ನಟಿ ಹೇಮಾ ಮಾಲಿನಿ ಆರೋಗ್ಯ ಹೇಗಿದೆ?; ಮಗಳು ಇಶಾ ಡಿಯೋಲ್ ಹೇಳಿದ್ದು ಇಷ್ಟು

Hema Malini: ನನ್ನ ತಾಯಿ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಕುರಿತಾಗಿ ಹರಡುತ್ತಿರುವ ಗಾಳಿಸುದ್ದಿಗಳನ್ನು ನಂಬಬೇಡಿ. ಇದು ಸುಳ್ಳು ಸುದ್ದಿ ಎಂದು ಮಗಳು ಇಶಾ ಡಿಯೋಲ್​ ಸ್ಪಷ್ಟನೆ ನೀಡಿದ್ದಾರೆ.

news18-kannada
Updated:July 13, 2020, 7:10 AM IST
ನಟಿ ಹೇಮಾ ಮಾಲಿನಿ ಆರೋಗ್ಯ ಹೇಗಿದೆ?; ಮಗಳು ಇಶಾ ಡಿಯೋಲ್ ಹೇಳಿದ್ದು ಇಷ್ಟು
ನಟಿ ಹೇಮಾ ಮಾಲಿನಿ
  • Share this:
ಬಾಲಿವುಡ್​ ನಟಿ ಹೇಮಾ ಮಾಲಿನಿ ಆರೋಗ್ಯ ಸ್ಥಿರವಾಗಿಲ್ಲ. ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಎಲ್ಲೆಡೆ ವೈರಲ್​ ಆಗಿತ್ತು. ಆದರೀಗ ಈ ಬಗ್ಗೆ ಮಗಳು ಇಶಾ ಡಿಯೋಲ್​ ಸ್ಪಷ್ಟನೆ ನೀಡಿದ್ದು, ಇದೊಂದು ಗಾಳಿ ಸುದ್ದಿಯೆಂದು ಹೇಳಿದ್ದಾರೆ.

ನನ್ನ ತಾಯಿ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಕುರಿತಾಗಿ ಹರಡುತ್ತಿರುವ ಗಾಳಿಸುದ್ದಿಗಳನ್ನು ನಂಬಬೇಡಿ. ಇದು ಸುಳ್ಳು ಸುದ್ದಿ ಎಂದು ಇಶಾ ಡಿಯೋಲ್​ ಸ್ಪಷ್ಟನೆ ನೀಡಿದ್ದಾರೆ.

ಟ್ವೀಟ್​ ಮಾಡುವ ಮೂಲಕ ತಾಯಿಯ ಆರೋಗ್ಯವಾಗಿದ್ದಾರೆ. ಅವರ ಆರೋಗ್ಯದ ಕುರಿತು ಹರಡುತ್ತಿರುವ ಸುದ್ದಿ ಸುಳ್ಳು. ದಯವಿಟ್ಟು ಅಂತಹ ವದಂತಿಗಳಿಗೆ ಕಿವಿಗೊಡಬೇಡಿ. ಅವರ ಮೇಲಿರುವ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ಇಶಾ ಇಡಿಯೋಲ್​ ಹೇಳಿದ್ದಾರೆ.ಬಿಜೆಪಿ ಸಂಸದೆಯಾಗಿರುವ ನಟಿ ಹೇಮಾ ಮಾಲಿನಿ ಕೂಡ ಈ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ. ಖುದ್ದು ಅವರೇ ವಿಡಿಯೋ ಮಾಡಿ ಟ್ವಿಟ್ಟರ್​ನಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋದಲ್ಲಿ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನನಗೆ ಏನೂ ಆಗಿಲ್ಲ. ನಿಮ್ಮ ಮತ್ತು ಭಗವಂತನ ಆಶೀರ್ವಾದದಿಂದ ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಣದಲ್ಲಿ ಗಾಳಿ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಇದೀಗ ನಟಿ ಹೇಮಾ ಮಾಲಿನಿ ಆರೋಗ್ಯದ ಕುರಿತಾಗಿ ಸುಳ್ಳು ಸುದ್ದಿಗಳು ಹರಡಿದೆ. ನಟಿ ಹೇಮಾಮಾಲಿನಿ ಮತ್ತು ಇಶಾ ಡಿಯೋಲ್​ ಟ್ವೀಟ್​ ಮಾಡುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

ಬರೋಬ್ಬರಿ 4 ಲಕ್ಷ ಬೆಲೆಯ ಮಾಸ್ಕ್​​!; ಅಷ್ಟಕ್ಕೂ ಇದರಲ್ಲೇನಿದೆ

ಬಾಲಿವುಡ್​ ಅಂಗಳದಲ್ಲಿ ಸಾಲು ಸಾಲು ಕೊರೋನಾ ಪ್ರಕರಣ; ಆತಂಕದಲ್ಲಿ ಅಭಿಮಾನಿಗಳು
Published by: Harshith AS
First published: July 13, 2020, 7:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading