Vijay: ಕೋಟಿ ಕೋಟಿ ಸಂಪಾದಿಸುವ ನಟನಲ್ಲಿ ಕಾರಿನ ವಿಮೆ ಕಟ್ಟೋಕೆ ದುಡ್ಡಿಲ್ವಾ?

ನಟ ವಿಜಯ್ ಮತದಾನಕ್ಕೆ ಬಂದಿದ್ದ ಕಾರು ಸುದ್ದಿಯಲ್ಲಿದೆ. ವಿಜಯ್ ಬಂದಿದ್ದ ಕಾರಿಗೆ ವಿಮೆ ಮಾಡಿಸಿಲ್ಲ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

ವಿಜಯ್

ವಿಜಯ್

  • Share this:
ತಮಿಳುನಾಡು (Tamilnadu) ಸೇರಿದಂತೆ ವಿಶ್ವದಲ್ಲೆಡೆ ದೊಡ್ಡ ಅಭಿಮಾನಿ (Fans) ಬಳಗ ಹೊಂದಿರುವ ನಟ ದಳಪತಿ ವಿಜಯ್ (Thalapathy Vijay) ಅವರಿಗೆ ಮತ್ತೊಂದು ಕಾರು ಸಂಕಷ್ಟ ಎದುರಾಗಿದೆ. ಫೆಬ್ರವರಿ 19 ರಂದು ನಡೆದ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ (Election) ಮತ ಚಲಾಯಿಸಲು (Voting) ಕೆಂಪು ಬಣ್ಣದ ಕಾರಿನಲ್ಲಿ ಬಂದಿದ್ದರು. ದಳಪತಿ ಬಂದ ಈ ಕೆಂಪು ಕಾರಿನ ಬಗ್ಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ಚರ್ಚೆ ಆಗುತ್ತಿದೆ. ಫೆಬ್ರವರಿ 19 ರಂದು ನಡೆದ ತಮಿಳುನಾಡು ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ನೀಲಂಗರೈ ವೆಲ್ಸ್ ಶಾಲೆಯಲ್ಲಿದ್ದ ಮತದಾನ ಕೇಂದ್ರದಲ್ಲಿ ಮತಗಟ್ಟೆಗೆ ಬಂದು ನಟ ವಿಜಯ್ ಮತ ಚಲಾಯಿಸಿದ್ದರು. ತಮ್ಮ ಅಭಿಮಾನಿಗಳಿಂದ ಸುತ್ತುವರಿದ ಕೆಂಪು ಕಾರಿನಲ್ಲಿ (Red Car) ಆಗಮಿಸಿದ ತಮಿಳು ಸೂಪರ್‌ಸ್ಟಾರ್ ವಿಜಯ್ ನೋಡಲು ಅಭಿಮಾನಿಗಳು ಸಹ ಮುಗಿಬಿದ್ದಿದ್ದರು. ಇದರಿಂದ ಸ್ವಲ್ಪ ಸಮಯ ಸಾರ್ವಜನಿಕರಿಗೆ ಅಡಚಣೆಯಾಗಿತ್ತು. ಈ ಸಂಬಂಧ ಮತಗಟ್ಟೆಯಲ್ಲಿರುವ ಸಾರ್ವಜನಿಕರ ಬಳಿ ಕೈ ಮುಗಿದು ವಿಜಯ್ ಕ್ಷಮೆಯಾಚಿಸಿದ್ದರು (Apologized).

ಪ್ರಸ್ತುತ ನಟ ವಿಜಯ್ ಮತದಾನಕ್ಕೆ ಬಂದಿದ್ದ ಕಾರು ಸುದ್ದಿಯಲ್ಲಿದೆ. ವಿಜಯ್ ಬಂದಿದ್ದ ಕಾರಿಗೆ ವಿಮೆ ಮಾಡಿಸಿಲ್ಲ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

ಮೊದಲು ಬಂದು ಮತ ಚಲಾಯಿಸಿದ ವಿಜಯ್

ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ನಿಯಮಿತವಾಗಿ ಬಂದು ಮತ ಚಲಾಯಿಸುವ ಬಹುತೇಕ ಸಿನಿಮಾ ತಾರೆಯರು ಈ ಬಾರಿಯ ಪೌರ ಚುನಾವಣೆಯಲ್ಲಿ ಮತ ಚಲಾಯಿಸಲು ಬರಲಿಲ್ಲ. ರಜನೀಕಾಂತ್, ಅಜಿತ್ ಕುಮಾರ್, ಶಿವಕಾರ್ತಿಕೇಯನ್, ಜಯಂ ರವಿ, ತ್ರಿಶಾ ಸೇರಿದಂತೆ ಅನೇಕ ನಟರು ಮತದಾನ ಮಾಡಲಿಲ್ಲ. ಆದರೆ, ತಮಿಳು ಚಿತ್ರರಂಗದ ಪ್ರಮುಖ ನಟ ವಿಜಯ್ ಮತದಾನದ ದಿನ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಮೊದಲು ಬಂದು ಮತದಾನ ಮಾಡಿದರು.

ಕಳೆದ ವರ್ಷ ಸೈಕಲ್​ನಲ್ಲಿ ಬಂದಿದ್ದ ನಟ ಈ ಬಾರಿ ಕಾರಿನಲ್ಲಿ ಅಗಮನ

ನಗರ ನಾಗರಿಕ ಚುನಾವಣೆಯಲ್ಲಿ ನೀಲಂಗರಾಯಿಯ ಮತಗಟ್ಟೆಗೆ ಮತದಾನ ಮಾಡಲು ರೆಡ್ ಮಾರುತಿ ಸುಜುಕಿ ಸೆಲೆರಿಯೊ ಕಾರಿನಲ್ಲಿ ವಿಜಯ್ ಬಂದ್ದಿದ್ದರು. ಕಳೆದ 2021ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರು ತಮ್ಮ ಮನೆಯಿಂದ ಸ್ವಲ್ಪವೇ ದೂರವಿದ್ದ ಮತಗಟ್ಟೆಗೆ ಸೈಕಲ್‌ನಲ್ಲಿ ಮತ ಚಲಾಯಿಸಲು ಬಂದಿದ್ದರು.

ಇದನ್ನೂ ಓದಿ: ತಂದೆ ತಾಯಿ ವಿರುದ್ಧವೇ ವಿಜಯ್ ವಾರ್ ? ಏನು ಕಾರಣ ?

ಸದ್ಯ ವಿಜಯ್ ಮತದಾನ ಮಾಡಲು ಬಂದಿದ್ದ ಕೆಂಪು ಕಾರು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕಾರಿನ ವಿಮೆ ಅವಧಿ ಮುಗಿದಿದೆ ಎಂದು ಹೇಳಲಾಗುತ್ತಿದೆ.

ಇನ್ಶೂರೆನ್ಸ್ ಮುಗಿದ ಕಾರಿನಲ್ಲಿ ಬಂದರಾ ವಿಜಯ್?

ನಟ ವಿಜಯ್ ಬಂದಿದ್ದ ಕೆಂಪು ಕಾರಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡ ನಂತರ, ಕೆಲವು ನೆಟ್ಟಿಗರು ಕಾರಿನ ನೋಂದಣಿ ಸಂಖ್ಯೆಯ ವಿವರಗಳಿಗಾಗಿ ಇಂಟರ್ನೆಟ್‌ನಲ್ಲಿ ಹುಡುಕಿದ್ದಾರೆ. ಅದರಂತೆ ಕಾರಿನ ಮಾಲೀಕ ಜೋಸೆಫ್ ವಿಜಯ್ 2020ರ ಮೇಗೆ ಕಾರಿನ ವಿಮೆ ಅವಧಿ ಮುಗಿದಿದೆ ಎಂಬ ಮಾಹಿತಿ ಹಂಚಿಕೊಂಡಿದ್ದರು. ನಟ ವಿಜಯ್ ಇನ್ಶೂರೆನ್ಸ್ ಮುಗಿದ ಕಾರಿನಲ್ಲಿ ಬಂದಿದ್ದಾರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ.

ವಿಮೆ ಕಟ್ಟೋಕೆ ಹಣವಿಲ್ವಾ?

ಕೆಲವು ನೆಟ್ಟಿಗರು, ಕಾರಿನ ನೋಂದಣಿ ಸಂಖ್ಯೆ ಮತ್ತು ಅದರ ವಿಮೆಯ ಮುಕ್ತಾಯ ದಿನಾಂಕವನ್ನು ಉಲ್ಲೇಖಿಸಿ, ಚಲನಚಿತ್ರಗಳಿಂದ ಕೋಟಿ ಕೋಟಿ ಗಳಿಸುವ ಜನಪ್ರಿಯ ನಟ ತನ್ನ ಕಾರಿನ ವಿಮೆಯನ್ನು ಸಹ ಪಾವತಿಸುವುದಿಲ್ಲ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ರೀಲ್​ ಹೀರೋಗಳು ತೆರಿಗೆ ಕಟ್ಟಲು ಹಿಂಜರಿಯುತ್ತಾರೆ ಎಂದು ತಲಪತಿ ವಿಜಯ್​ಗೆ ಛೀಮಾರಿ ಹಾಕಿದ ಮದ್ರಾಸ್​ ಹೈ ಕೋರ್ಟ್​

ನಟ ವಿಜಯ್‌ಗೆ ಕಾರು ಸಂಕಷ್ಟ ತಪ್ಪಿದಂತೆ ಕಾಣುತ್ತಿಲ್ಲ.ಕಳೆದ ವರ್ಷ ಐಷಾರಾಮಿ ಕಾರಿಗೆ ತೆರಿಗೆ ಕಟ್ಟದ ಕಾರಣಕ್ಕಾಗಿ ನಟ ವಿಜಯ್‌ಗೆ ಮದ್ರಾಸ್ ಹೈಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿತ್ತು. ಇಂಗ್ಲೆಂಡ್‌ನಿಂದ ಈ ಕಾರನ್ನು ವಿಜಯ್ ಅವರು ಆಮದು ಮಾಡಿಕೊಂಡಿದ್ದರು.

ಇನ್ನೂ ದಳಪತಿ ವಿಜಯ್ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಪೂಜಾ ಹೆಗ್ಡೆ ನಾಯಕಿಯಾಗಿರುವ ತಮಿಳಿನ ಬೀಸ್ಟ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಬೀಸ್ಟ್ ಸಿನಿಮಾದ ಅರೇಬಿಕ್ ಕುತು ಹಾಡು ಸಖತ್ ಸೌಂಡ್ ಮಾಡ್ತಿದೆ.
Published by:Divya D
First published: