777 Charlie ಸಿನಿಮಾದಲ್ಲಿ ಚಾರ್ಲಿಗೆ ಕೊಟ್ಟ ಸಂಬಳ ಎಷ್ಟು ಗೊತ್ತಾ? ಹೀರೋಗೂ ಇಷ್ಟು ಸಂಭಾವನೆ ಇಲ್ವಂತೆ

Charlie: ಚಾರ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದ್ದಾಳೆ. ಈ ಸಿನಿಮಾದಲ್ಲಿ ಮನುಷ್ಯ ಮತ್ತು ನಾಯಿಯ ಸಂಬಂಧವನ್ನು ಬಹಳ ಭಾವನಾತ್ಮಕವಾಗಿ ತೋರಿಸಲಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾವನ್ನು ತಯಾರಿಸುವುದು ಸುಲಭವಲ್ಲ.

ಚಾರ್ಲಿ

ಚಾರ್ಲಿ

  • Share this:
ಸದ್ಯ ಸ್ಯಾಂಡಲ್​ವುಡ್​ನಲ್ಲಿ (Sandalwood)  ಒಂದೇ ಸುದ್ದಿ, ಅದು ಚಾರ್ಲಿ (Charlie) , ಚಾರ್ಲಿ, ಚಾರ್ಲಿ. ಈ 777 ಚಾರ್ಲಿ ಸಿನಿಮಾ ಬಿಡುಗಡೆಯಾದಾಗಿನಿಂದ ಎಲ್ಲರ ಬಾಯಲ್ಲಿ ಇದೇ ಹೆಸರು. ಅಷ್ಟರ ಮಟ್ಟಿಗೆ ಈ ಸಿನಿಮಾ (Film) ಫೇಮಸ್​ ಆಗಿದೆ. ಮೊದಲು ರಕ್ಷಿತ್ ಶೆಟ್ಟಿ (Rakshit Shetty) ಸಿನಿಮಾ ಎಂದು ಇದನ್ನು ಹೇಳಲಾಗುತ್ತಿತ್ತು ಆದರೆ, ಈಗ ಅದು ಚಾರ್ಲಿಯ ಸಿನಿಮಾ ಅಂತ ಆಗಿದೆ. ಇದರಲ್ಲಿ ಎಲ್ಲರೂ ಚಾರ್ಲಿಯೇ ಹೀರೋ ಅನ್ನುತ್ತಿದ್ದಾರೆ. ಇದು ವೀಕ್ಷಕರ ಮನಸ್ಸಿನ ಮೇಲೆ ಈ ಮುದ್ದು ನಾಯಿ ಬೀರಿದ ಪ್ರಭಾವ ಎನ್ನಬಹುದು.

ಚಾರ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುತ್ತಿದ್ದಾಳೆ. ಈ ಸಿನಿಮಾದಲ್ಲಿ ಮನುಷ್ಯ ಮತ್ತು ನಾಯಿಯ ಸಂಬಂಧವನ್ನು ಬಹಳ ಭಾವನಾತ್ಮಕವಾಗಿ ತೋರಿಸಲಾಗಿದೆ. ಸಾಮಾನ್ಯವಾಗಿ ಯಾವುದೇ ಸಿನಿಮಾವನ್ನು ತಯಾರಿಸುವುದು ಸುಲಭವಲ್ಲ. ಅದಕ್ಕೆ ಬಹಳಷ್ಟು ಪರಿಶ್ರಮ ಬೇಕು. ಅದರಲ್ಲೂ ಒಂದು ನಾಯಿಯನ್ನು ಇಟ್ಟುಕೊಂಡು ಸಿನಿಮಾ ಮಾಡಿರುವುದು ಬಹಳ ಗ್ರೇಟ್​.

ಚಾರ್ಲಿ ಸಂಭಾವನೆ ಎಷ್ಟು ಗೊತ್ತಾ? 

ಚಿತ್ರತಂಡ ಹಾಗೂ ಚಾರ್ಲಿ ನಡುವೆ ಒಳ್ಳೆಯ ಸಂಬಂಧವಿದೆ. ಕುಟುಂಬದ ಸದ್ಯಸ್ಯೆ ಎನ್ನುವ ರೀತಿ ಚಾರ್ಲಿಯನ್ನು ನೋಡಿಕೊಳ್ಳಲಾಗುತ್ತಿದೆ. ರಕ್ಷಿತ್ ಶೆಟ್ಟಿ ಈ ಸಿನಿಮಾದ ಹೀರೋ ಆಗಿದ್ದರೂ ಸಹ ಅವರು ಮಾತ್ರ ಚಾರ್ಲಿಯೇ ಹೀರೋ ಎಂದಿದ್ದಾರೆ. ಹೌದು, ಇತ್ತೀಚೆಗೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಯೂಟ್ಯೂಬ್​ ಚಾನೆಲ್​ಗೆ ನೀಡಿದ್ದ ಸಂದರ್ಶನದಲ್ಲಿ ರಕ್ಷಿತ್ ಮಾತನಾಡಿದ್ದು, ಚಾರ್ಲಿ ಇಲ್ಲದೇ ಧರ್ಮ ಇಲ್ಲ, ಧರ್ಮ ಇಲ್ಲದೇ ಚಾರ್ಲಿ ಇಲ್ಲ ಎಂದಿದ್ದಾರೆ.   ಇನ್ನು ಹಲವಾರು ಜನರು ತಮಾಷೆಗೆ ಚಾರ್ಲಿ ನಿಜವಾದ ಹೀರೋ ಎಂದರೆ ಅದರ ಸಂಭಾವನೆ ಎಷ್ಟು ಎಂದು ಕೇಳಿದ್ದರು. ಅದಕ್ಕೆ ಈಗ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ನಾಲ್ಕನೇ ದಿನವೂ ಚಾರ್ಲಿ ಅಬ್ಬರ, ಸಿನಿಮಾ ಒಟ್ಟು ಕಲೆಕ್ಷನ್ ಇಷ್ಟೊಂದಾ?

ಹೌದು, ಚಾರ್ಲಿ ಸಂಭಾವನೆಯ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ರಕ್ಷಿತ್ ಒಂದಷ್ಟಾಗಿದೆ, ಅಂದರೆ  ಕೋಟಿ ಕೋಟಿ ಸಂಭಾವನೆಯಾಗಿದೆ ಎಂದು ನಗುತ್ತಾ ಹೇಳಿದ್ದಾರೆ.  ಈ ಸಿನಿಮಾ ಮಾಡಲು ಬಹಳಷ್ಟು ಸಮಯ ತೆಗೆದುಕೊಂಡಿದೆ. ಸುಮಾರು ಮೂರು ವರ್ಷಗಳಿಗಿಂತ ಹೆಚ್ಚು ವರ್ಷಗಳನ್ನು ಈ ಸಿನಿಮಾ ತೆಗೆದುಕೊಂಡಿದೆ.


ಲಾಕ್​ ಡೌನ್ , ಕೊರೊನಾ ಜೊತೆಗೆ ನಾಯಿಯ ಜೊತೆ ಶೂಟಿಂಗ್ ಮಾಡುವುದು ಸಹ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಈ ಸಿನಿಮಾವನ್ನು ಬಹಳ ಕಷ್ಟಪಟ್ಟು ಮಾಡಲಾಗಿದ್ದು, ಅದಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಉತ್ತಮವಾಗಿದ್ದು, ಚಿತ್ರತಂಡಕ್ಕೆ ಸಂತೋಷವಾಗಿದೆ.

ಈ ಸಿನಿಮಾ ಮೊದಲ ದಿನ 6 ಕೋಟಿ, ಎರಡನೇ ದಿನ 8 ಕೋಟಿ ಹಾಗೂ ಮೂರನೇ ದಿನ 10 ಕೋಟಿ ಗಳಿಕೆ ಮಾಡಿತ್ತು ನಾಲ್ಕನೇ ದಿನ ಸ್ವಲ್ಪ ಗಳಿಕೆ ಕಡಿಮೆಯಾಗಿದ್ದು ಕೇವಲ 5 ಕೋಟಿ ಕಲೆಕ್ಷನ್ ಮಾಡಿದೆ. ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.  ಎಲ್ಲೆಡೆ ಚಾರ್ಲಿ ಹವಾ ಇದೆ ಎನ್ನುವುದು ಸುಳ್ಳಲ್ಲ. ನಟ ರಕ್ಷಿತ್ ಶೆಟ್ಟಿ ಎಷ್ಟು ಫೇಮಸ್​ ಆಗಿದ್ದಾರೋ ಅದಕ್ಕಿಂತ ಹೆಚ್ಚು ಚಾರ್ಲಿ ಫೇಮಸ್​ ಆಗಿದೆ. ಅದಕ್ಕಾಗಿಯೇ ಒಂದು ಅಭಿಮಾನಿ ಬಳಗವಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಅದರ ಕಟೌಟ್​ ಅನ್ನು ಕೂಡ ತಮಿಳುನಾಡಿದ ಚಿತ್ರ ಮಂದಿರದಲ್ಲಿ ಹಾಕಲಾಗಿತ್ತು. ಅಷ್ಟರ ಮಟ್ಟಿಗೆ ಚಾರ್ಲಿ ಕ್ರೇಜ್​ ಇದೆ.

ಇದನ್ನೂ ಓದಿ: ಮಗನಿಗೆ ಮುದ್ದಾದ ಹೆಸರಿಟ್ಟ ಸಂಜನಾ ಗಲ್ರಾನಿ, ಇನ್ಮೇಲೆ ಡೈರೆಕ್ಟಾಗಿ ಅವನನ್ನೇ ಮೀಟ್ ಮಾಡ್ಬಹುದಂತೆ

ಎಲ್ಲರ ಮನ ಗೆದ್ದ ಸಿನಿಮಾ

ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಮನುಷ್ಯ ಹಾಗೂ ನಾಯಿಯ ನಡುವಿನ ಪ್ರೀತಿಯ ಸಂಬಂಧವನ್ನು ಸಾರಿ ಹೇಳುತ್ತದೆ. 166 ನಿಮಿಷಗಳ ಈ ಸಿನಿಮಾ ಜೀವನದಲ್ಲಿ ನೋವನ್ನು ಅನುಭವಿಸಿ, ಒಬ್ಬಂಟಿಯಾಗಿ ಬದುಕುವ ವ್ಯಕ್ತಿಯ ಕಥೆಯನ್ನು  ಹೇಳುತ್ತದೆ. ಮನೆ, ಫ್ಯಾಕ್ಟರಿ ಹೀಗೆ ಯಾಂತ್ರಿಕವಾಗಿ ಕಾಲ ಕಳೆಯುವ ಈ ವ್ಯಕ್ತಿಯ ಬದುಕು  ಜಗಳ, ಇಡ್ಲಿ ತಿನ್ನುವುದು, ಧೂಮಪಾನ ಮತ್ತು ಬಿಯರ್ ಕುಡಿಯುವುದು ಇಷ್ಟೇ ಎನ್ನುವಂತಿರುತ್ತದೆ. ಆದರೆ ಆಕಸ್ಮಿಕವಾಗಿ ಹೆಣ್ಣು ನಾಯಿಯನ್ನು ಭೇಟಿಯಾದಾಗ ಅವನ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ.ಇದು ಈ ಚಿತ್ರದ ಎಳೆಯಾಗಿದ್ದು, ಜನರು ಮಿಸ್​ ಮಾಡದೇ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Published by:Sandhya M
First published: