ಬೆಂಗಳೂರಿನಾದ್ಯಂತ ನಿನ್ನೆ ಅಕಾಲಿಕ ಮಳೆಯಾಗಿದೆ (Bengaluru Rains). ಏಕಾಏಕಿ ಸುರಿದ ಮಳೆಯಿಂದ ಜನರು ಕಂಗೆಟ್ಟಿದ್ದಾರೆ. ಮನೆಯೊಳಗೆ ಏಕಾಏಕಿ ನೀರು ನುಗ್ಗಿದ್ದು, ಹಲವರಿಗೆ ಸಮಸ್ಯೆಯುಂಟು ಮಾಡಿದೆ. ಈ ನಡುವೆ ಓರ್ವ ಯುವತಿಯೂ ಸಾವನ್ನಪ್ಪಿದ್ದಾರೆ. ಸದ್ಯ ಬಂದ ಮಾಹಿತಿ ಅನ್ವಯ ನವರಸನಾಯಕ ಜಗ್ಗೇಶ್ಗೂ (Actor Jaggesh) ಈ ಅಕಾಲಿಕ ಮಳೆಯ ಬಿಸಿ ತಟ್ಟಿದೆ.
ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ BMW5 ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ಜಗ್ಗೇಶ್ ಅವರ ಮನೆ ರಿಪೇರಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆ, ಸ್ನೇಹಿತ ಮುರಳಿ ಎಂಬುವರ ಮನೆಯ ಸೆಲ್ಲರ್ನಲ್ಲಿ ಅವರು ತಮ್ಮ ಕಾರು ನಿಲ್ಲಿಸಿದ್ದರು. ಈ ವೇಳೆ ಮುರಳಿ ಅವರ ಮನೆಗೂ ನೀರು ನುಗ್ಗಿದೆ. ಈ ವೇಳೆ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಕಾರು ಮುಳುಗಡೆಯಾಗಿದೆ. ಬಳಿಕ 5 ಹೆಚ್ ಪಿ ಮೋಟಾರ್ ಬಳಸಿ ನೀರು ಹೊರ ಹಾಕುವ ಕೆಲಸ ನಡೆಸಲಾಗಿದೆ.
ನನ್ನ ಮನೆಯ ರಿಪೇರಿ ಕಾರ್ಯ ಪ್ರಯುಕ್ತ ನನ್ನ ರಸ್ತೆಯ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ bmw5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು..5hp motor ಬಳಸಿ ನೀರು ಹೊರಹಾಕಿಸಲಾಯಿತು..
ಇಂಥ ಅಲ್ಲಿಕಲ್ಲಿನ ಮಳೆ ಈ ತಿಂಗಳಲ್ಲಿ ಬಂದದ್ದು ಆಶ್ಚರ್ಯ.. pic.twitter.com/eZ2G2cYQWS
— ನವರಸನಾಯಕ ಜಗ್ಗೇಶ್ (@Jaggesh2) May 21, 2023
ಇದನ್ನೂ ಓದಿ: Bengaluru: ಕೆಆರ್ ಸರ್ಕಲ್ನಲ್ಲಿ ಮಳೆ ನೀರಿನಲ್ಲಿ ಮುಳುಗಿದ ಕಾರು; ನಾಲ್ವರ ರಕ್ಷಣೆ, ಯುವತಿ ಸಾವು
ಇನ್ನು ಮೇ ತಿಂಗಳಲ್ಲಿ ಸುರಿದ ಆಲಿಕಲ್ಲಿನ ಮಳೆ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ನಟ ಜಗ್ಗೇಶ್. ಮಳೆ ನೀರಿನಲ್ಲಿ ಮುಳುಗಡೆಯಾದ ಕಾರಿನ ಫೋಟೋ ಕೂಡಾ ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ