• Home
  • »
  • News
  • »
  • entertainment
  • »
  • Head Bush: ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ

Head Bush: ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯ! ಅಮೆರಿಕಾದಿಂದಲೇ 10 ಟಿಕೆಟ್ ಬುಕ್ ಮಾಡಿದ ಅಭಿಮಾನಿ

ಡಾಲಿ ಧನಂಜಯ್ ಅವರ ಹೆಡ್ ಬುಶ್ ಸಿನಿಮಾ ವಿವಾದ ಎದುರಿಸುತ್ತಿರುವಾಗ ಅವರ ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ. ನಟ ಡಾಲಿಗೆ ವ್ಯಾಪಕವಾಗಿ ಫ್ಯಾನ್ಸ್ ಸಪೋರ್ಟ್ ಸಿಗುತ್ತಿದೆ.

ಡಾಲಿ ಧನಂಜಯ್ ಅವರ ಹೆಡ್ ಬುಶ್ ಸಿನಿಮಾ ವಿವಾದ ಎದುರಿಸುತ್ತಿರುವಾಗ ಅವರ ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ. ನಟ ಡಾಲಿಗೆ ವ್ಯಾಪಕವಾಗಿ ಫ್ಯಾನ್ಸ್ ಸಪೋರ್ಟ್ ಸಿಗುತ್ತಿದೆ.

ಡಾಲಿ ಧನಂಜಯ್ ಅವರ ಹೆಡ್ ಬುಶ್ ಸಿನಿಮಾ ವಿವಾದ ಎದುರಿಸುತ್ತಿರುವಾಗ ಅವರ ಅಭಿಮಾನಿಗಳು ಬೆಂಬಲಕ್ಕೆ ಬಂದಿದ್ದಾರೆ. ನಟ ಡಾಲಿಗೆ ವ್ಯಾಪಕವಾಗಿ ಫ್ಯಾನ್ಸ್ ಸಪೋರ್ಟ್ ಸಿಗುತ್ತಿದೆ.

  • News18 Kannada
  • Last Updated :
  • Bangalore Rural, India
  • Share this:

ಹೆಡ್ ಬುಷ್ (Head bush) ಸಿನಿಮಾ (Cinema) ವಿವಾದ ಎದುರಿಸುತ್ತಿರುವ ಮಧ್ಯೆಯೇ ಅಭಿಮಾನಿಗಳಿಂದ (Fans) ಭಾರೀ ಬೆಂಬಲ ವ್ಯಕ್ತವಾಗಿದೆ. ಡಾಲಿ ಧನಂಜಯ್ (Daali Dahananjay) ಅವರ ಅಭಿಮಾನಿಗಳು ಸಿನಿಮಾಗೆ ಬೆಂಬಲ ವ್ಯಕ್ತಪಡಿಸುತ್ತಿದ್ದು ವೀರಗಾಸೆ ಹೆಸರಲ್ಲಿ ಸಿನಿಮಾ ವಿರುದ್ಧ ವಿವಾದ ಸೃಷ್ಟಿಸುವ ಬಗ್ಗೆ ಟ್ವೀಟ್  (tweet) ಮಾಡುತ್ತಿದ್ದಾರೆ. ಇತ್ತೀಚಿನ ಬೆಳವಣಿಗೆಯಲ್ಲಿ ಡಾಲಿ ಅವರ ಅಮೆರಿಕದಲ್ಲಿರುವ  (America) ಅಭಿಮಾನಿಯೊಬ್ಬರು ಅಲ್ಲಿಂದಲೇ 10 ಟಿಕೆಟ್​​ಗಳನ್ನು (Tickets) ಬೆಂಗಳೂರು (Bengaluru) ಥಿಯೇಟರ್​ನಲ್ಲಿ ಬುಕ್ ಮಾಡಿದ್ದಾರೆ. ಈ ವಿಚಾರವನ್ನು ಟ್ವೀಟ್​ನಲ್ಲಿ ಹಂಚಿಕೊಂಡಿದ್ದಾರೆ. ಈಗ ಈ ಟ್ವೀಟ್ ವೈರಲ್ (Viral) ಆಗಿದೆ. ಅವಿನಾಶ್ ರಂಗನಾಥ್ ಎನ್ನುವವರು ಡಾಲಿ ಅವರನ್ನು ಬೆಂಬಲಿಸಿ (Support) ಟ್ವೀಟ್ ಮಾಡಿದ್ದಾರೆ.


ಟ್ವೀಟ್​ನಲ್ಲಿ ಏನಿದೆ?


ಹಾಸ್ಟನ್​ನಲ್ಲಿ ಕಾಂತಾರ ರಿಲೀಸ್ ಆಗಿಲ್ಲ. ಹಾಗಾಗಿ ನಾನು ಬೆಂಗಳೂರಿನಲ್ಲಿ 10 (ಒಬ್ಬರು ಬುಕ್ ಮಾಡಬಹುದಾದ ಗರಿಷ್ಠ ಟಿಕೆಟ್ ಸಂಖ್ಯೆ) ಟಿಕೆಟ್ ಬುಕ್ ಮಾಡಿದ್ದೇನೆ. ಯಾರಾದರೂ ಈ ಟಿಕೆಟ್ ಬಳಸುವುದಿದ್ದರೆ ಖಂಡಿತಾ ಬಳಸಿಕೊಳ್ಳಿ. ಇದು ನಾನು ಡಾಲಿ ಧನಂಜಯ್ ಅವರಿಗೆ ಬೆಂಬಲಿಸುವ ರೀತಿ ಎಂದು ಅವಿನಾಶ್ ರಂಗನಾಥ್ ಟ್ವೀಟ್ ಮಾಡಿದ್ದಾರೆ. ಇದರೊಂದಿಗೆ ಟಿಕೆಟ್ ಬುಕ್ ಮಾಡಿರುವ ಫೊಟೋ ಕೂಡಾ ಅಪ್​ಲೋಡ್ ಮಾಡಿದ್ದಾರೆ.


ಇದೇ ರೀತಿಯಲ್ಲಿ ಹಲವಾರು ಘಟನೆಗಳು ವರದಿಯಾಗಿದ್ದು ಡಾಲಿ ಧನಂಜಯ್ ಅವರ ಮೇಲಿನ ಅಭಿಮಾನದಿಂದ ಫ್ಯಾನ್ಸ್ ಟಿಕೆಟ್ ಬುಕ್ ಮಾಡುತ್ತಿದ್ದೇವೆ. ಒಬ್ಬರಿಂದ ಒಬ್ಬರು ಇನ್​ಸ್ಪೈರ್ ಆಗಿ ಹೆಡ್ ಬುಷ್ ಟಿಕೆಟ್ ಬುಕ್ ಮಾಡುತ್ತಿದ್ದಾರೆ ಡಾಲಿ ಅಭಿಮಾನಿಗಳು.


ಸೋಷಿಯಲ್ ಮಿಡಿಯಾದಲ್ಲಿ ಹೊಸ ಅಭಿಯಾನ


ಸೋಷಿಯಲ್ ಮೀಡಿಯಾದಲ್ಲಿ ಧನಂಜಯ್ ಅವರ ಅಭಿಮಾನಿಗಳು ಹೊಸ ಅಭಿಯಾನ ಶುರು ಮಾಡಿದ್ದು ಬಡವರ ಮಕ್ಕಳು ಬೆಳೆಯಬೇಕು ಕಣ್ರಯ್ಯ ಎಂದು ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಇದೀಗ ಬುಕ್ ಮೈ ಶೋ ನಲ್ಲಿ 9.3/10ರೇಟಿಂಗ್ ಏರಿಕೆ ಕಂಡ ಹೆಡ್ ಬುಷ್ ಮತ್ತೆ ವೇಗ ಹೆಚ್ಚಿಸಿಕೊಂಡಿದೆ. ಡಾಲಿ ಜೊತೆಗೆ ನಿಂತರು ಕನ್ನಡಿಗರು ,ಅಭಿಮಾನಿಗಳು ಸಿನಿಮಾ ಬೆಂಬಲಿಸಿದ್ದಾರೆ. ಬುಕ್ ಮೈ ಶೋ ನಲ್ಲಿ 9.3/10ರೇಟಿಂಗ್ ಏರಿಕೆ ಕಂಡ ಹೆಡ್ ಬುಷ್ ಈಗ ಮತ್ತೆ ಚೇತರಿಕೆ ಕಾಣುತ್ತಿದೆ.



ಇದನ್ನೂ ಓದಿ: Dhananjay-Head Bush: ವೀರಗಾಸೆ ವಿವಾದ! ಚಿತ್ರತಂಡ ಹೇಳಿದ್ದೇನು?


ಧನಂಜಯ್ ಏನ್ ಹೇಳಿದ್ದಾರೆ?


ಹೆಡ್ ಬುಷ್ ಸಿನಿಮಾ ವಿವಾದದ ಬಗ್ಗೆ ಡಾಲಿ ಧನಂಜಯ ಮಾತನಾಡಿದ್ದಾರೆ. ಕೆಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡುತ್ತಿವೆ. ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ. ರಾಜಕೀಯ ಮಾಡೋಕೆ ಅಲ್ಲ. ಸಿನಿಮಾವನ್ನು ಸಿನಿಮಾ ರೀತಿ ನೋಡಿ ರಾಜಕೀಯ ಮಾಡಬೇಡಿ ಎಂದು ಅವರು ಹೇಳಿದ್ದಾರೆ.


Kannada Film Head Bush Film Review Story
ಹೆಡ್ ಬುಷ್ ಸಿನಿಮಾ ಹೇಗಿದೆ ?


ಕರಗ, ವೀರಗಾಸೆಗೆ ಕಲೆಗೆ, ಕಲಾವಿದರಿಗೆ ನಾವು ಅಪಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡು ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರೆ ಒಂದು ಡೈಲಾಗ್ ಬಗ್ಗೆ ಕರಗ ಸಮಿತಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ವೀರಭದ್ರ ಸ್ವಾಮಿ ಭಕ್ತರು ಹಾಗೂ ಕರಗ ಸಮಿತಿ ಅವರು ಬರುತ್ತಾರೆ. ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.



ಸಿನಿಮಾವನ್ನು ಸಿನಿಮಾ ಆಗಿ ನೋಡಿ


ಇನ್ನು ವಿವಾದ ಬಗ್ಗೆ ಚಿತ್ರತಂಡ ಸುದ್ದಿಗೋಷ್ಠಿ ಮಾಡಿ ಪ್ರತಿಕ್ರಿಯಿಸಿ ಸಿನಿಮಾವನ್ನು ಸಿನಿಮಾ ಆಗಿ ನೋಡಿ ಎಂದಿದ್ದಾರೆ. ಸೂಕ್ಷ್ಮವಾಗಿ ಸಿನಿಮಾವನ್ನು ನೋಡಿ. ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿಲ್ಲ. ಬೇಕಿದ್ದರೆ ಸಿನಿಮಾ ತೋರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Published by:Divya D
First published: