಲ್ರುಬಾ
ಇದನ್ನು ಓದಿ: `ಪುಷ್ಪ’ ಚಿತ್ರದ ಹಾಟ್ ಐಟಂ ಸಾಂಗ್ ರಿಲೀಸ್: ಸಮಂತಾ ಮಾದಕ ಲುಕ್ಗೆ ಮನಸೋತ ಫ್ಯಾನ್ಸ್!
ಟಾಪ್ 10 ಬೆಸ್ಟ್ ಸೀರೀಸ್ಗಳು!
1. ಆಸ್ಪಿರೆಂಟ್ಸ್
2. ಢಿಂಡೋರಾ
3. ದಿ ಫ್ಯಾಮಿಲಿ ಮ್ಯಾನ್
4. ದಿ ಲಾಸ್ಟ್ ಅವರ್
5. ಸನ್ ಫ್ಲವರ್
6. ಕ್ಯಾಂಡಿ
7. ರೇ
8. ಗ್ರಹಣ್
9. ನವೆಂಬರ್ ಸ್ಟೋರಿ
10. ಮುಂಬೈ ಡೈರೀಸ್ 26/11
ಐಎಂಡಿಬಿ ರೇಟಿಂಗ್ ನೋಡಿ ಸಿನಿಮಾ ನೋಡ್ತಾರೆ..!
ಐಎಂಡಿಬಿ ರೇಟಿಂಗ್ ನೋಡಿ ಸಿನಿಮಾ ನೋಡಲು ಡಿಸೈಡ್ ಮಾಡಲು ತುಂಬಾ ಜನರಿದ್ದಾರೆ. ಹೀಗಾಗಿ ಈ ರೇಟಿಂಗ್ ಸಿನಿರಸಿಕರು ಸಹಕಾರಿಯಾಗಿದೆ. ಇನ್ನೂ ಪ್ರತಿವರ್ಷ ಐಎಂಡಿ ಟಾಪ್ 10 ಬೆಸ್ಟ್ ಸಿನಿಮಾ, ಹಾಗೂ ವೆಬ್ ಸೀರೀಸ್ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತೆ. ಅದರಂತೆ ಈ ವರ್ಷವೂ ಬಿಡುಗಡೆಯಾಗಿದೆ. ಲಿಸ್ಟ್ನಲ್ಲಿರುವ ಸಿನಿಮಾಗಳು ಜನರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.
ಇದನ್ನು ಓದಿ :
ಹೊಸಾ ರೂಪದಲ್ಲಿ ಮತ್ತೆ ಬರ್ತಿದೆ ಎವರ್ಗ್ರೀನ್ ಕ್ಲಾಸಿಕ್ ಸಿನಿಮಾ ಬಂಧನ-2, ತಾರಾಗಣದಲ್ಲಿ ಯಾರಿದ್ದಾರೆ? ಫುಲ್ ಡೀಟೆಲ್ಸ್
ಗೂಗಲ್ ಸರ್ಚ್ನಲ್ಲಿ ಟಾಪ್ ಟ್ರೆಂಡ್ನಲ್ಲಿದೆ ಜೈ ಭೀಮ್!
ತಮಿಳು ನಟ ಸೂರ್ಯಾ ಅಭಿನಯದ ‘ಜೈ ಭೀಮ್’ ಸಿನಿಮಾ 2021ರ ಗೂಗಲ್ ಸರ್ಚ್ನಲ್ಲಿ ಟಾಪ್ ಟ್ರೆಂಡ್ನಲ್ಲಿ ಇದೆ.
ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಕನ್ನಡ ಭಾಷೆಗಳಲ್ಲಿ ಈ ಸಿನಿಮಾ ದೀಪಾವಳಿ ಸಂದರ್ಭದಲ್ಲಿ ನವೆಂಬರ್ 2 ಕ್ಕೆ ನೇರವಾಗಿ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗಿತ್ತು. ಗೂಗಲ್ ಸರ್ಚ್ನಲ್ಲಿ ಈ ಸಿನಿಮಾವನ್ನು ಹೆಚ್ಚು ಜನರು ಹುಡುಕಿದ್ದಾರೆ. ಸೂರ್ಯಾ ಹಾಗೂ ಅವರ ಪತ್ನಿ ಜ್ಯೋತಿಕಾ ಒಡೆತನದ ‘2ಡಿ ಎಂಟರ್ಟೈನ್ಮೆಂಟ್’ ಸಂಸ್ಥೆ ನಿರ್ಮಾಣ ಮಾಡಿರುವ ‘ಜೈ ಭೀಮ್’ ಅನ್ನು ನಿರ್ದೇಶಕ ಜ್ಞಾನವೇಲ ನಿರ್ದೇಶಿಸಿದ್ದಾರೆ. ನ್ಯಾಯಾಂಗ ಹಾಗೂ ಬಡವರ ಹೋರಾಟದ ಕಥೆಯನ್ನು ಈ ಸಿನಿಮಾ ಹೊಂದಿದ್ದು, ಸೂರ್ಯಾ ಅವರು ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ