OTT Release: ಒಟಿಟಿ ಪ್ರಿಯರಿಗೆ ಈ ವಾರ ಸಿನಿ ರಸದೌತಣ: 5 ಸಿನಿಮಾ, 3ಕ್ಕೂ ಹೆಚ್ಚು ಸೀರಿಸ್​ ರಿಲೀಸ್​!

OTT Release: ಈ ವಾರ ಅಮೇಜಾನ್​ ಪ್ರೈಮ್, ನೆಟ್​​ಫ್ಲಿಕ್ಸ್, ಆಹಾ, ಡಿಸ್ನಿ+ ಹಾಟ್​​ಸ್ಟಾರ್ ಮೊದಲಾದ ಒಟಿಟಿಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ.

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳು

  • Share this:
ಮೊದಲೆಲ್ಲಾ ಪ್ರತಿ ಗುರುವಾರ(Thursday) ಹಾಗೂ ಶುಕ್ರವಾರ(Friday) ಬಂತು ಅಂದರೆ ಸಿನಿರಸಿಕರಿಗೆ ಹಬ್ಬ. ಯಾಕಂದರೆ ಒಟಿಟಿ(OTT) ಬರುವ ಮುನ್ನ ಚಿತ್ರಮಂದಿರ(Theater)ಗಳಲ್ಲೇ ಹೋಗಿ ಸಿನಿಮಾ(Movie) ನೋಡಬೇಕಿತ್ತು.ಅದು ಶುಕ್ರವಾರ ಹಾಗೂ ಗುರುವಾರದಂದು ಮಾತ್ರ ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ ಒಟಿಟಿ ಬಂದ ಕಾಲ ಬದಲಾಗಿದೆ. ಯಾವಾಗ ಬೇಕಾದರೂ ನೇರವಾಗಿ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬಹುದು. ಜನರು ಕೂಡ ಮನೆಯಲ್ಲಿ ಟಿವಿ(Tv), ಅಥವಾ ಮೊಬೈಲ್(Mobile)​ನಲ್ಲೇ ತಮ್ಮ ನೆಚ್ಚಿನ ಸಿನಿಮಾ(Movie), ಸೀರಿಸ್(Series)​ಗಳನ್ನು ನೋಡಬಹುದು. ಪ್ರತಿವಾರ ಹೊಚ್ಚ ಹೊಸ ಸಿನಿಮಾಗಳು, ಸೀರಿಸ್​ಗಳು ಒಟಿಟಿಯಲ್ಲಿ ಬಿಡುಗಡೆಯಾಗುತ್ತವೆ. ಈ ಶುಕ್ರವಾರವೂ ಸಿನಿ ರಸಿಕರಿಗೆ ರಸದೌತಣ ಸಿಕ್ಕಂತೆ. ಯಾಕೆಂದರೆ ಒಟ್ಟು 5 ಸಿನಿಮಾಗಳು ಹಾಗೂ 3 ಕ್ಕೂ ಹೆಚ್ಚು ಹೊಸ ಸೀರಿಸ್​ಗಳು ನವೆಂಬರ್​ 19ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿವೆ. ಬಹುನಿರೀಕ್ಷಿತ ಸೀರೀಸ್ ಹಾಗೂ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿದ್ದು, ವೀಕ್ಷಕರಿಗೆ ಮನರಂಜನೆ(Entertinment) ನೀಡಲಿವೆ.

ಈ ವಾರ ಅಮೇಜಾನ್​ ಪ್ರೈಮ್, ನೆಟ್​​ಫ್ಲಿಕ್ಸ್, ಆಹಾ, ಡಿಸ್ನಿ+ ಹಾಟ್​​ಸ್ಟಾರ್ ಮೊದಲಾದ ಒಟಿಟಿಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಪಟ್ಟಿ ಇಲ್ಲಿದೆ

1. ಧಮಾಕಾ- (ನೆಟ್​ಫ್ಲಿಕ್ಸ್​)

ಕಾರ್ತಿಕ್ ಆರ್ಯನ್ ನಟನೆಯ ಈ ಬಾಲಿವುಡ್ ಚಿತ್ರ ನೆಟ್​​ಫ್ಲಿಕ್ಸ್​ನಲ್ಲಿ ಬಿಡುಗಡೆಯಾಗಲಿದೆ. ಥ್ರಿಲ್ಲರ್ ಮಾದರಿಯ ಈ ಚಿತ್ರ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ಸಾಕಷ್ಟು ಭರವಸೆ ಮೂಡಿಸಿದೆ ಮತ್ತು ಕಾರ್ತಿಕ್ ಆರ್ಯನ್ ಅವರನ್ನು ಹಿಂದೆಂದೂ ನೋಡಿರದ ಅವತಾರದಲ್ಲಿ ನೋಡಬಹುದು.

2. ಮೋಸ್ಟ್ ಎಲಿಜಿಬಲ್ ಬ್ಯಾಚುಲರ್- (ಆಹಾ)

ಪೂಜಾ ಹೆಗ್ಡೆ ಹಾಗೂ ಅಖಿಲ್ ಅಕ್ಕಿನೇನಿ ಅಭಿನಯದ ಈ ಚಿತ್ರ ದಸರಾ ಸಮಯದಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಈಗಾಗಲೇ ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿರುವ ಈ ಚಿತ್ರ ನವೆಂಬರ್ 19ರಂದು ಆಹಾ ಒಟಿಟಿ ಹಾಗೂ ನೆಟ್​ಫ್ಲಿಕ್ಸ್​​ನಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಹಾಡುಗಳಿಂದಲೇ ಈ ಸಿನಿಮಾ ಸಖತ್​ ಸೌಂಡ್​ ಮಾಡಿತ್ತು.

3. ಅದ್ಭುತಮ್ - ( ಡಿಸ್ನಿ+ ಹಾಟ್​ಸ್ಟಾರ್​)

ತೇಜ ಸಜ್ಜ ಮತ್ತು ಶಿವಾನಿ ರಾಜಶೇಖರ್ ಅಭಿನಯದ ಈ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೇ ನೇರವಾಗಿ ಒಟಿಟಿ ಮೂಲಕ ಬಿಡುಗಡೆಯಾಗುತ್ತಿದೆ. ಡಿಸ್ನಿ+ ಹಾಟ್​​ಸ್ಟಾರ್​​ನಲ್ಲಿ ಈ ಚಿತ್ರ ತೆರೆಕಾಣಲಿದೆ. ಪ್ರಶಾಂತ್ ವರ್ಮಾ ಬರೆದಿರುವ ಮತ್ತು ಮಲ್ಲಿಕ್ ರಾಮ್ ನಿರ್ದೇಶನದ ರೋಮ್ಯಾಂಟಿಕ್ ಎಂಟರ್ಟೈನರ್ ಚಲನಚಿತ್ರವಾಗಿದೆ. ರಾಧನ್ ಸಂಗೀತ ಸಂಯೋಜಿಸಿದ್ದು, ವಿದ್ಯಾಸಾಗರ್ ಚಿಂತಾ ಛಾಯಾಗ್ರಹಣ ಮಾಡಿದ್ದಾರೆ.

4. ಚುರುಲಿ (ಸೋನಿ ಲೈವ್​)

ಲಿಜೋ ಜೋಸ್ ಪೆಲ್ಲಿಸ್ಸೇರಿ ನಿರ್ದೇಶನದ ಫ್ಯಾಂಟಸಿ- ಅಡ್ವೆಂಚರ್ ಚಿತ್ರವಾದ ‘ಚುರುಲಿ’ ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಮಲಯಾಳಂ ಭಾಷೆಯ ಈ ಸಿನಿಮಾ ಸಾಕಷ್ಟು ಕ್ರೇಜ್​ ಹುಟ್ಟುಹಾಕಿದೆ. ಸೋನಿ ಲೈವ್​ನಲ್ಲಿ ನಾಳೆ ತೆರೆಕಾಣಲಿದೆ.

5. ಕ್ಯಾಶ್​ - (ಡಿಸ್ನಿ+ ಹಾಟ್‌ಸ್ಟಾರ್)

ಮೊದಲ ಬಾರಿಗೆ ರಿಷಭ್​ ಸೇಠ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸ್ಟಾರ್ಟ್​ಅಪ್​ ಬ್ಯುಸಿನೆಸ್​ ಆರಂಭಿಸಿ ಹಲವು ಬಾರಿ ವಿಫಲವಾಗುವ ಉದ್ಯಮಿ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ಅಮೋಲ್ ಪರಾಶರ್, ಸ್ಮೃತಿ ಕಲ್ರಾ, ಕವಿನ್ ಡೇವ್, ಸ್ವಾನಂದ್ ಕಿರ್ಕಿರೆ ಮತ್ತು ಗುಲ್ಶನ್ ಗ್ರೋವರ್ ನಟಿಸಿದ್ದಾರೆ.

ಇದನ್ನು ಓದಿ: ಅನುಷ್ಕಾ ಶರ್ಮಾ ತೊಟ್ಟ ಸ್ವಿಮ್​ಸೂಟ್ ಬೆಲೆಗೆ ಬೆಂಗಳೂರಲ್ಲಿ ಆರಾಮಾಗಿ ಒಂದು ಮನೆ ಬಾಡಿಗೆಗೆ ಸಿಗುತ್ತದೆ, ಬೆಲೆ ಎಷ್ಟು ಹೇಳಿ...

6. ದಿ ವೀಲ್ ಆಫ್ ಟೈಮ್- (ಅಮೇಜಾನ್​ ಪ್ರೈಮ್​) ಸೀರಿಸ್​

ಅಮೇಜಾನ್​ ಒರಿಜಿನಲ್ ಸೀರೀಸ್ ಆದ ದಿ ವೀಲ್​ ಆಫ್​ ಟೈಮ್​, ನವೆಂಬರ್ 19ರಂದು ಬಿಡುಗಡೆಯಾಗಲಿದೆ. ಈಗಾಗಲೇ ‘ದಿ ವೀಲ್ ಆಫ್ ಟೈಮ್​’ನ ಟ್ರೈಲರ್ ಬಿಡುಗಡೆಯಾಗಿ, ಎಲ್ಲರ ಗಮನ ಸೆಳೆದಿದ್ದು, ಸೈನ್ಸ್ ಫಿಕ್ಷನ್ ಮಾದರಿಯ ಸೀರೀಸ್ ಇದಾಗಿದೆ.

7. SOS 26/11 - (ಜೀ5) ಸೀರಿಸ್​

ಅರ್ಜನ್ ಬಾಜ್ವಾ, ಅರ್ಜುನ್ ಬಿಜ್ಲಾನಿ, ವಿವೇಕ್ ದಹಿಯಾ, ತಾರಾ ಅಲಿಶಾ ಬೆರ್ರಿ, ಮುಕುಲ್ ದೇವ್, ನರೇನ್ ಕುಮಾರ್ ಈ ಸೀರಿಸ್​ನಲ್ಲಿ ಕಾಣಿಸಿಕೊಂಡಿದ್ದಾರೆ. 26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಈ ಸೀರಿಸ್​ ಮಾಡಲಾಗಿದೆ.

ಇದನ್ನು ಓದಿ : 'ಇನ್' ಸಿನಿಮಾದ ಫಸ್ಟ್​ ಲುಕ್ ಪೋಸ್ಟರ್ ರಿಲೀಸ್​ ಮಾಡಿದ ಮುಖ್ಯಮಂತ್ರಿ ಬಸವರಾಜ್​ ಬೊಮ್ಮಾಯಿ

8. ಯುವರ್​ ಹಾನರ್​ 2 - ( ಸೋನಿ ಲೈವ್​)

ಹಿಂದಿಯ ಫೇಮಸ್​ ವೆಬ್​ ಸೀರಿಸ್​ ಯುವರ್​ ಹಾನರ್​ 2 ನವೆಂಬರ್​ 19ರಂದು ಸೋನಿ ಲೈವ್​​ನಲ್ಲಿ ಬಿಡುಗಡೆಯಾಗಲಿದೆ. ಜಿಮ್ಮಿ ಶೆರ್ಗಿಲ್, ಗುಲ್ಶನ್ ಗ್ರೋವರ್, ಜೀಶಾನ್ ಕ್ವಾದ್ರಿ ಮತ್ತು ಮಾಹೀ ಗಿಲ್ ನಟಿಸಿದ್ದಾರೆ.
Published by:Vasudeva M
First published: