ಜೂನಿಯರ್​ ರೆಬೆಲ್ ಸ್ಟಾರ್ ಜತೆ ಸ್ಟೆಪ್​ ಹಾಕಿದ ಚಾಲೆಂಜಿಂಗ್ ಸ್ಟಾರ್ ! 'ಅಮರ್' ಚಿತ್ರದ ಸೆಟ್‍ನಲ್ಲಿ ದಾಸನ ದರ್ಶನ!

ಚಾಲೆಂಜಿಂಗ್ ಸ್ಟಾರ್​ ಹಾಗೂ ಜೂನಿಯರ್​ ರೆಬೆಲ್​ ಒಂಣದೆಡೆ ಸೇರಿದರೆ ಏನಾಗಬಹುದು ಅನ್ನೋದಕ್ಕೆ ಇಲ್ಲಿದೆ ಉದಾಹರಣೆ. ಬೆಳ್ಳಿಪರದೆ ಮೇಲೆ ಸದಾ ಅಭಿನಯಿಸುವ ಈ ಜೋಡಿ ಈಗ ಒಂದು ಹಾಡಿಗೆ ಡಬ್​ಸ್ಮ್ಯಾಶ್​ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ.

Anitha E | news18
Updated:January 8, 2019, 4:12 PM IST
ಜೂನಿಯರ್​ ರೆಬೆಲ್ ಸ್ಟಾರ್ ಜತೆ ಸ್ಟೆಪ್​ ಹಾಕಿದ ಚಾಲೆಂಜಿಂಗ್ ಸ್ಟಾರ್ ! 'ಅಮರ್' ಚಿತ್ರದ ಸೆಟ್‍ನಲ್ಲಿ ದಾಸನ ದರ್ಶನ!
ದರ್ಶನ್ ಜತೆ ಜೂನಿಯರ್ ರೆಬೆಲ್​ ಸ್ಟಾರ್​ ಅಭಿಷೇಕ್​
Anitha E | news18
Updated: January 8, 2019, 4:12 PM IST
ರೆಬಲ್ ಸ್ಟಾರ್ ಅಂಬರೀಷ ಅಂದರೆ ದಾಸ ದರ್ಶನ್‍ಗೆ ಎಲ್ಲಿಲ್ಲದ ಪ್ರೀತಿ. ಹಿರಿಮಗನ ಸ್ಥಾನ ತುಂಬಿದ್ದ ದರ್ಶನ್, ಅಂಬಿ ನಿಧನದ ಬಳಿಕ ಪ್ರತಿ ದಿನ, ಪ್ರತಿ ಕ್ಷಣ ಅಂಬಿಯನ್ನ ನೆನೆಯುತ್ತಾ ದುಖಃದಲ್ಲಿ ದಿನ ಕಳೆಯುತ್ತಿದ್ದಾರೆ. ಇದರ ನಡುವೆಯೇ ಅಂಬಿ ಮಗ, ತನ್ನ ತಮ್ಮನಂತಿರೋ ಅಭಿಷೇಕ್‍ಗೂ ಬೆನ್ನೆಲುಬಾಗಿ ನಿಂತಿದ್ದಾರೆ.

ಇದನ್ನೂ ಓದಿ: ಎನ್​ಟಿಆರ್​ ಜೀವನಾಧಾರಿತ ಸಿನಿಮಾ 'ಕಥಾನಾಯಕುಡು' ಪ್ರಚಾರದಲ್ಲಿ ಭಾಗಿಯಾದ ಪುನೀತ್​, ಯಶ್​..!

ಪ್ರತೀ ಹೆಜ್ಜೆಯಲ್ಲೂ ಮಾರ್ಗದರ್ಶನ ನೀಡುತ್ತಿದ್ದಾರೆ. ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ಸೆಟ್‍ನಲ್ಲೂ ಇತ್ತೀಚೆಗೆ ದರ್ಶನ್ ಕಾಣಿಸಿಕೊಂಡಿದ್ದಾರೆ. ಹಾಗಾದರೆ ಈ ಅಣ್ತಾಮ್ಮಾಸ್ ಅಲ್ಲೇನ್ ಮಾಡುತ್ತಿದ್ದಾರೆ? ಇಲ್ಲಿದೆ ಅವರ ವರದಿ.

ಮೊದಲಿನಿಂದಲೂ ದರ್ಶನ್, ಅಭಿಷೇಕ್‍ಗೆ ಸಿನಿಮಾದ ಕುರಿತಾಗಿ ಸಾಕಷ್ಟು ಟಿಪ್ಸ್ ನೀಡುತ್ತಾ ಬಂದಿದ್ದಾರೆ. ಎಂಥಾ ಕಥೆ ಆಯ್ಕೆ ಮಾಡಿಕೊಳ್ಳಬೇಕು, ಸಿನಿಮಾ ಬಗ್ಗೆ ಎಷ್ಟು ಅರ್ಪಣಾ ಮನೋಭಾವ ಇರಬೇಕು ಎಂಬುದರ ಬಗ್ಗೆ ಕಿವಿಮಾತು ಹೇಳೊ ದರ್ಶನ್, ಇತ್ತೀಚೆಗೆ ಅಭಿಷೇಕ್ ಅಭಿನಯದ 'ಅಮರ್' ಶೂಟಿಂಗ್ ಸೆಟ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕೂಡ 'ಅಮರ್' ಸೆಟ್‍ನಲ್ಲಿ ಕಾಣಿಸಿಕೊಂಡಿದ್ದ ದಚ್ಚು, ಈ ಬಾರಿ ಏನು ಮಾಡುತ್ತಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿತ್ತು. ಅಷ್ಟಕ್ಕು ದರ್ಶನ್ 'ಅಮರ್' ಸೆಟ್‍ಗೆ ತೆರಳಿದ್ದು ಸುಮ್ಮನೆ ಅಲ್ಲ ಬದಲಾಗಿ ಚಿತ್ರೀಕರಣಕ್ಕಾಗಿ.

ಹೌದು, ದರ್ಶನ್ 'ಅಮರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಭಿಷೇಕ್ ಜೊತೆ ಜಬರ್ದಸ್ತ್​ ಆಗಿ ಸ್ಟೆಪ್ಸ್ ಹಾಕಲಿದ್ದಾರೆ. 'ಅಮರ್' ಸಿನಿಮಾದ ಒಂದು ಹಾಡಿನಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು, ಅಭಿ ಕೂಡ ಅದೇ ಹಾಡಿನಲ್ಲಿ ಡಾನ್ಸ್​ ಮಾಡಲಿದ್ದಾರೆ. ಇದೇ ವಿಚಾರವಾಗಿ ಸೆಟ್‍ಗೆ ಭೇಟಿ ನೀಡಿದ್ದ ದರ್ಶನ್​, ಅಭಿ ಜೊತೆ ಹಾಗೇ ಮಾತಿಗೆ ಜಾರಿದ್ದರು. ಅಲ್ಲದೇ ಸೆಲ್ಫಿ ಫೋಟೊ ಹಾಗೇ ವೀಡಿಯೋ ಮಾಡುವ ಮೂಲಕ ಇಬ್ಬರೂ ಎಂಜಾಯ್ ಮಾಡಿದ್ದಾರೆ.


ದರ್ಶನ್ ಸದ್ಯ 'ಯಜಮಾನ' ಹಾಗೂ ಒಡೆಯ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಹಾಗಿದ್ದರೂ ಬಿಡುವು ಮಾಡಿಕೊಂಡು 'ಅಮರ್' ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆ ಒಪ್ಪಿಗೆ ನೀಡಿರೋದು ಇಡೀ ತಂಡಕ್ಕೆ ಸಂತಸ ತಂದಿದೆ. ಹೆಚ್ಚಾಗಿ ತನ್ನ ತಮ್ಮ ಅಭಿಷೇಕ್ ಮೊದಲ ಸಿನಿಮಾ ಎಂಬ ವಿಚಾರಕ್ಕೆ ಯೋಚಿಸದೇ ಕಾಲ್‍ಶೀಟ್ ನೀಡಿರೋ ದರ್ಶನ್, ಅಂಬಿ ಹಾಗೂ ಅವರ ಕುಟುಂಬದ ಮೇಲಿರೋ ಪ್ರೀತಿ ಎಂತದ್ದು ಎಂಬುದನ್ನ ಸಾಬೀತು ಮಾಡಿದ್ದಾರೆ. ಇದರಿಂದ ಅಭಿ ಕೂಡ ಸಂತಸಗೊಂಡಿದ್ದು, ದಾಸನಿಗೆ ಧನ್ಯವಾದ ತಿಳಿಸಿದ್ದಾರೆ.
Loading...

ಈ ಹಾಡಿನ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿಯನ್ನ ಇನ್ನು ಹೊರಹಾಕಿಲ್ಲ.. ಈ ಇಬ್ಬರ ಜೊತೆ 'ರಂಗಿರತಂಗ' ಖ್ಯಾತಿಯ ಅನೂಪ್ ಭಂಡಾರಿ ಕೂಡ ಕಾಣಿಸಿಕೊಳ್ಳಲಿದ್ದು, ಒಂದೇ ಹಾಡಿನಲ್ಲಿ ಮೂವರು ನಟರು ಮಿಂಚಲಿದ್ದಾರೆ.. ಕೆಂಗೇರಿ ಸಮೀಪ ಕ್ಲಬ್ ಒಂದರಲ್ಲಿ ಈ ಹಾಡಿನ ಚಿತ್ರೀಕರಣ ನಡೆಯುತ್ತಿದ್ದು, 3 ದಿನದ ಶೆಡ್ಯೂಲ್ ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ.

ಇದನ್ನೂ ಓದಿ: ಚಂದನವನದಲ್ಲಿ 'ಪೇಟ್ಟ': ದಶಕಗಳ ನಂತರ ಕನ್ನಡದಲ್ಲೇ ಡೈಲಾಗ್​ ಹೇಳಲಿರುವ ರಜಿನಿ..!

ಇನ್ನು 'ಅಮರ್' ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಹೆಚ್ಚಾಗಿ ಅಮರ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಂಬರೀಷ ಅವರ ಮಹದಾಸೆ ಆಗಿತ್ತು. ಆದರೆ ಅಂಬಿಯ ಕನಸು ಕನಸಾಗಿ ಉಳಿಯಿತು. ಹೀಗಾಗಿ ಅಂಬರೀಷ ಅವರ ಅಭಿಮಾನಿಗಳು, ಇಡೀ ಚಿತ್ರರಂಗ, ಹಾಗೇ ಆಪ್ತರು ಕೂಡ ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. 'ಅಮರ್' ದರ್ಶನಕ್ಕೆ ಎದುರು ನೋಡುತ್ತಿದ್ದಾರೆ. ನಾಗಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಂದೇಶ್ ನಾಗರಾಜ್ ನಿರ್ಮಾಣದ ಜವಬ್ದಾರಿ ಹೊತ್ತಿದ್ದಾರೆ. ಸದ್ಯ ಸಿನಿಮಾದ ಎರಡನೇ ಭಾಗದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಅಂಬರೀಷ ಅವರು ಸಹ ಈ ಹಿಂದೆ ಅಮರ್ ಸೆಟ್‍ಗೆ ಭೇಟಿ ನೀಡಿದ್ದರು. ಈಗ ದರ್ಶನ್ ಅಣ್ಣನಾಗಿ ಆ ಸ್ಥಾನವನ್ನ ತುಂಬಿದ್ದು, ತಮ್ಮನಂತಿರೋ ಅಭಿಷೇಕ್‍ರನ್ನ ಕೈ ಹಿಡಿದು ಮುನ್ನಡೆಸುತ್ತಿದ್ದಾರೆ. ಹೀಗೆ ಅಭಿಗೆ ಯಜಮಾನನ ಜತೆ ಜೋರಾಗಿದ್ದು, ಅಣ್ತಮ್ಮಾಸ್ ಒಂದಾಗಿರೋ ಹಾಡು ಹೇಗೆ ಮೂಡಿಬರುತ್ತೆ ಅನ್ನೋ ಕೂತೂಹಲ ಮೂಡಿದೆ.

ಈಗಾಗಲೇ ಚಿತ್ರಕ್ಕೆ ಒಳ್ಳೆಯ ಹೈಪ್ ಕ್ರಿಯೇಟ್ ಆಗಿದ್ದು, ಎಲ್ಲೆಡೆಯಿಂದ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. 'ಅಮರ್' ಹೇಗೆ ಮೂಡಿಬರಲಿದೆ ಅನ್ನೋದನ್ನ ಕಾದು ನೋಡಬೇಕಿದೆ.

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ