• Home
  • »
  • News
  • »
  • entertainment
  • »
  • Dhananjay-Head Bush: ವೀರಗಾಸೆ ವಿವಾದ! ಚಿತ್ರತಂಡ ಹೇಳಿದ್ದೇನು?

Dhananjay-Head Bush: ವೀರಗಾಸೆ ವಿವಾದ! ಚಿತ್ರತಂಡ ಹೇಳಿದ್ದೇನು?

ಹೆಡ್ ಬುಷ್ ಪೋಸ್ಟರ್

ಹೆಡ್ ಬುಷ್ ಪೋಸ್ಟರ್

ಹೆಡ್ ಬುಷ್ ಸಿನಿಮಾಗೆ ಸಂಬಂಧಿಸಿ ಈಗ ಬಂದಿರುವ ವಿವಾದದ ಬಗ್ಗೆ ಚಿತ್ರತಂಡ ಪ್ರೆಸ್​ಮೀಟ್ ಮಾಡಿ ಸ್ಪಷ್ಟನೆ ನೀಡಿದೆ. ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದೆ.

  • News18 Kannada
  • Last Updated :
  • Bangalore, India
  • Share this:

ಹೆಡ್ ಬುಷ್ (Head Bush) ಸಿನಿಮಾದಲ್ಲಿ ವೀರಗಾಸೆಗೆ (Veeragase) ಅವಮಾನ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡಿದೆ. ಡಾಲಿ ಧನಂಜಯ್ (Daali  Dhananjay) ನಿರ್ದೇಶಿಸಿ ಅಭಿನಯಿಸಿದ ಸಿನಿಮಾದಲ್ಲಿ ಕರ್ನಾಟಕದ (Karnataka) ಹೆಮ್ಮೆಯ ಕಲೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ವಿವಾದ ಕುರಿತು ಚರ್ಚೆ ಹೆಚ್ಚಾಗುತ್ತಿದ್ದಂತೆ ನಟ ಡಾಲಿ ಧನಂಜಯ್ ಅವರು ಟ್ವೀಟ್ (Tweet) ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈಗ ಮತ್ತೆ ಈ ವಿಚಾರದ ಬಗ್ಗೆ ಚಿತ್ರತಂಡ ಪ್ರೆಸ್​ಮೀಟ್  (Press Meet) ಮಾಡಿ ಸ್ಪಷ್ಟನೆ ಕೊಟ್ಟಿದೆ. ಈ ಸುದ್ದಿಗೋಷ್ಠಿಯಲ್ಲಿ ಡಾಲಿ ಧನಂಜಯ, ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು (Bengaluru) ಜಿಲ್ಲಾ ಅಧ್ಯಕ್ಷ ಎಸ್.ಗುರುಸ್ವಾಮಿ, ಯುವ ಘಟಕದ ರಾಜ್ಯಾಧ್ಯಕ್ಷ ಮನೋಹರ್ ,ಚಕ್ರವರ್ತಿ ಚಂದ್ರಚೂಡ್ ಕೂಡಾ ಭಾಗಿಯಾಗಿದ್ದಾರೆ. ಬಸವೇಶ್ವರನಗರ ಕಂಬಿ ಸಂಭಾಗಣದಲ್ಲಿ ಸುದ್ದಿಗೋಷ್ಠಿ ನಡೆದಿದೆ.


ಹೆಡ್ ಬುಷ್ ವಿವಾದದ ಬಗ್ಗೆ ಡಾಲಿ ಧನಂಜಯ ಮಾತನಾಡಿದ್ದಾರೆ. ಕೆಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡುತ್ತಿವೆ. ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ. ರಾಜಕೀಯ ಮಾಡೋಕೆ ಅಲ್ಲ. ಸಿನಿಮಾವನ್ನು ಸಿನಿಮಾ ರೀತಿ ನೋಡಿ ರಾಜಕೀಯ ಮಾಡಬೇಡಿ ಎಂದು ಅವರು ಹೇಳಿದ್ದಾರೆ.


ಕರಗ, ವೀರಗಾಸೆಗೆ ನಾವು ಅಪಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡು ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರೆ ಒಂದು ಡೈಲಾಗ್ ಬಗ್ಗೆ ಕರಗ ಸಮಿತಿ ಬೇಸರ ವ್ಯಕ್ತಪಡಿಸಿದ್ದಾರೆ. ಈಗ ವೀರಭದ್ರ ಸ್ವಾಮಿ ಭಕ್ತರು ಹಾಗೂ ಕರಗ ಸಮಿತಿ ಅವರು ಬರುತ್ತಾರೆ. ಅವರ ಜೊತೆ ಮಾತನಾಡುತ್ತೇನೆ ಎಂದಿದ್ದಾರೆ.


Kannada Film Head Bush Film Overseas Censor Board Member Umair Sandhu First Review
ಹೆಡ್ ಬುಷ್ -21 ರಂದು ವಿದೇಶದಲ್ಲೂ ರಿಲೀಸ್


ನಾನು ಕೂಡ ಸಂಪ್ರದಾಯ ಪಾಲಿಸಿಕೊಂಡು ಬಂದ ಕುಟುಂಬದಿಂದ ಬಂದಿದ್ದೆನೆ ಎಂದು ಹೆಡ್ ಬುಷ್ ಚಿತ್ರದ ವಿವಾದದ ಬಗ್ಗೆ ಡಾಲಿ ಧನಂಜಯ ತಿಳಿಸಿದ್ದಾರೆ.


ಇದನ್ನೂ ಓದಿ: Gandhada Gudi: ಅಪ್ಪು ಸಮಾಧಿ ಬಳಿ ಫ್ಯಾನ್ಸ್, ಪುನೀತ್ ಕಟೌಟ್​ಗೆ ಪೂಜೆ ಸಲ್ಲಿಸಿದ ಮಗು


ಸಿನಿಮಾವನ್ನು ಸಿನಿಮಾ ಆಗಿ ನೋಡಿ


ಇನ್ನು ವಿವಾದ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿ ಸಿನಿಮಾವನ್ನು ಸಿನಿಮಾ ಆಗಿ ನೋಡಿ. ಸೂಕ್ಷ್ಮವಾಗಿ ಸಿನಿಮಾವನ್ನು ನೋಡಿ. ಇದರಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿಲ್ಲ. ಬೇಕಿದ್ದರೆ ಸಿನಿಮಾ ತೋರಿಸುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಎದೆ ಮೇಲೆ ಲಿಂಗ ಇಲ್ಲದ, ಶೂ ಧರಿಸಿದವರ ಮೇಲೆ ದಾಳಿ ಮಾಡುವ ದೃಶ್ಯ ಇದೆ. ನಕಲಿಯಾಗಿ ಬಂದವರ ಮೇಲೆ ಅಟ್ಯಾಕ್ ಮಾಡಲಾಗುತ್ತದೆ ಎಂದಿದ್ದಾರೆ. ಯಾರ್ಯಾರಿಗೆ ಬೇಸರವಾಗಿದೆಯೋ ಅವರಿಗೆ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಇನ್ನು ಈ ಸಿನಿಮಾ ಬಗ್ಗೆ ಹರಡುತ್ತಿರುವವರಿಗೆ ಒಂದು ಪ್ರಶ್ನೆ, ಸೀನ್ ವಿರೋಧಿಸುವವರು ಎಷ್ಟು ಜನರಿಗೆ ಸಹಾಯ ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ ಡಾಲಿ.


ಇದನ್ನೂ ಓದಿ: Raveena Tandon: KGF ಖಡಕ್ ಪ್ರಧಾನಿ ರಮೀಕಾ ಬರ್ತ್​ಡೇ! ಹುಟ್ಟುಹಬ್ಬದ ಸಂಭ್ರಮದಲ್ಲಿ ರವೀನಾ


ವೀರಗಾಸೆ ಕಲಾವಿದರಿಗೆ ಮಾಸಾಶನ


ವೀರಗಾಸೆ ಉಳಿದ ಎಲ್ಲ ಕಲೆಗಳಂತಹ ಒಂದು ಕಲೆ. ಅದರ ಕಲಾವಿದರಿಗೆ ಕೂಡಾ ಮಾಸಾಶನ ಕೊಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ ಎಂದು ಧನಂಜಯ್ ಕೇಳಿಕೊಂಡಿದ್ದಾರೆ.


ವೀರಗಾಸೆ ಹೆಸರಲ್ಲಿ ಬಂದ ಕ್ರಿಮಿನಲ್​ಗಳ ಮೇಲೆ ದಾಳಿ ಮಾಡಲಾಗಿದೆ. ನಿಜವಾದ ವೀರಗಾಸೆ ಕಲಾವಿದರಿಗೆ ಯಾವುದೇ ಅವಮಾನ ಆಗುವಂತಹ ದೃಶ್ಯ ಸಿನಿಮಾದಲ್ಲಿಲ್ಲ ಎಂದು ಹೇಳಿದ್ದಾರೆ.

Published by:Divya D
First published: