ತನ್ನ ನಟನೆ ಮತ್ತು ಮಾದಕ ಮೈ ಮಾಟದಿಂದಲೇ ಹಲ್‍ಚಲ್ ಎಬ್ಬಿಸಿರುವ ದಿಶಾ ಪಾಟ್ನಿಯು (Disha Patani) ಸದ್ಯ ಬಾಲಿವುಡ್‍ನ ಬೇಡಿಕೆಯ ನಟಿ (Bollywood Actress). ಗ್ಲಾಮರ್, ನಟನೆ, ಫಿಟ್ ನೆಸ್ ಎಲ್ಲದಕ್ಕೂ ಸೈ ಎನಿಸಿಕೊಂಡಿರುವ ದಿಶಾ ಜಿರೋ ಸೈಜ್ ಮೇಂಟೆನ್ ಮಾಡಲು ಜಿಮ್‍ನಲ್ಲಿ (Gym) ಇನ್ನಿಲ್ಲದ ಸರ್ಕಸ್ ನಡೆಸುತ್ತಲೇ ಇರುತ್ತಾರೆ. ಸಿನಿಮಾ ಬಿಟ್ಟರೆ ಹೆಚ್ಚು ಹೊತ್ತು ಜಿಮ್ ನಲ್ಲಿಯೇ ತಮ್ಮ ದಿನ ಕಳೆಯುವ ದಿಶಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಜಿಮ್‍ನಲ್ಲಿ ವ್ಯಾಯಾಮ (Exercise) ಮಾಡುತ್ತಿರುವ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ.
ದಿಶಾ ಅವರ ವೈರಲ್ ವರ್ಕೌಟ್ ವಿಡಿಯೋ
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ದಿಶಾ, ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಹಾಟ್ ಫೋಟೋಗಳಿಂದಲೇ ಹೆಚ್ಚು ಹೆಸರುವಾಸಿ. ದಿಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ತುಂಡು ಬಟ್ಟೆಯ ಫೋಟೋದಿಂದ ಹಿಡಿದು ಜಿಮ್‍ನಲ್ಲಿ ಕಸರತ್ತು ಮಾಡುವ ಎಲ್ಲಾ ವಿಡಿಯೋಗಳನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಜಿಮ್‍ಗೆ ಹೋಗಲು, ವ್ಯಾಯಾಮ ಮಾಡಲು ಮನಸ್ಸಿಲ್ಲದವರು ನಟಿ ದಿಶಾ ಅವರನ್ನು ಸ್ಪೂರ್ತಿಯಾಗಿ ಪಡೆಯಬಹುದು ಎಂದರೂ ತಪ್ಪಾಗಲಾರದು. ಅಷ್ಟರಮಟ್ಟಿಗೆ ಈಕೆ ತನ್ನ ಫಿಟ್ ನೆಸ್ ಬಗ್ಗೆ ಗಮನ ಹರಿಸುತ್ತಾಳೆ.
ಇತ್ತೀಚೆಗೆ ಹಂಚಿಕೊಂಡ ವಿಡಿಯೋದಲ್ಲಿ ಏನಿದೆ
ದಿಶಾ ಪಾಟ್ನಿ ಅವರ ಇತ್ತೀಚಿನ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ "ಜೀವನದಲ್ಲಿ ಮತ್ತೊಂದು ದಿನ" ಎಂಬ ಶೀರ್ಷಿಕೆ ನೀಡಿ ಜಿಮ್ ನಲ್ಲಿ ತಾವು ವರ್ಕೌಟ್ ಮಾಡುತ್ತಿರುವ ವ್ಯಾಯಾಮದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ದಿಶಾ ಹೇಗೆ ವ್ಯಾಯಾಮದ ಮೂಲಕ ಬೆವರಿಳಿಸುತ್ತಿದ್ದಾರೆ ಎಂಬುದನ್ನು ನೋಡಬಹುದು.
ವಿಡಿಯೋ ಕ್ಲಿಪ್‌ನಲ್ಲಿ, ಆಕೆಯ ಫಿಟ್‌ನೆಸ್ ತರಬೇತುದಾರರ ಮಾರ್ಗದರ್ಶನದಲ್ಲಿ ಅವರು ಅನೇಕ ವಿಭಿನ್ನ ವ್ಯಾಯಾಮಗಳನ್ನು ಸಲೀಸಾಗಿ ಮಾಡುವುದನ್ನು ನಾವು ನೋಡಬಹುದು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ ದಿಶಾ ಅವರ ಫಿಟ್‌ನೆಸ್ ತರಬೇತುದಾರ ರಾಜೇಂದ್ರ ಧೋಲೆ, "ನನ್ನ ಜೀವನದಲ್ಲಿ ಮತ್ತೊಂದು ಭಾನುವಾರ," ಎಂದು ಕೆಲವು ಎಮೋಜಿಗಳನ್ನು ಹಾಕಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Actress Ramya: ಬ್ಯಾಂಕಾಕ್ನಲ್ಲಿ ಮೋಹಕ ತಾರೆ ರಮ್ಯಾ, ಫೋಟೋ ನೋಡಿ ದೃಷ್ಟಿ ತೆಗೆಸಿಕೊಳ್ಳಿ ಅಂದ್ರು ಫ್ಯಾನ್ಸ್
ದಿಶಾ ಪಾಟ್ನಿ ತಮ್ಮ ಫಿಟ್‌ನೆಸ್ ವಿಡಿಯೋಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದೆ, ಅವರು ಜಿಮ್‌ನಲ್ಲಿರುವ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದರು, ಅಲ್ಲಿ ಹಾಟ್ ಬೆಡಗಿ ದಿಶಾ ತಮ್ಮ ತರಬೇತುದಾರ ರಾಕೇಶ್ ಯಾದವ್ ಜೊತೆ ಕೆಲವು ಆಕ್ಷನ್ ಸೀಕ್ವೆನ್ಸ್ ಅನ್ನು ಮಾಡುತ್ತಿರುವುದನ್ನು ಕಾಣಬಹುದು. ಇನ್ನೊಂದು ವಿಡಿಯೋದಲ್ಲಿ ದಿಶಾ ಸಲೀಸಾಗಿ ವೇಟ್ ಲಿಫ್ಟ್ ಮಾಡುತ್ತಿರುವುದನ್ನು ಸಹ ನೋಡಬಹುದು.
ಗ್ಲಾಮರ್ ಲುಕ್ ಗಾಗಿಯೇ ಹೆಸರುವಾಯಿಯಾಗಿರುವ ನಟಿ
ದಿಶಾ ಪಾಟ್ನಿ ಆನ್-ಸ್ಕ್ರೀನ್ ಪ್ರದರ್ಶನಗಳ ಹೊರತಾಗಿ, ನಟಿ ತನ್ನ ಗ್ಲಾಮರ್ ಲುಕ್ ಗಾಗಿಯೇ ಹೆಸರುವಾಸಿಯಾಗಿದ್ದಾಳೆ. ನಟಿಯ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೆಚ್ಚು ಬಿಕಿನಿ ಹಾಕಿರುವ ಫೋಟೋಗಳು ಇರುವುದನ್ನು ಸಹ ಕಾಣಬಹುದು. ತುಂಡು ಬಟ್ಟೆ ಹಾಕಿದಾಗಲೆಲ್ಲಾ ಹೆಚ್ಚು ಟ್ರೋಲ್ ಆಗುವ ದಿಶಾ ಟ್ರೋಲ್‍ಗಳಿಗೆಲ್ಲಾ ತಲೆಕೆಡಿಸಿಕೊಳ್ಳದೇ ಬೋಲ್ಡ್ ಆಗಿರುವ ಫೋಟೋಗಳನ್ನು ತಮ್ಮ ಫಾಲೋವರ್ಸ್ ಗಳಿಗಾಗಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಹಾಟ್ ಫೋಟೋಗಳನ್ನು ಹಂಚಿಕೊಳ್ಳುವಲ್ಲಿ ದಿಶಾ ಪಾಟ್ನಿ ಹಿಂಜರಿಯುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ಅನೇಕ ಫೋಟೋಗಳು ವೈರಲ್ ಆಗಿವೆ. ಅವು ಪಡ್ಡೆ ಹುಡುಗರ ನಿದ್ದೆಕೆಡಿಸಿವೆ ಸಹ.
ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿ
ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ, ದಿಶಾ ಪಾಟ್ನಿ ಕೈಯಲ್ಲಿ ಹಲವಾರು ಚಲನಚಿತ್ರಗಳನ್ನು ಹೊಂದಿದ್ದಾರೆ. ತೆಲುಗು ಚಿತ್ರ ಲೋಫರ್ ಮೂಲಕ ವರುಣ್ ತೇಜ್ ರವರ ಜೊತೆ ನಟಿಸಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ ದಿಶಾ ಬಾಲಿವುಡ್ ಬೇಡಿಕೆಯ ನಟಿಯರಲ್ಲಿ ಒಬ್ಬರು.
ಇದನ್ನೂ ಓದಿ: Urfi Javed: ಪ್ಯಾಂಟ್ ಹಾಕಿ, ಬಟನ್ ಹಾಕೋದು ಮರೆತಳು! ಏನಪ್ಪಾ ಇವ್ಳ ಟಾರ್ಚರ್- ಬಿಟ್ಬಿಡಮ್ಮಾ ತಾಯಿ ಎಂದ ನೆಟ್ಟಿಗರು
ಸದ್ಯ ಧರ್ಮ ಪ್ರೊಡಕ್ಷನ್ಸ್‌ನ ಯೋಧಾ ಚಿತ್ರದಲ್ಲಿ ದಿಶಾ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ನಟಿಸಲಿದ್ದಾರೆ. ಇನ್ನೂ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಸಹ-ನಟರಾದ ಮೋಹಿತ್ ಸೂರಿ ಅವರ ಏಕ್ ವಿಲನ್ ರಿಟರ್ನ್ಸ್‌ನಲ್ಲಿಯೂ ದಿಶಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ