Rashmika Mandanna: ಬಾಲಿವುಡ್ ರ್ಯಾಪರ್ ಬಾದ್ ಶಾರ ಟಾಪ್ ಟಕ್ಕರ್ ಮ್ಯೂಸಿಕ್ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ..!
Top Tucker Music Video: ರಶ್ಮಿಕಾ ಮಂದಣ್ಣ ಬಾಲಿವುಡ್ನ ಗಾಯಕ ಹಾಗೂ ರ್ಯಾಪರ್ ಬಾದ್ ಶಾ ಅವರ ಹೊಸ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ರ್ಯಾಪರ್ ಬಾದ್ ಶಾ ಅವರ ಹಿಂದಿನ ಆಲ್ಬಂಗಳು ಸೂಪರ್ ಹಿಟ್ ಆಗಿವೆ. ಈ ಹಿಂದೆ ಸೋನಮ್ ಕಪೂರ್, ಜಾಕ್ವೆಲಿನ್ ನಂತಹ ಬಾಲಿವುಡ್ ಹಾಟ್ ನಾಯಕಿಯರು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಶ್ಮಿಕಾರ ಸರದಿ.

ಟಾಪ್ ಟಕ್ಕರ್ ಮ್ಯೂಸಿಕ್ ವಿಡಿಯೋದಲ್ಲಿ ರಶ್ಮಿಕಾ ಮಂದಣ್ಣ
- News18 Kannada
- Last Updated: January 13, 2021, 4:21 PM IST
ರಶ್ಮಿಕಾ ಮಂದಣ್ಣ ಬಾಲಿವುಡ್ನ ಗಾಯಕ ಹಾಗೂ ರ್ಯಾಪರ್ ಬಾದ್ ಶಾ ಅವರ ಹೊಸ ಮ್ಯೂಸಿಕ್ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಖ್ಯಾತ ರ್ಯಾಪರ್ ಬಾದ್ ಶಾ ಅವರ ಹಿಂದಿನ ಆಲ್ಬಂಗಳು ಸೂಪರ್ ಹಿಟ್ ಆಗಿವೆ. ಈ ಹಿಂದೆ ಸೋನಮ್ ಕಪೂರ್, ಜಾಕ್ವೆಲಿನ್ ನಂತಹ ಬಾಲಿವುಡ್ ಹಾಟ್ ನಾಯಕಿಯರು ಮ್ಯೂಸಿಕ್ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಶ್ಮಿಕಾರ ಸರದಿ.
TOP TUCKER
“Fantastic song”
விரைவில்@Its_Badshah @jonitamusic @Saga_hits @SumeetSinghM @iamRashmika @thisisysr @yrf @mtvbeats @feverfmofficial @Uchanaamit pic.twitter.com/X2YPbuvDfB
— BADSHAH 2.0 (@Its_Badshah) January 13, 2021
ಕಳೆದ ವಾರಷ್ಟೆ ಗಾಯಕ ಬಾದ್ ಶಾ ತಮ್ಮ ಹೊಸ ಮ್ಯೂಸಿಕ್ ವಿಡಿಯೋ ಟಾಪ್ ಟಕ್ಕರ್ ಬಗ್ಗೆ ಪ್ರಕಟಿಸಿದ್ದರು. ಅದರ ಟೀಸರ್ ಕಪಿಲ್ ಶರ್ಮಾ ಶೋನಲ್ಲಿ ರಿಲೀಸ್ ಆಗಲಿದೆ ಎಂದು ಹೇಳಿದ್ದರು. ಅದೇ ವಿಷಯವನ್ನು ರಶ್ಮಿಕಾ ಸಹ ತಮ್ಮ ಇನ್ಸ್ಟಾ ಸ್ಟೋರೀಸ್ನಲ್ಲಿ ಹಂಚಿಕೊಂಡಿದ್ದರು. ಈಗ ಈ ಹಾಡಿನ ಪೋಸ್ಟರ್ ಅನ್ನು ಲಿಲ್ಲಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
Ladies and gentlemen presenting to you. 🗣 🥳✨@Its_Badshah @jonitamusic @AmitUchana @Saga_Hits @SumeetSinghM @thisisysr @yrf @MTVBeats @FeverFMOfficial pic.twitter.com/0xBJymd1Td
— Rashmika Mandanna (@iamRashmika) January 13, 2021
ಟಾಪ್ ಟಕ್ಕರ್ ಮ್ಯೂಸಿಕ್ ವಿಡಿಯೋ ಸದ್ಯದಲ್ಲೇ ಯೂಟ್ಯೂಬ್ನಲ್ಲಿ ರಿಲೀಸ್ ಆಗಲಿದೆ. ರಿಲೀಸ್ ಮಾಡಲಾಗಿರುವ ಪೋಸ್ಟರ್ನಲ್ಲಿ ರಶ್ಮಿಕಾ ಸಖತ್ ಟ್ರೆಂಡಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಾಡಿನ ಚಿತ್ರೀಕರಣ ಚಂಡೀಗಡದಲ್ಲಿ ನಡೆದಿದೆ.
— Rashmika Mandanna (@iamRashmika) December 23, 2020
ಇತ್ತೀಚೆಗಷ್ಟೆ ತಮ್ಮ ಮೊದಲ ಬಾಲಿವುಡ್ ಸಿನಿಮಾ ಬಗ್ಗೆ ಅಧಿಕೃತವಾಗಿ ಪ್ರಕಟಿಸಿದ್ದು ತಿಳಿದೇ ಇದೆ. ಸಿದ್ಧಾರ್ಥ್ ಮಲ್ಹೋತ್ರ ಜತೆ ಮಿಷನ್ ಮಜ್ನು ಚಿತ್ರದಲ್ಲಿ ನಾಯಕಿಯಾಗಿ ಬಿ-ಟೌನ್ ಮಂದಿಗೆ ಪರಿಚಯವಾಗಲಿದ್ದಾರೆ. ಈ ಸಿನಿಮಾದ ಕೆಲಸದ ಮೇಲೆ ರಶ್ಮಿಕಾ ಸದ್ಯ ಮುಂಬೈನಲ್ಲೇ ಇದ್ದಾರೆ. ಜೊತೆಗೆ ನಿರ್ಮಾಪಕ ಚಾಬ್ರಿಯಾ ಅವರನ್ನು ಭೇಟಿಯಾಗಿದ್ದಾರೆ.
View this post on Instagram
ಬಾಲಿವುಡ್ನ ಬಿಗ್-ಬಿ ಅಮಿತಾಭ್ ಬಚ್ಚನ್ ಜೊತೆ ರಶ್ಮಿಕಾ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಕಾಸ್ ಬಾಲ್ ನಿರ್ದೇಶನದ ಮುಂದಿನ ಚಿತ್ರದಲ್ಲಿ ರಶ್ಮಿಕಾ, ಅಮಿತಾಭ್ ಅವರ ಮಗಳ ಪಾತ್ರದಲ್ಲಿ ನಟಿಸೋದು ಖಚಿತವಾಗಿದೆಯಂತೆ. ವಿಕಾಸ್ ಬಾಲ್ ಅವರ ಈ ಸಿನಿಮಾ ಹಾಸ್ಯ ಪ್ರಧಾನವಾಗಿದ್ದು, ಇದರಲ್ಲಿ ಅಮಿತಾಭ್ ಹಾಗೂ ರಶ್ಮಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರಂತೆ. ಇವರ ಜೊತೆ ನೀನಾ ಗುಪ್ತಾ ಸೇರಿದಂತೆ ಇನ್ನು ಕೆಲವರು ತಾರಾಗಣದಲ್ಲಿ ಇರಲಿದ್ದಾರೆ ಎಂದು ಚಿತ್ರತಂಡದ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆಯಂತೆ.
ಇದನ್ನೂ ಓದಿ: ರೈಡರ್ ನಿಖಿಲ್ ಕುಮಾರಸ್ವಾಮಿ ಕಡೆಯಿಂದ ಸಿಕ್ತು ಹೊಸ ಅಪ್ಡೇಟ್: ಯುವರಾಜನ ಬರ್ತ್ಡೇಗೆ ಸಿಗಲಿದೆ ಉಡುಗೊರೆ
2016ರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ರಶ್ಮಿಕಾ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟರು, ನಂತರ ತೆಲುಗಿನಲ್ಲಿ ಚಲೋ ಸಿನಿಮಾದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದರು. ಅಲ್ಲಿಂದ ಆರಂಭವಾದ ಲಿಲ್ಲಿಯ ಟಾಲಿವುಡ್ ಪಯಣ ನಿಲ್ಲದಂತೆ ಸಾಗುತ್ತಿದೆ. ಆಡವಾಳ್ಳು ಮೀಕು ಜೋಹಾರುಲು ಸಿನಿಮಾದಲ್ಲಿ ಶರ್ವಾನಂದ ಜೊತೆ ರಶ್ಮಿಕಾ ನಾಯಕಿಯಾಗಿ ಹೊಸ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
My next film is titled #AadaallooMeekuJohaarlu to be directed by Kishore Tirumala and co starting @iamRashmika 😊
Produced by @SLVCinemasOffl
More Details Soon 😁 pic.twitter.com/nerTTlh987
— Sharwanand (@ImSharwanand) October 25, 2020
ಸದ್ಯ ತೆಲುಗಿನಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ರಶ್ಮಿಕಾಗೆ ಕೈ ತುಂಬ ಅವಕಾಶಗಳಿವೆ. ಅಲ್ಲದೆ ತಮಿಳಿನಲ್ಲೂ ಅವಕಾಶಗಳು ಅರಸಿ ಬರುತ್ತಿವೆ. ಕಾರ್ತಿ ಜೊತೆ ಅಭಿನಯಿಸಿರುವ ಸುಲ್ತಾನ್ ತೆರೆಗೆ ಬರಲು ಸಿದ್ಧವಾಗಿದೆ. ಇನ್ನು ಅಲ್ಲು ಅಲ್ಲು ಅರ್ಜುನ್ ಜೊತೆ ಪುಷ್ಪ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.