Anitha EAnitha E
|
news18-kannada Updated:January 18, 2021, 12:57 PM IST
ಲೈಗರ್ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಲುಕ್
ಟಾಲಿವುಡ್ ರೌಡಿ ವಿಜಯ್ ದೇವರಕೊಂಡ (Vijay Devarakonda)ವರ್ಲ್ಡ್ ಫೇಮಸ್ ಲವರ್ ನಂತಹ ಫ್ಲಾಪ್ ಸಿನಿಮಾ ಕೊಟ್ಟ ನಂತರ ಈಗ ಪೂರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಹೊಸ ಚಿತ್ರ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾದಲ್ಲಿ ರೌಡಿಗೆ ನಾಯಕಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ. ಪೂರಿ ಜಗನ್ನಾಥ್ ಈ ಚಿತ್ರವನ್ನು ಪ್ರಕಟಿಸಿದಾಗ ಶೂಟಿಂಗ್ ಸೆಟ್ನಲ್ಲಿ ತೆಗೆದ ಕೆಲವು ಫೋಟೋಗಳು ವೈರಲ್ ಆಗಿದ್ದವು. ಪೂರಿ ಜಗನ್ನಾಥ್, ಚಾರ್ಮಿ ಹಾಗೂ ಧರ್ಮಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಮೊದಲು ಫೈಟರ್ ಎಂದು ಶೀರ್ಷಿಕೆ ಕೊಡಲು ನಿರ್ಧರಿಸಲಾಗಿತ್ತು. ಆದರೆ ಈ ಟೈಟಲ್ ಅನ್ನು ಬೇರೆ ಅಂದರೆ ಹೃತಿಕ್ ರೋಷನ್ ಅಭಿನಯದ ಚಿತ್ರತಂಡ ತೆಗೆದುಕೊಂಡ ಕಾರಣದಿಂದ ಈಗ ಪೂರಿ ಜಗನ್ನಾಥ್ ತಮ್ಮ ಸಿನಿಮಾಗೆ ಲೈಗರ್ (Liger) ಎಂದು ಟೈಟಲ್ ಕೊಟ್ಟಿದ್ದಾರೆ.
ಪೂರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಪ್ಯಾನ್ ಇಂಡಿಯಾ ಚಿತ್ರವಾಗಿರುವ ಕಾರಣ ಈ ಚಿತ್ರಕ್ಕೆ ತುಂಬಾ ಹುಡುಕಿ ಹಾಗೂ ಯೋಚಿಸಿ ಲೈಗರ್ (Liger) ಎಂದು ಶೀರ್ಷಿಕೆ ನೀಡಲಾಗಿದೆಯಂತೆ.
ಪೂರಿ ಜಗನ್ನಾಥ್ ಹಾಗೂ ಚಾರ್ಮಿ ಜೊತೆ ಸಹ ನಿರ್ಮಾಪಕನಾಗಿ ಕರಣ್ ಜೋಹರ್ ಸಹ ಲೈಗರ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಈ ಸನಿಮಾ ಹಿಂದಿ ಹಾಗೂ ತೆಲುಗಿನ ಜೊತೆಗೆ ಭಾರತದ ಇತರೆ ಪ್ರಮುಖ ಭಾಷೆಗಳಲ್ಲೂ ತೆರೆ ಕಾಣಲಿದೆ. ವಿಜಯ್ ದೇವರಕೊಂಡ ಅಭಿನಯದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ.
ಈ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ವಿಜಯ್ ದೇವರಕೊಂಡ ಅಭಿಮಾನಿಗಳು ಲೈಗರ್ ಹಾಗೂ ವಿಜಯ್ ದೇವರಕೊಂಡ ಹೆಸರನ್ನು ಟ್ವಿಟರ್ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಿಲೀಸ್ ಆಯ್ತು ನಟ ವಿಕ್ಕಿ ವರುಣ್ ಅಭಿನಯದ ಕಾಲಾಪತ್ಥರ್ ಚಿತ್ರದ ಫಸ್ಟ್ಲುಕ್ ಪೋಸ್ಟರ್
ಲೈಗರ್ ಎಂದರೆ ಹುಲಿ ಹಾಗೂ ಸಿಂಹಕ್ಕೆ ಹುಟ್ಟಿದ ಮರಿಯನ್ನು ಲೈಗರ್ ಎಂದು ಕರೆಯಲಾಗುತ್ತದೆಯಂತೆ. ಅದರಂತೆ ಈ ಸಿನಿಮಾ ಟೈಟಲ್ ಪೋಸ್ಟರ್ನಲ್ಲಿ ಬಾಕ್ಸಿಂಗ್ ಗ್ಲೌಸ್ ತೊಟ್ಟ ವಿಜಯ್ ದೇವರಕೊಂಡ ಲುಕ್ ಸಖತ್ತಾಗಿದೆ. ಜೊತೆಗೆ ಪೋಸ್ಟರ್ನಲ್ಲಿ ಸಿಂಹ ಹಾಗೂ ಹುಲಿಯ ಚಿತ್ರಗಳೂ ಇವೆ. ಅಂದರೆ ಸಿನಿಮಾದ ನಾಯಕನಲ್ಲಿ ಈ ಎರಡೂ ಪ್ರಾಣಿಗಳ ಗುಣವಿರಲಿದೆಯಂತೆ.
ಈ ಸಿನಿಮಾದ ಚಿತ್ರೀಕರಣ ಮುಂಬೈ ಸೇರಿದಂತೆ ವಿದೇಶಗಳಲ್ಲೂ ನಡೆಯುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಸುನೀಲ್ ಶೆಟ್ಟಿ ಸಹ ನಟಿಸಲಿದ್ದಾರಂತೆ. ಡಾನ್ ಪಾತ್ರದಲ್ಲಿ ಸುನೀಲ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರಂತೆ. ಆದರೆ ಅವರದ್ದು ಕೇವಲ 15 ನಿಮಿಷಗಳು ಬಂದು ಹೋಗುವ ಪಾತ್ರವೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ: V Doraswami Raju Passes Away: ಖ್ಯಾತ ನಿರ್ಮಾಪಕ ವಿ ದೊರಸ್ವಾಮಿ ರಾಜು ನಿಧನ: ಶೋಕದಲ್ಲಿ ಟಾಲಿವುಡ್.!
ಲೈಗರ್ ಸಿನಿಮಾದ ಚಿತ್ರೀಕರಣವನ್ನು ಬ್ಯಾಂಕಾಕ್ನಲ್ಲಿ ಮಾಡವ ಪ್ಲಾನ್ನಲ್ಲಿ ಪೂರಿ ಜಗನ್ನಾಥ್ ಇದ್ದರೆ, ಅದಕ್ಕೂ ಮೊದಲು ಹೂದರಾಬಾದಿನಲ್ಲಿ ನಿರ್ಮಿಸಿರುವ ಸೆಟ್ನಲ್ಲಿ ಶೂಟಿಂಗ್ ನಡೆಯಲಿದೆಯಂತೆ. ಬಾಕ್ಸಿಂಗ್ ದೃಶ್ಯಗಳ ಚಿತ್ರೀಕರಣಕ್ಕಾಗಿ ಪ್ರತ್ಯೇಕ ಸೆಟ್ ನಿರ್ಮಿಸಲಾಗಿದದ್ದು, ಇದರಲ್ಲಿ ಬಾಕ್ಸಿಂಗ್ ಫೈಟ್ ನಡೆಯಲಿದೆಯಂತೆ.

ವಿಜಯ್ ದೇವರಕೊಂಡ
ಇನ್ನು ವಿಜಯ್ ದೇವರಕೊಂಡ ಡಾನ್ ಮಗನಾಗಿ ನಟಿಸುತ್ತಿದ್ದು, ಅಪ್ಪ-ಮಗನ ನಡುವಿನ ಸಂಬಂಧ ಸರವತ್ತಾಗಿ ಸಾಗುತ್ತದೆಯಂತೆ. ಇನ್ನು ಈ ಹಿಂದೆಯೇ ವಿಜಯ್ ದೇವರಕೊಂಡ ಅವರಿಗೆ ಕರಣ್ ಜೋಹರ್ ಸಿನಿಮಾದಲ್ಲಿ ನಟಿಸುವಂತೆ ಆಫರ್ ಕೊಟ್ಟಿದ್ದರು. ಆದರೆ ಆಗ ಅದನ್ನು ತಿರಸ್ಕರಿಸಿದ್ದ ರೌಡಿ ವಿಜಯ್ ದೇವರಕೊಂಡ, ಈಗ ಪೂರಿ ಜಗನ್ನಾಥ್ ಅವರ ನಿರ್ದೇಶನ ಎಂಧ ಕೊಡಲೇ ಒಪ್ಪಿಕೊಂಡಿದ್ದಾರೆ. ಇನ್ನು ಸುಕುಮಾರ್ ನಿರ್ದೇಶನದಲ್ಲಿ ವಿಜಯ್ ದೇವರಕೊಂಡ ಹೊಸ ಸಿನಿಮಾ ಓಕೆ ಮಾಡಿದ್ದಾರೆ. ಈ ಸಂಬಂಧ ಈಗಾಗಲೇ ಅಧಿಕೃತವಾಗಿ ಪ್ರಕಟಣೆ ಸಹ ಹೊರ ಬಿದ್ದಿದೆ. ಆದರೆ ಚಿತ್ರದ ಟೈಟಲ್ ಹಾಗೂ ಇತರೆ ವಿವರಗಳು ಇನ್ನು ಮುಂದೆ ಬಹಿರವಾಗಬೇಕಿದೆ.
Published by:
Anitha E
First published:
January 18, 2021, 12:41 PM IST