Andhadhun ಚಿತ್ರದ ತೆಲುಗು-ಮಲಯಾಳಂ ರೀಮೇಕ್‌ಗಳಲ್ಲಿನ ಮಿಸ್ಸಿಂಗ್​​ ಅಂಶಗಳು..!

'ಅಂಧಾಧುನ್', 'Maestro' ಹಾಗೂ 'ಭ್ರಮಂ' ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ಸ್ತ್ರೀ ಪಾತ್ರವನ್ನು ನಿರ್ವಹಿಸುವ ನಟಿಯರದ್ದಾಗಿದೆ. ಹಿಂದಿ ಚಿತ್ರದಲ್ಲಿ 47ರ ಹರೆಯದ ಟಬು ಚಿತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಚಿತ್ರದ ಸನ್ನಿವೇಶಕ್ಕೆ ಅವರ ವಯಸ್ಸು ಸೂಕ್ತವಾಗಿದೆ. 'ಮೇಸ್ಟ್ರೋ'ನಲ್ಲಿ ಟಬು ಬದಲಿಗೆ ತಮನ್ನಾ ನಟಿಸಿದ್ದರೆ, ಮಲಯಾಳಂನಲ್ಲಿ ಮಮತಾ ಮೋಹನ್‌ದಾಸ್ ನಟಿಸಿದ್ದಾರೆ.

ಅಂಧಾಧುನ್​ ಚಿತ್ರದ ಮಲಯಾಳಂ ರಿಮೇಕ್​ ಭ್ರಮಂ ಸಿನಿಮಾದಲ್ಲಿ  ಪೃಥ್ವಿರಾಜ್ ಸುಕುಮಾರನ್​

ಅಂಧಾಧುನ್​ ಚಿತ್ರದ ಮಲಯಾಳಂ ರಿಮೇಕ್​ ಭ್ರಮಂ ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್​

  • Share this:
ಸಿನಿಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ಶ್ರೀರಾಮ್ ರಾಘವನ್ ನಿರ್ದೇಶನದ ಥ್ರಿಲ್ಲರ್ ಚಲನಚಿತ್ರ 'ಅಂಧಾಧುನ್‌' (Andhadhun). ಈ ಹಿಂದಿ ಸಿನಿಮಾವನ್ನು ತೆಲುಗು ಹಾಗೂ ಮಲಯಾಳಂನಲ್ಲಿ ರಿಮೇಕ್​ ಮಾಡಲಾಗಿದ್ದು, ವಾರಗಳ ಅಂತರಗಳಲ್ಲಿ ಒಟಿಟಿ ಮೂಲಕ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಗೊಂಡಿವೆ. ತೆಲುಗಿನಲ್ಲಿ ನಿತಿನ್ ಅಭಿನಯದ 'Maestro' ಸಿನಿಮಾ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸೆಪ್ಟೆಂಬರ್ 17ರಂದು ಬಿಡುಗಡೆಗೊಂಡಿದ್ದರೆ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್​ ಅಭಿನಯದ 'ಭ್ರಮಂ' ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅಕ್ಟೋಬರ್ 7ರಂದು ತೆರೆಕಂಡಿತು. 2018ರಲ್ಲಿ ಥಿಯೇಟರ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡು ಹಿಟ್ ಸಿನಿಮಾ ಎನಿಸಿಕೊಂಡಿತು 'ಅಂಧಾಧುನ್‌'. ಆದರೂ ಹಿಂದಿಯ 'ಅಂಧಾಧುನ್‌'ನ ಯಶಸ್ಸಿನಿಂದ  Viacom18 ಚಿತ್ರದ ರಿಮೇಕ್ ಹಕ್ಕುಗಳನ್ನು ಮಾರಾಟ ಮಾಡಿದ್ದು, ತಮಿಳಿನ ರಿಮೇಕ್‌ನಲ್ಲಿ ಪ್ರಶಾಂತ್ ಅಭಿನಯಿಸುತ್ತಿದ್ದು ಚಿತ್ರ ನಿರ್ಮಾಣ ಹಂತದಲ್ಲಿದೆ.

ನಿರ್ದೇಶಕರಾದ ಶ್ರೀರಾಮ್ ರಾಘವನ್ ಚಿತ್ರದಲ್ಲಿ ತಮ್ಮ ನಿರ್ದೇಶನ ಕೌಶಲ್ಯವನ್ನು ಅತ್ಯುತ್ತಮವಾಗಿ ಧಾರೆ ಎರೆದಿದ್ದು, ಸಂಗೀತ ಕೌಶಲ್ಯಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಕುರುಡನಂತೆ ನಟಿಸುವ ಸಂಗೀತಗಾರ ಆಕಾಶ್ ಕೊಲೆಯ ನಂತರದ ಪರಿಣಾಮಗಳಿಗೆ ತಿಳಿಯದೆಯೇ ಸಾಕ್ಷಿಯಾಗುತ್ತಾನೆ.


ಮಾಜಿ ಚಲನಚಿತ್ರ ನಟನೊಬ್ಬನ ಮನೆಯಲ್ಲಿ ನಟನ ಪತ್ನಿ ಸಿಮಿ ಹಾಗೂ ಆಕೆಯ ಪ್ರೇಮಿ ಮನೋಹರ್ ಅನ್ನು ನಟನ ಮೃತದೇಹದೊಂದಿಗೆ ಆಕಾಶ್ ನೋಡುತ್ತಾನೆ. ಈ ಕೊಲೆ ನಡೆದ ಸ್ಥಳದಿಂದ ಆಕಾಶ್ ತಪ್ಪಿಸಿಕೊಂಡರೂ ಕೊಲೆ ಪ್ರಕರಣದಲ್ಲಿ ಸಿಮಿ ಸಂಶಯಕ್ಕೆ ಕಾರಣವಾಗುತ್ತಾಳೆ. ಸಿಮಿ ಆಕಾಶ್‌ನನ್ನು ನಿಜವಾಗಿ ಕುರುಡಳನ್ನಾಗಿಸಿದಾಗ ಆಕಾಶ್‌ನ ನಿರುಪದ್ರವಿ ಯೋಜನೆಯು ಕೆಟ್ಟದಾಗಿ ಮಾರ್ಪಡುತ್ತದೆ. ಕಾನೂನು ಬಾಹಿರ ಅಂಗಾಂಗ ಚಟುವಟಿಕೆಗಳನ್ನು ನಡೆಸುವ ಒಬ್ಬಾತ ಸಿಮಿಯನ್ನು ಕೊಂದು ಆಕೆಯ ಕಣ್ಣುಗಳನ್ನು ಪುನಃ ಆಕಾಶ್‌ಗೆ ಅಳವಡಿಸುವ ಡೀಲ್ ಅನ್ನು ನೀಡುತ್ತಾನೆ. ಕಥೆ ಹೀಗೆ ಮುಂದುವರಿಯುತ್ತದೆ.

ಆಲಿವರ್ ಟ್ರೇನರ್‌ ಅವರ ಫ್ರೆಂಚ್ ಕಿರುಚಿತ್ರ 'L’Accordeur '(2010) ರಿಂದ 'ಅಂಧಾಧುನ್' ಚಿತ್ರ ಸ್ಫೂರ್ತಿ ಪಡೆದಿದೆ. ರಾಘವನ್, ಅರಿಜಿತ್ ಬಿಸ್ವಾಸ್, ಪೂಜಾ ಲಡ್ಜಾ ಸುರ್ತಿ, ಯೋಗೀಶ್ ಚಂದೇಕರ್, ಹೇಮಂತ್ ರಾವ್ ಮೊದಲಾದ ಬರವಣಿಗೆಗಾರರು ವಿಶ್ವಾಸಾರ್ಹತೆ ಮತ್ತು ಅಪನಂಬಿಕೆ ಅಡಚಣೆಗೊಳಿಸುವ ಸೂಕ್ಷ್ಮ ಮಿಶ್ರಣ ಸಿದ್ಧಪಡಿಸಿದ್ದಾರೆ. ಹೆಚ್ಚಿನ ಬುದ್ಧಿಯನ್ನು ಮತ್ತೆ ಬಳಸಿಕೊಂಡು ಚಿತ್ರದ ಬರವಣಿಗೆಗೆ ಜೀವಂತಿಕೆ ನೀಡಿದ್ದಾರೆ.

ಇದನ್ನೂ ಓದಿ: Dubaiನಲ್ಲಿ ರಾಕಿಂಗ್​ ಜೋಡಿ: Yash​-Radhika Pandit​ ಫೋಟೋ ವೈರಲ್​..!

ಆಕಾಶ್ ತನ್ನ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸುವುದು ಹಾಗೂ ಸಿಮಿ ತನ್ನ ಕೆಟ್ಟ ಕೆಲಸಗಳನ್ನು ಮುಚ್ಚಿಹಾಕಲು ಯತ್ನಿಸುವುದು ಚಿತ್ರದಲ್ಲಿ ಹಾಸ್ಯಮಯವಾಗಿ ಪ್ರದರ್ಶನಗೊಂಡಿದ್ದರೂ ವೀಕ್ಷಕರಿಗೆ ಚಿತ್ರವು ಎಲ್ಲಿಯೂ ಬೋರು ಹೊಡೆಸುವುದಿಲ್ಲ. ಪ್ರತಿಯೊಂದು ಪಾತ್ರಗಳನ್ನು, ಸನ್ನಿವೇಶಗಳನ್ನು ಕೂಲಂಕುಷವಾಗಿ ರಚಿಸಿದ್ದು ಚಿತ್ರದಲ್ಲಿ ಸಮತೋಲನ ಕಾಯ್ದುಕೊಂಡಿದೆ. ಆಕಾಶ್ ಆಗಿ ಆಯುಷ್ಮಾನ್ ಖುರಾನ, ಆತನ ಸ್ನೇಹಿತೆಯಾಗಿ ರಾಧಿಕಾ ಆಪ್ಟೆ, ಸಿಮಿಯ ಪ್ರೇಮಿ ಮನೋಹರ್ ಆಗಿ ಮಾನವ್ ವಿಜ್, ನಟಿಸಿದ್ದಾರೆ. ಅನಿಲ್ ಧವನ್‌ಗೆ ಧ್ವನಿಯಾಗಿ ಚಿತ್ರದ ತಿರುವನ್ನು ಬದಲಿಸಿರುವುದು ಪ್ರಮೋದ್ ಸಿನ್ಹಾ.

ಸಿನಿಮಾದಲ್ಲಿ ಅದ್ಭುತ ನಟನೆಗೆ ಸಾಕ್ಷಿಯಾಗಿರುವುದು ಸಿಮಿ ಪಾತ್ರಧಾರಿ ಟಬು. ಆಕೆಯ ಸುತ್ತವೇ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ. ಗಂಡನ ಕೊಲೆಗೆ ಪರೋಕ್ಷ ಕಾರಣವಾಗಿರುವ ಸಿಮಿ ಪ್ರೇಮಿಯ ಜೊತೆ ಸೇರಿ ಗಂಡನ ಕೊಲೆಗೆ ಕಾರಣವಾಗುತ್ತಾಳೆ.

ತೆಲುಗು ಹಾಗೂ ಮಲಯಾಳಂ ಆವೃತ್ತಿಗಳು ಹಿಂದಿಯ ಮೂಲ ಚಿತ್ರದೊಂದಿಗೆ ಹೋಲಿಕೆಗೆ ಒಳಪಡದಿದ್ದರೂ ಮೇಸ್ಟ್ರೋ ಕೆಲವೊಂದು ಮಾರ್ಪಾಡುಗಳೊಂದಿಗೆ ನಿತಿನ್ ಅಭಿನಯಕ್ಕೆ ತಕ್ಕ ನ್ಯಾಯ ಒದಗಿಸಿದೆ. ಆದರೆ ಮೂಲ ಚಿತ್ರದ ಕೆಲವೊಂದು ಸನ್ನಿವೇಶಗಳನ್ನು ತೆಲುಗಿನಲ್ಲಿ ಹಾಗೆಯೇ ಭಟ್ಟಿ ಇಳಿಸಿರುವುದು ಕಂಡುಬರುತ್ತದೆ. ಇನ್ನು 'ಭ್ರಮಂ' ಚಿತ್ರದಲ್ಲಿ ಕೂಡ ಕೆಲವೊಂದು ಮಾರ್ಪಾಡುಗಳನ್ನು ನಡೆಸಿದ್ದರೂ ಹಿಂದಿ ಚಿತ್ರಕ್ಕೆ ಹೋಲುವಂತೆಯೇ ಕಥೆಗಳನ್ನು ಬಿಚ್ಚಿಡಲಾಗಿದೆ.

ಇದನ್ನೂ ಓದಿ: Happy Birthday Pooja Hegde: ಬುಟ್ಟ ಬೊಮ್ಮ ಹಾಡಿಗೆ ಹೆಜ್ಜೆ ಹಾಕುತ್ತಾ ಕೇಕ್​ ಕತ್ತರಿಸಿದ ಪೂಜಾ ಹೆಗ್ಡೆ..!

'ಅಂಧಾಧುನ್', 'Maestro' ಹಾಗೂ 'ಭ್ರಮಂ' ನಡುವಿನ ಅತಿದೊಡ್ಡ ವ್ಯತ್ಯಾಸವೆಂದರೆ ಸ್ತ್ರೀ ಪಾತ್ರವನ್ನು ನಿರ್ವಹಿಸುವ ನಟಿಯರದ್ದಾಗಿದೆ. ಹಿಂದಿ ಚಿತ್ರದಲ್ಲಿ 47ರ ಹರೆಯದ ಟಬು ಚಿತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ. ಚಿತ್ರದ ಸನ್ನಿವೇಶಕ್ಕೆ ಅವರ ವಯಸ್ಸು ಸೂಕ್ತವಾಗಿದೆ. 'ಮೇಸ್ಟ್ರೋ'ನಲ್ಲಿ ಟಬು ಬದಲಿಗೆ ತಮನ್ನಾ ನಟಿಸಿದ್ದರೆ, ಮಲಯಾಳಂನಲ್ಲಿ ಮಮತಾ ಮೋಹನ್‌ದಾಸ್ ನಟಿಸಿದ್ದಾರೆ.


ಟಬುವಿನ ನಟನೆಗೆ ಹೋಲಿಸಿದಾಗ ಇವರಿಬ್ಬರೂ ಅಷ್ಟೊಂದು ಪರಿಪೂರ್ಣ ನಟನಾ ಕೌಶಲ್ಯವನ್ನು ಚಿತ್ರದಲ್ಲಿ ತೋರದೇ ಇರುವುದು ಗಮನಕ್ಕೆ ಬರುತ್ತದೆ. 'ಅಂಧಾಧುನ್‌'ನಲ್ಲಿ ಹಿರಿಯ ನಟಿಯಾಗಿ ಟಬುವನ್ನು ಆಯ್ಕೆಮಾಡಿರುವುದು ರಾಘವನ್ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ. ಗಂಭೀರ ಹಾಗೂ ಹಾಸ್ಯ ಎರಡರಲ್ಲೂ ಟಬು ಮಿಂಚಿದ್ದಾರೆ. ಚಿತ್ರದಲ್ಲಿ ವಿಲನ್ ಪಾತ್ರಧಾರಿಯಾಗಿ ಕಂಡುಬರುವ ಟಬು ತಮ್ಮ ನಟನಾ ಕೌಶಲ್ಯದ ಅನುಭವವನ್ನು ಪಾತ್ರಕ್ಕೆ ಎರಕ ಹೊಯ್ದಿದ್ದಾರೆ.

ಅಂಧಾಧುನ್‌'ನ ತಮಿಳು ರಿಮೇಕ್​ನಲ್ಲಿ ನಟಿ ಸಿಮ್ರನ್​

ತಮಿಳು ರಿಮೇಕ್ 'ಅಂಧಾಧುನ್‌'ನಲ್ಲಿ ಸಿಮಿ ಪಾತ್ರವನ್ನು 45 ರ ಹರೆಯದ ಸಿಮ್ರನ್ ನಿರ್ವಹಿಸಲಿದ್ದಾರೆ. ಇದು ಸ್ವಲ್ಪ 'ಅಂಧಾಧುನ್‌'ಗೆ ಹೋಲಿಕೆಯಾಗಿ ಬರಬಹುದೆಂಬ ನಿರೀಕ್ಷೆಯನ್ನು ಇರಿಸಿಕೊಳ್ಳಲಾಗಿದೆ. ಒಟ್ಟಿನಲ್ಲಿ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ 35ರ ನಂತರದ ಮಹಿಳೆಯರಿಗೆ ಚಿತ್ರಗಳಲ್ಲಿ ಪ್ರಧಾನ ಪಾತ್ರವನ್ನು ನೀಡಲಾಗುವುದಿಲ್ಲ. ತಾಯಿ, ಅತ್ತಿಗೆ ಮೊದಲಾದ ಪಾತ್ರಗಳಿಗೆ ಸೀಮಿತಗೊಳಿಸಲಾಗುತ್ತದೆ.

'ಅಂಧಾಧುನ್' ಚಿತ್ರದಲ್ಲಿ ಸಿಮಿ ಪಾತ್ರವನ್ನು ಬೋಲ್ಡ್ ಆಗಿ ತೋರಿಸಲಾಗಿದೆ. ಹಿಂದಿಯಲ್ಲಿ ಸಿಮಿ ಪಾತ್ರವನ್ನು ಹಿರಿಯ ಹಾಗೂ ಅನುಭವಿ ನಟಿ ಟಬು ನಿರ್ವಹಿಸಿದ್ದರೆ ಮಲಯಾಳಂ ಹಾಗೂ ತೆಲುಗಿನಲ್ಲಿ ಈ ಪಾತ್ರಕ್ಕಿರುವ ವಯಸ್ಸು ಹಾಗೂ ಅನುಭವ ಮಾಯವಾಗಿರುವುದು ಕಂಡುಬಂದಿದೆ.
Published by:Anitha E
First published: