ಅಂದು ಸಾಮಾನ್ಯ ಅಡುಗೆ ಭಟ್ಟರ ಮಗ; ಇಂದು ಸ್ಯಾಂಡಲ್​ವುಡ್ ಸೂಪರ್ ಸ್ಟಾರ್; ಯಾರು ಗೊತ್ತೇ ಈ ನಟ?

ಕಾಲೇಜಿಗೆ ಹೋಗುವ ಸಂದರ್ಭ ಸಂಜೆ ಬಂದು ಕಾಶೀನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದರು. ಇವರ ಕೆಲಸ ನೋಡಿ ಕಾಶೀನಾಥರು “ಅನಂತನ ಅವತಾರ” ಸಿನಿಮಾಕ್ಕೆ ಡೈಲಾಗ್ ಮತ್ತು ಹಾಡು ಬರೆಯಲು ಅವಕಾಶ ನೀಡುತ್ತಾರೆ.

news18-kannada
Updated:July 2, 2020, 1:19 PM IST
ಅಂದು ಸಾಮಾನ್ಯ ಅಡುಗೆ ಭಟ್ಟರ ಮಗ; ಇಂದು ಸ್ಯಾಂಡಲ್​ವುಡ್ ಸೂಪರ್ ಸ್ಟಾರ್; ಯಾರು ಗೊತ್ತೇ ಈ ನಟ?
ಸಾಂದರ್ಭಿಕ ಚಿತ್ರ
  • Share this:
ಯಾರ ಸಹಾಯವೂ ಇಲ್ಲದೆ ತನ್ನ ಕಠಿಣ ಪರಿಶ್ರಮದಿಂದ ಯಶಸ್ಸು ಸಾಧಿಸಿ ಉತ್ತುಂಗಕ್ಕೇರಿದ ಅನೇಕ ಸಾಧಕರ ಉದಾಹರಣೆ ನಮ್ಮ ಕಣ್ಣೆದುರಿಗಿದೆ. ಅಂತೆಯೆ ಒಬ್ಬ ಸಾಮಾನ್ಯ ಅಡಿಗೆ ಭಟ್ಟರ ಮಗ, ಬಡತನಲ್ಲಿ ಬೆಳೆದು ಬಂದು ಸಿನಿ ರಂಗದಲ್ಲಿ ಸೂಪರ್ ಸ್ಟಾರ್ ಆದ ಕಥೆ ಇಲ್ಲಿದೆ. ಇವರ ಸಿನೆಮಾ ನೋಡ ಬೇಕೆಂದರೆ ಕೇವಲ ದುಡ್ಡಿದ್ದರೆ ಸಾಲದು ಬುದ್ಧಿಯೂ ಬೇಕು. ಅವರೇ ರಿಯಲ್ ಸ್ಟಾರ್ ಉಪೇಂದ್ರ ಅವರು.

18 ಸೆಪ್ಟೆಂಬರ್ 1968ರಲ್ಲಿ ಅಡುಗೆ ಭಟ್ಟರಾಗಿದ್ದ ಮಂಜುನಾಥ್ ರಾವ್ ಮತ್ತು ಅನುಸೂಯಾ ಎಂಬ ದಂಪತಿಗೆ ಬಡಕುಟುಂಬದಲ್ಲಿ 2ನೇ ಮಗುವಾಗಿ ಜನಿಸಿದ ಉಪೇಂದ್ರ ಅವರು ಶಾಲೆಗೆ ಹೋಗುವಾಗ ಅವರ ತಂದೆ ದೇವಸ್ಥಾನದಿಂದ ತಂದ ಪ್ರಸಾದ ತಿಂದು ಹೋಗುತ್ತಿದ್ದರಂತೆ. ಇವರು ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆಯುತ್ತಿದ್ದರು. ನಂತರ ನಾಟಕದಲ್ಲಿ ತಮ್ಮಸ್ನೇಹಿತರ ಜೊತೆ ಕೂಡಿ ಭಾಗವಹಿಸಿ ಹಣವನ್ನು ಪಡೆಯುತ್ತಿದ್ದರು.

HBD Ganesh: ಗಣೇಶ್​ ಹುಟ್ಟುಹಬ್ಬಕ್ಕೆ ಶುಭಕೋರಿದ ಸೆಲೆಬ್ರಿಟಿಗಳು: ಪದಗಳ ಮೂಲಕ ವರ್ಣಿಸಿದ ಜಗ್ಗೇಶ್​- ಸಿಂಪಲ್​ ಸುನಿ ..!

ಕಾಲೇಜಿಗೆ ಹೋಗುವ ಸಂದರ್ಭ ಸಂಜೆ ಬಂದು ಕಾಶೀನಾಥ್ ಅವರ ಬಳಿ ಕೆಲಸ ಮಾಡುತ್ತಿದ್ದರು. ಇವರ ಕೆಲಸ ನೋಡಿ ಕಾಶೀನಾಥರು “ಅನಂತನ ಅವತಾರ” ಸಿನಿಮಾಕ್ಕೆ ಡೈಲಾಗ್ ಮತ್ತು ಹಾಡು ಬರೆಯಲು ಅವಕಾಶ ನೀಡುತ್ತಾರೆ.

1993ರಲ್ಲಿ ಜಗ್ಗೇಶ್ ನಟನ ಸಾರಥ್ಯದಲ್ಲಿ ಮೊದಲ ಬಾರಿಗೆ ತಾವೇ ಸ್ಕ್ರಿಪ್ಟ್ ಬರೆದು ನಿರ್ದೇಶನ ಮಾಡಿದ ಚಿತ್ರ ತರ್ಲೆ ನನ್ ಮಗ, ಕುಮಾರ್ ಗೋವಿಂದ ಅವರ ಜೊತೆ “ಶ್” ಸಿನೆಮಾ ನಿರ್ದೇಶನ ಮಾಡುತ್ತಾರೆ. 1995ರಲ್ಲಿ ಶಿವರಾಜ್ ಕುಮಾರ್ ಅಭಿನಯದಲ್ಲಿ ರೌಡಿಸಂನ ” ಓಂ” ಫಿಲ್ಮ್ ನಿರ್ದೇಶಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ ಇದು ಹೊಸ ಅಲೆಯನ್ನು ಸ್ರಷ್ಟಿಸುತ್ತದೆ.

Chiranjeevi sarja: ಧ್ರುವ ಸರ್ಜಾ ಹೆಂಡತಿ ಪ್ರೇರಣಾ ಜೊತೆ ಸಖತ್​ ಸ್ಟೆಪ್​ ಹಾಕಿದ್ದ ಚಿರು ಸರ್ಜಾ: ವಿಡಿಯೋ ವೈರಲ್​..!

1996ರಲ್ಲಿ ಬೆಸ್ಟ್ ಆಕ್ಟರ್, ಉದಯ ಫಿಲ್ಮ್ ಅವಾರ್ಡ್, 2004ರಲ್ಲಿ “ರಕ್ತ ಕಣ್ಣೀರು” ಸಿನೆಮಾಗೆ ಬೆಸ್ಟ್ ಆಕ್ಟರ್, “ಸೂಪರ್” ಸಿನೆಮಾಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಬೆಸ್ಟ್ ಫಿಲ್ಮ್, ಬೆಸ್ಟ್ ಡೈರೆಕ್ಟರ್ ಪ್ರಶಸ್ತಿ ಹೀಗೆ ಸಾಲು ಸಾಲು ಪ್ರಶಸ್ತಿ ಉಪೇಂದ್ರ ಪಾಲಾಗುತ್ತದೆ. 2015ರಲ್ಲಿ ಡಾಕ್ಟರೇಟ್ ಕೂಡ ದೊರೆತಿದೆ. 2013ರಲ್ಲಿ ಉಪ್ಪಿ ಫೌಂಡೇಶನ್ ಆರಂಭಿಸಿ ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದ್ದಾರೆ.
First published: July 2, 2020, 1:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading