HOME » NEWS » Entertainment » HERE IS THE LATEST UPDATE ON NAGIN 3 FAME ACTOR PEARL V PURI RAPE CASE AE

Pearl V Puri: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ನಟನ ವಿರುದ್ಧ ಆರೋಪ ಮಾಡಿರುವುದು ಬಾಲಕಿಯೇ ಎಂದ ವಕೀಲರು

Pearl Puri: ಅಪ್ರಾಪ್ತತೆಯ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೌದು, ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಬಾಲಕಿಯ ತಾಯಿ ಈಗ ಆರೋಪಿ ಪರ್ಲ್​ ವಿ ಪುರಿ ಅವರ ಪರ ಹೇಳಿಕೆ ನೀಡಿದ್ದಾರಂತೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ಮಾತ್ರ ಪರ್ಲ್​ ಪುರಿ ಅವರ ಹೆಸರನ್ನೇ ಹೇಳಿದ್ದಾರಂತೆ.

Anitha E | news18-kannada
Updated:June 11, 2021, 1:35 PM IST
Pearl V Puri: ಅಪ್ರಾಪ್ತ ಬಾಲಕಿ ಅತ್ಯಾಚಾರ ಪ್ರಕರಣ: ನಟನ ವಿರುದ್ಧ ಆರೋಪ ಮಾಡಿರುವುದು ಬಾಲಕಿಯೇ ಎಂದ ವಕೀಲರು
ಹಿಂದಿ ಕಿರುತೆರೆ ನಟ ಪರ್ಲ್​ ವಿ ಪುರಿ ಅವರನ್ನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಆರೋಪದಡಿ ಬಂಧಿಸಲಾಗಿದೆ.
  • Share this:
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಯಾಗಿರುವ ಹಿಂದಿಯ ಕಿರುತೆರೆ ನಟ ಪರ್ಲ್​ ವಿ ಪುರಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ ಪರ್ಲ್​ ವಿ ಪುರಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಪರ್ಲ್​ ವಿ ಪುರಿ, ಏಕ್ತಾ ಕಪೂರ್ ನಿರ್ಮಾಣದ ನಾಗಿನ್​ 3 ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಪರ್ಲ್​ ವಿ ಪುರಿ ಈ ರೀತಿಯ ಕೆಲಸ ಮಾಡಿಲ್ಲ ಎಂದು ಅವರ ಜೊತೆ ಕೆಲಸ ಮಾಡಿರುವ ಸಹ ನಟ-ನಟಿಯರು ಹಾಗೂ ಸ್ನೇಹಿತರು ಹೇಳುತ್ತಲೇ ಇದ್ದಾರೆ. ಇನ್ನು ನಿರ್ಮಾಪಕಿ ಏಕ್ತಾ ಕಪೂರ್​ ಸಹ ಪರ್ಲ್ ಪರವಾಗಿ ಸಾಮಾಜಿಕ ಜಾಲತಾಣದಲ್ಲೂ ಬರೆದುಕೊಂಡಿದ್ದಾರೆ. ಪರ್ಲ್​ ಅವರನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ಪರ್ಲ್​ ನಿರಪರಾಧಿ, ಆದರೂ ಅವರನ್ನು ಸಂತ್ರಸ್ತ ಬಾಲಕಿಯ ತಂದೆ ಸುಳ್ಳು ಆರೋಪ ಮಾಡುವ ಮೂಲಕ ಸಿಲುಕಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿ ಸಹ ಪರ್ಲ್​ ಅವರ ಹೆಸರನ್ನೇ ಹೇಳಿರುವ ಕಾರಣದಿಂದ ಆರೋಪಿಯನ್ನು ಬಂಧಿಸಲಾಗಿದೆ.

ಅಪ್ರಾಪ್ತತೆಯ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಹೌದು, ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಂತ್ರಸ್ತ ಬಾಲಕಿಯ ತಾಯಿ ಈಗ ಆರೋಪಿ ಪರ್ಲ್​ ವಿ ಪುರಿ ಅವರ ಪರ ಹೇಳಿಕೆ ನೀಡಿದ್ದಾರಂತೆ.

Pearl V Puri, Pearl V Puri Arrest, Pearl V Puri Rape, naagin 3 actor pearl v puri, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ, ಪರ್ಲ್ ವಿ ಪುರಿ, ನಟ ಪರ್ಲ್​ ವಿ ಪುರಿ, ನಾಗಿನ್​ 3 ಖ್ಯಾತಿಯ ನಟ, ಕಿರುತೆರೆ ನಟ ಪರ್ಲ್​ ವಿ ಪುರಿ, Nagain 3 fame actor Pearl V Puri arrested for allegedly raping a minor Girl ae
ಆರೀಪಿ ಪರ್ಲ್​ ಪಿ ಪುರಿ ಪರ ನಿಂತ ನಟಿ ಅನಿತಾ ಹಸ್ಸನಂದನಿ


ಪರ್ಲ್​ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಇದನ್ನು ತನ್ನಿಂದ ದೂರ ಇರುವ ಪತಿಯೇ ಮಾಡುತ್ತಿದ್ದಾರೆ ಎಂದು ಬಾಲಕಿಯ ಅಮ್ಮ ಹೇಳಿಕೆ ನೀಡಿದ್ದಾರಂತೆ. ಈ ಪ್ರಕರಣದಲ್ಲಿ ಪರ್ಲ್​ ವಿ ಪುರಿ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರಂತೆ.

ಇನ್ನು ಬಾಲಕಿ ಮೇಲೆ ಅತ್ಯಾಚಾರ ನಡೆದಿರುವು ವೈದ್ಯಕೀಯ ಪರೀಕ್ಷೆಯಿಂದ ಸಾಬೀತಾಗಿದೆ. ಆದರೆ ಈ ಪ್ರಕರಣದಲ್ಲಿ ಬಾಲಕಿಯ ತಂದೆ ಆರೋಪಿ ಪರ್ಲ್​ ವಿ ಪುರಿ ಅವರ ಹೆಸರನ್ನು ಎಲ್ಲೂ ಹೇಳಿಲ್ಲ. ಬದಲಾಗಿ ಅತ್ಯಾಚಾರಕ್ಕೆ ಒಳಗಾಗಿರುವ ಬಾಲಕಿಯೇ ಆರೋಪಿ ಹೆಸರನ್ನು ಹೇಳಿದ್ದಾರೆ ಎಂದು ಬಾಲಕಿಯ ತಂದೆಯ ಪರ ವಕೀಲರು ತಿಳಿಸಿದ್ದಾರೆ.

ಇದನ್ನೂ ಓದಿ: ಮಗ ಶೌರ್ಯನಿಗೆ ಆರು ತಿಂಗಳು ತುಂಬಿದ ಸಂಭ್ರಮದಲ್ಲಿ ನಿರ್ದೇಶಕ ಪವನ್​ ಒಡೆಯರ್-ಅಪೇಕ್ಷಾ ಪುರೋಹಿತ್

ಸ್ಪಾಟ್​ ಬಾಯ್​ ಜತೆ ಸಂತ್ರಸ್ತ ಬಾಲಕಿಯ ತಂದೆಯ ಪರ ವಕೀಲರು ಮಾತನಾಡಿದ್ದು, ಐದು ವರ್ಷದ ಮಗಳು ತಮ್ಮ ತಾಯಿಯ ಬಳಿಯೇ ಇದ್ದರು. 5 ತಿಂಗಳಿನಿಂದ ತಂದೆಯ ಜತೆ ಮಗಳಿಗೆ ಯಾವುದೇ ಸಂಪರ್ಕ ಇರಲಿಲ್ಲ. ಮಗಳ ಶಾಲೆಗೆ ಫೀಸ್​ ಕಟ್ಟಲು ಬಾಲಕಿಯ ಅಪ್ಪ ಹೋದಾಗ ಹೆದರಿದ್ದ ಮಗಳು ಅಪ್ಪನ ಬಳಿ ಬಂದಿದ್ದಾಳೆ. ಆ ಸ್ಥಿತಿಯಲ್ಲಿ ಮಗಳನ್ನು ನೋಡಿದ ತಂದೆ, ಮಗಳನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಗೆ ಬಂದ ಕೂಡಲೇ ಮಗಳ ಬಳಿ ವಿಚಾರಿಸಿದಾಗ, ಬಾಲಕಿಯ ಮೇಲಾಗಿರುವ ಅತ್ಯಾಚಾರದ ವಿಷಯ ತಿಳಿದಿದೆ. ಕೂಡಲೇ ಬಾಲಕಿಯ ತಂದೆ ಮಗುವನ್ನು ಆಸ್ಪತ್ರೆಗೆ ಕರೆದುಕೊಂಢು ಹೋಗಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ ಎಂದು ವಕೀಲರು ವಿವರಿಸಿದ್ದಾರೆ.ನಂತರ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಆ ಬಾಲಕಿಯೇ ತನ್ನ ಮೇಲಾಗಿರುವ ಅತ್ಯಾಚಾರದ ವಿಷಯ ಹಾಗೂ ಮಾಡಿದ ಆರೋಪಿ ಹೆಸರನ್ನು ಬಹಿರಂಗ ಪಡಿಸಿದ್ದಾಳೆ. ಮೊದಲಿಗೆ ಬಾಲಕಿ ಆರೋಪಿ ಧಾರಾವಾಹಿಯಲ್ಲಿ ನಿರ್ವಹಿಸುವ ಪಾತ್ರದ ಹೆಸರನ್ನು ಹೇಳಿದ್ದಳಂತೆ. ಬಾಲಕಿಯ ತಂದೆ ಧಾರಾವಾಹಿ ನೋಡದ ಕಾರಣ ಆ ವ್ಯಕ್ತಿ ಯಾರೆಂದು ಅವರಿಗೆ ಗೊತ್ತಾಗಲಿಲ್ಲ. ನಂತರ ಆ ಪಾತ್ರದ ಪಾತ್ರಧಾರಿಯ ಬಗ್ಗೆ ಹುಡುಕಿದಾಗಲೇ ತಿಳಿದಿದ್ದು ಅದು ಪರ್ಲ್​ ವಿ ಪುರಿ ಎಂದಿದ್ದಾರೆ ವಕೀಲರು.

ಇದನ್ನೂ ಓದಿ: ಅಮ್ಮನ 33 ವರ್ಷದ ಹಳೇ ಸೀರೆಯುಟ್ಟು ಸಪ್ತಪದಿ ತುಳಿದ ನಟಿ ಯಾಮಿ ಗೌತಮ್​..!

ಅಲ್ಲದೆ, ಬಾಲಕಿ ನ್ಯಾಯಾಧೀಶರ ಮುಂದೆ ಸಹ ಇದನ್ನೇ ಹೇಳಿಕೆಯಾಗಿ ನೀಡಿದ್ದಾಳೆ. ಅಲ್ಲದೆ ಘಟನೆ ನಡೆದ ಬಗ್ಗೆ ಬಾಲಕಿ ಮೊದಲು ಅಮ್ಮನ ಬಳಿ ಹೇಳಿದ್ದು, ತಾಯಿ ಪರ್ಲ್​ ಅವರ ಮೇಲೆ ಕೂಗಾಡಿದ್ದರಂತೆ. ಅಲ್ಲದೆ ಬಾಲಕಿಗೆ ಬೇರೆ ಬೇರೆ ನಟರ ಫೋಟೋ ತೋರಿದಾಗಲೂ ಬಾಲಕಿ ಪರ್ಲ್​ ಅವರನ್ನು ಮಾತ್ರ ಆರೋಪಿ ಎಂದು ಗುರುತಿಸಿದ್ದಾಳೆ ಎಂದೂ ವಕೀಲರು ವಿವರಿಸಿದ್ದಾರೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ ಎಂದೂ ಹೇಳಿದ್ದಾರೆ ವಕೀಲರು.
Published by: Anitha E
First published: June 11, 2021, 1:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories