ಸಾಮಾಜಿಕ ಜಾಲತಾಣವನ್ನು ಸ್ಟಾರ್ಗಳು ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರಲು ಬಳಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ಸಿನಿಮಾಗಳ ಪ್ರಚಾರವನ್ನೂ ಮಾಡುತ್ತಾರೆ. ಆದರೆ ಲಾಕ್ಡೌನ್ ಆದಾಗಿನಿಂದ ಸಾಮಾಜಿಕ ಜಾಲತಾಣ, ಸ್ಟಾರ್ಗಳಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವ ಮಾಧ್ಯಮವಾಗಿದೆ.
ಸಾಮಾಜಿಕ ಜಾಲತಾಣದಿಂದ ಈಗ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟ-ನಟಿಯರ ಕುರಿತಾದ ಸಾಕಷ್ಟು ವಿಷಯಗಳು ತಿಳಿಯುತ್ತಿವೆ. ಇದೆಲ್ಲ ಲಾಕ್ಡೌನ್ ಪ್ರಭಾವ ಎಂದರೆ ತಪ್ಪಾಗದು. ತುಂಬಾ ಜನ ಸ್ಟಾರ್ಗಳ ಹವ್ಯಾಸ ಹಾಗೂ ಅಭ್ಯಾಸಗಳು ಈಗ ಸಾಮಾಜಿಕ ಜಾಲತಾಣದಿಂದ ಬಹಿರಂಗವಾಗುತ್ತಿದೆ. ಇದಕ್ಕೆ ಮೇಘನಾ ಗಾಂವ್ಕರ್ ಸಹ ಹೊರತಾಗಿಲ್ಲ.
View this post on Instagram
~ & for my generation who grew up on linkin’ park..coz in the end, it doesn’t even matter🤷🏻♀️!
Vaishnavi: ಕ್ಲಾಸಿ ಲುಕ್ನಲ್ಲಿ ಕಾಣಿಸಿಕೊಂಡ ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ..!
ಸಂತೋಷ್ ಜಿ ನಿರ್ದೇಶನದ ಸಿನಿಮಾಗೆ ಮೇಘನಾ ನಾಯಕಿಯಾಗಿದ್ದಾರೆ. ಸಂತೋಷ್ ಈ ಹಿಂದೆ ಕಿರು ಚಿತ್ರವನ್ನು ನಿರ್ದೇಶನ ಮಾಡಿ ಅನೇಕ ಪ್ರಶಸ್ತಿಯನ್ನು ಪಡೆದಿದ್ದಾರಂತೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ ಆಗಿದೆಯಂತೆ. ಇನ್ನು 'ಕರ್ವ-3' ಹಾರರ್ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ. ವಿಶಾಲ್ ಶೇಖರ್ ನಿರ್ದೇಶನ 'ಕರ್ವ 3' ಚಿತ್ರದ ಕಥೆ ಕೇಳಿದ ಕೂಡಲೇ ಓಕೆ ಮಾಡಿದ್ದಾರಂತೆ. ಈ ಸಿನಿಮಾದಲ್ಲಿ ತಿಲಕ್ ಸಹ ನಟಿಸುತ್ತಿದ್ದಾರೆ.
ಇದನ್ನೂ ಓದಿ: Namrata Shirodkar: ಅರಿಶಿಣ ಶಾಸ್ತ್ರದ ಫೋಟೋ ಹಂಚಿಕೊಂಡ ಪ್ರಿನ್ಸ್ ಮಡದಿ ನಮ್ರತಾ ಶಿರೋಡ್ಕರ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ