Viral Story: ಮರು ಮದುವೆಗಾಗಿ ಒಂದು ವರ್ಷದ ಮಗುವಿನೊಂದಿಗೆ ಮಂಟಪಕ್ಕೆ ಹಾಜರಾದ ನಟಿ!

Viral Story: ಟಿವಿ ಉದ್ಯಮದ ಮೂಲಕ ಜನಪ್ರಿಯತೆ ಪಡೆದ ನಟಿ ಪೂಜಾ ಬ್ಯಾನರ್ಜಿ ಮತ್ತು ಕುನಾಲ್ ವರ್ಮಾ ವಿವಾಹವಾಗುವ ಮೂಲಕ  ದಾಂಪತ್ಯ ಬಂಧನವನ್ನು ಗಟ್ಟಿಗೊಳಿಸಿದ್ದಾರೆ. ಈ ಜೋಡಿಗಳು ಇದಕ್ಕೂ ಮೊದಲೊಮ್ಮೆ ವಿವಾಹವಾಗಿದ್ದರು.

ಪೂಜಾ ಬ್ಯಾನರ್ಜಿ

ಪೂಜಾ ಬ್ಯಾನರ್ಜಿ

  • Share this:
    ನಟಿ ಪೂಜಾ ಬ್ಯಾನರ್ಜಿ (Puja Bennerjee)- ಕುನಾಲ್ ವರ್ಮಾ (Kunak Verma) ಅವರನ್ನು ನವೆಂಬರ್ 15 ರಂದು ವಿವಾಹವಾದರು. ಅವರ ಎಲ್ಲಾ ಸ್ನೇಹಿತರು ಮದುವೆಯಲ್ಲಿ (Wedding) ಭಾಗವಹಿಸುವ ಮೂಲಕ ಪೂಜಾ ಅವರ ವಿವಾಹವನ್ನು ಕಣ್ತುಂಬಿಕೊಂಡರು. ಸಿನಿಮಾ ತಾರೆಯರು, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಪೂಜಾ-ಕುನಾಲ್ ಅವರ ವಿವಾಹಕ್ಕೆ ಆಗಮಿಸುವ ಮೂಲಕ ಅವರಿಗೆ ಆಶಿರ್ವದಿಸಿದ್ದಾರೆ. ಅವರ ಜೊತೆಗೆ ಪೂಜಾ ಅವರು ಮುದ್ದಿನ ಮಗು ಕೂಡ ತಂದೆ –ತಾಯಿಯ ವಿವಾಹಕ್ಕೆ ಆಗಮಿಸುವ ಮೂಲಕ ಎಲ್ಲರನ್ನು ಬೆರಗುಗೊಳಿಸುವಂತೆ ಮಾಡಿದೆ.

    ಗೋವಾದಲ್ಲಿ (Goa) ಮರುಮದುವೆಯಾದ ನಟಿ

    ಟಿವಿ ಉದ್ಯಮದ ಮೂಲಕ ಜನಪ್ರಿಯತೆ ಪಡೆದ ನಟಿ ಪೂಜಾ ಬ್ಯಾನರ್ಜಿ ಮತ್ತು ಕುನಾಲ್ ವರ್ಮಾ ವಿವಾಹವಾಗುವ ಮೂಲಕ  ದಾಂಪತ್ಯ ಬಂಧನವನ್ನು ಗಟ್ಟಿಗೊಳಿಸಿದ್ದಾರೆ. ಈ ಜೋಡಿಗಳು ಇದಕ್ಕೂ ಮೊದಲೊಮ್ಮೆ ವಿವಾಹವಾಗಿದ್ದರು. ಆದರೆ ಎಲ್ಲರ ಸಮ್ಮುಖದಲ್ಲಿ ವಿವಾಹವಾಗಿಲ್ಲ ಎಂಬ ಕಾರಣಕ್ಕೆ ಮರು ಮದುವೆಯಾಗಿದ್ದಾರೆ.

    ಕಳೆದ ವರ್ಷ ಏಪ್ರಿಲ್‌ನಲ್ಲಿ ಅಂದರೆ ಕೊರೊನಾ ಅವಧಿಯ ಕಾರಣ ಪೂಜಾ- ಕುನಾಲ್ ವಿವಾಹವಾದರು. ಆದರೆ ಆ ಮದುವೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಕೋವಿಡ್​ ನಿಯಮದೊಂದಿಗೆ ಸಿಂಪಲ್​ ಆಗಿ ಮದುವೆ ಆಗಿದ್ದ ಈ ಜೋಡಿಗೆ ಅದ್ದೂರಿಯಾಗಿ ವಿವಾಹವಾಗಬೇಕು ಎಂಬ ಕನಸಿತ್ತು. ಅದರಂತೆ ಮರು ಮದುವೆಯಾಗುವ ಮೂಲಕ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ಗೋವಾದಲ್ಲಿ ಮರುಮದುವೆ ಮಾಡಿಕೊಂಡಿದ್ದಾರೆ. ನವೆಂಬರ್ 15 ರಂದು ಮರು ಮದುವೆ ನಡೆದಿದ್ದು. ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

    ಮಗನೊಂದಿಗೆ ಮಂಟಪಕ್ಕೆ ಬಂದ ನಟಿ ಪೂಜಾ!

    ವೈರಲ್ ಆಗುತ್ತಿರುವ ಚಿತ್ರಗಳಲ್ಲಿ, ಪೂಜಾ ಬ್ಯಾನರ್ಜಿ ಮತ್ತು ಕುನಾಲ್ ವರ್ಮಾ ತುಂಬಾ ಸಂತೋಷದಿಂದ ನಗುತ್ತಿರುವುದು ಒಂದೆಡೆಯಾದರೆ. ಮತ್ತೊಂದು ಫೋಟೋದಲ್ಲಿ ಈ ಕೆಂಪು ಬಣ್ಣದ ವಿವಾಹ ವಸ್ತ್ರವನ್ನು ಧರಿಸಿ ಜೊತೆಗೆ ಪುಟ್ಟ ಮಗ ಕೃಷಿವ್‌ನನ್ನು ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯವಿದೆ.



    ಕಳೆದ ವರ್ಷ ಮದುವೆಯಾಗಬೇಕಿತ್ತು

    ಕಳೆದ ವರ್ಷ ಏಪ್ರಿಲ್ 15 ರಂದು ಪೂಜಾ ಮತ್ತು ಕುನಾಲ್ ಬಹಳ ವಿಜೃಂಭಣೆಯಿಂದ ಮದುವೆಯಾಗಬೇಕಿತ್ತು. ಅದಕ್ಕಾಗಿ ಸಿದ್ಧತೆಗಳೂ ನಡೆದಿದ್ದವು. ಆದರೆ ಲಾಕ್‌ಡೌನ್‌ನಿಂದಾಗಿ ಅವರು ತಮ್ಮ ಮದುವೆಯ ಯೋಜನೆಯನ್ನು ರದ್ದುಗೊಳಿಸಬೇಕಾಯಿತು. ಆದರೆ ಏಪ್ರಿಲ್ 15 ರಂದು,  ಇವರಿಬ್ಬರು ಅಧಿಕೃತವಾಗಿ ಮದುವೆಯಾಗುವ ಮೂಲಕ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದರು.

    Read Also: Nayantara: ನಯನತಾರಾ ನೋಡಿದ್ರೆ 37 ವರ್ಷ ಅಂತ ಯಾರಾದ್ರೂ ಹೇಳ್ತಾರಾ? ಬೊಂಬಾಟ್ ಫಿಗರ್​ಗೆ ಇದೇ ಕಾರಣವಂತೆ!






    ನಿರ್ಗತಿಕರಿಗೆ ಸಹಾಯ ಮಾಡಿದ ದಂಪತಿ

    ಪೂಜಾ ಬ್ಯಾನರ್ಜಿ ಮೊದಲಿಗೆ ಸಿಂಪಲ್ಲಾಗಿ ವಿವಾಹವಾಗುವ ಮೂಲಕ ಅದ್ದೂರಿ ವಿವಾಹಕ್ಕೆಂದು ತೆಗೆದಿಟ್ಟಿದ್ದ ಹಣದಿಂದ ನಿರ್ಗತಿಕರಿಗೆ ಸಹಾಯ ಮಾಡಿದರು. ಇದರಿಂದಾಗಿ ಅವರನ್ನು ಮತ್ತು ಅವರ ಕೆಲಸವನ್ನು ಜನರು ತುಂಬಾ ಮೆಚ್ಚಿದ್ದಾರೆ.

    Read Also: Tara at Tirupathi- ತೇಲುತ್ತಿದ್ದ ನಟಿ ತಾರಾ ಕಾರು; ತಿರುಪತಿ ಪ್ರವಾಹದ ಅನುಭವ ಬಿಚ್ಚಿಟ್ಟ ನಟಿ






    ನಟಿಯ ವೃತ್ತಿಜೀವನದ ಬಗ್ಗೆ ಮಾತನಾಡುವುದಾಧರೆ, ಅವರು 'ಡೆವೋನ್ ಕೆ ದೇವ್... ಮಹಾದೇವ್' ಟಿವಿ ಶೋನಲ್ಲಿ ಪಾರ್ವತಿ ದೇವಿಯ ಪಾತ್ರದಲ್ಲಿ ಕಾಣಿಸಿಕೊಂಡರು. 'ಕುಬೂಲ್ ಹೈ', 'ಸರ್ವಗುಣ ಸಂಪನ್ನ' ಮತ್ತು 'ತುಜ್ ಸಂಗ್ ಪ್ರೀತ್ ಲಗಾ ಸಜ್ನಾ' ನಂತಹ ಅನೇಕ ಕಾರ್ಯಕ್ರಮಗಳಲ್ಲಿ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಚಿಕ್ಕ ಪರದೆಯಿಂದ ದೂರ ಉಳಿದು ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದಾರೆ.
    First published: