Chiranjeevi Sarja: ಒಂದು ದಿನ ಮೊದಲೇ ನಡೆಯಿತು ಚಿರು ಸರ್ಜಾ ತಿಂಗಳ ತಿಥಿ!; ಇಲ್ಲಿದೆ ಕಾರಣ

ಕನ್ನಡ ಚಿತ್ರರಂಗದ ಯುವ ಸಾಮ್ರಾಟ್, ಸ್ಯಾಂಡಲ್ವುಡ್ನ ರಾ ಸ್ಟಾರ್ ಚಿರು ಸರ್ಜಾ ನಮ್ಮನ್ನಗಲಿ ಇಂದಿಗೆ ಒಂದು ತಿಂಗಳೇ ಕಳೆದಿದೆ. ಆದರೂ ಅವರ ನೆನಪುಗಳು ಈಗಲೂ ಪ್ರತಿಯೊಬ್ಬ ಸಿನಿಪ್ರೇಮಿಯನ್ನೂ ಕಾಡುತ್ತಲೇ ಇದೆ. ಅದಕ್ಕೆ ಕಾರಣ ಅವರ ಸರಳ ವ್ಯಕ್ತಿತ್ವ, ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಮಾತನಾಡಿಸುತ್ತಿದ್ದ ರೀತಿ, ಕಿರಿಯರಿಗೆ ಅಣ್ಣನಂತಿದ್ದರೆ, ಹಿರಿಯರಿಗೆ ಗೌರವ ನೀಡುತ್ತಿದ್ದ ವ್ಯಕ್ತಿತ್ವ, ಹೀಗೆ ಹಲವು ಉತ್ತಮ ಗುಣಗಳಿಂದ ಎಲ್ಲರಿಗೂ ಆತ್ಮೀಯರಾಗಿದ್ದವರು ಚಿರು ಸರ್ಜಾ. ಈಗ ಎಲ್ಲರ ಮನಗಳಲ್ಲಿ ಚಿರಂಜೀವಿಯಾಗಿದ್ದಾರೆ.

news18-kannada
Updated:July 7, 2020, 3:20 PM IST
Chiranjeevi Sarja: ಒಂದು ದಿನ ಮೊದಲೇ ನಡೆಯಿತು ಚಿರು ಸರ್ಜಾ ತಿಂಗಳ ತಿಥಿ!; ಇಲ್ಲಿದೆ ಕಾರಣ
ಚಿರಂಜೀವಿ ಸರ್ಜಾ
  • Share this:
ಚಿರು ಸರ್ಜಾ ಅವರ ಮೊದಲ ತಿಂಗಳ ತಿಥಿ ಒಂದು ದಿನ ಮುನ್ನವೇ ನೆರವೇರಿಸಲಾಗಿದೆ. ಕಳೆದ ಜೂನ್ 7ರಂದು ವಿಧಿವಶರಾಗಿದ್ದ ಚಿರು ಸರ್ಜಾ, ಮೊದಲ ತಿಂಗಳ ಪೂಜೆ, ಇವತ್ತು ಮಾಡಬೇಕಿತ್ತು. ಆದರೆ ಮಂಗಳವಾರ ದಿನ ಚೆನ್ನಾಗಿಲ್ಲ ಎಂದು ಪುರೋಹಿತರು ತಿಳಿಸಿದ ಕಾರಣ ಸರ್ಜಾ ಕುಟುಂಬ ಒಂದು ದಿನ ಮುನ್ನವೇ ಅರ್ಥಾತ್ ಜುಲೈ 6ರ ಸೋಮವಾರದಂದೇ ಪೂಜೆ ನೆರವೇರಿಸಿದೆ.

ಚಿರು ಪತ್ನಿ ನಟಿ ಮೇಘನಾ ರಾಜ್ ಸರ್ಜಾ, ಸಹೋದರ ಧ್ರುವಾ ಸರ್ಜಾ ಸೇರಿದಂತೆ ಅವರ ಕುಟುಂಬದವರು ಹಾಗೂ ಕೆಲವೇ ಸಂಬಂಧಿಕರು ಕನಕಪುರ ರಸ್ತೆಯ ಧ್ರುವ ಸರ್ಜಾ ಒಡೆತನದ ಬೃಂದಾವನ ಫಾರ್ಮ್​ ಹೌಸ್​ಗೆ ತೆರಳಿ ನಿನ್ನೆ ಚಿರು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಖಾಸಗಿ ಕಾರ್ಯಕ್ರಮವಾಗಿದ್ದ ಕಾರಣ ಅಭಿಮಾನಿಗಳಿಗಾಗಲೀ, ಸಾರ್ವಜನಿಕರಿಗಾಗಲೀ ಕಾರ್ಯದಲ್ಲಿ ಪ್ರವೇಶವಿರಲಿಲ್ಲ. ಹೀಗಾಗಿಯೇ ಚಿರು ಕುಟುಂಬ ಹಾಗೂ ಆತ್ಮೀಯರಷ್ಟೇ ನಿನ್ನೆಯ ಕಾರ್ಯದಲ್ಲಿ ಭಾಗಿಯಾಗಿದ್ದರು.



ಇನ್ನು ಅಣ್ಣನನ್ನು ಕಳೆದುಕೊಂಡು ಸಾಕಷ್ಟು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಕಾರಣ ಧ್ರುವಾ ಸರ್ಜಾ ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರಾಗಿತ್ತು. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ ಮಾಡದ ಕಾರಣ ಬಿಪಿ ಲೋ ಆಗಿತ್ತು ಎನ್ನಲಾಗಿದೆ. ಹೀಗಾಗಿಯೇ ಜೂನ್ ಕೊನೆಯ ವಾರ ಎರಡು ದಿನಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಔಟ್​ಪೇಷೆಂಟ್ ಆಗಿ ಚಿಕಿತ್ಸೆ ಪಡೆದಿದ್ದರಂತೆ ಧ್ರುವ. ನಿನ್ನೆ ಚಿರು ಮೊದಲ ತಿಂಗಳ ತಿಥಿಯಲ್ಲಿ ನೋಡಿದಾಗಲೂ ಧ್ರುವಾ ಮಾನಸಿಕವಾಗಿ ಮಾತ್ರವಲ್ಲ ದೈಹಿಕವಾಗಿ ಕುಗ್ಗಿರುವುದು ಗೊತ್ತಾಗುತ್ತದೆ.

ಆದರೆ ಧ್ರುವ ಆಸ್ಪತ್ರೆ ಸೇರಿರುವ ವಿಷಯ ಹೊರಬರುತ್ತಿದ್ದಂತೆಯೇ, ಅಭಿಮಾನಿಗಳು ಅವರ ಮನೆಗೆ ಧಾವಿಸಲು ಪ್ರಾರಂಭಿಸಿದ್ದರು. ಆಗಲೇ ಆಕ್ಷನ್ ಪ್ರಿನ್ಸ್, ಮತ್ತೆ ಮೊದಲಿನಂತೆಯೇ ಆಕ್ಟಿವ್ ಆಗಿ ನಿಮ್ಮೆಲ್ಲರ ಮುಂದೆ ವಾಪಸ್ಸಾಗುವೆ ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು. ಎಲ್ಲರನ್ನೂ ಸಮಾಧಾಪಡಿಸಿದ್ದರು. ಅದೇನೇ ಇರಲಿ, ಸ್ಫೂರ್ತಿಯ ಚಿಲುಮೆಯಂತಿದ್ದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತೆ ಮೊದಲಿನಂತೆ ಪುಟಿದೇಳಲಿ ಎಂಬುದೇ ಅವರ ಅಗಣ್ಯ ಅಭಿಮಾನಿಗಳ ಆಶಯ.
Published by: Rajesh Duggumane
First published: July 7, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading