Deepika Padukone: ಅಬ್ಬಾ.. ಚೊಚ್ಚಲ ತೆಲುಗು ಚಿತ್ರದಲ್ಲಿ ಪ್ರಭಾಸ್ ಜೊತೆ ನಟಿಸಲು ದೀಪಿಕಾ ಸಂಭಾವನೆ ಇಷ್ಟೊಂದಾ?

ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಹಾಲಿವುಡ್‌ನಲ್ಲೂ ಸಿನಿಮಾ ಮಾಡಿರುವ ದೀಪಿಕಾ ಇಷ್ಟು ಸಂಭಾವನೆ ಕೇಳಿರುವುದು ಅಚ್ಚರಿ ಏನಲ್ಲ ಎಂಬುದು ಹಲವರ ಅಭಿಪ್ರಾಯ.

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ.

ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ.

  • Share this:
    ‘ಐಶ್ವರ್ಯ’ಆಗಿ ಕನ್ನಡ ಬೆಳ್ಳಿತೆರೆ ಮೇಲೆ ಮಿನುಗಿ ‘ಓಂ ಶಾಂತಿ ಓಂ’ಎಂದು ಬಾಲಿವುಡ್​​ ಸೇರಿಕೊಂಡ ದೀಪಿಕಾ ಪಡುಕೋಣೆ ಮತ್ತೆ ಸೌತ್ ಇಂಡಸ್ಟ್ರಿಯತ್ತ ಮುಖ ಮಾಡಿರಲಿಲ್ಲ. ಕೆಲವರ್ಷಗಳ ಹಿಂದೆ ರಜಿನಿಕಾಂತ್​ ಜೊತೆ ಕೊಚಾಡಿಯನ್ ಎಂಬ ಆನಿಮೇಷನ್​ ಸಿನಿಮಾದಲ್ಲಿ ನಟಿಸಿದ್ದೇ ಕೊನೆ. ಆ ಬಳಿಕ ಬಾಲಿವುಡ್​ ಅಂಗಳದಲ್ಲಿ ರಾಣಿಯಾಗಿ ಮೆರೆಯುತ್ತಿರುವ ಪದ್ಮಾವತಿ, ಸದ್ಯ ಮತ್ತೆ ದಕ್ಷಿಣ ಸಿನಿಮಾಗಳತ್ತ ಮುಖಮಾಡಿದ್ದಾರೆ.

    ಪ್ರಭಾಸ್‌ ಜೊತೆಗಿನ ಹೊಸ ಸಿನಿಮಾದಲ್ಲಿ ದೀಪಿಕಾ ನಟಿಸುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಬ್ರೇಕ್‌ ಆಯಿತು. ಇದಾದ ಬೆನ್ನಲ್ಲೇ ಈ ಚಿತ್ರಕ್ಕೆ ದೀಪಿಕಾ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು ಎಂಬ ಚರ್ಚೆಯೂ ಜೋರಾಗಿ ಶುರುವಾಗಿದೆ.

    Deepika Padukone: ಪ್ರಭಾಸ್ ನಂತರ ಶಾರುಖ್​ಗೆ ಜೊತೆಯಾದ ದೀಪಿಕಾ; ಸಾಲು ಸಾಲು ಸಿನಿಮಾಗಳಲ್ಲಿ ಕರಾವಳಿ ಬೆಡಗಿ






    'ಮಹಾನಟಿ' ಖ್ಯಾತಿಯ ನಾಗ್‌ ಅಶ್ವಿನ್ ನಿರ್ದೇಶನ ಮಾಡುತ್ತಿರುವ ಪ್ರಭಾಸ್ ಅವರ 21ನೇ ಸಿನಿಮಾಗೆ ವೈಜಯಂತಿ ಮೂವೀಸ್‌ ಸಂಸ್ಥೆಯು ಬಂಡವಾಳ ಹೂಡುತ್ತಿದೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾ ತಯಾರಾಗುತ್ತಿರುವುದರಿಂದ ದೊಡ್ಡ ಮೊತ್ತದ ಸಂಭಾವನೆಯನ್ನೇ ದೀಪಿಕಾ ಡಿಮ್ಯಾಂಡ್‌ ಮಾಡಿದ್ದಾರೆ ಎನ್ನಲಾಗಿದೆ.

    ಮೊದಲ ಟಾಲಿವುಡ್​ ಚಿತ್ರಕ್ಕೆ ದೀಪಿಕಾ ಅವರು ಬರೋಬ್ಬರಿ 30 ಕೋಟಿ ಸಂಭಾವನೆ ಪಡೆಯುತ್ತಿದ್ದಾರಂತೆ. ಟಾಲಿವುಡ್​ನಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆ, ಎಲ್ಲರೂ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ದೀಪಿಕಾ ಸ್ಟಾರ್​ಗಿರಿಗೆ ಇಷ್ಟೊಂದು ಮೊತ್ತ ಕೊಡಬಹುದು ಎಂಬ ಮಾತುಗಳೂ ಚರ್ಚೆಯಲ್ಲಿವೆ.

    Prem: ನೆನಪಿರಲಿ ಪ್ರೇಮ್​ಗೆ ಜಾಕ್​ ಪಾಟ್​ ಹೊಡೆಯಲಿದೆಯಂತೆ: ಅದಕ್ಕೆ ಕಾರಣ ಏನು ಗೊತ್ತಾ..?

    ಆದರೆ, ಬಾಲಿವುಡ್‌ನಲ್ಲಿ ಮಾತ್ರವಲ್ಲದೆ, ಹಾಲಿವುಡ್‌ನಲ್ಲೂ ಸಿನಿಮಾ ಮಾಡಿರುವ ದೀಪಿಕಾ ಇಷ್ಟು ಸಂಭಾವನೆ ಕೇಳಿರುವುದು ಅಚ್ಚರಿ ಏನಲ್ಲ ಎಂಬುದು ಹಲವರ ಅಭಿಪ್ರಾಯ. ಆದರೆ ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

    ಪ್ರಭಾಸ್ ಸದ್ಯ ‘ರಾಧೆ ಶ್ಯಾಮ್​​​’ ಸಿನಿಮಾ ಶೂಟಿಂಗ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾ ಫಸ್ಟ್ ಲುಕ್ ರಿಲೀಸ್​​​ ಆಗಿದೆ. ಚಿತ್ರಪ್ರೇಮಿಗಳಿಂದ ಸಾಕಷ್ಟು ಪ್ರಶಂಸೆಯನ್ನ ಪಡೆದುಕೊಳ್ಳುತ್ತಿದೆ. ‘ರಾಧೆ ಶ್ಯಾಮ್​​​’ ಸಿನಿಮಾ ಶೂಟಿಂಗ್ ಮುಗಿದ ಬಳಿಕ ಪ್ರಭಾಸ್ 21ನೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ಸೈನ್ಸ್​​​ ಫಿಕ್ಷನ್​​​ ಆಕ್ಷನ್ ಸಿನಿಮಾವಾಗಿರಲಿದ್ದು, ಕಂಡು ಕೇಳರಿಯದ ಬಜೆಟ್​ನಲ್ಲಿ ರೂಪುಗೊಳ್ಳಲಿದೆಯಂತೆ.
    Published by:Vinay Bhat
    First published: