• Home
  • »
  • News
  • »
  • entertainment
  • »
  • Head Bush Review: ಹೆಡ್ ಬುಷ್ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ರಗಡ್ ರೌಡಿಸಂ ಚಿತ್ರದ ರಿವ್ಯೂ

Head Bush Review: ಹೆಡ್ ಬುಷ್ ಸಿನಿಮಾ ಹೇಗಿದೆ? ಇಲ್ಲಿದೆ ನೋಡಿ ರಗಡ್ ರೌಡಿಸಂ ಚಿತ್ರದ ರಿವ್ಯೂ

ಹೆಡ್ ಬುಷ್ ಸಿನಿಮಾ ಹೇಗಿದೆ ?

ಹೆಡ್ ಬುಷ್ ಸಿನಿಮಾ ಹೇಗಿದೆ ?

ಬೆಂಗಳೂರು ಭೂಗತ ಜಗತ್ತು ಅಂದ್ರೆ ಏನು| ಈಗೀನ ಹುಡುಗರು ಕೇಳುವ ಸಿಂಪಲ್ ಪ್ರಶ್ನೆ. ಅವರ ಈ ಪ್ರಶ್ನೆಗೆ ಉತ್ತರ ಹೆಡ್ ಬುಷ್ ಸಿನಿಮಾ. ಈ ಪ್ರಶ್ನೆಗೆ ಉತ್ತರ ರೂಪದಲ್ಲಿಯೇ ಅಸಲಿ ಕಥೆಯನ್ನೆ ಅಗ್ನಿ ಶ್ರೀಧರ್ ಕಥೆ ಮಾಡಿಕೊಟ್ಟಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು ಭೂಗತ ಜಗತ್ತು ಅಂದ್ರೆ ಏನು? ಈಗೀನ ಹುಡುಗರು ಕೇಳುವ ಸಿಂಪಲ್ ಪ್ರಶ್ನೆ. ಅವರ ಈ ಪ್ರಶ್ನೆಗೆ ಉತ್ತರ ಹೆಡ್ ಬುಷ್ ಸಿನಿಮಾ. ಈ ಪ್ರಶ್ನೆಗೆ ಉತ್ತರ ರೂಪದಲ್ಲಿಯೇ ಅಸಲಿ ಕಥೆಯನ್ನೆ (Agni Shridhar) ಅಗ್ನಿಶ್ರೀಧರ್ ಕಥೆ ಮಾಡಿಕೊಟ್ಟಿದ್ದಾರೆ. ಚಿತ್ರಕಥೆಯನ್ನ ಬರೆದುಕೊಟ್ಟಿದ್ದಾರೆ. ಭೂಗತ ಜಗತ್ತಿನಲ್ಲಿ ಬಳಕೆ ಆಗುತ್ತಿದ್ದ ಮಾತುಗಳನ್ನ ಇಲ್ಲಿ ಡೈಲಾಗ್ ರೂಪದಲ್ಲಿಯೇ ಕೊಟ್ಟಿದ್ದಾರೆ. ಯುವ ನಿರ್ದೇಶಕ (Shoonya) ಶೂನ್ಯ ಮೌನವಾಗಿಯೇ ಇಲ್ಲಿ ಅದನ್ನ ಯಥಾವತ್ತು ತಂದಿದ್ದಾರೆ. ನಟ ರಾಕ್ಷಸ ಅಂತಲೇ ಕರೆಸಿಕೊಳ್ಳುವ ಡಾಲಿ (Daali Dhananjaya) ಧನಂಜಯ್, ಜಯರಾಜ್ ಪಾತ್ರವನ್ನ ಜೀವಿಸಿದ್ದಾರೆ. ಆ ಜೀವಂತಿಕೆ ಚಿತ್ರದ ಪ್ರತಿ ಫ್ರೇಮ್​ ನಲ್ಲೂ ಕಾಣಿಸುತ್ತದೆ. ಮಚ್ಚು ಹಿಡಿಯೋ ಶೈಲಿ, ಸಿಗರೇಟ್ ಸೇದು ಸ್ಟೈಲ್, ಕೆಕ್ಕರಿಸಿ ನೋಡುವ ಹಾವ-ಭಾವ ಎಲ್ಲವೂ ಇಲ್ಲಿ ರಗಡ್ ರೌಡಿ ಚಿತ್ರಣವೇ ಆಗಿದೆ.


ಇಂದಿರಾ ಬ್ರಿಗೇಡ್ ದಾರಿ ತಪ್ಪಿದ್ದು ಹೇಗೆ?
ಹೆಡ್ ಬುಷ್ ಸಿನಿಮಾದಲ್ಲಿ ಇಂದಿರಾ ಗಾಂಧಿಯವರ ಇಂದಿರಾ ಬ್ರಿಗೇಡ್ ಪ್ರಮುಖ ಅಂಶವೇ ಆಗಿದೆ. ಇಡೀ ಕಥೆಯ ಚಿತ್ರ ಓಡಲು ಅದುವೇ ಕಾರಣವೂ ಆಗಿದೆ. ಜಯರಾಜ್ ಎಂಬ ಪೊಲೀಸ್ ವಿರೋಧಿ ಪೈಲ್ವಾನ್ ಹೇಗೆಲ್ಲ ರಾಜಕೀಯ ದಾಳಕ್ಕೆ ಬಳಕೆ ಆಗಿದ್ದಾನೆ ಅನ್ನೋದು ಇಲ್ಲಿ ಸ್ಪಷ್ಟವಾಗಿಯೇ ಅರ್ಥವಾಗುತ್ತದೆ.


ಇಂದಿರಾ ಕನಸು-ಅರಸು ಮನಸು-ಬ್ರಿಗೇಡ್ ಅಟ್ಟಹಾಸ
ಇಂದಿರಾ ಬ್ರಿಗೇಡ್ ಎಂಬುದು ಇಲ್ಲಿ ಹೇಗೆಲ್ಲ ಬದಲಾಗಿ ಬಿಡುತ್ತದೆ ಅನ್ನೋದು ತುಂಬಾ ಸ್ಪಷ್ಟವಾಗಿಯೇ ತಿಳಿಯುತ್ತದೆ. ಬೆಂಗಳೂರು ಕಮಿಷನರ್ ಗರುಡಾಚಾರ್ಯರು ಇಡೀ ಬೆಂಗಳೂರಲ್ಲಿದ್ದ ರೌಡಿಸಂ ಅನ್ನ ಹೇಗೆಲ್ಲ ಕಂಟ್ರೋಲ್​ಗೆ ತಂದ್ರು ಅನ್ನೋ ಚಿತ್ರಣವು ಇಲ್ಲಿ ಬಂದು ಹೋಗುತ್ತದೆ.


ಇದ್ದವರಿಂದ ಕಿತ್ತುಕೊಂಡು ಇಲ್ಲದವರಿಗೆ ಕೊಡುವುದು!
ಹೌದು, ಅರಸು ಪಾತ್ರವನ್ನ ನಿರ್ವಹಿಸಿರೋ ದೇವರಾಜ್ ಪಾತ್ರ ಇದನ್ನೇ ಹೇಳುತ್ತದೆ. ಆದರೆ ಜಯರಾಜ್ ಪಾತ್ರ ಅದನ್ನ ಬೇರೆ ಅರ್ಥ ಮಾಡಿಕೊಳ್ಳುತ್ತದೆ. ಕಾರಣ, ಅರಸು ಅವರ ಮಗಳ ಗಂಡನಿಂದಲೇ ಎಲ್ಲವೂ ಏರು-ಪೇರಾಗುತ್ತದೆ.


ಇದು ಹೆಡ್ ಬುಷ್​ ಚಿತ್ರದಲ್ಲಿ ದಾರಿ ತಪ್ಪಿದ ಇಂದಿರಾ ಬ್ರಿಗೇಡ್​ನ ಅಸಲಿ ಕಥೆ ಅಂತಲೇ ಹೇಳಬಹುದು. ಇದನ್ನ ಹತ್ತಿರದಿಂದಲೇ ನೋಡಿರೋ ಅಗ್ನಿ ಶ್ರೀಧರ್ ಬರೆದಿರೋದ್ರಿಂದ ಎಲ್ಲವೂ ಇಲ್ಲಿ ಅಸಲಿ ಅಸಲಿ.


ಇದನ್ನೂ ಓದಿ: Kantara Movie: ಒಂದೇ ದಿನ 10 ಸಿನಿಮಾ ರಿಲೀಸ್! ಕಾಂತಾರಕ್ಕೆ ಟಫ್ ಫೈಟ್


ನಟರಾಕ್ಷಸನ ಅದ್ಭುತ ಅಭಿನಯದ ಅಟ್ಟಹಾಸ
ಇನ್ನು ಸಿನಿಮಾದ ಇತರ ವಿಭಾಗದ ಬಗ್ಗೆ ಹೇಳ್ತಾ ಹೋದ್ರೆ, ಜಯರಾಜ್ ಪಾತ್ರದಲ್ಲಿ ಧನಂಜಯ್ ನಿಮ್ಮನ್ನ ಭಯಗೊಳಿಸುತ್ತಾರೆ. ಒಂದೊಮ್ಮೆ ತಮ್ಮ ಸಿಗರೇಟ್ ಸೇದೋ ಶೈಲಿ ಮತ್ತು ಲಾಂಗ್ ಬಚ್ಚಿಟ್ಟುಕೊಂಡು ಬಂದು ವಾರ್ ಮಾಡೋ ದಾಟಿ ಬಿಸಿರಕ್ತದ ಹುಡುಗರಿಗೆ ಸ್ಪೂರ್ತಿ ಆದ್ರು ಆಗಬಹುದು.


ಗಂಗಾ ಗೆಳೆಯನಾಗಿ ಕಾಡ್ತಾನೆ-ಸ್ಯಾಮ್ಸನ್ ಅಬ್ಬರಿಸಿದ್ದಾರೆ
ಲೂಸ್ ಮಾದ ಯೋಗಿ ಗಂಗಾ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ತಮ್ಮ ಎಂದಿನ ಶೈಲಿ ಬಿಟ್ಟು ಬೇರೆ ರೀತಿನೂ ಕಾಣುತ್ತಾರೆ. ಬೇರೆ ರೀತಿನೂ ಅಭಿನಯಿಸಿರೋದು ಇಲ್ಲಿ ಗಮನಕ್ಕೆ ಬರುತ್ತದೆ. ಹುಲಿರಾಯ ಚಿತ್ರ ಖ್ಯಾತಿಯ ಬಾಲು ನಾಗೇಂದ್ರ, ಸ್ಯಾಮ್ಸನ್ ಪಾತ್ರದಲ್ಲಿ ಸಖತ್ ಆ್ಯಕ್ಟಿಂಗ್ ಮಾಡಿದ್ದಾರೆ.


Kannada Film Head Bush Film Review Story
ಇಂದಿರಾ ಕನಸು-ಅರಸು ಮನಸು-ಬ್ರಿಗೇಡ್ ಅಟ್ಟಹಾಸ


ಶೃತಿ ಹರಿಹರನ್-ರಘು ಮುಖರ್ಜಿ ಆ ದಿನಗಳ ಲುಕ್ ಅಲ್ಲಿ ಸಖತ್
ಅರಸು ಪಾತ್ರದ ಮಗಳು-ಅಳಿಯ ಪಾತ್ರದಲ್ಲಿಯೇ ರಘು ಮುಖರ್ಜಿ ಮತ್ತು ಶೃತಿ ಹರಿಹರನ್ ಅಭಿನಯಿಸಿದ್ದಾರೆ. ಜಯರಾಜ್ ಪಾತ್ರಕ್ಕೆ ರಾಜಕೀಯ ಮಾರ್ಗದರ್ಶಕರಂತೆನೂ ಕಾಣುತ್ತಾರೆ. ತಮ್ಮ ಒಳಿತಿಗಾಗಿ ಜಯರಾಜ್ ಬಳಕೆ ಮಾಡಿಕೊಂಡಿರೋ ರೀತಿನೂ ಇಲ್ಲಿ ಈ ಪಾತ್ರಗಳು ಕಂಡು ಬರುತ್ತವೆ.


ಹೆಡ್ ಬುಷ್ ಚಿತ್ರದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಅದ್ಭುತ
ಹೆಡ್ ಬುಷ್ ಚಿತ್ರದಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಸಾಕಷ್ಟು ಗಮನ ಸೆಳೆಯುತ್ತಾರೆ. ಸಿನಿಮಾ ನೋಡಿ ಹೊರ ಬಂದ್ಮೇಲೆ ಪಾತ್ರದ ಹಿನ್ನೆಲೆಯಲ್ಲಿ ಬಳಸಿದ ಸಂಗೀತ ನಿಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ.


Kannada Film Head Bush Film Review Story
ಇಂದಿರಾ ಬ್ರಿಗೇಡ್ ದಾರಿ ತಪ್ಪಿದ್ದು ಹೇಗೆ?


ಕ್ರೇಜಿ ಸ್ಟಾರ್ ಸರ್ಪೈಜ್ ಎಂಟ್ರಿ-ಪಾಯಲ್ ರಜಪೂತ್ ಸೂಪರ್
ಕ್ರೇಜಿ ಸ್ಟಾರ್ ರವಿಚಂದ್ರನ್ ಇಲ್ಲಿ ವಿಶೇಷವಾಗಿಯೇ ಬಂದು ಹೋಗ್ತಾರೆ. ಹೆಡ್ ಬುಷ್ ಅನ್ನೋ ಆಟದ ಇನ್ನೋಂದು ಅರ್ಥವನ್ನೂ ಒಬ್ಬ ಪ್ರೊಫೆಸರ್ ಆಗಿಯೂ ತಿಳಿಸಿಕೊಟ್ಟು ಹೋಗ್ತಾರೆ. ಪಾಯಲ್ ರಜಪೂತ್ ಇಲ್ಲಿ ಜಯರಾಜ್ ಜೋಡಿಯಾಗಿಯೇ ಮೋಡಿ ಮಾಡ್ತಾರೆ. ಸಂಸಾರದ ನೌಕೆಯನ್ನೂ ಒಂದಷ್ಟು ದಿನ ಸಾಗಿಸಿ ಹೋಗ್ತಾರೆ.


ಇದನ್ನೂ ಓದಿ: Special Song for Appu: ಗಂಧದ ಗುಡಿಯ ಅಪ್ಪುಗೆ All Ok ಅಲೋಕ್ ವಿಶೇಷ ಗಾನ ನಮನ


ಇಲ್ಲಿಗೆ ಹೆಡ್ ಬುಷ್ ಕಥೆ ಮುಗಿಯೋದಿಲ್ಲ.ಇದು ಮುಂದುವರೆಯುತ್ತದೆ. ಅದನ್ನ ಕೋತ್ವಾಲ್ ಪಾತ್ರಧಾರಿ ವಸಿಷ್ಠ ಸಿಂಹ ಮುಂದುವರೆಸೋ ಭರವಸೆ ಕೊಡ್ತಾರೆ. ಉಳಿದಂತೆ ಹೆಿಡ್ ಬುಷ್ ಸಿನಿಮಾ ಅಸಲಿ ಕಥೆ ಸಿನಿಮ್ಯಾಟಿಕ್ ಫಾರ್ಮ್​ ಅಂತ ಹೇಳಬಹುದು.

First published: