Meghana Raj: ಹೇಗಿದೆ ಗೊತ್ತಾ ಚಿರಂಜೀವಿ ಸರ್ಜಾ-ಮೇಘನಾ ರಾಜ್​ ಮಗು

ಮಗುವನ್ನು ಎತ್ತಿಕೊಂಡಿರುವ ಧ್ರುವಾ

ಮಗುವನ್ನು ಎತ್ತಿಕೊಂಡಿರುವ ಧ್ರುವಾ

ಮೇಘನಾ ರಾಜ್​ ಮುದ್ದಾದ ಗಂಡುಮಗಿವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಚಿರಂಜೀವಿ ತಮ್ಮ ಧ್ರುವಾ ಸರ್ಜಾ ಎತ್ತಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

 • Share this:

  ಇಂದು ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್​ ನಿಶ್ಚಿತಾರ್ಥ ಮಾಡಿಕೊಂಡ ದಿನ. ಇದೇ ದಿನ ಸರ್ಜಾ ಕುಟುಂಬಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಇಂದು ಮೇಘನಾ ರಾಜ್​ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಸರ್ಜಾ ಕುಟುಂಬಕ್ಕೆ ಜೂನಿಯರ್​ ಸರ್ಜಾ ಅವರ ಆಗಮನವಾಗಿದೆ. ವೈದ್ಯರು ಡೇಟ್​ ಕೊಟ್ಟ ಹಿನ್ನೆಲೆಯಲ್ಲಿ ಮೇಘನಾ ರಾಜ್​ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಗ್ಗೆ 11:07ಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


  ಕೆಲ ತಿಂಗಳ ಹಿಂದಷ್ಟೇ ಗಂಡ ಚಿರಂಜೀವಿ ಸರ್ಜಾ ಮೃತಪಟ್ಟಿದ್ದರು. ಅವರು ಮೃತಪಟ್ಟಾಗ ಮೇಘನಾಗೆ ಐದು ತಿಂಗಳು ತುಂಬಿತ್ತು. ಈಗ ಅವರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಚಿರಂಜೀವಿ ತಮ್ಮ ಧ್ರುವಾ ಸರ್ಜಾ ಎತ್ತಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
  ಮೇಘನಾ ರಾಜ್​ಗೆ ಮಗು ಜನಿಸುತ್ತಿದ್ದಂತೆ ಚಿರು ಸರ್ಜಾ ಅಜ್ಜಿ ಲಕ್ಷ್ಮೀದೇವಿ ಆಸ್ಪತ್ರೆಯಿಂದ ಹೊರಬಂದು, ಸ್ವೀಟ್ಸ್ ಖರೀದಿಸಿದ್ದಾರೆ.
  ಸರ್ಜಾ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿರುವುದು ಎಲ್ಲರಲ್ಲೂ ಸಂತಸ ತಂದಿದೆ. ಇತ್ತೀಚೆಗೆ ಅದ್ದೂರಿಯಾಗಿ ಮೇಘನಾಗೆ ಸೀಮಂತ ಕಾರ್ಯಕ್ರಮ ಮಾಡಲಾಗಿತ್ತು.

  Published by:Rajesh Duggumane
  First published: