ಅವರು ನನ್ನ ಜೀವನ ಹಾಳು ಮಾಡಿದರು; ನಿರ್ಮಾಪಕನ ಅಸಭ್ಯ ವರ್ತನೆಗೆ ಸಿನಿಮಾದಿಂದ ಹೊರ ಬಂದ ನಟಿ!

Alankrita sahai: ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್​​ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು.

alankrita sahai

alankrita sahai

 • Share this:
  ‘ನಮಸ್ತೆ ಇಂಗ್ಲೆಂಡ್​’ ಸಿನಿಮಾದಲ್ಲಿ ನಟಿಸಿದ ನಟಿ ಅಲಂಕೃತ ಸಹೈ ಅಘಾತಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ನಟಿ ಪಂಜಾಬಿ ಸಿನಿಮಾದ ಚಿತ್ರೀಕರಣ ವೇಳೆ ತನಗಾದ ಕೆಟ್ಟ ಅನುಭವವನ್ನು ಬಹಿರಂಗ ಪಡಿಸಿದ್ದರು. ಅಲಂಕೃತ ಸಹೈ ಹೇಳುವಂತೆ ನಿರ್ಮಾಪಕ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದನು. ಅಸಭ್ಯ ವರ್ತನೆ ತೋರಿದ್ದನು ಈ ಕಾರಣಕ್ಕಾಗಿ ಸಿನಿಮಾದಿಂದ ಹೊರಬಂದಿದ್ದೇನೆ ಎಂದು ಹೇಳಿದ್ದಾರೆ.

  ಅಲಂಕೃತ ಸಹೈ ಪಂಜಾಬಿ ಸಿನಿಮಾದಲ್ಲಿ ನಟಿಸಲು ಇಷ್ಟಪಟ್ಟಿದ್ದರು. ತಮ್ಮ ಮೊದಲ ಪಂಜಾಬಿ ಸಿನಿಮಾ ‘ಫಫಾದ್​​ ಜಿ’ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈ ವೇಳೆ ಕೆಲವು ಕೆಟ್ಟ ಅನುಭವಗಳು ಆಯಿತು. ನಿರ್ಮಾಪಕ ಅಸಭ್ಯ ವರ್ತನೆ ತೋರಿಸಿದ್ದಾನೆ. ಹಾಗಾಗಿ ಸಿನಿಮಾದಿಂದ ಹೊರಬಂದೆ ಎಂದಿದ್ದಾರೆ.

  ಮಾಧ್ಯಮಗಳ ಜತೆಗೆ ಮಾತನಾಡಿದ ನಟಿ ಅಲಂಕೃತ ಸಹೈ, ನಾನು ಹಲವಾರು ನಿರ್ಮಾಪಕರ ಜತೆಗೆ ಮತ್ತು ಜನರೊಂದಿಗೆ ಕೆಲಸ ಮಾಡಿದ್ದೇನೆ. ಆದರೆ ಇಂತಹ ಅನುಭವ ಆಗಿಲ್ಲ. ಯಾರು ಕೂಡ ಗಟಿಯನ್ನು ದಾಟಬಾರದು. ನಾನು ಸ್ವಾಭಿಮಾನಿ, ನನಗೆ ನನ್ನ ಮೇಲೆ ಗೌರವವಿದೆ ಮತ್ತು ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

  Kareena Kapoor: ದಕ್ಷಿಣ ಭಾರತದ ಊಟ ಸವಿದ ಕರೀನಾ ಕಪೂರ್ ಏನಂದ್ರು ಗೊತ್ತಾ?


  View this post on Instagram


  A post shared by Alankrita Sahai (@ladykrita)


  ನಂತರ ಮಾತು ಮುಂದುವರಿಸಿದ ಅವರು, ನಿರ್ಮಾಪಕ ನನಗೆ ಕಿರುಕುಳ ನೀಡಿದ್ದಾನೆ. ಅವರು ನನ್ನ ಜೀವನವನ್ನು ಶೋಚನೀಯಗೊಳಿಸಿದರು. ಇದರಿಂದ ನಿರ್ಮಾಪಕನು ಒಂದು ಪಾಠ ಕಳಿಯುತ್ತಾನೆಣೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.

  ಗಂಡು 10 ಮದುವೆ ಆಗಬಹುದು, ಹೆಣ್ಣು ಯಾಕೆ ಆಗಬಾರದು?; ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಕನ್ನಡದ ನಟಿ!

  ಅಲಂಕೃತ ಸಹೈ ಅವರು 2018ರಲ್ಲಿ ವಿಕ್ಕಿ ಕೌಶಲ್​ ಜತೆಗೆ ’ಲವ್​ ಪರ್​ ಸ್ಕ್ವಾರ್​ ಫೂಟ್​‘ನಲ್ಲಿ ನಟಿಸಿದ್ದರು. ಆ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ಅದಾದ ಬಳಿಕ ‘ನಮಸ್ತೆ ಇಂಗ್ಲೆಂಡ್’​ ಸಿನಿಮಾದಲ್ಲಿ ಮಿಂಚಿದ್ದರು. ಇದೀಗ ಪಂಜಜಾಬಿ ಸಿನಿಮಾದಲ್ಲಿ ನಟಿಸುವ ವೇಳೆ ನಿರ್ಮಾಪಕ ವರ್ತನೆಯಿಂದಾಗಿ ‘ಫಫಾದ್​​ ಜಿ’ ಸಿನಿಮಾದಿಂದ ಹೊರಬಂದಿದ್ದಾರೆ.
  Published by:Harshith AS
  First published: