ಡ್ರೀಮ್ ಗರ್ಲ್ (Dream Girl), ಹೇಮಮಾಲಿನಿ (Dream girl Hema Malini) ದಶಕಗಳ ಕಾಲ ಪ್ರೇಕ್ಷಕರನ್ನು ತಮ್ಮ ಅಭಿನಯದ (Acting) ಮೂಲಕ ಸೆರೆ ಹಿಡಿದು ಇಟ್ಟುಕೊಂಡವರು. ಅವರ ನಟನೆ, ನೃತ್ಯ (Dance) ಎಂದರೆ ಅಭಿಮಾನಿಗಳಿಗೆ ಈಗಲೂ ಬಹಳ ಇಷ್ಟ. ಅದರಲ್ಲೂ ಆ ಕಾಲದಲ್ಲಿ ಇವರನ್ನು ತೆರೆ ಮೇಲೆ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಡ್ರೀಮ್ ಗರ್ಲ್, ಶೋಲೆಯಂತಹ ಅದ್ಭುತ ಸಿನಿಮಾಗಳ (Film) ಮೂಲಕ ಜನರನ್ನು ಸೆಳೆದವರು. ಇನ್ನು ಎಲ್ಲರಿಗೂ ಗೊತ್ತಿರುವಂತೆ ಅವರು ಅದ್ಭುತ ಭರತನಾಟ್ಯ ಕಲಾವಿದೆ ಕೂಡ ಹೌದು. ಹಾಗೆಯೇ ನಿಮಗೆ ಗೊತ್ತಾ, ಅವರ ತಂದೆಗೆ ಬೆಂಗಳೂರಿನಲ್ಲಿ ನೆಲೆಸಬೇಕು ಎಂಬ ಆಸೆ ಇತ್ತಂತೆ.
ಬೆಂಗಳೂರಿಗೆ ಬಂದಿದ್ದ ಹೇಮ ಮಾಲಿನಿ
ನಿನ್ನೆ ಉದ್ಯಾನನಗರಿ ಬೆಂಗಳೂರಿಗೆ ಶಾಸ್ತ್ರೀಯ ನೃತ್ಯ ಕಾರ್ಯಕ್ರಮ ರಾಧಾ ರಾಸ್ ಬಿಹಾರಿಯಲ್ಲಿ ಪ್ರದರ್ಶನ ನೀಡಲು ನಟಿ ಹೇಮ ಮಾಲಿನಿ ಆಗಮಿಸಿದ್ದರು. ಈ ಸಮಯದಲ್ಲಿ ಅವರ ನರತ್ಯ ನೋಡುಗರ ಮನ ಸೆಳೆದಿರುವುದರಲ್ಲಿ ಯಾವುದೇ ಅನುಮಾನವಿಲ್ಲ. 70 ವರ್ಷದ ಈ ವಯಸ್ಸಿನಲ್ಲಿ ಸಹ ಅವರ ಹಳೆಯ ಚಾರ್ಮ್ ಕಡಿಮೆಯಾಗಿಲ್ಲ. ಈಗಲೂ ಅವರನ್ನು ನೋಡುತ್ತಿದ್ದರೆ, ನೋಡುತ್ತಲೇ ಇರಬೇಕು ಅನಿಸುತ್ತದೆ ಎನ್ನುತ್ತಾರೆ ಅಭಿಮಾನಿಗಳು.
ಇನ್ನು ಈ ಕಾರ್ಯಕ್ರಮದ ನಂತರ ಬೆಂಗಳೂರು ಹಾಗೂ ಅವರ ಸಂಬಂಧದ ಬಗ್ಗೆ ಮಾತನಾಡಿದ ಅವರು, ಹಲವಾರು ನೆನಪುಗಳನ್ನು ಹಂಚಿಕೊಂಡಿದ್ದಾರೆ. ಶೋಲೆ, ಮೆಹಬೂಬ, ಮಾ ಚಿತ್ರದ ಹಲವಾರು ಭಾಗಗಳನ್ನು ನಾವು ಬೆಂಗಳೂರು ಸುತ್ತಮುತ್ತ ಶೂಟಿಂಗ್ ಮಾಡಿದ್ದೆವು. ನಾನು ಸಹ ರಾಮನಗರದ ಬೆಟ್ಟದಲ್ಲಿ ಶೂಟಿಂಗ್ ಮಾಡಿದ್ದೇವು ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: 20 ವರ್ಷಗಳ ನಂತರ ಅವನನ್ನೇ ಮದುವೆಯಾದ ಪಾಪ್ ತಾರೆ, ಜೆನಿಫರ್-ಬೆನ್ ಅಫ್ಲೆಕ್ ಪ್ರೇಮ್ ಕಹಾನಿ
ಅಲ್ಲದೇ, ಅವರು ಬೆಂಗಳೂರಿಗೆ ಬಂದಾಗಲೆಲ್ಲ ನಾನು ಶಾಪಿಂಗ್ ಮಾಡುತ್ತಿದ್ದೆ. ನನಗೆ ಇಲ್ಲಿ ಶಾಪಿಂಗ್ ಮಾಡುವುದು ಬಹಳ ಇಷ್ಟ ಎಂದಿದ್ದಾರೆ. ಹಾಗೆಯೇ ಮೈಸೂರಿನ ಮುದುಮಲೈ ಕಾಡು, ಊಟಿಗೆಲ್ಲ ಹೋಗಿ ನಾವು ಸುತ್ತಾಡಿ ಬರುತ್ತಿದ್ದೆವು. ಈ ಊರಿನ ಜೊತೆ ಸುಂದರ ನೆನಪುಗಳಿವೆ ಎಂದು ಹೇಳಿಕೊಂಡಿದ್ದಾರೆ. ಈ ಮಧ್ಯೆ ಅವರು ನನ್ನ ತಂದೆಗೆ ನಾನು ಬೆಂಗಳೂರಿನಲ್ಲಿ ನೆಲೆಸಬೇಕೆಂದು ಬಹಳ ಆಸೆಯಿತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬದುಕು ನನ್ನನ್ನು ಬೇರೆ ಕಡೆ ಕರೆದುಕೊಂಡು ಹೋಯಿತು ಎಂದು ಹೇಮಮಾಲಿನಿ ಹೇಳಿದ್ದಾರೆ.
ಸಪನೋ ಕಾ ಸೌದಾಘರ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸುಂದರಿ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೇಮ ಮಾಲಿನಿ ಅವರು ಅತ್ಯಂತ ಯಶಸ್ವಿ ಮಹಿಳಾ ಸಿನಿಮಾ ತಾರೆಯರಲ್ಲಿ ಒಬ್ಬರು. 40 ವರ್ಷಗಳ ಸಿನಿಮಾ ಜೀವನದಲ್ಲಿ150ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 2003 - 2009ರ ವರೆಗೆ ಬಿಜೆಪಿ ಪಕ್ಷದಿಂದ ರಾಜ್ಯಸಭಾ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದರು ಒಂದು ಭಾರಿ ಫಿಲ್ಮಫೇರ್ ಪ್ರಶಸ್ತಿ ಹಾಗೂ 2000 ರಲ್ಲಿ ಭಾರತ ಸರ್ಕಾರ ಪದ್ಮಶ್ರಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: ಮಿಸೆಸ್ ಇಂಡಿಯಾ ಆಗೋಕೆ ನಿವೇದಿತಾ ಗೌಡ ಏನೆಲ್ಲಾ ಮಾಡ್ತಿದ್ದಾರೆ ಗೊತ್ತಾ? ಡಯೆಟ್ ರಹಸ್ಯ ಬಿಚ್ಚಿಟ್ಟ ಗೊಂಬೆ
ಈಗಲೂ ಹಿಂಜರಿಕೆಯಂತೆ ನಟಿಗೆ
ಇನ್ನು ತಮ್ಮ ನಟನೆ ಹಾಗೂ ನೃತ್ಯದ ಬಗ್ಗೆ ಮಾತನಾಡಿದ ಅವರು, 4 ದಶಕಗಳ ಕಾಲ ಬಾಲಿವುಡ್ ಸಿನೆಮಾಗಳಲ್ಲಿ ತೆರೆಯ ಮೇಲೆ ಮಿಂಚಿದ್ದರು ಹಾಗೂ ಲೆಕ್ಕವಿಲ್ಲದಷ್ಟು ಡ್ಯಾನ್ಸ್ ಕಾರ್ಯಕ್ರಮಗಳನ್ನು ಅವರು ನೀಡಿದ್ದರು ಸಹ ಅವರಿಗೆ ಬಹಳ ಹಿಂಜರಿಕೆಯಾಗುತ್ತಿತ್ತಂತೆ. ಈಗಲೂ ಅವರಿಗೆ ಆ ರೀತಿಯ ಅನುಭವ ಆಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಈಗಲೂ ಅವರು ಯಾವುದೇ ಕಾರ್ಯಕ್ರಮ ನೀಡುವ ಮೊದಲು ಅಭ್ಯಾಸ ಮಾಡುತ್ತಾರಂತೆ. ಪತಿ ನಟ ಧರ್ಮೇಂದ್ರ ಅವರ ಪ್ರೀತಿ, ಮಕ್ಕಳು, ಮೊಮ್ಮಕ್ಕಳ ಜೊತೆ ಕಾರ್ಯಕ್ರಮಕ್ಕೆ ಮೊದಲು ಮಾಡುವ ಅಭ್ಯಾಸ ನನಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ