• Home
  • »
  • News
  • »
  • entertainment
  • »
  • OTT Movies: ಒಟಿಟಿಯಲ್ಲಿ ಬಿಡುಗಡೆಯಾದ ಬೆಸ್ಟ್ ಚಿತ್ರಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮೂವಿ ಲಿಸ್ಟ್

OTT Movies: ಒಟಿಟಿಯಲ್ಲಿ ಬಿಡುಗಡೆಯಾದ ಬೆಸ್ಟ್ ಚಿತ್ರಗಳನ್ನು ಹುಡುಕುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಮೂವಿ ಲಿಸ್ಟ್

ಓಟಿಟಿಯಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ

ಓಟಿಟಿಯಲ್ಲಿ ಈ ವಾರ ಬಿಡುಗಡೆಯಾಗುತ್ತಿರುವ ಚಿತ್ರ

ನೀವು ಒಟಿಟಿಯಲ್ಲಿ ಒಳ್ಳೆಯ ಚಲನಚಿತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದರೆ ಈ ಆರ್ಟಿಕಲ್ ಓದಿ. ನಿಮ್ಮಿಷ್ಟದ ಸಿನಿಮಾ ನೋಡಿ.

  • News18 Kannada
  • Last Updated :
  • New Delhi, India
  • Share this:

ಸುಮಾರು ಎರಡೂವರೆ ವರ್ಷಗಳ ಹಿಂದೆ ಜನರು ಈ ಓಟಿಟಿ ಪ್ಲಾಟ್‌ಫಾರ್ಮ್ ಗಳ (OTT Platform) ಬಗ್ಗೆ ಅಷ್ಟಾಗಿ ಒಲವನ್ನು ಹೊಂದಿರಲಿಲ್ಲ ಅಂತ ಹೇಳಬಹುದು. ಕೇವಲ ಕೆಲವೇ ಕೆಲವು ಜನರು ಇವುಗಳಲ್ಲಿ ಚಿತ್ರಗಳನ್ನು ನೋಡುತ್ತಿದ್ದರು. ಈ ಓಟಿಟಿ ಹವಾ ತುಂಬಾನೇ ಹೆಚ್ಚಾದದ್ದು ಈ ಕೋವಿಡ್-19 (Covid-19) ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಬಹುತೇಕ ಚಿತ್ರ ಮಂದಿರಗಳಿಗೆ (Theatre) ಬೀಗ ಹಾಕಲಾಗಿತ್ತು. ಕೆಲವು ತಿಂಗಳುಗಳ ಹಿಂದೆಯಷ್ಟೆ ಸಂಪೂರ್ಣವಾಗಿ ಚಿತ್ರ ಮಂದಿರಗಳು ತೆರೆದಿದ್ದರೂ ಸಹ ಜನರು (People) ಮಾತ್ರ ಓಟಿಟಿಯಲ್ಲಿ ಬರುತ್ತಿರುವ ಚಿತ್ರಗಳನ್ನು ನೋಡುವ ಹೊಸ ಅಭ್ಯಾಸವನ್ನು ಆ ಗ್ಯಾಪ್ ಅಲ್ಲಿ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


ಹೌದು  ಪ್ರತಿ ವಾರ ಯಾವುದು ಹೊಸ ಚಿತ್ರ ಥಿಯೇಟರ್ ನಲ್ಲಿ ಬಿಡುಗಡೆಯಾಗುತ್ತೆ ಅಂತ ಹಿಂದೆ ಜನರು ಕಾಯುತ್ತಾ ಕುಳಿತಿರುತ್ತಿದ್ದರು. ಈಗ ಓಟಿಟಿಗಳಲ್ಲಿ ಯಾವ ಹೊಸ ಚಿತ್ರ ಬಿಡುಗಡೆಯಾಗುತ್ತದೆ ಮತ್ತು ಯಾವ ಹಳೆಯ ಚಿತ್ರಗಳನ್ನು ಈಗ ಓಟಿಟಿಯಲ್ಲಿ ಹಾಕುತ್ತಾರೆ ಅಂತ ಅಷ್ಟೇ ಕಾತುರತೆಯಿಂದ ಕಾಯುತ್ತಿರುತ್ತಾರೆ ಎಂದು ಹೇಳಿದರೆ ಸುಳ್ಳಲ್ಲ.


ಈಗ ಸಿನಿ ಪ್ರೇಕ್ಷಕರು ಮತ್ತು ಅಭಿಮಾನಿಗಳು ತಮ್ಮ ನೆಚ್ಚಿನ ಚಿತ್ರಗಳನ್ನು ಈ ಓಟಿಟಿಯಲ್ಲಿ ಪದೇ ಪದೇ ನೋಡುತ್ತಾ ಇರುತ್ತಾರೆ. ನೀವು ಈಗ ಈ ಓಟಿಟಿ ಪ್ಲಾಟ್‌ಫಾರ್ಮ್ ಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಝೀ5, ಹಾಟ್‌ಸ್ಟಾರ್, ಸೋನಿ ಲಿವ್ ಮತ್ತು ಇತರ ಓಟಿಟಿ ಪ್ಲಾಟ್‌ಫಾರ್ಮ್ ಗಳಲ್ಲಿ ಈ ವಾರ ಬರುವ ಚಿತ್ರಗಳ ಪಟ್ಟಿಗಾಗಿ ಎದುರು ನೋಡುತ್ತಿದ್ದರೆ, ಇಲ್ಲಿದೆ ನೋಡಿ ಆ ಚಿತ್ರಗಳ ಪಟ್ಟಿ. ನಿಮ್ಮ ವಾರಾಂತ್ಯದ ಓಟಿಟಿ ವಾಚ್ ಲಿಸ್ಟ್ ನಲ್ಲಿ ಇವುಗಳಲ್ಲಿ ಯಾವುದು ಸ್ಪಾಟ್ ಗೆ ಅರ್ಹವಾಗಿದೆ ಎಂದು ನಿರ್ಧರಿಸಲು ಮುಂದೆ ಓದಿ.


1. ಎಫ್ 3
ಎಫ್ 3 ಎನ್ನುವುದು ತೆಲುಗು ಕಾಮಿಡಿ ಚಿತ್ರವಾಗಿದ್ದು, ಎಂಟು ವಾರಗಳ ಓಟಿಟಿ ಬಿಡುಗಡೆ ವಿಂಡೋಗೆ ಅಂಟಿಕೊಂಡ ಕೆಲವೇ ಕೆಲವು ತೆಲುಗು ಚಿತ್ರಗಳಲ್ಲಿ ಈ ಹಾಸ್ಯಭರಿತವಾದ ಚಿತ್ರ ಕೂಡ ಒಂದಾಗಿದೆ. ಇದು ಜುಲೈ 22 ರಿಂದ ಸೋನಿ ಲಿವ್ ನಲ್ಲಿ ಪ್ರಸಾರವಾಗಿದೆ, ಇದು ಅದರ ಥಿಯೇಟರ್ ಬಿಡುಗಡೆಯಿಂದ 8 ವಾರಗಳ ನಂತರ ಓಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಟ ವೆಂಕಟೇಶ್ ಮತ್ತು ವರುಣ್ ತೇಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ ಮತ್ತು ಅನಿಲ್ ರವಿಪುಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.


ಇದನ್ನೂ ಓದಿ:  Rocketry Movie: ಓಟಿಟಿಯಲ್ಲಿ ರಾಕೆಟ್ರಿ ಸಿನಿಮಾ, ಸ್ಪೆಷಲ್​ ಸ್ಟ್ರೀಮಿಂಗ್ ಡೇಟ್​ ಅನೌನ್ಸ್​ !


2. ದಿ ಗ್ರೇ ಮ್ಯಾನ್
ದಿ ಗ್ರೇ ಮ್ಯಾನ್ ಇದುವರೆಗಿನ ನೆಟ್‌ಫ್ಲಿಕ್ಸ್ ನ ಅತ್ಯಂತ ದುಬಾರಿ ಚಿತ್ರವಾಗಿದೆ ಮತ್ತು ಇದರಲ್ಲಿ ರಿಯಾನ್ ಗೋಸ್ಲಿಂಗ್, ಕ್ರಿಸ್ ಇವಾನ್ಸ್, ದಕ್ಷಿಣ ಭಾರತದ ಸ್ಟಾರ್ ಧನುಷ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಹೆಚ್ಚಿನ ಬಜೆಟ್ ಹಾಗೂ ಆಕ್ಷನ್ ಚಿತ್ರ ಜುಲೈ 22 ರಿಂದ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗಿದೆ.


3. ಪರಂಪರಾ ಸೀಸನ್ 2
ಡಿಸ್ನಿ ಪ್ಲಸ್ ಹಾಟ್ ಸ್ಟಾರಿನ ಯಶಸ್ವಿ ಡ್ರಾಮಾ ಸಿರೀಸ್ ಪರಂಪರಾದ ಎರಡನೇ ಸೀಸನ್ ಜುಲೈ 21 ರಿಂದ ಪ್ರಸಾರವಾಗಿದೆ. ಈ ಸರಣಿಯಲ್ಲಿ ಜಗಪತಿ ಬಾಬು, ಜಯರಾಮ್, ನವೀನ್ ಚಂದ್ರ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿದ್ದಾರೆ.


4. ಏಜೆಂಟ್ ಆನಂದ್ ಸಂತೋಷ್
ಏಜೆಂಟ್ ಆನಂದ್ ಸಂತೋಷ್, ಆಹಾ ಅವರ ಮೂಲ ಕತೆಯಾಗಿದ್ದು, ಇದರಲ್ಲಿ ಯೂಟ್ಯೂಬ್ ನಟ ಮತ್ತು ಬಿಗ್‌ಬಾಸ್ ತೆಲುಗು ಖ್ಯಾತಿಯ ಷಣ್ಮುಖ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಜುಲೈ 22 ರಿಂದ ಆಹಾದಲ್ಲಿ ಪ್ರಸಾರವಾಗಿದೆ.


ಇದನ್ನೂ ಓದಿ: Film Release on August 2022: ಆಗಸ್ಟ್ ತಿಂಗಳಲ್ಲಿ ಸಿನಿ ರಸಿಕರಿಗೆ ಭರ್ಜರಿ ಹಬ್ಬ, ರಿಲೀಸ್​ ಆಗ್ತಿದೆ ಬಿಗ್​ ಬಜೆಟ್​ ಸಿನಿಮಾಗಳು


5. ಮೀಮ್ ಬಾಯ್ಸ್
ಮೀಮ್ ಬಾಯ್ಸ್ ಇದೊಂದು ತಮಿಳು ಹಾಸ್ಯ ಆಧಾರಿತ ಸಾಮಾಜಿಕ ನಾಟಕವಾಗಿದೆ. ಇದು ಈ ತಿಂಗಳ 22 ರಿಂದ ಸೋನಿ ಲಿವ್ ನಲ್ಲಿ ಪ್ರಸಾರವಾಗಿದೆ.

Published by:Ashwini Prabhu
First published: