• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Prabhas: ರಾಧೆ ಶ್ಯಾಮ್​ ಚಿತ್ರದ ಕಡೆಯಿಂದ ಪ್ರೇಮಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ: ಲವರ್ ಬಾಯ್​ ಆಗಿ ಮಿಂಚಿದ ಪ್ರಭಾಸ್​

Prabhas: ರಾಧೆ ಶ್ಯಾಮ್​ ಚಿತ್ರದ ಕಡೆಯಿಂದ ಪ್ರೇಮಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ: ಲವರ್ ಬಾಯ್​ ಆಗಿ ಮಿಂಚಿದ ಪ್ರಭಾಸ್​

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​

ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​

Glimpse Of Radhe Shyam: ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಲವರ್ ಬಾಯ್​ ಆಗು ಕಾಣಿಸಿಕೊಂಡಿದ್ದು, ವಿಕ್ರಮಾಧಿತ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ಕ್ಯೂಟ್​ ಲವ್​ ಸ್ಟೋರಿಯ ಒಂದು ಪುಟ್ಟ ತುಣುಕನ್ನು ಹಂಚಿಕೊಂಡಿದೆ ಚಿತ್ರತಂಡ.

ಮುಂದೆ ಓದಿ ...
  • Share this:

ಇಂದು ಎಲ್ಲೆಡೆ ಪ್ರೇಮಿಗಳ ದಿನವನ್ನು ಸಂಭ್ರಮದಿಂದ ಆರಿಸಲಾಗುತ್ತಿದೆ. ಪ್ರೇಮಿಗಳು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಕೊಟ್ಟು ಪ್ರೇಮ ನಿವೇದನೆ ಮಾಡುತ್ತಿದ್ದಾರೆ. ಪ್ರೇಮಿಗಳ ದಿನದಂದು ಎಲ್ಲ ಪ್ರೇಮಿಗಳಿಗಾಗಿ ಪ್ರಭಾಸ್​ ಅಭಿನಯದ ರಾಧ್ಯೆ ಶ್ಯಾಮ್​ ಚಿತ್ರತಂಡ ಸಿನಿಮಾದ ಟೀಸರ್​ ರಿಲೀಸ್ ಮಾಡಿದೆ. ಈ ಹಿಂದೆ ಪೋಸ್ಟರ್​, ಮೋಷನ್​ ಪೋಸ್ಟರ್​ ರಿಲೀಸ್​ ಮಾಡುವ ಮೂಲಕ ಸದ್ದು ಮಾಡಿದ್ದ ಚಿತ್ರತಂಡ ಈಗ ಟೀಸರ್​ ಮೂಲಕ ಮತ್ತೆ ಸುದ್ದಿಯಲ್ಲಿದೆ. ಟಾಲಿವುಡ್​ ಡಾರ್ಲಿಂಗ್ ಪ್ರಭಾಸ್ ಅವರ 41ನೇ ಹುಟ್ಟುಹಬ್ಬಕ್ಕೆಂದು ರಾಧೆ ಶ್ಯಾಮ್​ ತಂಡದ ಎರಡು ದಿನ ಮೊದಲೇ ಬರ್ತ್​ ಡೇ ಗಿಫ್ಟ್​ ಆಗಿ ಹೊಸ ಪೋಸ್ಟರ್​ ರಿಲೀಸ್ ಮಾಡಿದ್ದರು. ಅದರ ಜೊತೆಗೆ ಹುಟ್ಟುಹಬ್ಬದ ದಿನದಂದು ಮೋಷನ್​ ಪೋಸ್ಟರ್​ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಭರ್ಜರಿ ಸರ್ಪ್ರೈಸ್​ ಕೊಟ್ಟಿದ್ದರು. ಸಾಹೋ ಸಿನಿಮಾದ ನಂತರ ಪ್ರಭಾಸ್​ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ಇದರ ಬಗ್ಗೆ ಸಿನಿಪ್ರಿಯರಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇದೆ.


ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಲವರ್ ಬಾಯ್​ ಆಗು ಕಾಣಿಸಿಕೊಂಡಿದ್ದು, ವಿಕ್ರಮಾಧಿತ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಪೂಜಾ ಹೆಗ್ಡೆ ಪ್ರೇರಣಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಜೋಡಿಯ ಕ್ಯೂಟ್​ ಲವ್​ ಸ್ಟೋರಿಯ ಒಂದು ಪುಟ್ಟ ತುಣುಕನ್ನು ಹಂಚಿಕೊಂಡಿದೆ ಚಿತ್ರತಂಡ.
ಟೀಸರ್​ನಲ್ಲಿ ಯುರೋಪಿನಲ್ಲಿರುವ ಒಂದು ರೈಲ್ವೆ ನಿಲ್ದಾಣದಲ್ಲಿ ಯುರೋಪಿಯನ್​ ಹುಡುಗಿಯರ ನಡುವೆ ನಿಂತು ತಮ್ಮ ಪ್ರೇಯಸಿ ಪೂಜಾಗಾಗಿ  ಫ್ರೆಂಚ್​ ಭಾಷೆಯಲ್ಲಿ ಕೆಲವು ಸಾಲುಗಳನ್ನು ಹೇಳುತ್ತಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ಟೀಸರ್​ ರಿಲೀಸ್​ ಆಗಿದೆ.


ಈ ಸಿನಿಮಾದ ಚಿತ್ರೀಕರಣ ಕೊರೋನಾ ಲಾಕ್​ಡೌನ್​ಗೂ ಮುನ್ನ ಯುರೋಪಿನಲ್ಲಿ ನಡೆದಿತ್ತು. ಮತ್ತೆ ಲಾಕ್​ಡೌನ್​ ಸಡಿಲಗೊಂಡ ನಂತರ ಚಿತ್ರತಂಡ ಇಟಲಿಗೆ ಹಾರಿತ್ತು. ಸದ್ಯ ಚಿತ್ರೀಕರಣ ಮುಗಿದ್ದು, ಜುಲೈ 30ಕ್ಕೆ ಚಿತ್ರಮಂದಿರಕ್ಕೆ ಅಪ್ಪಳಿಸಲಿದೆ. ಇನ್ನು ಈ ಸಿನಿಮಾ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲಿ ತೆರೆಕಾಣಲಿದೆ.
ಚಿತ್ರತಂಡ ಹಂಚಿಕೊಂಡಿರುವ ವಿಡಿಯೋ ತುಣುಕಿನ ಹಿಂದಿ ಹಾಗೂ ತೆಲುಗು ಅವತರಣಿಕೆಗೆ ಪ್ರಭಾಸ್​ ಅವರೇ ಕಂಠದಾನ ಮಾಡಿದ್ದಾರೆ.
ಮೋಷನ್​ ಪೋಸ್ಟರ್​ 


ಸಿನಿಮಾದ ಟೈಟಲ್​ ಹಾಡಿನ ಆಡಿಯೋ ಜೊತೆಗೆ ಪುಟ್ಟ ವಿಡಿಯೋ ಸಹ ಇದೆ. ಇದರಲ್ಲಿ ಸಿನಿಮಾ ಕಥೆ ಕುರಿತಂತೆ ಸಣ್ಣ ಸುಳಿವು ಸಹ ಸಿಕ್ಕಿದೆ. ಚಲಿಸುತ್ತಿರುವ ರೈಲಿನಲ್ಲಿ ಪೂಜಾ ಹೆಗ್ಡೆ ಹಾಗೂ ಪ್ರಭಾಸ್​ ಅವರ ರೊಮ್ಯಾಂಟಿಕ್​ ಪೋಸ್ ಸಹ ಇದೆ. ಈ ವಿಶೇಷ ವಿಡಿಯೋದಲ್ಲಿ ರೊಮಿಯೋ ಜೂಲಿಯೇಟ್​, ಸಲೀಂ ಅನಾರ್ಕಲಿ, ದೇವದಾಸ್​ ಪಾರ್ವತಿಯ ಪ್ರೇಮಕತೆಯ ನಂತರ ಬರುವುದೇ ಪ್ರೇರಣಾ ಹಾಗೂ ವಿಕ್ರಮಾಧಿತ್ಯನ ರಾಧೆಶ್ಯಾಮ್​ ಪ್ರೇಮಕತೆಯ ಸ್ಟಿಲ್​. ಇದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು.


ಇದನ್ನೂ ಓದಿ: ಸಾಮಾಜಿಕ ಜಾಲತಾಣದಲ್ಲಿ ಡಿಬಾಸ್​ ಪರ್ವ: ಟ್ರೆಂಡ್​ ಆಗುತ್ತಿದೆ ದರ್ಶನ್​ ಹುಟ್ಟುಹಬ್ಬದ ಕಾಮನ್​ ಡಿಪಿ


ಇದು ಪ್ರಭಾಸ್​ ಅಭಿನಯದ 20ನೇ ಚಿತ್ರವಾಗಿದ್ದು, ರಾಧಾಕೃಷ್ಣ ಕುಮಾರ್​ ಈ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಇನ್ನು ಜಸ್ಟಿನ್​ ಪ್ರಭಾಕರ್​ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಇನ್ನು ಈ ಸಿನಿಮಾದ ನಂತರ ಪ್ರಭಾಸ್​ ಸಲಾರ್, ಆದಿಪುರುಷ್​ ಸೇರಿದಂತೆ ಮತ್ತೆ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಲಿದ್ದಾರೆ. ಈಗಾಗಲೇ ಸಲಾರ್​ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸಲಾರ್​ ಸಿನಿಮಾವನ್ನು ಪ್ರಶಾಂತ್​ ನೀಲ್​ ನಿರ್ದೇಶನ ಮಾಡುತ್ತಿದ್ದರೆ, ಆದಿಪುರುಷ್​ ಚಿತ್ರಕ್ಕೆ ಬಾಲಿವುಡ್​ ನಿರ್ದೇಶಕ ಓಂರಾವತ್​ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ.

Published by:Anitha E
First published: