ಹಲವರಲ್ಲಿ ಬೇಸರಕ್ಕೆ ಕಾರಣವಾಗಿದ್ದ Dream Girl Hema Malini ವರ್ತನೆ..!

ಚಿತ್ರರಂಗದಲ್ಲಿ ಸಕ್ರಿಯವಾಗಿ ಇಲ್ಲದಿದ್ದರೂ, ಹೇಮಾ ಮಾಲಿನಿ ಒಂದಲ್ಲ ಒಂದು ವಿಷಯಗಳಿಗೆ ಸುದ್ದಿಯಲ್ಲಿರುತ್ತಾರೆ.  ಅವರು ತಮ್ಮ ನೃತ್ಯ ಕಾರ್ಯಕ್ರಮಗಳು ಮತ್ತು ಸಿನಿಮಾಗಳ ಕಾರಣದಿಂದ ಸುದ್ದಿಗೆ ಕಾರಣವಾಗುವುದಕ್ಕಿಂತ, ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದೇ ಹೆಚ್ಚು. ವರದಿಗಾರರ ಮೇಲೆ ರೇಗುವುದರ ಮೂಲಕ ಮಾಧ್ಯಮದವರ ಸಿಟ್ಟಿಗೆ ಅವರು ಗುರಿಯಾದ ಸಂದರ್ಭಗಳು ಬಹಳಷ್ಟು ಇವೆ.

ಬಾಲಿವುಡ್ ನಟಿ ಹೇಮಾ ಮಾಲಿನಿ

ಬಾಲಿವುಡ್ ನಟಿ ಹೇಮಾ ಮಾಲಿನಿ

  • Share this:
ಬಾಲಿವುಡ್‌ ನಟಿ, ರಾಜಕಾರಣಿ ಹೇಮಾ ಮಾಲಿನಿ ಅವರು ತನ್ನನ್ನು ಮಾತನಾಡಿಸಲು ಅಥವಾ ಪೋಟೋ ತೆಗೆಯಲು ಮುಂದೆ ಬರುವ ವಿಡಿಯೋ ಜರ್ನಲಿಸ್ಟ್​ಗಳ ಮೇಲೆ ರೇಗಿದ ಪ್ರಕರಣಗಳು ಬಹಳಷ್ಟಿವೆ. ಉದಾಹರಣೆಗೆ ಅವರ ಹಳೇ  ವಿಡಿಯೋವೊಂದು ವೈರಲ್‌ ಆಗಿದ್ದು, ಇದರಲ್ಲಿ ಅವರು ವರದಿಗಾರರೊಬ್ಬರ ಮೇಲೆ ರೇಗಿದ್ದಾರೆ. ದಶಕಗಳ ಹಿಂದೆ ಸಿನಿಮಾ ವೀಕ್ಷಕರಿಗೆ ಅಚ್ಚುಮೆಚ್ಚಿನ ತಾರೆಯಾಗಿದ್ದ ‘ಡ್ರೀಮ್ ಗರ್ಲ್’ ಹೇಮಾ ಮಾಲಿನಿಗೆ ಈಗಲೂ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ರೆಟ್ರೋ ಕಾಲದ ಸಿನಿಮಾ ಪ್ರೇಮಿಗಳಿಂದ ಹಿಡಿದು ಈಗಿನ ಡಿಜಿಟಲ್ ಯುಗದ ಸಿನಿಮಾ ವೀಕ್ಷಕರವರೆಗೆ ಹೇಮಾ ಮಾಲಿನಿಯ ಅಭಿನಯ ಮತ್ತು ಚೆಲುವಿಗೆ ಮನಸೋತಿರುವವರು ಬಹಳ ಮಂದಿ ಇದ್ದಾರೆ. ಒಬ್ಬರಿಗಿಂತ ಒಬ್ಬರು ಅಮೋಘ ನಟಿಯರು ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ತಿದ್ದ 70-80 ರ ದಶಕಗಳಲ್ಲಿ, ಅವರೆಲ್ಲರಿಗೂ ಅತ್ಯಧಿಕ ಪೈಪೋಟಿ ನೀಡಿ ಗೆದ್ದ ದಕ್ಷಿಣ ಭಾರತದ ಚೆಲುವೆ ಹೇಮ ಮಾಲಿನಿ. ಬಳಿಕ ಅವರು ನಿರ್ಮಾಪಕಿ, ನಿರ್ದೇಶಕಿ ಆಗಿಯೂ ಕೆಲಸ ಮಾಡಿದ್ದಾರೆ.

ಚಿತ್ರರಂಗದಲ್ಲಿ ಸಕ್ರಿಯವಾಗಿ ಇಲ್ಲದಿದ್ದರೂ, ಹೇಮಾ ಮಾಲಿನಿ ಒಂದಲ್ಲ ಒಂದು ವಿಷಯಗಳಿಗೆ ಸುದ್ದಿಯಲ್ಲಿರುತ್ತಾರೆ. ಅವರು ತಮ್ಮ ನೃತ್ಯ ಕಾರ್ಯಕ್ರಮಗಳು ಮತ್ತು ಸಿನಿಮಾಗಳ ಕಾರಣದಿಂದ ಸುದ್ದಿಗೆ ಕಾರಣವಾಗುವುದಕ್ಕಿಂತ, ನಕಾರಾತ್ಮಕ ಕಾರಣಗಳಿಗೆ ಸುದ್ದಿಯಾಗುತ್ತಿರುವುದೇ ಹೆಚ್ಚು. ವರದಿಗಾರರ ಮೇಲೆ ರೇಗುವುದರ ಮೂಲಕ ಮಾಧ್ಯಮದವರ ಸಿಟ್ಟಿಗೆ ಅವರು ಗುರಿಯಾದ ಸಂದರ್ಭಗಳು ಬಹಳಷ್ಟು ಇವೆ.‘ಮೂಡಿ’ ಆಗಿರುವ ಹೇಮಾ ಮಾಲಿನಿ, ವರದಿಗಾರರು ಎದುರಾದಾಗ ಅಥವಾ ಪತ್ರಿಕಾಗೋಷ್ಠಿಗಳಲ್ಲಿ ಮಂದಸ್ಮಿತರಾಗಿ ಉತ್ತರ ಕೊಡುತ್ತಾರೆ ಎಂಬ ಖಾತರಿ ಇರುವುದಿಲ್ಲ. ಅಷ್ಟು ಮಾತ್ರವಲ್ಲ, ಸೆಲೆಬ್ರಿಟಿಗಳು ಪೋಟೋಗೆ ಹಸನ್ಮುಖಿಗಳಾಗಿ ಪೋಸ್ ಕೊಡಬೇಕೆಂಬ ಸಿದ್ಧ ಸೂತ್ರಗಳಿಗೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆ ಮೂಡ್‍ನಲ್ಲಿ ಇದ್ದಾಗ ನಗುತ್ತಾ, ಗರಂ ಆಗಿದ್ದಾಗ ಅದೇ ಮುಖಭಾವದಲ್ಲಿ ಪೋಟೋಗೆ ಪೋಸ್ ಕೊಡುತ್ತಾರೆ.

ಇದನ್ನೂ ಓದಿ: ಶಾರುಖ್​ ಖಾನ್​-ಗೌರಿ ಖಾನ್​ರ ಫಸ್ಟ್​ ನೈಟ್​ ಹಾಳು ಮಾಡಿದ್ದರಂತೆ ಆ ಖ್ಯಾತ ನಟಿ..!

ಅದರಲ್ಲೂ , ನಟ - ನಟಿಯರ ವೈಯಕ್ತಿಕ ಜೀವನದ ಕ್ಷಣಗಳ ಇಂಚು ಇಂಚನ್ನು ಬಿಡದೆ ವರದಿ ಮಾಡಲು ಬಯಸುವ ಈಗಿನ ಪಾಪರಾಜಿಗಳ ಜೊತೆ ಏಗುವುದು ಹೇಮಾ ಮಾಲಿನಿಯಂತಹ ಮುಖಕ್ಕೆ ಹೊಡೆದಂತೆ ಮಾತನಾಡುವ ನಟಿಗೆ ಕಿರಿಕಿರಿ ತರಿಸುತ್ತದೇನೋ. ಹಾಗಾಗಿ, ತನ್ನನ್ನು ಮಾತನಾಡಿಸಲು ಅಥವಾ ಪೋಟೋ ತೆಗೆಯಲು ಮುಂದೆ ಬರುವ ವರದಿಗಾರರ ಮೇಲೆ ರೇಗಿದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಲೇ ಇವೆ.

ಉದಾಹರಣೆಗೆ, ಈ ಹಳೆಯ ವಿಡಿಯೋವೊಂದನ್ನೇ ನೋಡಿ. ಏರ್‌ಪೋರ್ಟ್‌ನಿಂದ ಎಂದಿನಂತೆ ಗಂಭೀರ ಮುಖ ಹೊತ್ತು ಹೊರ ಬರುವ ಹೇಮಾ ಮಾಲಿನಿ, ತನ್ನನ್ನು ಮಾತನಾಡಿಸಲು ಬರುವ ವರದಿಗಾರನೊಬ್ಬನನ್ನು ಕೈ ಸನ್ನೆಯಲ್ಲೇ ಪಕ್ಕಕ್ಕೆ ಸರಿ ಎಂದು ಸೂಚಿಸುತ್ತಾರೆ.


ಆತ ಹಾಗೆ ಮಾಡದಿದ್ದಾಗ, “ಏಯ್, ಏನೋ ನಿನ್ನ ಸಮಸ್ಯೆ?” ಎಂದು ರೇಗಿ ಮುಂದೆ ಸಾಗುತ್ತಾರೆ. ಆ ವರದಿಗಾರನೊಂದಿಗೆ ಮಾತನಾಡುವ ಮೂಡ್‍ನಲ್ಲಿ ಆಕೆ ಇದ್ದಂತೆ ಕಾಣುವುದಿಲ್ಲ. ಆತನ ಜೊತೆಗಿನ ಹೇಮಾ ಅವರ ಈ ವರ್ತನೆ ಬಹಳಷ್ಟು ಮಂದಿಯ ಕೋಪಕ್ಕೆ ಕಾರಣವಾಗಿತ್ತು. ಆ ವಿಡಿಯೋ ಮಾತ್ರವಲ್ಲ, ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಹಲವು ವಿಡಿಯೋಗಳನ್ನು ಗಮನಿಸಿ, ಬೇಕೋ ಬೇಡವೋ ಎಂಬಂತೆ, ನಗುವಿನ ಲವಲೇಶವೂ ಇಲ್ಲದ ಮುಖಭಾವದಲ್ಲಿ ಪೋಟೋಗೆ ಪೋಸ್ ಕೊಡುವುದನ್ನು ಕಾಣಬಹುದು.

ಇದನ್ನೂ ಓದಿ: PHOTOS: ಮಥುರಾದಲ್ಲಿ ಚುನಾವಣಾ ಪ್ರಚಾರದ ವೇಳೆ ಟ್ರ್ಯಾಕ್ಟರ್​ ಓಡಿಸಿದ ಹೇಮಾ ಮಾಲಿನಿ..!

ತಾವು ಹೋಗುತ್ತಿರುವ ಜಾಗದ ಬಗ್ಗೆ ಪಾಪರಾಜಿಗಳಿಗೆ ಮೊದಲೇ ತಿಳಿಸಿ, ವಿವಿಧ ಭಂಗಿಗಳಲ್ಲಿ ಪೋಸ್ ನೀಡುವ ಅಥವಾ ಬೇಕೆಂದೇ ಸುದ್ದಿಯಾಗುವಂತಹ ಹೇಳಿಕೆ ನೀಡುವ ಸೆಲೆಬ್ರಿಟಿಗಳು ಇರುವ ಈ ಕಾಲದಲ್ಲಿ, ವರದಿಗಾರರನ್ನು ಕಂಡು ಸಿಡುಕುವ ಹೇಮಾ ಅವರ ವರ್ತನೆ ವಿಚಿತ್ರ ಎನಿಸುತ್ತದೆ.

ರಾಜಕಾರಣಿಯಾಗಿದ್ದಾಗ ಪಾರ್ಲಿಮೆಂಟ್‍ನಲ್ಲಿ ಕಡಿಮೆ ಹಾಜರಾತಿ ಆಗಿದ್ದಕ್ಕೆ, ಐದಾರು ವರ್ಷಗಳ ಹಿಂದೆ ಒಂದು ಅಪಘಾತದ ವಿಷಯಕ್ಕೆ, ಬೃಂದಾವನದ ವಿಧವೆಯ ವಿಷಯದ ಕುರಿತು ಹೇಳಿಕೆ ನೀಡುವ ಮೂಲಕ ಅವರು ಟೀಕೆಗೆ ಗುರಿಯಾಗಿದ್ದರು. ನಟ ಧರ್ಮೆಂದ್ರ ಅವರನ್ನು ವರಿಸಿದ್ದರೂ ಕೂಡ ಜೊತೆಗೆ ವಾಸಿಸುತ್ತಿಲ್ಲವೇಕೆ? ಎಂಬ ಪ್ರಶ್ನೆಗೂ ಅವರು ಹಲವು ಬಾರಿ ಗುರಿಯಾದದ್ದಿದೆ.
Published by:Anitha E
First published: