• Home
  • »
  • News
  • »
  • entertainment
  • »
  • Rajinikanth: ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ? ವೇದಿಕೆ ಮೇಲೆ ರಿವೀಲ್ ಆಯ್ತು ಕಾರಣ!

Rajinikanth: ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ? ವೇದಿಕೆ ಮೇಲೆ ರಿವೀಲ್ ಆಯ್ತು ಕಾರಣ!

ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ?

ಪುನೀತ್ ನಿಧನರಾದಾಗ ರಜನಿಕಾಂತ್ ಯಾಕೆ ಬಂದಿರಲಿಲ್ಲ?

ಅಪ್ಪು ನಿಧನರಾದಾಗ ಭಾರತೀಯ ಚಿತ್ರರಂಗದ ಗಣ್ಯರು ಬೆಂಗಳೂರಿಗೆ ಬಂದು, ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದಿದ್ದರು. ಆದರೆ ಸೂಪರ್ ಸ್ಟಾರ್ ರಜನಿಕಾಂತ್ ಮಾತ್ರ ಬಂದಿರಲಿಲ್ಲ. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಂದು ಯಾಕೆ ಬಂದಿರಲಿಲ್ಲ ಎನ್ನುವುದಕ್ಕೆ ರಜನಿಕಾಂತ್ ಇಂದು ಕಾರಣ ತಿಳಿಸಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕರ್ನಾಟಕ ರತ್ನ, ಡಾ. ಪುನೀತ್ ರಾಜ್‌ಕುಮಾರ್ (Karnataka Ratna Dr. Puneeth Rajkumar) ಅವರು ಅಗಲಿ ಒಂದು ವರ್ಷವಾಗಿದೆ. ಎಲ್ಲರೊಡನೆ ನಗುನಗುತ್ತಾ, ಫಿಟ್ ಆ್ಯಂಡ್ ಫೈನ್ (Fit and Fine) ಆಗಿದ್ದ ಪುನೀತ್, ಏಕಾಏಕಿ ನಮ್ಮನ್ನು ಬಿಟ್ಟು ಹೊರಟೇ ಬಿಟ್ಟಿರು. ಇದು ಅವರ ಕುಟುಂಬಕ್ಕಷ್ಟೇ ಅಲ್ಲ, ಇಡೀ ಕರ್ನಾಟಕದ (Karnataka) ಜನರಿಗೆ, ಅವರ ಅಪಾರ ಅಭಿಮಾನಿಗಳಿಗೆ (Fans) ಭರಿಸಲಾರದ ದುಃಖ ನೀಡಿತ್ತು. ಅಷ್ಟೇ ಅಲ್ಲ ಭಾರತೀಯ ಚಿತ್ರರಂಗಕ್ಕೂ (Indian Film Industry) ಈ ಶಾಕ್ ಅರಗಿಸಿಕೊಳ್ಳಲು ಸ್ವಲ್ಪ ಸಮಯವೇ ಬೇಕಾಯ್ತು. ಅಪ್ಪು ಅಂತಿಮ ದರ್ಶನಕ್ಕೆ ಬಂದವರು ಅದೆಷ್ಟೋ ಮಂದಿ. ಇನ್ನು ಬರೀ ಕನ್ನಡ ಚಿತ್ರರಂಗವಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಗಣ್ಯರು ಬೆಂಗಳೂರಿಗೆ ಬಂದು, ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನ ಪಡೆದರು. ಆದರೆ ಸೂಪರ್ ಸ್ಟಾರ್ ರಜನಿಕಾಂತ್ (Super Star Rajinikanth) ಮಾತ್ರ ಬಂದಿರಲಿಲ್ಲ. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ರಾಜ್‌ ಫ್ಯಾಮಿಲಿಗೆ (Dr. Rajkumar Family) ಹತ್ತಿರದವರಾದ, ಪುನೀತ್ ರಾಜ್‌ಕುಮಾರ್ ಅವರ ಪ್ರೀತಿಗೆ ಪಾತ್ರರಾಗಿದ್ದ ತಲೈವಾ ಹಾಗ್ಯಾಕೆ ಮಾಡಿದ್ರು? ಇದೀಗ ಈ ಪ್ರಶ್ನೆಗೆ, ಕುತೂಹಲಕ್ಕೆ ಖುದ್ದು ರಜನಿಕಾಂತ್ ಅವರೇ ಉತ್ತರಿಸಿದ್ದಾರೆ.  


ಕಾರಣ ತಿಳಿಸಿದ ರಜನಿಕಾಂತ್


ಇಂದು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ ರಾಜ್ಯ ಸರ್ಕಾರದಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸೂಪರ್ ಸ್ಟಾರ್ ರಜನಿಕಾಂತ್, ತೆಲುಗು ಖ್ಯಾತ ನಟ ಜ್ಯೂನಿಯರ್ ಎನ್‌ಟಿಆರ್ ಹಾಗೂ ಇನ್ಫೋಸಿಸ್‌ನ ಸುಧಾಮೂರ್ತಿ ನೇತೃತ್ವದಲ್ಲಿ ಅಪ್ಪುಗೆ ಮರಣೋತ್ತರವಾಗಿ ಕರ್ನಾಟಕ ರತ್ನ ನೀಡಲಾಯ್ತು. ಈ ವೇದಿಕೆ ಮೇಲೆ ಮಾತನಾಡಿದ ರಜನಿಕಾಂತ್, ಪುನೀತ್ ರಾಜ್‌ಕುಮಾರ್ ನಿಧನರಾದಾಗ ತಾವ್ಯಾಕೆ ಅವರನ್ನು ನೋಡೋದಕ್ಕೆ ಬರಲಿಲ್ಲ. ತಾವ್ಯಾಕೆ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿಲ್ಲ ಎನ್ನುವ ಬಗ್ಗೆ ಕಾರಣ ತಿಳಿಸಿದ್ದಾರೆ.
ಪುನೀತ್ ನಿಧನರಾದಾಗ ಆಸ್ಪತ್ರೆಯಲ್ಲೇ ಇದ್ರಂತೆ ರಜನಿಕಾಂತ್!


ಪುನೀತ್ ರಾಜ್‌ಕುಮಾರ್ ಕಳೆದ 2021ರ ಅಕ್ಟೋಬರ್ 29ರಂದು ನಿಧನರಾದರು. ಅದೇ ಟೈಮ್‌ನಲ್ಲಿ ಅತ್ತ ರಜನಿಕಾಂತ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಕೂಡ ಮಾಡಲಾಗಿತ್ತಂತೆ.


ಇದನ್ನೂ ಓದಿ: Rajinikanth: ಅಪ್ಪು ದೇವರ ಮಗು ಎಂದ ರಜನಿಕಾಂತ್, ವೇದಿಕೆ ಮೇಲೆ ರಾಜ್‌ ಸ್ಮರಿಸಿಕೊಂಡ ಸೂಪರ್ ಸ್ಟಾರ್


ಮೂರು ದಿನಗಳ ಬಳಿಕ ರಜನಿಗೆ ವಿಷ್ಯ ಗೊತ್ತಾಯ್ತಂತೆ!


ರಜನಿಕಾಂತ್ ಫ್ಯಾಮಿಲಿಯವರಿಗೆ ಪುನೀತ್ ರಾಜ್‌ಕುಮಾರ್ ನಿಧನರಾದ ವಿಚಾರ ಗೊತ್ತಾಗಿದೆ. ಆದರೆ ರಜನಿಕಾಂತ್ ಐಸಿಯುನಲ್ಲಿ ಇರುವುದರಿಂದ ಅವರಿಗೆ ಹೇಳಿದರೆ ಆಘಾತಕ್ಕೆ ಒಳಗಾಗಬಹುದು ಅಂತ ಈ ವಿಚಾರ ತಿಳಿಸದೇ ಇರಲು ಕುಟುಂಬಸ್ಥರು ನಿರ್ಧರಿಸಿದ್ದರಂತೆ. ಹೀಗಾಗಿ ಅಪ್ಪು ಇನ್ನಿಲ್ಲ ಎಂಬ ವಿಚಾರ ರಜನಿಗೆ ಗೊತ್ತಾಗಿದ್ದು 3 ದಿನಗಳ ನಂತರವಂತೆ!


“ನಂಗೆ ನಂಬೋದಕ್ಕೆ ಆಗಿಲ್ಲ”


ವಿಚಾರ ಗೊತ್ತಾದಾಗ ನನಗೆ ನಂಬೋದಕ್ಕೇ ಆಗೋದಿಲ್ಲ. ನಾನು ಪುನೀತ್‌ಗೆ 35ರಿಂದ 37 ವರ್ಷ ಇರಬೇಕು ಅಂದಕೊಂಡಿದ್ದೆ. ಆದ್ರೆ ಅವರು ತೀರಿಕೊಂಡಾಗಲೇ 46 ವರ್ಷವಾಗಿತ್ತು ಅಂತ ಗೊತ್‌ತಾಯಿತು ಅಂತ ರಜನಿಕಾಂತ್ ಅಚ್ಚರಿಪಟ್ರು.


“ನನ್ನ ಕಣ್ಣಲ್ಲಿ ಪುನೀತ್ ಇನ್ನೂ ಚಿಕ್ಕ ಮಗು ತರಾನೇ ಇದ್ದಾನೆ”


ಅನಾರೋಗ್ಯದಿಂದಾಗಿ ಪುನೀತ್ ತೀರಿಕೊಂಡಾಗ ನಾನು ಬರಲಿಲ್ಲ ಎಂದ ರಜನಿಕಾಂತ್, ನಾನು ಬಂದಿದ್ದರೂ ಅವರನ್ನು ನೋಡೋದಕ್ಕೆ ಧೈರ್ಯವಾಗುತ್ತಿರಲಿಲ್ಲ. ನಾನು ಅವರನ್ನು ಮೊದಲು ನೋಡಿದ್ದು 4 ವರ್ಷದ ಮಗುವಾಗಿದ್ದಾಗ. ಅವರಿನ್ನೂ ಮಗುವಿನಂತೆ ನನ್ನ ಮನಸ್ಸಿನಲ್ಲಿ ಇದ್ದಾರೆ. ಆ ನೋಟವನ್ನು ಕಳೆದುಕೊಳ್ಳಲು ನಾನು ಇಷ್ಟಪಡುವುದಿಲ್ಲ ಅಂತ ರಜನಿಕಾಂತ್ ವೇದಿಕೆ ಮೇಲೆ ಭಾವುಕರಾದರು.


ಇದನ್ನೂ ಓದಿ: Rajinikanth: ರಜನಿಕಾಂತ್ ಮೇಲೆ ಹಣದ ಹೊಳೆ ಸುರಿಸಲು ಅಭಿಮಾನಿ ಪ್ಲಾನ್​; ತಲೈವಾಗಾಗಿ ಕಾದು ಕುಳಿತ ಫ್ಯಾನ್​


ಅಪ್ಪು ದೇವರ ಮಗು ಎಂದ ರಜನಿಕಾಂತ್


ಪುನೀತ್ ರಾಜ್‌ಕುಮಾರ್ ಎಲ್ಲಿಯೂ ಹೋಗಿಲ್ಲ. ಅಪ್ಪು ದೇವರ ಮಗು. ಆ ದೇವರ ಮಗು ನಮ್ಮ ಜೊತೆ ಬಂದು, ಸ್ವಲ್ಪ ದಿನ ಆಟ ಆಡಿ, ತನ್ನ ಲೀಲೆಯನ್ನು ತೋರಿ ಮತ್ತೆ ದೇವರ ಬಳಿಯೇ ಹೋಗಿದೆ. ಆತ ಎಲ್ಲಿಯೂ ಹೋಗಿಲ್ಲ, ನಮ್ಮ ನಡುವೆಯೇ ಇದ್ದಾನೆ. ಆ ತನ್ನ ಸಿನಿಮಾದ ಮೂಲಕ, ತನ್ನ ಸಮಾಜ ಸೇವೆ ಮೂಲಕ ಅಮರರಾಗಿ ಇರುತ್ತಾನೆ ಅಂತ ರಜನಿ ಶ್ಲಾಘಿಸಿದರು.

Published by:Annappa Achari
First published: