ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕಡೆಯ ಸಿನಿಮಾ 'ದಿಲ್ ಬೆಚಾರ ' ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಹೊಸ ದಾಖಲೆ ನಿರ್ಮಿಸಿದೆ. ಈಗ ಇದೇ ಚಿತ್ರದ ಮೊದಲ ಹಾಡು ಬಿಡುಗಡೆಯಾಗಲಿದೆ.
'ದಿಲ್ ಬೆಚಾರ' ಸಿನಿಮಾದ ಟೈಟಲ್ ಟ್ಯ್ರಾಕ್ ನಾಳೆ ಬಿಡುಗಡೆಯಾಗಲಿದೆ. ಅದಕ್ಕೂ ಮುಂಚಿತವಾಗಿ ಚಿತ್ರತಂಡ ಈ ಹಾಡಿನ ಟೀಸರ್ ಬಿಡುಗಡೆ ಮಾಡಿದೆ. ಇದರಲ್ಲಿ ಸುಶಾಂತ್ ಸಖತ್ ಸ್ಟೆಪ್ ಹಾಕಿರುವ ವಿಡಿಯೋ ಇದೆ.
ನಾಳೆ ಮಧ್ಯಾಹ್ನ 12ಕ್ಕೆ ಸರಿಯಾಗಿ 'ದಿಲ್ ಬೆಚಾರ' ಚಿತ್ರದ ಟೈಟಲ್ ಟ್ರ್ಯಾಕ್ ಲೋಕಾರ್ಪಣೆಗೊಳ್ಳಲಿದೆ. ಸುಶಾಂತ್ ಅಭಿಮಾನಿಗಳು ಈ ಸಿನಿಮಾ ಕುರಿತಾದ ಅಪ್ಟೇಟ್ಸ್ಗಾಗಿ ಕಾತರರಾಗಿದ್ದಾರೆ. ಈಗ ಈ ಟೀಸರ್ ಅನ್ನು ಟ್ರೆಂಡ್ ಮಾಡುವ ಪ್ರಯತ್ನದಲ್ಲಿದ್ದಾರೆ ನೆಟ್ಟಿಗರು.
ಇನ್ನು ಬಿ-ಟೌನ್ ಸ್ಟಾರ್ ನಟ-ನಟಿಯರು ಸ್ವಯಂಪ್ರೇರಿತರಾಗಿ ಈ ಸಿನಿಮಾದ ಪ್ರಚಾರ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
#VidyutJammwal urges his fans to support late #SushantSinghRajput’s #DilBechara when it is available to stream. pic.twitter.com/2mHKqKEN6p
ಸುಶಾಂತ್ ಅಭಿನಯದ ಕೊನೆಯ ಸಿನಿಮಾ ಒಟಿಟಿ ಮೂಲಕ ಡಿಸ್ನಿ ಪ್ಲಸ್ ಹಾಟ್ಸ್ಟಾರ್ ಮಲ್ಟಿಪ್ಲೆಕ್ಸ್ನಲ್ಲಿ ರಿಲೀಸ್ ಆಗಲಿದೆ. ಈ ಚಿತ್ರವನ್ನು ಕಿರುತೆರೆಯಲ್ಲಿ ನೋಡಲು ಇಷ್ಟವಿಲ್ಲದಿದ್ದರೂ, ಅಭಿಮಾನಿಗಳು ಬೇರೆ ಆಯ್ಕೆ ಇಲ್ಲದೆ ನೋಡಲೇ ಬೇಕಾಗಿದೆ.
Jagdeep Passes Away: 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯದ ಹೊಳೆ ಹರಿಸಿದ್ದ ನಟ ಇನ್ನಿಲ್ಲ..!
ಇದನ್ನೂ ಓದಿ: Susheel Gowda Suicide: ಆತ್ಮಹತ್ಯೆಗೆ ಶರಣಾದ ಉದಯೋನ್ಮುಖ ನಟ ಸುಶೀಲ್: ಭಾವುಕರಾಗಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ದುನಿಯಾ ವಿಜಿ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ