Bulbbul: ದರ್ಶನ್​ ಸಿನಿಮಾದ ಟೈಟಲ್​ ಅನ್ನೇ ತಮ್ಮ ಚಿತ್ರಕ್ಕೆ ಇಟ್ಟ ಅನುಷ್ಕಾ ಶರ್ಮಾ..!

Anushka Sharma: ಅನುಷ್ಕಾ ಶರ್ಮಾ ಹಾಗೂ ಅವರ ಅಣ್ಣ ಕರ್ಣೇಶ್​ ಶರ್ಮಾ ಹೊಸ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆದರೆ ಈ ಸಿನಿಮಾ ಚಿತ್ರಮಂದಿರದಲ್ಲಿ ತೆರೆ ಕಾಣುವುದಿಲ್ಲ. ಈ ಸಿನಿಮಾವನ್ನು ಡಿಜಿಟಲ್​ ವೇದಿಕೆಗೆಂದೇ ಮಾಡುತ್ತಿದ್ದಾರಂತೆ.

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ

  • Share this:
ಅನುಷ್ಕಾ ಶರ್ಮಾ ನಿರ್ಮಾಪಕಿಯಾಗಿ ಈಗಾಗಲೇ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಪಾತಾಲ್​ ಲೋಕ್​ ವೆಬ್​ ಸರಣಿ ಮೂಲಕ ಡಿಜಿಟಲ್​ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಪಾತಾಲ್​ ಲೋಕ್​ ವೆಬ್​ ಸರಣಿಯ ಯಶಸ್ಸಿನ ನಂತರ ಈಗ ತಮ್ಮ ಮತ್ತೊಂದು ಹೊಸ ಸಿನಿಮಾ ಪ್ರಕಟಿಸಿದ್ದಾರೆ.

ಅನುಷ್ಕಾ ಶರ್ಮಾ ಹಾಗೂ ಅವರ ಅಣ್ಣ ಕರ್ಣೇಶ್​ ಶರ್ಮಾ ಸೇರಿ ಹೊಸ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಆದರೆ ಈ ಸಿನಿಮಾ ಚಿತ್ರಮಂದಿರದಲ್ಲಿ ತೆರೆ ಕಾಣುವುದಿಲ್ಲ. ಈ ಸಿನಿಮಾವನ್ನು ಡಿಜಿಟಲ್​ ವೇದಿಕೆಗೆಂದೇ ಮಾಡುತ್ತಿದ್ದಾರಂತೆ.

Anushka Sharma and Virat Kohli Wish Each Other Happy Anniversary with Romantic Throwback Pics
ವಿರುಷ್ಕಾ


ಅನುಷ್ಕಾ ಶರ್ಮಾ ಅವರ ಈ ಹೊಸ ಸಿನಿಮಾದ ಹೆಸರು ಬುಲ್​ಬುಲ್ (Bulbbul) ಹಾರರ್ ಥ್ರಿಲ್ಲರ್​ ಸಿನಿಮಾ ಆಗಿದೆ. ಅನುಷ್ಕಾ ಈ ಹಿಂದೆ 'ಎನ್​ಎಚ್​ 10', 'ಪರಿ', 'ಪಿಲ್ಲೌರಿ'ಯಂತಹ ಕ್ರೈಂ ಹಾಗೂ ಹಾರರ್​ ಥ್ರಿಲ್ಲರ್​ ಸಿನಿಮಾಗಳನ್ನೇ ಮಾಡಿದ್ದಾರೆ. ಈಗ ಮತ್ತೊಂದು ಹಾರರ್​ ಥ್ರಿಲ್ಲರ್​ಗೆ ಕೈ ಹಾಕಿದ್ದಾರೆ. ಆ ಸಿನಿಮಾದ ಫಸ್ಟ್​ ಲುಕ್​ ವಿಡಿಯೋ ಇಲ್ಲಿದೆ ನೋಡಿ.
ಮಾಟ-ಮಂತ್ರದ ಕತೆಯಾಧಾರಿತ ಸೂಪರ್​ನ್ಯಾಚುರಲ್ ಹಾರರ್​ ಥ್ರಿಲ್ಲರ್ 'ಬುಲ್​ಬುಲ್​ ' ಜೂನ್​ 24ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ತೆರೆ ಕಾಣಲಿದೆ. ಹೀಗೆಂದು ಅನುಷ್ಕಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಫಸ್ಟ್​ಲುಕ್​ ವಿಡಿಯೋ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Priety Zinta: ​ಲಾಕ್​ಡೌನ್​ನಲ್ಲಿ ಬಾರ್ಬರ್​ ಆದ ಪ್ರೀತಿ ಜಿಂಟಾ: ವಿಡಿಯೋ ನೋಡಿ ಮೆಚ್ಚಿಕೊಂಡ ಬಿ-ಟೌನ್ ಸ್ನೇಹಿತರು​..!

ದರ್ಶನ್​ ಹಾಗೂ ರಚಿತಾ ರಾಮ್​ ಅಭಿನಯದ 'ಬುಲ್​ಬುಲ್'​ ಸಿನಿಮಾದ ಹೆಸರನ್ನೇ ತಮ್ಮ ಚಿತ್ರಕ್ಕೂ ಇಟ್ಟಿದ್ದಾರೆ. ದರ್ಶನ್​ ಅವರ ಸಿನಿಮಾ ರೊಮ್ಯಾಂಟಿಕ್​ ಲವ್ ಸ್ಟೋರಿಯಾಗಿದ್ದರೆ, ಅನುಷ್ಕಾರ ಈ ಚಿತ್ರ ಹಾರರ್​ ಥ್ರಿಲ್ಲರ್​ ಆಗಿದೆ.

Nikhil-Revathi: ಮುದ್ದಿನ ಮಡದಿಗೆ ಸಾಮಾಜಿಕ ಜಾಲತಾಣದ ಮೂಲಕ ರೊಮ್ಯಾಂಟಿಕ್​ ಸಂದೇಶ ಕೊಟ್ಟ ನಿಖಿಲ್​..! 

ಇದನ್ನೂ ಓದಿ: Tongue Twister Challenge: ಗುಲಾಬೊ ಸಿತಾಬೊ ಚಾಲೆಂಜ್​ ಸ್ವೀಕರಿಸಿದ ಸೆಲೆಬ್ರಿಟಿಗಳಲ್ಲಿ ಯಾರು ಉತ್ತಮರು..?
First published: