Beast ಥರಾನೆ ಆ್ಯಕ್ಷನ್​ ಸಿನಿಮಾಗಳ ಲಿಸ್ಟ್​ ಇಲ್ಲಿದೆ! ಯಾವ ಚಿತ್ರ ಯಾವ ಒಟಿಟಿಯಲ್ಲಿ ಲಭ್ಯ ಅಂತ ನೋಡಿ

ಬೀಸ್ಟ್ ಚಿತ್ರವನ್ನು ಓಟಿಟಿ ಪರದೆಯಲ್ಲಿ ವೀಕ್ಷಿಸಲು ನೀವು ಇನ್ನು ಬಹಳ ಸಮಯ ಕಾಯಬೇಕು. ಬೀಸ್ಟ್ ಚಿತ್ರದ ರೀತಿಯ ಕೆಲವು ಸಿನಿಮಾಗಳು ಓಟಿಟಿಯಲ್ಲಿದ್ದು, ಈ ಸಿನಿಮಾಗಳು ನಿಮಗೆ ಮನರಂಜನೆ ನೀಡುತ್ತವೆ.

ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾಗಳು

ಆ್ಯಕ್ಷನ್​ ಪ್ಯಾಕ್ಡ್​ ಸಿನಿಮಾಗಳು

  • Share this:
ಲಾಕ್​ಡೌನ್​(Lockdown) ಸಮಯದಿಂದ ಹೆಚ್ಚು ಹೆಸರುವಾಸಿಯಾಗಿರುವ ನೆಟ್‌ಫ್ಲಿಕ್ಸ್(Netflix), ಅಮೆಜಾನ್ ಪ್ರೈಮ್(Amazon Prime), ಡಿಸ್ನಿ+ ಹಾಟ್‌ಸ್ಟಾರ್(Disney + Hot star), ZEE5 ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಓಟಿಟಿ ಬಂದ ಮೇಲೆ ಸಿನಿಮಾ ನೋಡುವವರ ಸಂಖ್ಯೆ ಸಹ ಹೆಚ್ಚಾಗಿದೆ . ಇದೇ ಕಾರಣಕ್ಕೆ ಓಟಿಟಿ(OTT) ಹೊಚ್ಚ ಹೊಸ ಚಲನಚಿತ್ರಗಳನ್ನು ತೆರೆಗೆ ತರುತ್ತಿರುತ್ತದೆ. ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್(Nelsan Dilip Kumar) ಅವರ ದಳಪತಿ ವಿಜಯ್(Thalapathy Vijay) ಅಭಿನಯದ 'ಬೀಸ್ಟ್'(Beast) ಚಿತ್ರವು ಏಪ್ರಿಲ್ 13ರಂದು ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಭಯೋತ್ಪಾದಕರು ಮಾಲ್ ಒಂದನ್ನು ಹೈಜಾಕ್ ಮಾಡುತ್ತಾರೆ. ನಾಯಕ ವಿಜಯ್ ಮಾಲ್ ಒಳಗಡೆಯಿರುತ್ತಾನೆ.

ಬಂದೂಕುಗಳು ಮತ್ತು ಕತ್ತಿಗಳಿಂದ ನಾಯಕ ಅವರನ್ನು ಕೊಲ್ಲುತ್ತಾನೆ, ಶಾಪಿಂಗ್ ಮಾಲ್‌ನಿಂದ ಜನರನ್ನು ರಕ್ಷಿಸಲು ತನ್ನ ಮಾರ್ಗವನ್ನು ಅನುಸರಿಸುವ ಗೂಢಚಾರಿಕೆಯ ಕಥೆ ಇದಾಗಿದೆ. ಬೀಸ್ಟ್ ಚಿತ್ರ ಸನ್ ಪಿಕ್ಚರ್ ಸಂಸ್ಥೆಯಡಿ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ನಿರೀಕ್ಷಿಸಬಹುದು.

ಶೀಘ್ರದಲ್ಲೇ ಒಟಿಟಿಗೆ ಬರಲಿದೆ ಬೀಸ್ಟ್​!

ಬೀಸ್ಟ್ ಚಿತ್ರವನ್ನು ಓಟಿಟಿ ಪರದೆಯಲ್ಲಿ ವೀಕ್ಷಿಸಲು ನೀವು ಇನ್ನು ಬಹಳ ಸಮಯ ಕಾಯಬೇಕು. ಬೀಸ್ಟ್ ಚಿತ್ರದ ರೀತಿಯ ಕೆಲವು ಸಿನಿಮಾಗಳು ಓಟಿಟಿಯಲ್ಲಿದ್ದು, ಈ ಸಿನಿಮಾಗಳು ನಿಮಗೆ ಮನರಂಜನೆ ನೀಡುತ್ತವೆ. ಹಾಗಾದರೆ ಬೀಸ್ಟ್ ಸಿನಿಮಾದಂತೆ ಪವರ್-ಪ್ಯಾಕ್ಡ್ ಆಕ್ಷನ್ ಥ್ರಿಲ್ಲರ್‌ ಸಿನಿಮಾಗಳ ಬಗ್ಗೆ ಇಲ್ಲಿದೆ ಡಿಟೇಲ್ಸ್.

1) ಜಗಮೆ ತಂದಿರಮ್ - ನೆಟ್‌ಫ್ಲಿಕ್ಸ್

ಈ ಸಿನಿಮಾವನ್ನು ಕಾರ್ತಿಕ್ ಸುಬ್ಬರಾಜು ನಿರ್ದೇಶನ ಮಾಡಿದ್ದು, ಧನುಷ್ ಅಭಿನಯದ ಈ ಆಕ್ಷನ್-ಥ್ರಿಲ್ಲರ್‌ನಲ್ಲಿ, ತಮಿಳುನಾಡು ಗ್ಯಾಂಗ್ಸ್ಟರ್ ಒಬ್ಬಾತ ಲಂಡನ್ನಲ್ಲಿ ಹೋಗಿ ಮಾಫಿಯಾ ನಡೆಸುವ ಕತೆ ಹೊಂದಿದೆ. ಸಿನಿಮಾದಲ್ಲಿ ಗೇಮ್ ಆಫ್ ಥ್ರೋನ್ ಖ್ಯಾತಿಯ ನಟ ಜೇಮ್ಸ್ ಕಾಸ್ಮೊ ಸಹ ನಟಿಸಿದ್ದಾರೆ. ಜೊತೆಗೆ ಐಶ್ವರ್ಯಾ ಲಕ್ಷ್ಮಿ, ಜೋಜು ಜಾರ್ಜ್ ಇನ್ನೂ ಹಲವರಿದ್ದಾರೆ.

2) ದರ್ಬಾರ್ - ಅಮೆಜಾನ್ ಪ್ರೈಮ್ ವಿಡಿಯೋ

ಈ ಚಿತ್ರದಲ್ಲಿ ರಜನಿಕಾಂತ್ ಸುಮಾರು ಮೂರು ದಶಕಗಳ ನಂತರ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಮುಂಬೈನಲ್ಲಿ ನೆಲೆಸಿರುವ ಅವರು ನಗರದಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ ಮತ್ತು ಲೈಂಗಿಕ ಕೆಲಸಗಳನ್ನು ತಡೆಯುವ ಉದ್ದೇಶ ಹೊಂದಿರುತ್ತಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗುವುದರ ಜೊತೆಗೆ ರಜನಿಕಾಂತ್ ಅವರ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ ಮತ್ತು 2020ರ ಅತಿ ಹೆಚ್ಚು ಗಳಿಕೆ ಮಾಡಿದ ತಮಿಳು ಚಲನಚಿತ್ರವಾಗಿದೆ.

ಇದನ್ನೂ ಓದಿ: ಸಿನಿಮಾ ಹಿಟ್​ ಅಂತ ಖರೀದಿ ಮಾಡಿಬಿಟ್ರು, ಈಗ ವರ್ಕೌಟ್​ ಆಗುತ್ತಾ ಅಂತ ಚಿಂತೆ ಮಾಡ್ತಿದ್ಯಂತೆ ನೆಟ್​ಫ್ಲಿಕ್ಸ್​!

3) ಸರ್ಕಾರ್ - ನೆಟ್‌ಫ್ಲಿಕ್ಸ್

ಬೀಸ್ಟ್‌ಗೆ ಕೆಲವು ವರ್ಷಗಳ ಮೊದಲು, ವಿಜಯ್ ಈ ಸಾಮಾಜಿಕವಾಗಿ ಸಂಬಂಧಿತ ಚಲನಚಿತ್ರದಲ್ಲಿ ನಟಿಸಿದ್ದಾರೆ. ಪ್ರಬಲ ರಾಜಕಾರಣಿಗಳು ಮತ್ತು ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಹಂದರ ಇರುವ ಚಿತ್ರವನ್ನು AR ಮುರುಗದಾಸ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್, ಕೀರ್ತಿ ಸುರೇಶ್ ಮತ್ತು ವರಲಕ್ಷ್ಮಿ ಶರತ್ಕುಮಾರ್ ನಟಿಸಿದ್ದಾರೆ.

4) ಥೀರನ್ - ಡಿಸ್ನಿ + ಹಾಟ್‌ಸ್ಟಾರ್

ಕಾರ್ತಿ ಅಭಿನಯದ ಈ ಚಿತ್ರ ಸರಣಿ ಕೊಲೆಗಳ ಹಿಂದಿನ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿ ಥೀರನ್‌ ಪಾತ್ರವನ್ನು ನಿರ್ವಹಿಸಿದ್ದಾರೆ. ಎಲ್ಲಾ ಕೊಲೆಗಳು ಒಂದೇ ಮಾದರಿಯಲ್ಲಿ ನಡೆದಿದ್ದು, ಅದನ್ನು ನಾಯಕ ಹೇಗೆ ಭೇದಿಸುತ್ತಾನೆ ಎಂಬುವುದೇ ಚಿತ್ರದ ಜೀವಾಳ. ಚಿತ್ರದಲ್ಲಿ ಕಾರ್ತಿಗೆ ನಾಯಕಿಯಾಗಿ ರಕುಲ್ ಪ್ರೀತ್ ಸಿಂಗ್ ನಟಿಸಿದ್ದಾರೆ.

ಇದನ್ನೂ ಓದಿ: ವೈರಲ್​ ಆಯ್ತು ಹೊಸ ರಣಬೀರ್​-ಆಲಿಯಾ ಫೋಟೋ! ಮದುವೆ ಚಿತ್ರ ಅಂತೂ ಅಲ್ಲ, ಮತ್ತಿನ್ನೇನು? ನೀವೇ ನೋಡಿ

5) ಗೂಡಾಚಾರಿ - ಅಮೆಜಾನ್ ಪ್ರೈಮ್ ವಿಡಿಯೋ

ತಮಿಳಿನಲ್ಲಿ 'ಸ್ಪೈ' ಎಂದು ಅನುವಾದಿಸಲ್ಪಟ್ಟ ಈ ಚಲನಚಿತ್ರವು ಫಿಲ್ಮ್ ಕಂಪ್ಯಾನಿಯನ್‌ನಿಂದ ದಶಕದ 25 ಶ್ರೇಷ್ಠ ತೆಲುಗು ಚಲನಚಿತ್ರಗಳೆಂದು ಪಟ್ಟಿ ಮಾಡಲ್ಪಟ್ಟಿದೆ. ಇದು RAWನಿಂದ ನೇಮಕಗೊಂಡ ವ್ಯಕ್ತಿಯ ಪ್ರಯಾಣದ ಕಥೆಯಾಗಿದೆ.
Published by:Vasudeva M
First published: